
ಮಂಜೇಶ್ವರ : ವಿಷಪೂರಿತ ಹಾವು ಕಡಿದು ಗಂಭಿರವಸ್ಥೆಯಲ್ಲಿ ಚಿಕಿತ್ಸೆಯಲ್ಲಿದ್ದ ಕೂಲಿ ಕಾರ್ಮಿಕ ಮೃತಪಟ್ಟ ಘಟನೆ ನಡೆದಿದೆ. ಮಿಯಾಪದವು ಪಳ್ಳ ತ್ತಡ್ಕ ನಿವಾಸಿ (ದಿ ) ದಾದು ಮೂಲ್ಯ ರವರ ಪುತ್ರ ಅಶೋಕ (43) ಗುರುವಾರ ಮುಂಜಾನೆ 4ಗಂಟೆಗೆ ಮಂಗಳೂರು ಕಂಕನಾಡಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ತಿಂಗಳ 18ರಂದು ರಾತ್ರಿ ಸುಮಾರು 8ಗಂಟೆ ವೇಳೆ ಮನೆಯ ಅಂಗಳದಲ್ಲಿ ಹಾವು ಕಡಿದಿತ್ತೆ ನ್ನಾಲಾಗಿದೆ ಕೂಡಲೇ ಅವರನ್ನು ಕಂಕನಾಡಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಒಂದು ವಾರದಿಂದ ಆಸ್ಪತ್ರೆಯ ತುರ್ತು ನಿಗಾ ವಿಭಾಗದಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಮೃತಪಟ್ಟರು.ಮೃತರು ತಾಯಿ ಲಲಿತ, ಪತ್ನಿ ಪ್ರಮೀಳಾ. ಮಕ್ಕಳಾದ ಪ್ರಜ್ವಲ್, ಧನ್ಯ, ಸಹೋದರ ಸಹೋದರಿಯರಾದ ಪ್ರಕಾಶ, ರವಿ, ಪ್ರೇಮ, ಮಮತಾ, ಹೇಮಲತಾ, ರೇಖಾ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ





