ಕೋಟೆಕಾರು ದರೋಡೆ ಪ್ರಕರಣ: ಮೂವರು ಆರೋಪಿಗಳು ಇನ್ನೂ ನಾಪತ್ತೆ

Share with

ಉಳ್ಳಾಲ: ದೇಶದೆಲ್ಲೆಡೆ ಸಂಚಲನ ಮೂಡಿಸಿದ್ದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಕೆ.ಸಿ.ರೋಡ್‌ ಶಾಖೆಯಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಇಂದಿಗೆ (ಜ. 17) ಒಂದು ವರ್ಷ. ಆದರೆ ಪ್ರಕರಣದಲ್ಲಿ ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ತಮಿಳುನಾಡು, ಮಹಾರಾಷ್ಟ್ರ ಪೊಲೀಸರ ಸಹಕಾರದಲ್ಲಿ ಕಾರ್ಯಾ ಚರಣೆ ನಡೆಸಿದ್ದ ಮಂಗಳೂರು ಪೊಲೀಸರು ಪ್ರಕರಣ ನಡೆದು ನಾಲ್ಕು ದಿನದೊಳಗೆ ನಾಲ್ವರು ಆರೋಪಿಗಳ ಸಹಿತ ಎಲ್ಲ 13.50 ಕೋ.ರೂ. ಮೌಲ್ಯದ 18 ಕೆಜಿ 360 ಗ್ರಾಂ ಚಿನ್ನ ಹಾಗೂ ನಗದನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ದರೋಡೆ ಯಾಗಿದ್ದ ಸೊತ್ತುಗಳು ಸಿಕ್ಕಿರುವುದ ರಿಂದ ಬಾಕಿ ಆರೋಪಿಗಳ ಬಂಧನಕ್ಕೆ ಪೊಲೀಸರು ಆಸಕ್ತಿ ತೋರಿಸಿರಲಿಲ್ಲ. ಈಗಾಗಲೇ ಬಂಧಿತರಿಗೂ ಉಳಿದ ಮೂವರಿಗೂ ಯಾವುದೇ ಮಾಹಿತಿ, ಪರಿಚಯವಿಲ್ಲ. ಅವರು ಬೇರೆಯೇ ತಂಡದ ಸದಸ್ಯರು. ಹಾಗಾಗಿ ಅವರ ಬಂಧನ ಪೊಲೀಸರಿಗೂ ಸವಾಲಾಗಿದೆ.ಪ್ರಸ್ತುತ ಕಮಿಷನರ್‌ ಸುಧೀರ್‌ಕುಮಾರ್‌ ರೆಡ್ಡಿ ಮತ್ತು ಪ್ರಕರಣದ ತನಿಖಾಧಿಕಾರಿ ಮಂಗಳೂರು ನಗರ ದಕ್ಷಿಣ ಎಸಿಪಿ ವಿಜಯ ಕ್ರಾಂತಿ ಅವರು ಹೆಚ್ಚಿನ ಆಸಕ್ತಿ ವಹಿಸಿದ್ದಾರೆ. ಜತೆಗೆ ಬಂಧಿತ ಆರೋಪಿಗಳಿಗೆ ಹೈಕೋರ್ಟ್‌ ನಲ್ಲಿಯೂ ಜಾಮೀನು ಸಿಗದಂತೆ ನ್ಯಾಯಾಲಯಕ್ಕೆ ಬಲಿಷ್ಠ ವರದಿ ಸಲ್ಲಿಸು ವಲ್ಲಿಯೂ ಯಶಸ್ವಿಯಾಗಿದ್ದಾರೆ.

ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳನ್ನು ಒಳಗೊಂಡ ಪ್ರಕರಣದಲ್ಲಿ ಆರೋಪಿಗಳ ಬಂಧನ ಮಾಡಿದ ಪೊಲೀಸರ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿತ್ತು. ಅರ್ಹ ವಾಗಿಯೇ ಆಗಿನ ಕಮಿಷನರ್‌ಸಹಿತ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪೊಲೀಸರು ಮುಖ್ಯಮಂತ್ರಿ ಪದಕಕ್ಕೂ ಭಾಜನರಾಗಿದ್ದರು. ವಿಶೇಷ ಪ್ರಕರಣ ವೆಂದು ಪರಿಗಣಿಸಿದ ನ್ಯಾಯಾ ಲಯವೂ, ಚಿನ್ನಾಭರಣ ಮತ್ತು ನಗದನ್ನು ಅತಿ ಶೀಘ್ರದಲ್ಲಿ ಬಿಡುಗಡೆ ಮಾಡಿದ್ದು ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿತ್ತು. ನಾಲ್ವರು ಜೈಲಿನಲ್ಲಿ ಸದ್ಯ ನಾಲ್ವರು ಪ್ರಮುಖ ಆರೋಪಿ ಗಳು 1 ವರ್ಷದಿಂದ ಜೈಲಿನಲ್ಲಿದ್ದಾರೆ.ನೇರವಾಗಿ ಭಾಗಿಯಾಗದ ಇಬ್ಬರನ್ನು ಜಿಲ್ಲಾ ನ್ಯಾಯಾಲಯ ಜಾಮೀನಿನಲ್ಲಿ ಬಿಡುಗಡೆಗೊಳಿಸಿದೆ.

ಪ್ರಮುಖ ಆರೋಪಿಗಳಾದ ತಮಿಳನಾಡಿನ ಮುರುಗಂಡಿ ಥೇವರ್‌ ಅಲಿಯಾಸ್‌ ಕುಮಾರ್‌ (37), ಯೋಶ್ವಾ ರಾಜೇಂದ್ರನ್‌ ಅಲಿಯಾಸ್‌ ಜೋಶ್ವಾ ರಾಜೇಂದ್ರನ್‌ (36), ಕಣ್ಣನ್‌ ಮಣಿ (36) ಮತ್ತು ದರೋಡೆ ಸಂಚು ರೂಪಿಸಿದ್ದ ಸ್ಥಳೀಯ ನಿವಾಸಿ ಶಶಿ ಥೇವರ್‌ ಅಲಿಯಾಸ್‌ ಭಾಸ್ಕರ ಬೆಳ್ಚಪಾಡ (70) ಜೈಲಿನಲ್ಲಿದ್ದಾರೆ. ಮುರುಗಂಡಿಯ ತಂದೆ ಷಣ್ಮುಗ ಸುಂದರಂ (65), ಶಶಿಯ ಸಹವರ್ತಿ ಮೊಹಮ್ಮದ್‌ ನಝೀರ್‌(66)ಗೆ ಜಿಲ್ಲಾ ನ್ಯಾಯಾಲಯ ಜಾಮೀನು ನೀಡಿದೆ. ಜಾಮೀನು ನೀಡದ ಹೈಕೋರ್ಟ್‌ ಜೈಲಿನಲ್ಲಿರುವ ನಾಲ್ವರು ಜಾಮೀನು ಪಡೆಯಲು ಇನ್ನಿಲ್ಲದ ಪ್ರಯತ್ನ ಮಾಡಿ ದ್ದಾರೆ. ಆದರೆ ಜಿಲ್ಲಾ ಕೋರ್ಟ್‌ನಿಂದ ಹಿಡಿದು ಹೈಕೋರ್ಟ್‌ ವರೆಗೂ ಅವರ ಅರ್ಜಿಗಳು ವಜಾ ಆಗಿವೆ. ಇಬ್ಬರಿಗೆ ಗುಂಡೇಟು ಸ್ಥಳ ಮಹಜರು ವೇಳೆ ತಪ್ಪಿಸಿಕೊ ಳ್ಳಲು ಯತ್ನಿಸಿದ್ದ ಕಣ್ಣನ್‌ ಮಣಿ ಮತ್ತು ಮುರುಗಂಡಿಗೆ ಪೊಲೀಸರು ಗುಂಡಿನ ರುಚಿಯನ್ನೂ ತೋರಿಸಿದ್ದರು.


Share with

Leave a Reply

Your email address will not be published. Required fields are marked *