ಉಪ್ಪಳ: ಕೇರಳ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ ಕಾಸರಗೋಡು ಜಿಲ್ಲಾ ಸಮಾವೇಶ ಫೆ.7ರಂದು ತೃಕರಿಪುರ್ ಪಂಚಾಯತ್ ಟೌನ್‌ಹಾಲ್‌ನಲ್ಲಿ ನಡೆಯಲಿದೆ.
ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಉದ್ಘಾಟಿಸುವರು. ಕೆ.ಎಸ್.ಟಿ.ಎ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಎನ್ ದೇವರಾಜನ್ ಮುಖ್ಯ ಭಾಷಣ ಮಾಡುವರು. ರಾಜ್ಯ ಸಮಿತಿ ಉಪಾಧ್ಯಾಕ್ಷ ಪಿ.ಎ ಜೇಕಬ್ ಸಂಘಟನಾ ವರದಿ ಮಂಡಿಸುವರು.
ಮಾಜಿ ರಾಜ್ಯಾಧ್ಯಕ್ಷ ರಾಮನ್ ಚೆನ್ನಿಕ್ಕರ ಚಿಕಿತ್ಸಾ ಧನಸಹಾಯ ವಿತರಿಸುವರು.
ಜಿಲ್ಲಾ ಅಧ್ಯಕ್ಷ ಸಿ.ಸುರೇಶ್ ಭಟ್ ಅಧ್ಯಕ್ಷತೆ ವಹಿಸುವರು. ಸಂಘಟನೆಯ ಮುಖಂಡರಾದ ಪಿ.ಯು ಶಂಕರನ್, ಎಸ್.ರಾಧಾಕೃಷ್ಣ ಭಟ್, ಕೆ.ಮೋಹನ್‌ದಾಸ್ ಕುಂಬಳೆ, ಕೆ.ಯಶೋದ, ರುಕ್ಮಿಣಿ, ಎಂ.ಮಾಲತಿ, ಪಿ.ವೈ ಕುಂಞಂಕೃಷ್ಣನ್, ಪಿ.ನಾರಾಯಣ, ಸಿ.ಭಾಸ್ಕರ್ ನಾಯರ್, ವಿ.ಪದ್ಮನಾಭನ್, ಕೆ.ಬಾಲಕೃಷ್ಣ ಶೆಟ್ಟಿ, ಉದಯನ್ ಬಡಾಸಾಬ್, ಓ.ವಿ ಗಂಗಾಧರನ್, ಸತೀಶ್ ಆಚಾರ್ಯ, ಪಿ.ಕೆ ರಹಮತ್, ಕೆ.ವಿ ದಾಮೋದರನ್, ಕೆ.ವಿ ಚಂದು, ವಿನೋದ್ ಉಪಸ್ಥಿತರಿರುವರು.