ಪೊಲೀಸ್ ಸೋಗಿನಲ್ಲಿ ಲೇಡೀಸ್ ಪಿಜಿ ಮೇಲೆ ದಾಳಿ: ಹನಿಟ್ರ್ಯಾಪ್ ಮಾಡುತ್ತಿದ್ದ ಆರೋಪಿ ಸೇರಿ ಗ್ಯಾಂಗ್ ಅಂದರ್

Share with

ಬೆಂಗಳೂರು, ನವೆಂಬರ್ 24: ನಗರದಲ್ಲಿ ಒಂದು ಕಡೆ ಅಸಲಿ‌ ಪೊಲೀಸರೇ ದರೋಡೆಗೆ (Robbery) ಕೈ ಹಾಕಿ ಸಿಕ್ಕಿಬಿದ್ದರೇ, ಮತ್ತೊಂದು ಕಡೆ ನಕಲಿ ಪೊಲೀಸರ ಕಾಟವೂ ಹೆಚ್ಚಾಗಿದೆ. ಪಿಜಿಯೊಂದರ ಯುವತಿಗೆ (girl) ಪರಿಚಯವಾಗಿದ್ದ ಯುವಕ ತನ್ನ ಗ್ಯಾಂಗ್ ಜೊತೆ ರಾಬರಿ ಕೃತ್ಯವೆಸಗಿ ಇದೀಗ ಪೊಲೀಸರ ಅತಿಥಿ ಆಗಿರುವಂತಹ ಘಟನೆ ಹೆಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇತ್ತೀಚೆಗಷ್ಟೇ ನಡೆದ ಎರಡು ರಾಬರಿ ಪ್ರಕರಣಗಳಲ್ಲಿ ಅಸಲಿ ಪೊಲೀಸರೇ ಕಿಂಗ್ಪಿನ್ ಆಗಿದ್ದು ಪೊಲೀಸ್ ಇಲಾಖೆಗೆ ದೊಡ್ಡ ಮುಜುಗರ ತಂದಿತ್ತು. ಆದರೆ ಸಿಲಿಕಾನ್ ಸಿಟಿ ಜನರಿಗೆ ನಕಲಿ ಪೊಲೀಸರು ಕೂಡ ದುಸ್ವಪ್ನವಾಗುತ್ತಿದ್ದಾರೆ.

ಅಂತಹದೆ ಒಂದು ಗ್ಯಾಂಗ್, ಹೆಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ಸ್ಪೈಸ್ ಗಾರ್ಡನ್ ಪಿಜಿಯಲ್ಲಿ ಪೊಲೀಸರ ಹೆಸರು ಹೇಳಿ ದರೋಡೆ ಮಾಡಿ ಅಂದರ್ ಆಗಿದೆ. ಕೇರಳ ಮೂಲದ ನಜಾಸ್, ಸರುಣ್, ಬೆಂಗಳೂರಿನ ವಿಷ್ಣು ಕೆ.ಟಿ, ದಿವಾಕರ್, ಮಧುಕುಮಾರ್, ಕಿರಣ್. ಇವರೇ ಆ ನಕಲಿ ಪೊಲೀಸ್ ಗ್ಯಾಂಗ್ನ ಕಿಲಾಡಿಗಳು.

ನಡೆದದ್ದೇನು?
ಇತ್ತೀಚೆಗೆ ಪಿಜಿ ಯುವತಿಗೆ ಟೀ ಅಂಗಡಿಯಲ್ಲಿ ನಜಾಸ್ ಪರಿಚಯವಾಗಿದ್ದ. ಆತನ ಹುಟ್ಟುಹಬ್ಬ ಆಚರಣೆ ಮಾಡಲು ಕೋ ಲಿವಿಂಗ್ ಪಿಜಿಗೆ ಯುವತಿ ಕರೆದಿದ್ದಳು. ತನ್ನ ಗೆಳೆಯನ ಜೊತೆ ನಜಾಸ್ ಯುವತಿ ಪಿಜಿಗೆ ಹೋಗಿದ್ದ. ಮಧ್ಯರಾತ್ರಿಯಲ್ಲಿ ಬಾಗಿಲು ತಟ್ಟಿದ್ದ ಶಬ್ದವಾಗಿದೆ. ಬಾಗಿಲು ತೆಗೆದಾಗ ನಾವು ಪೊಲೀಸರು ಅಂತ ನಾಲ್ಕೈದು ಜನರ ಗ್ಯಾಂಗ್ ರೂಮ್ ಸರ್ಚ್ ಮಾಡಿದ್ದಾರೆ. ಯುವತಿಯರ ಬಳಿಯಿದ್ದ ಎರಡು ಮೊಬೈಲ್ ರಾಬರಿ ಮಾಡಿದ್ದು,  5 ಲಕ್ಷ ರೂ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಒಂದು ವೇಳೆ ಕೊಡದಿದ್ದರೆ ಮತ್ತೆ ಬರುವುದಾಗಿ ಬೆದರಿಕೆ ಹಾಕಿದ್ದಾರೆ.

ನಜಾಸ್ ಯಾವಾಗ ಯುವತಿ ಪಿಜಿಗೆ ಹೊಗುತ್ತಾನೋ ಅಲ್ಲಿ ಏನಾದರೂ ಸಿಗಬಹುದು ಅಂತ ತನ್ನ ಗೆಳೆಯರಿಗೆ ಕರೆ ಮಾಡಿ ರಾಬರಿ ಪ್ಲಾನ್ ಮಾಡಿದ್ದ. ಅದರಂತೆ ಎಂಟ್ರಿ ಆಗಿದ್ದ ಐವರು ಆರೋಪಿಗಳು ಗಾಂಜಾ ಇದೆಯಾ ಅಂತ ಹೆದರಿಸಿ ಹಣ ಕೀಳಲು ಯತ್ನಿಸಿದ್ದರು. ಆದರೆ ಹಣ ಇಲ್ಲ ಅಂತ ಗೊತ್ತಾಗಿದೆ. ಆದರೆ ಘಟನೆ ಬಗ್ಗೆ ಬೆಳಗ್ಗೆ HAL ಪೊಲೀಸರಿಗೆ ಮಾಹಿತಿ‌ ನೀಡಲಾಗಿದೆ. ತನಿಖೆ ವೇಳೆ ನಜಾಸ್ ರಾಬರಿ ಪ್ಲಾನ್ ಮಾಡಿದ್ದು ಬಯಲಾಗಿದೆ.

ಸದ್ಯ ತನಿಖೆ ವೇಳೆ ಆರೋಪಿಗಳ ಪೈಕಿ ಸರುಣ್ ಈ ಹಿಂದೆ ಹನಿಟ್ರ್ಯಾಪ್ ಕೇಸ್ನಲ್ಲಿ ಅರೆಸ್ಟ್ ಆಗಿದ್ದು ಗೊತ್ತಾಗಿದೆ. ಆದರೆ ಇದೇ ಅನುಭವ ಇಟ್ಟಕೊಂಡು ರಾಬರಿ ಮಾಡಲು ಮುಂದಾಗಿ ಮತ್ತೆ ಲಾಕ್ ಆಗಿದ್ದಾನೆ. ಒಟ್ಟಿನಲ್ಲಿ ಅಪರಿಚಿತರನ್ನ ರೂಮ್ಗೆ ಕರೆದುಕೊಂಡು ಹೋಗುವ ಮುನ್ನ ಯಾರೇ ಆದರೂ ಎಚ್ಚರಿಕೆ ವಹಿಸುವುದು ಅಗತ್ಯ.


Share with

Leave a Reply

Your email address will not be published. Required fields are marked *