ದೆಹಲಿ ಮೆಟ್ರೋದಲ್ಲಿ ಪುಟಾಣಿಗಳ ಭರ್ಜರಿ ಡ್ಯಾನ್ಸ್‌, ಪ್ರಯಾಣಿಕರು ಫುಲ್‌ ಫಿದಾ

Share with

ದೆಹಲಿ, ಅಕ್ಟೋಬರ್ 21: ದೆಹಲಿ ಮೆಟ್ರೋ ಸೀಟಿನ ವಿಚಾರವಾಗಿ ಪ್ರಯಾಣಿಕರ ನಡುವೆ ನಡೆಯುವ ಜಗಳಗಳು, ಪ್ರಯಾಣಿಕರು ಮಾಡುವಂತಹ ಕಿತಾಪತಿಗಳು ಹೀಗೆ ನಾನಾ ಕಾರಣಗಳಿಂದ ಸುದ್ದಿಯಲ್ಲಿರುತ್ತದೆ. ಆದರೆ ಇದೀಗ ಸುದ್ದಿಯಲ್ಲಿರುವುದು ಪುಟಾಣಿಗಳ (little girls) ಮುದ್ದಾದ ಡ್ಯಾನ್ಸ್ ಪರ್ಫಾರ್ಮೆನ್ಸ್ ನಿಂದ ಅಂದ್ರೆ ನೀವು ನಂಬಲೇಬೇಕು. ಹೌದು ದೆಹಲಿ ಮೆಟ್ರೋದಲ್ಲಿ (Delhi metro) ಮೂವರು ಪುಟಾಣಿಗಳು ಬಾಲಿವುಡ್‌ನ ಪೆಹ್ಲಾ ಪೆಹ್ಲಾ ಪ್ಯಾರ್ ಹಾಡಿಗೆ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ. ಈ ಅದ್ಭುತ ಡ್ಯಾನ್ಸ್ ಪರ್ಫಾರ್ಮೆನ್ಸ್ ಕಂಡು ಮೆಟ್ರೋ ಪ್ರಯಾಣಿಕರು ಕಳೆದೇ ಹೋಗಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ದೆಹಲಿ ಮೆಟ್ರೋದಲ್ಲಿ ಪುಟಾಣಿಗಳ ಭರ್ಜರಿ ಡ್ಯಾನ್ಸ್
ಜ್ಯೋತಿ ಜಿಎಸ್‌ಕೆ ಎಂಬ ಇನ್ಸ್ಟಾಗ್ರಾಮ್ ಬಳಕೆದಾರರು ದೆಹಲಿ ಮೆಟ್ರೋದಲ್ಲಿ ಅದ್ಭುತವಾಗಿ ಸ್ಟೆಪ್ ಹಾಕಿದ ಪುಟಾಣಿಗಳ ಡ್ಯಾನ್ಸ್ ಪರ್ಫಾರ್ಮೆನ್ಸ್ ಕ್ಲಿಪಿಂಗ್ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಪುಟಾಣಿಗಳು ಹರ್ಯಾನ್ವಿ ರಾಜಾಸ್ತಾನಿ ಮಿಶ್ರಿತ ಉಡುಗೆ ಧರಿಸಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಈ ಮಕ್ಕಳು ಹಮ್ ಆಪ್ಕೆ ಹೈ ಕೌನ್’ ಹಿಂದಿ ಸಿನಿಮಾದ ಪೆಹ್ಲಾ ಪೆಹ್ಲಾ ಪ್ಯಾರ್ ಹಾಡಿಗೆ  ಮುದ್ದಾಗಿ ಎಕ್ಸ್‌ಪ್ರೆ಼ನ್‌ ಕೊಟ್ಟು ನೃತ್ಯ ಮಾಡುವುದನ್ನು ನೀವು ನೋಡಬಹುದು. ಪ್ರಯಾಣಿಕರು ಈ ಪುಟಾಣಿಗಳ ಡ್ಯಾನ್ಸ್ ಪರ್ಫಾರ್ಮೆನ್ಸ್‌ನ್ನು ಸಖತ್ ಎಂಜಾಯ್ ಮಾಡುತ್ತಿರುವುದನ್ನು ನೀವಿಲ್ಲಿ ಕಾಣಬಹುದು.

ಈ ವಿಡಿಯೋ 5.9 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಬಳಕೆದಾರರಿಂದ ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತವಾಗಿವೆ. ಒಬ್ಬ ಬಳಕೆದಾರ ಪುಟಾಣಿಗಳು ಮುದ್ದಾಗಿ ಕಾಣುತ್ತಿದ್ದು, ಈ ವಿಡಿಯೋವನ್ನು ಮತ್ತೆ ಮತ್ತೆ ನೋಡಬೇಕೆನಿಸುತ್ತಿದೆ ಎಂದಿದ್ದಾರೆ. ಮತ್ತೊಬ್ಬರು ಮೆಟ್ರೋದ ಬೆಸ್ಟ್ ವಿಡಿಯೋ ಇದು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ಎಷ್ಟು ಮುದ್ದಾಗಿದೆ ಈ ವಿಡಿಯೋ ಎಂದು ಹೇಳಿದ್ದಾರೆ. ಇನ್ನು ಕೆಲವರು ಹಾರ್ಟ್ ಸಿಂಬಲ್ ಕಳುಹಿಸಿ ಪುಟಾಣಿಗಳ ಡ್ಯಾನ್ಸ್‌ನ್ನು ಮೆಚ್ಚಿಕೊಂಡಿದ್ದಾರೆ.


Share with

Leave a Reply

Your email address will not be published. Required fields are marked *