
ಹಾಸನ : ಚನ್ನರಾಯಪಟ್ಟಣ ತಾಲ್ಲೂಕಿನ ಶ್ರಾವಣಬೆಳಗೊಳ ಹೋಬಳಿಯ ಸುಂಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋರೇನಹಳ್ಳಿ ಗ್ರಾಮದ ಬಳಿ ಚಾಮುಂಡೇಶ್ವರಿ ವಿದ್ಯುತ್ ಪ್ರಸರಣ ನಿಗಮದ ವತಿಯಿಂದ ನೂತನ ಸೋಲಾರ್ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ಶಾಸಕ ಸಿ.ಎನ್.ಬಾಲಕೃಷ್ಣ ಭೂಮಿ ಪೂಜೆ ನೆರವೇರಿಸಿದರು.
16 ಎಕರೆಯ ವಿಸ್ತೀರ್ಣ ಭೂಮಿಯನ್ನು ಆಯ್ಕೆ ಮಾಡಿದ್ದು, ಕುಸುಂ ಯೋಜನೆಯಡಿಯಲ್ಲಿ 3.2 ಮೆಗಾವಾಟ್ ಸೋಲಾರ್ ವಿದ್ಯುತ್ ಉತ್ಪಾದನೆ ಗುರಿ.
ಕೆಪಿಟಿಸಿಎಲ್‌ನಲ್ಲಿ ಈಗ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಬದಲಾವಣೆಯಾಗಿದ್ದರಿಂದ 7000 ಟಿ.ಸಿ. ಅಳವಡಿಸಿದ್ದು, ಇದರಿಂದ 15 ಸಾವಿರ ಕೊಳವೆ ಬಾವಿಗಳಿಗೆ ಅನುಕೂಲವಾಗಿದೆ ಎಂದರು. ನೂತನ ಸೋಲಾರ್ ಕೇಂದ್ರದ ಕಾಮಗಾರಿಯು 6 ತಿಂಗಳಲ್ಲಿ ಮುಗಿಯಲಿದ್ದು, ಈ ಭಾಗದ ರೈತರ ಐಪಿ ಸೆಟ್‌ಗಳಿಗೆ ನಿರಂತರ ವಿದ್ಯುತ್ ಲಭ್ಯವಾಗಲಿದೆ ಎಂದು ಹೇಳಿದರು.