ಮಧೂರು : ಪರಕ್ಕಿಲ ರೇಣುಕಾ ನಿಲಯದ “ರಾಜ ಪರಕ್ಕಿಲ ರವರು(62ವರುಷ ) ಜು . 10ರಂದು ಬೆಳಿಗ್ಗೆ ನಿಧನ ಹೊಂದಿದರು. ತಂದೆ ಸಣ್ಣಪ್ಪ, ತಾಯಿ ಕಾವೇರಿ ಐವರ ಮೂರನೇ ಪುತ್ರರಾಗಿರುವ ಇವರು ಕಾಸರಗೋಡಿನ ಅಣಂಗೂರು ಎಂಬಲ್ಲಿ ದೀಪಕ್ ಲಾಂಡ್ರಿ ಯನ್ನು ನಡೆಸುತ್ತಿದ್ದರು. ಪತ್ನಿ ರೇಣುಕಾ ಮನ್ನಿ ಪಾಡಿ, ಮಕ್ಕಳಾಗಿರುವ ದೀಪಕ್ ರಾಜ್, ದೀಕ್ಷಿತರಾಜ್, ಅಣ್ಣಂದಿರದ ಮಣಿ ತೊಕ್ಕೋಟು, ಪ್ರಕಾಶ್ ಕಾಸರಗೋಡು ಅಕ್ಕಂದಿರಾದ ರಾಣಿ ಹಾಗೂ ಅಪಾರ ಬಂದು ಬಳಗದವರನ್ನು ಅಗಲಿದ್ದಾರೆ.