ಕಾಸರಗೋಡು: ಸಾಂಸ್ಕೃತಿಕ,ಧಾರ್ಮಿಕ,ಶೈಕ್ಷಣಿಕ ಹಾಗೂ ಸಾಮಾಜಿಕ ರಂಗದ ಮುಂದಾಳು ಕೆ.ಎನ್.ವೆಂಕಟ್ರಮಣ ಹೊಳ್ಳರಿಗೆ ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಕಾಸರಗೋಡು ಬಿಇಎಂ ಶಾಲೆಯ ಯಕ್ಷಗಾನ ತಂಡದಿಂದ ಯಕ್ಷ ಸಾರಥಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಈ ಬಾರಿಯ ರಾಜ್ಯ ಮಟ್ಟದ ಶಾಲಾ ಕಲೋತ್ಸವದ ಯಕ್ಷಗಾನ ಸ್ಪರ್ಧೆಯಲ್ಲಿ ಎಗ್ರೇಡ್ ಪಡೆದ ಕಾಸರಗೋಡು ಇಇಎಂ ಶಾಲೆಯ ವಿದ್ಯಾರ್ಥಿಗಳ ಕಲಾ ಅಭಿರುಚಿಯನ್ನು ಪ್ರೋತ್ಸಾಹಿಸಲು ಕಾರಣೀಭೂತರಾದ ವೆಂಕಟ್ರರಮಣ ಹೊಳ್ಳರಿಗೆ ಎಡನೀರು ಮಠದ ಶ್ರೀಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳು ಪ್ರಶಸ್ತಿ ಪ್ರದಾನಿಸಿದರು. ಈ ಸಂದರ್ಭದಲ್ಲಿ ಕಲೈಮಾಮಣಿ ಪದ್ಮಶ್ರೀ ಕಲ್ಯಾಣ ಸುಂದರಂ,ಮುಂಬೈಯ ಶ್ರೀರಾಜರಾಜೇಶ್ವರೀ ಭರತನಾಟ್ಯ ಕಲಾ ಮಂದಿರದ ಅಧ್ಯಕ್ಷರಾದ ರೋಹಿತಾಕ್ಷಿ ಟೀಚರ್,ನಾಟ್ಯಗುರು ರಮೇಶ್ ಶೆಟ್ಟಿ ಬಾಯಾರು,ಭಾಗವತ ರಾಮಕೃಷ್ಣ ಮಯ್ಯ, ಲವಕುಮಾರ ಐಲ, ಪೃಥ್ವಿ ಚಂದ್ರ ಶರ್ಮ,ಸುಧಾಕರ ಮಲ್ಲ,ಪದ್ಮನಾಭ,ರಾಕೇಶ್ ಮಲ್ಲ, ಬಿಇಎಂ ಶಾಲಾ ಯಕ್ಷಗಾನ ತಂಡದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.