ಮಂಜೇಶ್ವರ: ಕೆ.ಎಸ್.ಟಿ.ಎ ಮಂಜೇಶ್ವರ ಯೂನಿಟ್ ಸಮ್ಮೇಳನ ಹೊಸಂಗಡಿ ವ್ಯಾಪಾರಿ ಭವನದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಮಂಜೇಶ್ವರ ಯೂನಿಟ್ ಅಧ್ಯಕ್ಷ ಗಣೇಶ್ ಪಾವೂರು ವಹಿಸಿದ್ದರು.
ರಾಜ್ಯ ಸದಸ್ಯ ಮೋಹನ್ ದಾಸ್ ಕುಂಬುಳೆ ಉದ್ಘಾಟಿಸಿದರು. ತಾಲೂಕು ಅಧ್ಯಕ್ಷ ರಾಮ ಪೊಯ್ಯೆಕಂಡ, ಮಾಜಿ ಯೂನಿಟ್ ಅಧ್ಯಕ್ಷ ವಿಶ್ವನಾಥ್ ಕುತ್ತಾನಾಡಿ, ಮನೋಹರ ಶೆಟ್ಟಿ ಕುಂಜತ್ತೂರು, ಉಪಾಧ್ಯಕ್ಷರು ಬಾಲಕೃಷ್ಣ ಶೆಟ್ಟಿ, ವಿಜಯ ದೇವದಾಸ್ ಶೆಟ್ಟಿ ಮೊದಲಾದವರು ಮಾತನಾಡಿದರು. ಜೊತೆ ಕಾರ್ಯದರ್ಶಿ ಪ್ರೇಮಲತಾ ವರದಿ ಮಂಡಿಸಿದರು, ಕೋಶಾಧಿಕಾರಿ ಪುರುಷೋತ್ತಮ ಆಚಾರ್ಯ ಲೆಕ್ಕ ಪತ್ರ ಮಂಡಿಸಿದರು. ಸದಸ್ಯ ರಾದ ಕೃಷ್ಣ ಕೆದುಂಬಾಡಿ, ಗೀತಾ ಮಂಜೇಶ್ವರ, ಕಲಾವತಿ ಹೊಸಂಗಡಿ, ಸುಚಿತಾ, ಸ್ವಪ್ನ, ರೂಪಾ ಉಪಸ್ಥಿತರಿದ್ದರು. ಪ್ರದಾನ ಕಾರ್ಯದರ್ಶಿ ಕುಮುದ ರಾಜ್ ಮಂಜೇಶ್ವರ ಸ್ವಾಗತಿಸಿ ಶರ್ಮಿಳ ಉದ್ಯಾವರ ವಂದಿಸಿದರು.