ಮಂಜೇಶ್ವರ : ಯುವಕನನ್ನು ಗಲ್ಪ್ನಿಂದ ಊರಿಗೆ ಕರೆಸಿದ ಬಳಿಕ ಅಪಹರಿಸಿಕೊಂಡು ಹೋಗಿ ಮರಕ್ಕೆ ತೂಗುಹಾಕಿ ಕೊಲೆಗೈದ ಬಳಿಕ ಕಾರಿನಲ್ಲಿ ಕೊಂಡೊಯ್ದು ಆಸ್ಪತ್ರೆಯಲ್ಲಿ ಉಪೇಕ್ಷಿಸಿ ಪರಾರಿಯಾದ ಪ್ರಕರಣದ ಸೂತ್ರಧಾರ ಪೋಲೀಸರ ಮುಂದೆ ಶರಣಾಗಿದ್ದಾನೆ. ಪೈವಳಿಕೆ ನಿವಾಸಿಯೂ ಉಪ್ಪಳದ ಪ್ಲಾಟ್‌ನಲ್ಲಿ ವಾಸಿಸುವ ಅಬೂಬಕ್ಕರ್ ಸಿದ್ದಿಕ್ ಯಾನೆ ನೂರ್‌ಶ [33] ಎಂಬಾತ ಮಂಜೇಶ್ವರ ಪೋಲೀಸ್ ಠಾಣೆಯಲ್ಲಿ ಮಂಗಳವಾರ ಶರಣಾಗಿದ್ದಾನೆ. ಈತನನ್ನು ಸಿ.ಐ ಕೆ. ರಾಜೀವ್ ಕುಮಾರ್ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಈತನಿಗೆ ಎರಡು ವಾರಗಳ ರಿಮಾಂಡ್ ವಿಧಿಸಲಾಗಿದೆ. ಇದೇ ವೇಳೆ ನೂರ್‌ಶನನ್ನು ಕಸ್ಟಡಿಗೆ ತೆಗೆದು ಹೆಚ್ಚಿನ ತನಿಖೆಗೊಳಪಡಿಸಲಾಗುವುದೆಂದು ಪೋಲೀಸರು ತಿಳಿಸಿದ್ದಾರೆ. 2022 ಜೂನ್ 26ರಂದು ಪುತ್ತಿಗೆ ಮುಗುವಿನ ಅನಿವಾಸಿಯಾದ ಯುವಕ ಅಬೂಬಕ್ಕರ್ ಸಿದ್ದಿಕ್‌ನ್ನು ಅಪಹರಿಸಿ ಕೊಂಡೊಯ್ದು ಹಲ್ಲೆ ನಡೇಸಿ ಕೊಲೆಗೈದ ಪ್ರಕರಣದಲ್ಲಿ ಸೂತ್ರಧಾರನ ಪೈಕಿ ನೂರ್‌ಶ ಕೂಡಾ ಒಳಗೊಂಡಿದ್ದಾನೆಂದು ಪೋಸರು ತಿಳೀಸಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು ೧೯ಮಂದಿ ಆರೋಪಿಗಳಿದ್ದು, ೧೩ಮಂದಿ ಈ ಹಿಂದೆ ಸೆರೆಗೀಡಾಗಿದ್ದಾರೆ. ಇನ್ನು ೬ಮಂದಿ ಆರೋಪಿಗಳು ಸೆರೆಗೀಡಾಗಲು ಬಾಕಿಯಿರುವುದಾಗಿ ಪೊಲೀಸರು ತಿಳಿಸಿದ್ದಾರೆ.