ಕೊಡ್ಯಮ್ಮೆ ಅಂತಲ ಮೊಗೇರ ಚಾವಡಿಯ ಪ್ರತಿಷ್ಠಾ ಮಹೋತ್ಸವ,ದೈವ ನೇಮೋತ್ಸವ

Share with

ನೀರ್ಚಾಲು ಸಮೀಪದ  ಕನ್ನೆಪ್ಪಾಡಿಯಲ್ಲಿರುವ  ಕೊಡ್ಯಮ್ಮೆ ಅಂತಲ ಮೊಗೇರ ಚಾವಡಿಯ  ಪುನರ್ ಪ್ರತಿಷ್ಠಾ ಮಹೋತ್ಸವತಂತ್ರಿವರ್ಯರಾದ ಬ್ರಹ್ಮಶ್ರೀ ಮಹೇಶ್ ಶಾಂತಿ ಹೆಜಮಾಡಿ ಅವರ ನೇತೃತ್ವದಲ್ಲಿ ಶುಕ್ರವಾರ ಜರಗಿತು. ನೂರಾರು ಭಕ್ತರು  ಪಾಲ್ಗೊಂಡಿದ್ದರು.  ಪೂರ್ವ ಕಾಲದಿಂದಲೂ  ಆರಾಧಿಸಿಕೊಂಡು ಬರುತ್ತಿರುವ ಮೂಲ ಮೈಸಂದಾಯ,ಶ್ರೀ ಆಂಜನೇಯ ಸ್ವಾಮಿ,ಭದ್ರಕ್ಕಾಳಿ ಹಾಗೂ ಪರಿವಾರ ದೈವಗಳ ಪ್ರತಿಷ್ಠೆಯನ್ನು ನೂತನ ಚಾವಡಿಯಲ್ಲಿ ಪ್ರತಿಷ್ಢಾಪಿಸಲಾಯಿತು.   ಕುಂಬಳೆ ಸೀಮೆಯ ಇತಿಹಾಸ ಪ್ರಸಿದ್ದ ಕೊಡ್ಯಮೆ ಅರಮನೆಗೊಳಪಟ್ಟ ದಂಡಿನ ಮೊಗೇರ (ಸೈನಾಧಿಕಾರಿಯಾಗಿದ್ದ) ಮುದ್ದ ಮೊಗೇರ ಅಂತಲ ಮೊಗೇರ ಚಾವಡಿ(ಕೊಟ್ಯ)ಯಲ್ಲಿ ಆರಾಧಿಸಿಕೊಂಡು ಬರುತ್ತಿದ್ದ ಪರಂಪರೆಯ ದೈವ ದೇವಾದಿಗಳು ಇದಾಗಿದ್ದವು ಇದು  ಊರಿಗೆ ಕ್ಷೇಮ ದಯಪಾಲಿಸುವ ಕಾರಣೀಕ ಶಕ್ತಿಗಳೆಂದು ಕಂಡು ಬಂದಂತೆ ತದ ನಂತರದಲ್ಲಿ ಊರವರೆಲ್ಲಾ ಸೇರಿಕೊಂಡು ಎಡನೀರು ಮಠಾಧೀಶರ ಹಾಗೂ ಕೊಂಡೆವೂರು ಶ್ರೀಗಳ ಮಾರ್ಗದರ್ಶನದಲ್ಲಿ ಕೊಡ್ಯಮ್ಮೆ  ಅಂತಲ ಮೊಗೇರ ಚಾವಡಿ ಅಭಿವೃದ್ಧಿ ಸಮಿತಿ ರಚಿಸಿ  ನೂತನ ಸಾನಿಧ್ಯ ನಿರ್ಮಾಣ ನಡೆಸಿ ಇದೀಗ ಬ್ರಹ್ಮಕಲಶೋತ್ಸವ ಕಾರ್ಯ ನಡೆಸಲಾಗಿದೆ. ಸಂಜೆ ಗುಳಿಗ ಕೋಲ, ಮೈಸಂದಾಯ ದೈವದ ಕೋಲ,ಧಾರ್ಮಿಕ ಸಭೆ, ರಾತ್ರಿ ಕುಪ್ಪೆ ಪಂಜುರ್ಲಿ ದೈವದ ಕೋಲ, ಕೊರಗ ತನಿಯ ಕಲ್ಲುರ್ಟಿ ದೈವ ಕೋಲ ಜರಗಿತು.


Share with

Leave a Reply

Your email address will not be published. Required fields are marked *