ನವರಾತ್ರಿಯ ನಾಲ್ಕನೇ ದಿನ ಕೂಷ್ಮಾಂಡಾ ದೇವಿ ಆರಾಧನೆ.. ತಾಯಿಯ ಆಚರಣೆ ಹೇಗೆ?

Share with

ಹಿಂದೂ ಧರ್ಮದಲ್ಲಿ ನವರಾತ್ರಿಯ ಒಂಬತ್ತು ದಿನಗಳನ್ನು ಶಕ್ತಿಯ ಆರಾಧನೆಗೆ ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ನಿಜವಾದ ಮನಸ್ಸಿನಿಂದು ಪೂಜಿಸುವ ಭಕ್ತರಿಗೆ ದುರ್ಗಾ ದೇವಿಯು ವರ್ಷವಿಡೀ ತನ್ನ ಆಶೀರ್ವಾದವನ್ನು ನೀಡುತ್ತಾಳೆ ಎಂದು ನಂಬಿಕೆ ಇದೆ. ನವರಾತ್ರಿಯ ನಾಲ್ಕನೇ ದಿನದಂದು ತಾಯಿ ಕೂಷ್ಮಾಂಡಾವನ್ನು ಪೂಜಿಸಲಾಗುತ್ತದೆ. ಕೂಷ್ಮಾಂಡಾ ದೇವಿಯನ್ನು ಬ್ರಹ್ಮಾಂಡದ ಮೂಲ ಶಕ್ತಿ ಎಂದು ಪರಿಗಣಿಸಲಾಗಿದೆ. ದುರ್ಗೆಯ ರೂಪಗಳಲ್ಲಿ ಕೂಷ್ಮಾಂಡದ ರೂಪವನ್ನು ಅತ್ಯಂತ ಉಗ್ರವೆಂದು ಪರಿಗಣಿಸಲಾಗಿದೆ.
ಕೂಷ್ಮಾಂಡಾ ದೇವಿ ಪೂಜಾ ಸಮಯ
ಅಕ್ಟೋಬರ್ 6 ರಂದು ಬೆಳಿಗ್ಗೆ 07:49 ರಿಂದ ಪ್ರಾರಂಭವಾಗುತ್ತದೆ ಮತ್ತು ಅಕ್ಟೋಬರ್ 7 ರಂದು ಬೆಳಿಗ್ಗೆ 09:47 ಕ್ಕೆ ಕೊನೆಗೊಳ್ಳುತ್ತದೆ. ಈ ವರ್ಷ ಅಕ್ಟೋಬರ್ 3ರಿಂದ 11ರವರೆಗೆ ಒಂಬತ್ತು ದುರ್ಗಾದೇವಿಯ ರೂಪಗಳನ್ನು ಪೂಜಿಸಲಾಗುತ್ತದೆ.

ಕೂಷ್ಮಾಂಡಾ ದೇವಿ ಸ್ವರೂಪವೇನು?
ತಾಯಿ ಕೂಷ್ಮಾಂಡಾಗೆ 8 ತೋಳುಗಳಿವೆ. ಆದುದರಿಂದ ಈಕೆಯನ್ನು ಅಷ್ಟಭುಜ ದೇವಿ ಎಂದೂ ಕರೆಯುತ್ತಾರೆ. ತನ್ನ ಎಂಟು ಕೈಗಳಲ್ಲಿ ಕಮಂಡಲ, ಬಿಲ್ಲು, ಬಾಣ, ಕಮಲದ ಹೂವಿನ ಮಕರಂದ ತುಂಬಿದ ಮಡಕೆ, ಚಕ್ರ, ಗದೆ ಮತ್ತು ಜಪಮಾಲೆಯನ್ನು ಹಿಡಿದಿದ್ದಾಳೆ. ಸಿಂಹವು ಆಕೆಯ ವಾಹನವಾಗಿದೆ.

ಚಂದ್ರಘಂಟಾ ಪೂಜೆ ಮಹತ್ವ, ಮುಹೂರ್ತ, ಮಂತ್ರ
ಕೂಷ್ಮಾಂಡಾ ದೇವಿಯ ಪೂಜೆಯ ವಿಧಾನ

*ಶಾರದೀಯ ನವರಾತ್ರಿಯ ನಾಲ್ಕನೇ ದಿನದಂದು ಬೆಳಿಗ್ಗೆ ಎದ್ದು ಸ್ನಾನ ಮಾಡಿ ಶುಭ್ರವಾದ ಬಟ್ಟೆಗಳನ್ನು ಧರಿಸಿ ಮಾತೃ ದೇವಿಯನ್ನು ಧ್ಯಾನಿಸಿ.

*ಕೂಷ್ಮಾಂಡಾ ದೇವಿಯು ಹಳದಿ ಬಣ್ಣವನ್ನು ಇಷ್ಟಪಡುತ್ತದೆ. ಆದ್ದರಿಂದ ಆಕೆಯನ್ನು ಪೂಜಿಸುವಾಗ ಹಳದಿ ಬಟ್ಟೆಗಳನ್ನು ಧರಿಸಿ.

*ಪೂಜೆಯ ಸಮಯದಲ್ಲಿ ತಾಯಿಗೆ ಶ್ರೀಗಂಧ, ಕುಂಕುಮ, ಹೂವು, ಸಿಹಿ ತಿನಿಸು, ಅಕ್ಷತೆ, ಅಲಂಕಾರಿಕ ವಸ್ತುಗಳನ್ನು ಅರ್ಪಿಸಿ.

*ನಂತರ ವೀಳ್ಯದೆಲೆಯ ಮೇಲೆ ಸ್ವಲ್ಪ ಕುಂಕುಮವನ್ನು ತೆಗೆದುಕೊಂಡು ಅದನ್ನು ದೇವಿಗೆ ಅರ್ಪಿಸಿ ಓಂ ಬ್ರಿಂ ಬೃಹಸ್ಪತೇ ನಮಃ ಎಂಬ ಮಂತ್ರವನ್ನು ಪಠಿಸಿ.

*ಮಾತೆ ಕೂಷ್ಮಾಂಡಾ ಮಾಲ್ಪುವಾವನ್ನು ಇಷ್ಟಪಡುತ್ತಾಳೆ ಎಂದು ಶಾಸ್ತ್ರಗಳಲ್ಲಿ ಸೂಚಿಸಲಾಗಿದೆ. ಆದ್ದರಿಂದ ಮಾಲ್ಪುವಾ ನೀಡಿ.

*ಪೂಜೆಯ ಸಮಯದಲ್ಲಿ, ದುರ್ಗಾ ಸಪ್ತಶತಿ ಅಥವಾ ಸಿದ್ಧ ಕುಂಜಿಕಾ ಸ್ತೋತ್ರವನ್ನು ಪಠಿಸುವುದರಿಂದ ಕೂಷ್ಮಾಂಡ ಮಾತೆ ಬುದ್ಧಿವಂತಿಕೆಯನ್ನು ಹೆಚ್ಚಿಸುತ್ತಾಳೆ ಎಂದು ನಂಬಲಾಗುತ್ತದೆ.

ಕೂಷ್ಮಾಂಡ ದೇವಿಯ ಮಂತ್ರ
ಸುರಸಮ್ಪೂರ್ಣಕಲಶಂ ರುಧಿರಪ್ಲುತ್ಮೇವ ಚ ।ದಧಾನ ಹಸ್ತಪದ್ಮಾಭ್ಯಾಂ ಕೂಷ್ಮಾಂಡ ಶುಭದಾಸ್ತು ॥

ಪೂಜಾ ಫಲವೇನು?
ಬಯಸಿದ ಆಸೆಗಳನ್ನು ಈಡೇರಿಸಿಕೊಳ್ಳಲು ನವರಾತ್ರಿಯ ಸಮಯದಲ್ಲಿ ಒಂಬತ್ತು ದಿನ ಭಕ್ತರು ಉಪವಾಸವನ್ನು ಮಾಡುತ್ತಾರೆ. ಕೆಲವರು ಅಲ್ಪ ಆಹಾರ ಸೇವಿಸಿ ಆಚರಿಸಿದರೆ ಇನ್ನೂ ಕೆಲವರು ಒಂದು ಹೊತ್ತಿನ ಆಹಾರವನ್ನು ಮಾತ್ರ ಸೇವಿಸಿ ಉಪವಾಸ ಆಚರಿಸುತ್ತಾರೆ. ಒಮ್ಮೆ ಭೂಮಿಯ ಮೇಲೆ ಅಂಧಕಾರ ಪಸರಿಸಿತ್ತು. ಆಗ ದೇವಿ ತನ್ನ ಶಕ್ತಿಯಿಂದ ಭೀಮಿ ಮೇಲಿನ ಅಂಧಕಾರವನ್ನು ಹೋಗಲಾಡಿಸಿದಳು.

ಕೂಷ್ಮಾಂಡಾ ದೇವಿಯು ಸೂರ್ಯನಿಗೆ ಅಧಿಪತಿಯಾಗಿರುವ ಕಾರಣ ಆಕೆಯನ್ನು ಪೂಜಿಸುವುದರಿಂದ ಜಾತಕದಲ್ಲಿ ಸೂರ್ಯ ದೋಷ ನಿವಾರಣೆಯಾಗುತ್ತದೆ. ಆಕೆಯನ್ನು ಪೂಜಿಸುವುದರಿಂದ ಹೆಚ್ಚು ಫಲ ಪ್ರಾಪ್ತಿಯಾಗುತ್ತದೆ. ಕೆಟ್ಟ ದಿನಗಳು ದೂರವಾಗುತ್ತವೆ. ದು:ಖಗಳು ಕಡಿಮೆಯಾಗುತ್ತವೆ. ಆರೋಗ್ಯ, ಸಂಪತ್ತು ಪ್ರಾಪ್ತಿಯಾಗುತ್ತದೆ.

ಕೂಷ್ಮಾಂಡ ಕಥೆ
ಕೂಷ್ಮಾಂಡ ದೇವಿ ರಾಕ್ಷಸನನ್ನು ಸಂಹರಿಸಲು ಅವತರಿಸಿದ ದುರ್ಗೆಯ ನಾಲ್ಕನೇ ರೂಪ. ಆ ಸಮಯದಲ್ಲಿ ಜಗತ್ತು ಅಸ್ತಿತ್ವದಲ್ಲಿರಲಿಲ್ಲ. ಸುತ್ತಲೂ ಕತ್ತಲೆ ಆವರಿಸಿತ್ತು. ದೇವಿ ಪ್ರತ್ಯಕ್ಷಳಾದ ಬಳಿಕ ಸೃಷ್ಟಿ ಬದಲಾಯಿತು. ಎಲ್ಲೆಡೆ ಬೆಳಕು ಆವರಿಸಿತು. ಹೀಗಾಗಿ ಈಕೆಯನ್ನು ಆದಿಸ್ವರೂಪ ಎಮದು ಕರೆಯಲಾಗುತ್ತದೆ. ಪುರಾಣಗಳ ಪ್ರಕಾರ ಕೂಷ್ಮಾಂಡ ದೇವಿಯ ದೇಹದ ತೇಜಸ್ಸು ಸೂರ್ನಂತಿದೆ. ಕೂಷ್ಮಂಡ ದೇವಿಯನ್ನು ಯಾರೂ ಹೃದಯದಿಂದ ಪೂಜಿಸುತ್ತಾರೋ ಅಂಥವರಿಗೆ ದೇವಿ ದು:ಖಗಳಿಂದ ಕಾಪಾಡುತ್ತಾಳೆ. ಶಕ್ತಿ, ಖ್ಯಾತಿ, ಆರೋಗ್ಯ ನೀಡುತ್ತಾಳೆ.


Share with

Leave a Reply

Your email address will not be published. Required fields are marked *