ಮಂಗಳೂರು: ಆಶಾವಾದಿ ಪ್ರಕಾಶನ್ ಸಂಸ್ಥೆ ವತಿಯಿಂದ 29.ಅ ರವಿವಾರದಂದು ಸೈಂಟ್ ಜೋಸೆಪ್ ಸೆಮಿನಾರ್ ಸಭಾಂಗಣಾದಲ್ಲಿ ‘ಕೊಂಕಣಿ ರಂಗವೇದಿಕೆ ಮತ್ತು ನಾಟಕ’ದ ಪರಿಸಂವಾದ ಕಾರ್ಯಕ್ರಮ ಹಾಗೂ ಆಶಾವಾದಿ ಪ್ರಕಾಶನ್ ಸಂಸ್ಥೆಯಿಂದ ಎರಡು ಭಾಷೆಗಳಲ್ಲಿ ಪ್ರಸ್ತುತ ಪಡಿಸಿದ ವಂದನೀಯ ಫಾದರ್ ರೊನಾಲ್ಡ್ ಸೆರಾವೊ ಅವರ ‘ದಾನಿಯೆಲ್ ಮತ್ತು ಎಸ್ತೆರ್ ರಾಣಿ’ ಪುಸ್ತಕ ಮತ್ತು ಪ್ರಸಿದ್ಧ ಕೊಂಕಣಿ ಲೇಖಕರಾದ ವಲ್ಲಿ ಕ್ವಾಡ್ರಸ್ ಅಜೆಕಾರ್ ಅವರ ‘ಪಯ್ಣಾರಿ ಡಿಜಿಟಲ್ ಕೊಂಕಣಿ ಸಾಹಿತಿಕ್ ಜರ್ನಲ್’ ಇದರ ಬಿಡುಗಡೆ ಕಾರ್ಯಕ್ರಮ ನಡೆಯಿತು.


ಕೊಂಕಣಿ ಮೈನಾ ಮೀನಾ ರೆಬಿಂಬಸ್ ಅವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸಾಹಿತ್ಯ ಅಕಾಡೆಮಿ ಸಂಚಾಲಕರಾದ ಮೆಲ್ವಿನ್ ರೊಡ್ರಿಗಸ್, ಮಾರಿಯೆಟ್ ರಾಸ್ಕಿನ್ಹಾ, ಕನ್ಸೆಪ್ಟಾ ಫೆರ್ನಾಂಡಿಸ್ ಆಳ್ವ ಹಾಗೂ ವಂದನೀಯ ಫಾದರ್ ರೊನಾಲ್ಡ್ ಸೆರಾವೊ ಅವರು ವೇದಿಕೆಯಲ್ಲಿ ಉಪಸ್ಥಿತಿಯಿದ್ದರು. ಈ ಕಾರ್ಯಕ್ರಮದ ನಿರೂಪಣೆಯನ್ನು ಅರುಣ್ ಡಿʼಸೋಜಾ ಅಜೆಕಾರ್ ಅವರು ನಿರ್ವಹಿಸಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಗು ನಿಯೊನಾ ಡಿಸೋಜಾ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿಗಳಿಗೆ ಕೊಂಕಣಿ ಪುಸ್ತಕಗಳನ್ನು ನೀಡುವುದರ ಮೂಲಕ ಸ್ವಾಗತಿಸಿದರು.
ಪರಿಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜೋನ್ ಎಮ್ ಪೆರ್ಮನ್ನೂರ್, ಅರುಣ್ ರಾಜ್ ರೊಡ್ರಿಗಸ್, ರಿಚಾರ್ಡ್ ಮೋರಸ್, ವಂದನೀಯ ಫಾದರ್ ರೊನಾಲ್ಡ್ ಸೆರಾವೊ ಅವರು ಅತ್ಯುತ್ತಮ ವಿಷಯಗಳನ್ನು ಪ್ರಸ್ತುತ ಪಡಿಸಿದರು. ಪರಿಸಂವಾದ ಕಾರ್ಯಕ್ರಮವನ್ನು ನಿರ್ವಹಿಸಿದ ಕನ್ಸೆಪ್ಟಾ ಫೆರ್ನಾಂಡಿಸ್ ಅವರು ರೇಡಿಯೊ ನಾಟಕಾದ ಇತಿಹಾಸ ಇದರ ಬಗ್ಗೆ ವಿವರಿಸಿದರು.
ನಂತರ ನಡೆದ ಪುಸ್ತಕ ಉದ್ಘಾಟನೆ ಕಾರ್ಯಕ್ರಮದಲ್ಲಿ ‘ರಾಕ್ಣೊ’ ಕೊಂಕಣಿ ವಾರ ಪತ್ರಿಕೆಯ ಸಂಪಾದಕರಾದ ವಂದನೀಯ ಫಾದರ್ ರುಪೇಶ್ ಮಾಡ್ತಾ, ಪ್ರಸಿದ್ಧ ಲೇಖಕರು ಮತ್ತು ಕವಿಗಳಾದ ಡಾ| ಪೂರ್ಣಾನಂದ ಚಾರಿ, ಖ್ಯಾತ ಲೇಖಕ ಅವಿಲ್ ರಾಸ್ಕಿನ್ಹಾ, ಪ್ರಸಿದ್ಧ ಬರಹಗಾರರಾದ ಹೇಮಾಚಾರ್ಯಾ ಹಾಗೂ ವಂದನೀಯ ಫಾದರ್ ರೊನಾಲ್ಡ್ ಸೆರಾವೊ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಆಶಾವಾದಿ ಪ್ರಕಾಶನ್ ಸಂಸ್ಥೆಯ 53ನೇ(ಕನ್ನಡ್ ಲಿಪಿ) ಹಾಗೂ 54ನೇ (ನಾಗರಿ ಲಿಪಿ) ‘ದಾನಿಯೆಲ್ ಮತ್ತು ಎಸ್ತೆರ್ ರಾಣಿ’ ಪುಸ್ತಕದ ಪರಿಚಯವನ್ನು ತಮ್ಮ ಅದ್ಭುತ ಮಾತುಗಳಲ್ಲಿ ಮಾಡಿಕೊಟ್ಟ ವಂದನೀಯ ಫಾದರ್ ರೂಪೇಶ್ ಮಾಡ್ತಾ ಹಾಗೂ ಪ್ರಸಿದ್ಧ ಲೇಖಕರು ಮತ್ತು ಕವಿಗಳಾದ ಡಾ| ಪೂರ್ಣಾನಂದ ಚಾರಿ ಇವರು ‘ದಾನಿಯೆಲ್ ಮತ್ತು ಎಸ್ತೆರ್ ರಾಣಿ’ ಪುಸ್ತಕವನ್ನು ಉದ್ಘಾಟಿಸಿದರು. ಲಾರೆನ್ಸ್ ವಿನೋದ್ ಬಾರ್ಬೋಜ್ ಅವರು ಕೊಂಕಣಿ ಲೇಖಕರಾದ ವಲ್ಲಿ ಕ್ವಾಡ್ರಸ್ ಅಜೆಕಾರ್ ಇವರ ‘ಡಿಜಿಟಲ್ ಕೊಂಕಣಿ ಸಾಹಿತಿಕ್ ಜರ್ನಲ್’ ಬಗ್ಗೆ ತಮ್ಮ ಮಾತುಗಳಲ್ಲಿ ವರ್ಣಿಸಿದರು. ಇದರ ಉದ್ಘಾಟನೆಯನ್ನು ಲೇಖಕರಾದ ಆವಿಲ್ ರಾಸ್ಕಿನ್ಹಾ, ಬರಹಗಾರರಾದ ಹೇಮಾಚಾರ್ಯಾ ಹಾಗೂ ಡಾ| ಪೂರ್ಣಾನಂದ ಚಾರಿ ಅವರು ನಡೆಸಿದರು. ಅನಿತಾ ಪ್ಲೇವಿಯಾ ಮೀನೆಜಸ್ ಅಜೆಕಾರ್ ಅವರು ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ನಿರೂಪಿಸಿದರು.
ಈ ಕಾರ್ಯಕ್ರಮದ ಉಸ್ತುವಾರಿ ವಲ್ಲಿ ಕ್ವಾಡ್ರಸ್ ಅಜೆಕಾರ್ ಅವರು ಧನ್ಯವಾದಗೈದು, ಜೆಸ್ಸಿ ಲೋಬೊ ಅಜೆಕಾರ್ ಅವರು ಕಾರ್ಯಕ್ರಮದ ಡಿಜಿಟಲ್ ಸೂತ್ರ ಸಂಚಾಲನೆಗೈದರು. ಕಾರ್ಯಕ್ರಮದಲ್ಲಿ ಹೆಸರಾಂತ ಬರಹಗಾರರು ಹಾಗೂ ನಾಟಕ ಕಲಾವಿದರಾದ ಎಡ್ಡಿ ಸಿಕ್ವೇರಾ, ರಿಚ್ಚಿ ಪಿರೇರಾ, ಕ್ಲೀಟಾ ನೊರೊನ್ಹಾ, ಎಮ್. ಪ್ಯಾಟ್ರಿಕ್, ಶಾಲಿನಿ ವಾಲೆನ್ಸಿಯಾ, ಜ್ಯೂಲಿಯೆಟ್ ಮೊರಾಸ್, ಎಚ್.ಆರ್.ಆಳ್ವ, ಜೆಮ್ಮಾ ಪಡೀಲ್, ವಿಶ್ವಾಸ್ ರೆಬಿಂಬಸ್, ಡೇವಿಡ್ ಡಿಸೋಜ ವಾಮಂಜೂರ್, ಪಿಂಟೊ ವಾಮಂಜೂರ್, ಅಲೆಕ್ಸ್ ಮಿರಾಂದಾ, ಕ್ಯಾಥರೀನ್ ರೊಡ್ರಿಗಸ್ ಕಟ್ಪಾಡಿ, ವಂದನೀಯ ಫಾದರ್ ಐವನ್ ಮಿಯಾರ್, ವಂದನೀಯ ಫಾದರ್ ನವೀನ್, ಮಾಚ್ಚಾ ಮಿಲಾಗ್ರಿಸ್, ಜೆ.ಎಫ್.ಡಿಸೋಜ್ ಅತ್ತಾವರ್ ಹಾಗೂ ಇನ್ನಿತರರು ಭಾಗವಹಿಸಿದ್ದರು.




