ಕುಂಬಳೆ: ಪುತ್ತಿಗೆಯಲ್ಲಿ ಬಸ್ ತಂಗುದಾಣ ನಿರ್ಮಿಸುವಂತೆ ಬಿಜೆಪಿ ಪುತ್ತಿಗೆ ಗ್ರಾಪಂ ಜನಪ್ರತಿನಿಧಿಗಳಿಂದ ಆಗ್ರಹ

Share with

ಕುಂಬಳೆ: ಪುತ್ತಿಗೆ ಗ್ರಾಮ ಪಂಚಾಯತ್ ಕಚೇರಿ, ಕೃಷಿ ಭವನ, ಅಂಚೆ ಕಚೇರಿ ಮುಂತಾದ ಪ್ರಮುಖ ಕೇಂದ್ರಗಳನ್ನು ಒಳಗೊಂಡಿರುವ ಪ್ರದೇಶವಾದ ಪುತ್ತಿಗೆಯಲ್ಲಿ ಸೀತಾಂಗೋಳಿ ಭಾಗಕ್ಕೆ ದಿನಂಪ್ರತಿ ತೆರಳುವ ಪ್ರಯಾಣಿಕರ ಪರದಾಟವನ್ನು ಗಮನಿಸಿ ಸುಸಜ್ಜಿತವಾದ ಬಸ್ ತಂಗುದಾಣವನ್ನು ನಿರ್ಮಿಸಬೇಕೆಂದು ಆಗ್ರಹಿಸಿ ಬಿಜೆಪಿ ಪುತ್ತಿಗೆ ಗ್ರಾಮ ಪಂಚಾಯತ್ ಜನಪ್ರತಿನಿಧಿಗಳು ಪಂಚಾಯತ್ ಕಾರ್ಯದರ್ಶಿಗೆ ಮನವಿಯನ್ನು ಸಲ್ಲಿಸಿದರು.

ಬಿಜೆಪಿ ಪುತ್ತಿಗೆ ಗ್ರಾಮ ಪಂಚಾಯತ್ ಜನಪ್ರತಿನಿಧಿಗಳು ಪಂಚಾಯತ್ ಕಾರ್ಯದರ್ಶಿಗೆ ಮನವಿಯನ್ನು ಸಲ್ಲಿಸಿದರು.

ಅಪಘಾತಗಳಿಗೂ ಕಾರಣ

ಕಳೆದ ಹಲವಾರು ವರ್ಷಗಳಿಂದ ಪಂಚಾಯತ್‌ನ ಕೇಂದ್ರ ಕಚೇರಿಗಳೆಲ್ಲವೂ ಕಾರ್ಯಾಚರಿಸುತ್ತಿರುವ ಪುತ್ತಿಗೆ ಪ್ರದೇಶ ದಿಂದ ಪೆರ್ಲಕ್ಕೆ ತೆರಳುವ ಭಾಗದಲ್ಲಿ ಬಸ್ ತಂಗುದಾಣವನ್ನು ಅನೇಕ ವರ್ಷಗಳ ಹಿಂದೆಯೇ ನಿರ್ಮಿಸಲಾಗಿದೆ. ಆದರೆ ಸೀತಾಂಗೋಳಿ ಭಾಗಕ್ಕೆ ತೆರಳುವವರು ಮಳೆ, ಗಾಳಿ, ಬಿಸಿಲೆನ್ನದೆ ರಸ್ತೆ ಬದಿಯಲ್ಲಿ ನಿಲ್ಲುವಂತಹ ದುಃಸ್ಥಿತಿ ಬಂದೊದಗಿದೆ. ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಬಸ್‌ಗಾಗಿ ವಿರುದ್ಧ ದಿಕ್ಕಿನ ತಂಗುದಾಣದಲ್ಲಿ ಕುಳಿತು ಬಸ್ ಬರುವ ಸಂದರ್ಭ ಓಡೋಡಿ ರಸ್ತೆ ದಾಟು ತಿರುವುದು ಹಲವಾರು ಅಪಘಾತಗಳಿಗೆ ಕಾರಣವಾಗುತ್ತಿದೆ ಎಂಬುದನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಸಮಸ್ಯೆಗಳ ಬಗೆಹರಿಸಿ ಪುತ್ತಿಗೆ ಗ್ರಾಮ ಪಂಚಾಯತ್‌ನ ವಿವಿಧ ಆಡಳಿತ ಮಂಡಳಿ ಸಭೆಗಳಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದರೂ ಇದು ವರೆಗೆ ಯಾವುದೇ ಅನುದಾನವನ್ನು ಬಸ್ ತಂಗುದಾಣ ನಿರ್ಮಾಣಕ್ಕೆ ಮೀಸಲಿಟ್ಟಿಲ್ಲ. ಆದ್ದರಿಂದ ಆದಷ್ಟು ಬೇಗ ಪುತ್ತಿಗೆ ಗ್ರಾಮ ಪಂಚಾಯತ್ ವತಿಯಿಂದ ಪುತ್ತಿಗೆಯಲ್ಲಿ ಅತ್ಯಾಧುನಿಕ ಮಾದರಿಯ ತಂಗುದಾಣವನ್ನು ನಿರ್ಮಿಸಿ ಜನರಿಗೆ ಉಂಟಾಗುತ್ತಿರುವ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಮನವಿ ಮೂಲಕ ಒತ್ತಾಯಿಸಲಾಗಿದೆ. ಮನವಿ ಸಲ್ಲಿಕೆಯ ವೇಳೆ ಬಿಜೆಪಿ ಜನ ಪ್ರತಿನಿಧಿಗಳಾದ ಜನಾರ್ದನ ಕಣ್ಣೂರು, ಕಾವ್ಯಶ್ರೀ, ಜಯಂತಿ ಹಳೆಮನೆ, ಅನಿತಶ್ರೀ ಮುಂತಾದವರು ಹಾಜರಿದ್ದರು.

ಇದುವರೆಗೆ ವ್ಯವಸ್ಥೆ ಸಿಗಲಿಲ್ಲ

ದಿನನಿತ್ಯ ಕಚೇರಿಗಳಿಗೆ ಆಗಮಿಸುವ ಜನಸಾಮಾನ್ಯರಿಗೆ ಇಷ್ಟೆಲ್ಲಾ ಸಮಸ್ಯೆಗಳು ತಲೆ ದೋರಿದ್ದರೂ ಇದುವರೆಗೆ ಸಮರ್ಪಕ ವ್ಯವಸ್ಥೆ ಕೈಗೊಳ್ಳಲು ಸಾಧ್ಯವಾಗದಿರುವುದು ಅತ್ಯಂತ ವಿಷಾದನೀಯ- ಜನಾರ್ದನ ಕಣ್ಣೂರು ಬಿಜೆಪಿ ಪಂಚಾಯತ್ ಸಮಿತಿ ಉಪಾಧ್ಯಕ್ಷರು.


Share with

Leave a Reply

Your email address will not be published. Required fields are marked *