ಸಕಲೇಶಪುರ: ನೋಡು ನೋಡುತ್ತಲೇ ಶಿರಾಡಿಘಾಟ್‌ನಲ್ಲಿ ಗುಡ್ಡ ಕುಸಿತವಾಗಿದೆ. ಕೆಲವೇ ನಿಮಿಷಗಳ ಹಿಂದೆ ತೆರವಾಗಿದ್ದ ರಸ್ತೆ ಮತ್ತೆ ಬಂದ್ ಆಗಿದೆ.
ಶಿರಾಡಿಘಾಟ್‌ನ ದೊಡ್ಡ ತಪ್ಪಲು ಬಳಿ ಆ.1ರ ಗುರುವಾರ ಮತ್ತೆ ಭೂಕುಸಿತವಾಗಿದ್ದು, ದೊಡ್ಡ ಸದ್ದಿನೊಂದಿಗೆ ಮಣ್ಣು ಕುಸಿದಿದೆ.
ಗುಡ್ಡ ಕುಸಿಯುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಳೆದ ಮೂರು ದಿನಗಳಲ್ಲಿ ಪದೇ ಪದೇ ಭೂಮಿ ಕುಸಿಯುತಿದ್ದು, ಶಿರಾಡಿ ಘಾಟ್‌ನಲ್ಲಿ ಆತಂಕ ಹೆಚ್ಚಿದೆ. ಶಿರಾಡಿ ಘಾಟ್ ಕಡೆ ಪ್ರಯಾಣಿಸುವವರು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.
ಶಿರಾಡಿ ಘಾಟಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಜು.31ರ ಬುಧವಾರ ಸಂಜೆ ವೇಳೆಗೆ ಭೂ ಕುಸಿತವಾಗಿ 2 ಕಂಟೈನರ್ ಹಾಗೂ ಒಂದು ಟ್ಯಾಂಕರ್ ಮಣ್ಣಿನಲ್ಲಿ ಸಿಲುಕಿದ್ದರಿಂದ ಈ ಮಾರ್ಗದಲ್ಲಿ ತಾತ್ಕಾಲಿಕವಾಗಿ ವಾಹನ ಸಂಚಾರ ಸ್ಥಗಿತ ಮಾಡಲಾಗಿತ್ತು.