ಪುತ್ತೂರು: ಕುರಿಯ ಕಿನ್ನಿಮಜಲು ಶ್ರೀ ಬ್ರಹ್ಮ ಬೈದರ್ಕಳ ಗರಡಿ ವೈಭವದ ನೇಮೋತ್ಸವ ಸಂಪನ್ನ; 22 ವರುಷಗಳ ಹಿಂದೆ ಪ್ರತಿಷ್ಟಾಪನೆಗೊಂಡ ಗರಡಿ | ಸಾವಿರಕ್ಕೂ ಮಿಕ್ಕಿ ಭಕ್ತರ ಭೇಟಿ

Share with

ಪುತ್ತೂರು: ತುಳುನಾಡಿನ ಉದ್ದಗಲಕ್ಕೂ ಕಾರಣಿಕವನ್ನು ಮೆರೆದ ವೀರ ಪುರುಷರಾದ ಕೋಟಿ-ಚೆನ್ನಯರಿಗೆ ಈ ನಾಡಿನ ಹಲವು ಕಡೆಗಳಲ್ಲಿ ಆರಾಧನಾ ಕ್ಷೇತ್ರಗಳಿವೆ. ಅವಳಿ ವೀರರಾದ ಕೋಟಿ-ಚೆನ್ನಯರು ಕಾರಣಿಕವನ್ನು ಮೆರೆದು ಭಕ್ತರನ್ನು ಸಲಹಿದ ಗರಡಿಗಳಲ್ಲಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕಿನ್ನಿಮಜಲು ಅಗ್ರಪಂಕ್ತಿಯಲ್ಲಿದೆ.

ತುಳುನಾಡಿನ ಉದ್ದಗಲಕ್ಕೂ ಕಾರಣಿಕವನ್ನು ಮೆರೆದ ವೀರ ಪುರುಷರಾದ ಕೋಟಿ-ಚೆನ್ನಯರು

ತುಳುನಾಡಿನ ಗರಡಿಗಳಲ್ಲಿ ಆರಾಧನೆ ಪಡೆಯುತ್ತಿರುವ ಪ್ರಶ್ನಾಚಿಂತನೆಯಂತೆ 22 ವರುಷಗಳ ಹಿಂದೆ ಪ್ರತಿಷ್ಟಾಪನೆಗೊಂಡ ಗರಡಿಯು ವರ್ಷಂಪ್ರತಿ ವಿಜ್ರಂಭಣೆಯಿಂದ ನೇಮೋತ್ಸವವನ್ನು ಆಚರಣೆ ಮಾಡುತ್ತಾ ಬಂದಿದ್ದು, ಈ ಬಾರಿಯೂ ಫೆ.17ರಂದು ಸಾನಿಧ್ಯ ಮೊತ್ತೇಸರರಾದ ಕೀರ್ತಿಶೇಷ ಕೆ.ಗಿರಿಯಪ್ಪ ಗ ಆ ಪೂಜಾರಿ ಇವರ ಪತ್ನಿ ಮತ್ತು ಮಕ್ಕಳ ಆಡಳಿತದಲ್ಲಿ ಸುದ್ದಿಬಿಡುಗಡೆ 22ನೇ ವರ್ಷದ ವೈಭವದ ನೇಮೋತ್ಸವವು ಮೂಡಿ ಬಂದಿದ್ದು ಯಶಸ್ವಿಯಾಗಿ ಸಂಪನ್ನ ಕಂಡಿದೆ.

22ನೇ ವರ್ಷದ ವೈಭವದ ನೇಮೋತ್ಸವ

ರಂಜಿಸಿದ ಕಲ್ಪಿಗದ ಮಾಯ್ಕಾರೆ ಪಂಜುರ್ಲಿ ಮಂಜೇಶ್ವರ ಇವರಿಂದ ಗಡಿನಾಡ

ಆರ್ಟ್ಸ್ ತಂಡದ ಐಸಿರಿ ಕಲಾವಿದರು ಕಲಾನಿಧಿ ಕೃಷ್ಣ ಜಿ.ಮಂಜೇಶ್ವರ ನಿರ್ದೇಶಿಸಿರುವ, ಜೆ.ಪಿ ತೂಮಿನಾಡು ಹಾಗೂ ಮೈಮ್ ರಾಮ್‌ದಾಸ್‌ ನಿರ್ದೇಶನದ, ಪ್ರವೀಣ್ ಕಣಿಯೂರು ಸಂಗೀತ, ಸಲಹೆ-ಸಹಕಾರ ಮನೀಶ್ ಶೆಟ್ಟಿ ಸಂಕಡ್ಯ, ಮುದ್ದು ಮೂಡುಬೆಳ್ಳೆ ಸಂಭಾಷಣೆಯ, ತುಳುನಾಡ ರಂಗಬೊಳ್ಳಿ ರವಿ ರಾಮಕುಂಜ, ತುಳುನಾಡ ರಂಗಭೂಷಣ ಪುಷ್ಪರಾಜ್ ಬೊಳ್ಳಾರ್, ಅನಿಲ್ ರಾಜ್‌ ಉಪ್ಪಳ, ಅಶೋಕ್‌ ಬೇಕೂರು ಅಭಿನಯದ ‘ಕಲ್ಟಿಗದ ಮಾಯ್ಕಾರೆ ಪಂಜುರ್ಲಿ’ ತುಳು ಪೌರಾಣಿಕ ಮತ್ತು ಸಾಮಾಜಿಕ ಭಕ್ತಿಪ್ರಧಾನ ನಾಟಕ ಪ್ರದರ್ಶನಗೊಂಡು ನೆರೆದ ಸಭಿಕರ ಮನರಂಜಿಸಿತು.

ಅರ್ಚಕರಾದ ಪ್ರಕಾಶ್ ರಾವ್ ಕೊಡ್ಲಾರುರವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು. ಬೆಳಿಗ್ಗೆ ಸ್ಥಳ ಶುದ್ದಿ, ಪುಣ್ಯಾಹವಾಚನ, ಶ್ರೀ ಗಣಪತಿ ಹೋಮ, ಬ್ರಹ್ಮ ದೇವರ ತಂಬಿಲ, ಸಾಯಂಕಾಲ ಭಂಡಾರ ತೆಗೆಯುವುದು, ರಾತ್ರಿ ಬೈದರ್ಕಳ ಗರಡಿ ಇಳಿಯುವುದು, ಮಾಯಾಂಬಾಲ್ (ಮಾಣಿಬಾಲೆ) ಗರಡಿ ಇಳಿಯುವುದು.

ಕುರಿಯ ಕಿನ್ನಿಮಜಲು ಶ್ರೀ ಬ್ರಹ್ಮ ಬೈದರ್ಕಳ ಗರಡಿ ವೈಭವದ ನೇಮೋತ್ಸವ ಸಂಪನ್ನ

ಫೆ.18ರಂದು ಬೆಳಿಗ್ಗೆ ಕೋಟಿ-ಚೆನ್ನಯರ ದರ್ಶನ ಪಾತ್ರಿಗಳ ಸೇಟ್, ಬಳಿಕ ಬೈದೇರುಗಳ ಸೇಟ್ ಮತ್ತು ಅರುಣೋದಯಕ್ಕೆ ಪ್ರಸಾದ ವಿತರಣೆ ಕಾರ್ಯಕ್ರಮ ಶ್ರದ್ದಾ ಭಕ್ತಿಯಿಂದ ನಡೆಯಿತು. ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ ನಡೆದಿದ್ದು, ಸುಮಾರು ಮೂರು ಸಾವಿರಕ್ಕೂ ಮಿಕ್ಕಿ ಭಕ್ತರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರದ್ದೆಯಿಂದ ಪಾಲ್ಗೊಂಡರು.


Share with

Leave a Reply

Your email address will not be published. Required fields are marked *