ಉಪ್ಪಳ: ಬಂದ್ಯೋಡು ಬಳಿಯ ಅಡ್ಕ ವೀರನಗರ ನಿವಾಸಿ [ದಿ] ಕೃಷ್ಣಪ್ಪ ರವರ ಪುತ್ರ ಕೂಲಿ ಕಾರ್ಮಿಕ ರಾಮಚಂದ್ರ [55] ನಿಧನರಾದರು. ಗುರುವಾರ ಮುಂಜಾನೆ ಮನೆಯಲ್ಲಿ ಹೃದಯಘಾತ ಉಂಟಾಗಿದ್ದು, ಕೂಡಲೇ ಬಂದ್ಯೋಡು ಖಾಸಾಗಿ ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧನ ಹೊಂದಿದ್ದಾರೆ. ಇವರು ಈ ಹಿಂದು ಸುಮಾರು 10 ವರ್ಷಗಳ ಕಾಲ ಮನೆ ಬಳಿಯಲ್ಲಿ ಸೊಡಾ ತಯಾರಿಸಿ ಮಾರಾಟ ಮಾಡುತ್ತಿದ್ದರು. ಇದೀಗ ಕೂಲಿ ಕೆಲಸವನ್ನು ನಿರ್ವಹಿಸುತ್ತಿದ್ದರು. ಮೃತರು ತಾಯಿ ಕಮಲ, ಪತ್ನಿ ಮಾಲತಿ, ಮಕ್ಕಳಾದ ಶೈಲೇಶ್, ಅಂಕಿತ್, ಹರ್ಷಿತ , ಸೊಸೆಯಂದಿರಾದ ವಿಸ್ಮಿತಾ, ಮಂಜೂಷ, ಸಹೋದರರಾದ ಆನಂದ, ಸದಾನಂದ, ರಾಜ, ಸಹೋದರಿ ಶಾಂಭವಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಮನೆಗೆ ಬ್ಲೋಕ್ ಪಂಚಾಯತ್ ಸದಸ್ಯೆ ಅಶ್ವಿನಿ ಎಂ.ಎಲ್, ಮಂಗಲ್ಪಾಡಿ ಪಂಚಾಯತ್ ಸದಸ್ಯ ಕಿಶೋರ್ ಹಾಗೂ ಬಿಜೆಪಿ ನೇತಾರರು, ಕಾರ್ಯಕರ್ತರ ಸಹಿತ ಹಲವು ಮಂದಿ ಭೇಟಿ ನೀಡಿ ಅಂತಿಮನಮನ ಸಲ್ಲಿಸಿದರು. ನಿಧನಕ್ಕೆ ಜನನಿ ಆರ್ಟ್್ಸ ಎಂಡ್ ಸ್ಪೋರ್ಟ್್ಸ ಕ್ಲಬ್, ತರುಣ ಕಲಾವೃಂದ , ಶ್ರಿ ನಾಗ ರಕ್ತೇಶ್ವರೀ ಗುಳಿಗಜ್ಜ,ಕೊರಗಜ್ಜ ಸಾನಿಧ್ಯ ಸಮಿತಿ ವೀರನಗರ ಅಡ್ಕ ಸಂತಾಪ ಸೂಚಿಸಿದೆ.