ಕೊಂಡೆವೂರು ಶ್ರೀಗಳ ಸಂನ್ಯಾಸ ಸ್ವೀಕಾರ ಪ್ರತಿಷ್ಠಾ ವರ್ಧಂತಿ – ಭೂದಾನ ಯಜ್ಞ

Share with

ಉಪ್ಪಳ : ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದಲ್ಲಿ ಸೆ .1ರಂದು ಪೀಠ ಪ್ರತಿಷ್ಠಾ ದಿನ ಮತ್ತು ಪರಮಪೂಜ್ಯ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಸಂನ್ಯಾಸಾಶ್ರಮ ಸ್ವೀಕಾರ ಮಾಡಿದ 22 ನೇ ವಾರ್ಷಿಕ ದಿನ ಕಾರ್ಯಕ್ರಮವು ಶ್ರೀ ವಿಷ್ಣು ಸಹಸ್ರನಾಮ  ಹವನ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ಧಾರ್ಮಿಕ ಸಭಾ ಕಾರ್ಯಕ್ರಮವು ನಡೆಯಿತು. ಪರಮಪೂಜ್ಯ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಆಶೀರ್ವಚನದಲ್ಲಿ ಕಳೆದ 22 ವರ್ಷಗಳಿಂದ ತಮ್ಮೊಂದಿಗಿದ್ದು ಇಲ್ಲಿನ ಎಲ್ಲಾ ಚಟುವಟಿಕೆಗಳಿಗೆ ಬೆಂಬಲಿಸಿ ಮಠವನ್ನು ಬೆಳೆಸಿದವರೆಲ್ಲರನ್ನು ಶ್ಲಾಘಿಸಿದರು, ದಣಿವರಿಯದೆ ಶ್ರಮಿಸಿದ ಕಾರ್ಯಕರ್ತರ ಕೊಡುಗೆಯನ್ನು ಸ್ಮರಿಸಿಕೊಂಡರು. ಕೊಡುಗೈದಾನಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಇವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವರಾದ  ಯಸ್ಸೋ ನಾಯಕ್ ಮತ್ತು ರಾಜ್ಯಸಭಾ ಸದಸ್ಯ ಕೆ ನಾರಾಯಣ ಸ್ಪಾನ್ ಪ್ರಿಂಟ್  ಬೆಂಗಳೂರು ರವರು ಶ್ರೀ ಮಠದ ಶಿಸ್ತುಬದ್ದ ಧಾರ್ಮಿಕ ಸಾಮಾಜಿಕ ಚಟುವಟಿಕೆಗಳನ್ನು ಹೃತ್ಪೂರ್ವಕವಾಗಿ ಕೊಂಡಾಡಿದರು. ಸಭೆಯಲ್ಲಿ ಕ್ಯಾಂಪ್ಕೊ ಅಧ್ಯಕ್ಷ ಶ್ರೀ ಕಿಶೋರ್ ಕುಮಾರ್ ಕೊಡ್ಗಿ, ಭೂದಾನ ನೀಡಿದ ಶ್ರೀ ಕಿರಣ್ ಕುಮಾರ್ ಭಂಡಾರಿ, ಮಾಜಿ ಎಂ.ಎಲ್.ಸಿ ಶ್ರೀ ಮೋನಪ್ಪ ಭಂಡಾರಿ, ಶ್ರೀ ಶಶಿಧರ ಶೆಟ್ಟಿ ಗ್ರಾಮಚಾವಡಿ, ಮಸ್ಕತ್‌ನ ಶ್ರೀ ವಿಶ್ವನಾಥನ್ ವೆಂಗರೆ, ಮಂಗಳೂರಿನ ಉದ್ಯಮಿ ಶ್ರೀ ಎ.ಜೆ ಶೇಖರ್ ವೇದಿಕೆಯಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಶುಭವನ್ನು ಹಾರೈಸಿದರು.
ಇದೇ ಸಂದರ್ಭದಲ್ಲಿ ಆಶ್ರಮದ “ಆಶ್ರಯ” ಯೋಜನೆಯಡಿಯಲ್ಲಿ ಸ್ವಂತ ಭೂಮಿ ಇಲ್ಲದ ಹತ್ತು ಬಡ ಕುಟುಂಬಗಳಿಗೆ ಭೂದಾನವನ್ನು ನೀಡಲಾಯಿತು. ಮಂಗಳೂರು ಕರಂಗಲ್ಪಾಡಿಯ ಶ್ರೀ ಕಿರಣ್ ಭಂಡಾರಿಯವರು ತಮ್ಮ ಉದಾರ ಕೊಡುಗೆಯಾಗಿ 1 ಎಕರೆ 19 ಸೆಂಟ್ಸ್ ಭೂಮಿಯ ಹಕ್ಕು ಪತ್ರವನ್ನು ಸ್ವಾಮೀಜಿಯವರಿಗೆ ಹಸ್ತಂತರಿಸಿದರು. ಇದೇ ಸಂದರ್ಭದಲ್ಲಿ ಶ್ರೀ ಕಿರಣ್ ಭಂಡಾರಿ ದಂಪತಿಗಳನ್ನು ಅವರ ಸೇವೆಗಾಗಿ ಸನ್ಮಾನಿಸಲಾಯಿತು. ದರ್ಭೆತಡ್ಕದ ಶಂಕರ ವೇದ ವಿದ್ಯಾ ಗುರುಕುಲದ ವಿದ್ಯಾರ್ಥಿಗಳಿಂದ ವೇದಘೋಷದೊಂದಿಗೆ ಆರಂಭಗೊAಡ ಸಭೆಯನ್ನು ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಸ್ವಾಗತಿಸಿದರೆ, ಶ್ರೀ ಮೋನಪ್ಪ ಭಂಡಾರಿಯವರು ಧನ್ಯವಾದಗೈದರು. ಶ್ರೀ ದಿನಕರ ಹೊಸಂಗಡಿ ಹಾಗೂ ಅಶೋಕ್ ಬಾಡೂರು ಕಾರ್ಯಕ್ರಮ ನಿರೂಪಿಸಿದರು.


Share with

Leave a Reply

Your email address will not be published. Required fields are marked *