ಕುಸಿದು ಬಿದ್ದು ಉಪನ್ಯಾಸಕ ಮೃತ್ಯು

Share with

ಸುಳ್ಯ: ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರೋರ್ವರು ಕುಸಿದು ಬಿದ್ದು ನಿಧನ ಹೊಂದಿರುವ ಘಟನೆ ಸುಳ್ಯದಲ್ಲಿ ಗುರುವಾರ (ಮಾ.12) ಸಂಭವಿಸಿದೆ.

ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕರಾಗಿದ್ದ ಮೈಸೂರು ಜಿಲ್ಲೆಯ ಕೆ.ಆ‌ರ್.ನಗರ ತಾಲೂಕಿನ ಬೇರ್ಯ ನಿವಾಸಿ ಮಂಜು ಪಿ. (42) ಮೃತರು.

ಮಂಜು ಅವರು ಗುರುವಾರ ಕೂಡ ಕಾಲೇಜಿಗೆ ಹಾಜರಾಗಿ ಮಧ್ಯಾಹ್ನ ತನಕ ತರಗತಿ ನಡೆಸಿದ್ದು, ಬಳಿಕ ಅಸೌಖ್ಯ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಓರ್ವ ಅವರನ್ನು ಅವರ ರೂಂ ಗೆ ಕರೆತಂದು ಬಿಟ್ಟಿದ್ದು, ವಿಶ್ರಾಂತಿ ಪಡೆಯುವುದಾಗಿ ತಿಳಿಸಿದ್ದಾರೆ. ಬಳಿಕ ಅವರು ಔಷಧಿ ಪಡೆಯಲು ಸುಳ್ಯ ಶ್ರೀರಾಮ ಪೇಟೆಯ ಮೆಡಿಕಲ್ ಗೆ ಬಂದ ವೇಳೆ ಕುಸಿದು ಬಿದ್ದಿದ್ದಾರೆ.

ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆ ವೇಳೆ ಅವರು ಮೃತರಾಗಿದ್ದಾರೆ. ಲೋ ಬಿಪಿ ಅಥವಾ ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಮಂಜು ಅವರು 10 ವರ್ಷ ಕೆ.ಆರ್.ನಗರದ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು, 2024ರಿಂದ ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾಗಿ ನೇಮಕಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದರು.


Share with

Leave a Reply

Your email address will not be published. Required fields are marked *