ಕುಂಬಳೆ :  ಅಂಗಡಿಮೊಗರು ನಿವಾಸಿ ಜಿದ್ದಾದಲ್ಲಿ ಕುಸಿದುಬಿದ್ದು ಮೃತ್ಯು

Share with





ಕುಂಬಳೆ: ಜಿದ್ದಾದಲ್ಲಿ ಕುಸಿದುಬಿದ್ದು ವ್ಯಕ್ತಿಯೋರ್ವರು ಮೃತಪಟ್ಟಿರುವ ಘಟನೆ   ಅಂಗಡಿಮೊಗರು ಕಮ್ಮಂದಳ ಎಂಬಲ್ಲಿ ನಡೆದಿದೆ.

ಕೆ.ಎಸ್. ಸೂಫಿ (50) ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಕಳೆದ ಮಂಗಳವಾರ ಅಲ್ಲಿನ ವಾಸಸ್ಥಳದಲ್ಲಿ ನಮಾಜು ನಡೆಸಲು ಸಿದ್ಧತೆಯಲ್ಲಿದ್ದ ವೇಳೆ ಕುಸಿದುಬಿದ್ದು ಮೃತಪಟ್ಟಿರುವು ದಾಗಿ ತಿಳಿದುಬಂದಿದೆ. ಕಳೆದ ೩೦ ವರ್ಷಗಳಿಂದ ಜಿದ್ದಾದ ಸೂಪರ್ ಮಾರ್ಕೆಟ್‌ನಲ್ಲಿ ಇವರು ಕೆಲಸ ನಿರ್ವಹಿಸುತ್ತಿದ್ದರು. ಮೂರು ವರ್ಷಗಳ ಹಿಂದೆ ಊರಿಗೆ ಬಂದು ಮರಳಿದ್ದರು. ಇವರ ನಿಧನ ಸುದ್ದಿ ತಿಳಿದು ಯು.ಕೆ ಯಲ್ಲಿರುವ ಪುತ್ರ ಸುಹೈಲ್ ಜಿದ್ದಾಕ್ಕೆ ತಲುಪಿದ್ದಾರೆ. ಮೃತದೇಹದ ಅಂತ್ಯ ಸಂಸ್ಕಾರ ಇಂದು ಮುಂಜಾನೆ ಜಿದ್ದಾದ ಹಯಲ್ ಎಂಬಲ್ಲಿ ನಡೆಸಲಾ ಯಿತು. ಮೃತರು ಪತ್ನಿ ತಾಹಿರಾ, ಇತರ ಮಕ್ಕಳಾದ ಸಾಹಿಬ, ಸೌರತ್, ಸಮಹ, ಸುಮೈಲ್, ಸಹೋದರ-ಸಹೋದರಿಯ ರಾದ ಮುಹಮ್ಮದ್, ಬೀವಿ, ಆಯಿಶ, ಮರಿಯಾಂಬಿ, ನಫೀಸ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿ ದಾರೆ. ಇನ್ನೋರ್ವ ಸಹೋದರ ಬಾವ ಈ ಹಿಂದೆ ನಿಧನರಾಗಿದ್ದಾರೆ.


Share with

Leave a Reply

Your email address will not be published. Required fields are marked *