
ಕೊಡಗು:ಒಂಟಿ ಮನೆಯೊಂದರಲ್ಲಿ ನಾಲ್ವರನ್ನು ಕೊಲೆ ಮಾಡಿರುವ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಬೇಗೂರು ಸಮೀಪ ನಡೆದಿದೆ.
ಗೌರಿ (70), ಕಾಳ (75), ನಾಗಿ (30)ಹಾಗೂ ಕಾವೇರಿ (5) ಕೊಲೆಯಾದವರು.ಏಳು ವರ್ಷಗಳ ಹಿಂದೆ ಗಿರೀಶ್ ಹಾಗೂ ನಾಗಿ ವಿವಾಹವಾಗಿದ್ದು, ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕೇರಳ ಮೂಲದ ಗಿರೀಶ್ (35) ಕೊಲೆ ಆರೋಪಿ, ಘಟನೆ ನಂತರ ಈತ ತಲೆ ಮರೆಸಿಕೊಂಡಿದ್ದಾನೆ.
ಗೌರಿ, ಕಾಳ ಎಂಬುವವರ ಮಗಳು ನಾಗಿ, ಪತಿ ಗಿರೀಶನ ಎಂಬಾತನೊಂದಿಗೆ ವಾಸವಿದ್ದರು. ಇವರ ಪುತ್ರ ಕಾವೇರಿ ಎನ್ನಲಾಗುತ್ತಿದೆ.
ಸ್ಥಳಕ್ಕೆ ಬಂದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.