ಕುಂಭಮೇಳ ಕಾಲ್ತುಳಿತ; ಬೆಳಗಾವಿಯ ತಾಯಿ-ಮಗಳು ಸಾವು!

Share with

ಪ್ರಯಾಗ್‌ರಾಜ್ ಮಹಾಕುಂಭ ಮೇಳದಲ್ಲಿ ಭೀಕರ ಕಾಲ್ತುಳಿತ ಘಟನೆಯಲ್ಲಿ ಬೆಳಗಾವಿಯ ತಾಯಿ ಹಾಗೂ ಮಗಳು ಸಾವನ್ನಪ್ಪಿದ್ದಾರೆ.

ನಗರದ ವಡಗಾವಿ ನಿವಾಸಿ ಜ್ಯೋತಿ ಹತ್ತರವಾಠ (50) & ಪುತ್ರಿ ಮೇಘಾ ಹತ್ತರವಾಠ (18) ಮೃತಪಟ್ಟಿದ್ದಾರೆ ಎಂದು ಮೃತರ ಸಂಬಂಧಿ ಗುರುರಾಜ ಹುದ್ದಾರ ಮಾಹಿತಿ ನೀಡಿದ್ದಾರೆ. ಕಾಲ್ತುಳಿತಕ್ಕೆ ಸಿಕ್ಕು ಗಾಯಗೊಂಡಿದ್ದ ಬೆಳಗಾವಿಯ ನಾಲ್ವರನ್ನೂ ಪ್ರಯಾಗ್‌ರಾಜ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ


Share with