ಮಂಗಳೂರು: ನಗರದ ಬಲ್ಮಠ ಬಳಿ ನಿರ್ಮಾಣ ಹಂತದ ಕಟ್ಟಡದ ಬಳಿ ಭೂಕುಸಿತ ಸಂಭವಿಸಿ ಕಾರ್ಮಿಕರು ಮಣ್ಣಿನಡಿ ಸಿಲುಕಿದ ಘಟನೆ ಬುಧವಾರ ನಡೆದಿದೆ.
ಸ್ಥಳಕ್ಕೆ ಅಧಿಕಾರಿಗಳು, ಎಸ್ ಡಿಆರ್ ಎಫ್ ಪಡೆಗಳು ದೌಡಾಯಿಸಿದ್ದು, ರಕ್ಷಣ ಕಾರ್ಯ ನಡೆಯುತ್ತಿದೆ. ಇಬ್ಬರು ಕಾರ್ಮಿಕರು ಅವಶೇಷಗಳ ಅಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಬಲ್ಮಠ ರಸ್ತೆ ಬದಿಯಲ್ಲಿ ಖಾಸಗಿ ನಿರ್ಮಾಣಕ್ಕೆ ಸಂಸ್ಥೆಗೆ ಸೇರಿದ ಜಾಗ ಇದಾಗಿದೆ.
ರಿಟೇನಿಂಗ್ ವಾಲ್ ಹಾಗೂ ಹಾಕಲಾದ ಶೀಟ್‌ಗಳ ಮೇಲೆ ಮಣ್ಣು ಬಿದ್ದಿದ್ದು, ಸಿಲುಕಿರುವ ಕಾರ್ಮಿಕರು ಮಾತನಾಡುತ್ತಿದ್ದಾರೆ. ಸದ್ಯ ರಿಟೇನಿಂಗ್ ವಾಲ್ ಹಾಗೂ ಶೀಟ್ ಮಧ್ಯೆ ಕಾರ್ಮಿಕರು ಸಿಲುಕಿದ್ದಾರೆ. ಕೋರ್ ಕಟ್ಟಿಂಗ್ ಮೂಲಕ ರಕ್ಷಣ ಕಾರ್ಯ ನಡೆಸಲಾಗುತ್ತಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.