ಕೊಣಾಜೆಯಲ್ಲಿ ಚಿರತೆ ಹೆಜ್ಜೆ: ಮಾಂಸ ಇಟ್ಟ ಬೋನಿಗೆ ಬಿದ್ದ ನಾಯಿ!

Share with

ಚಿರತೆ ಬದಲು ಬೋನಿನಲ್ಲಿ ಬೀದಿ ನಾಯಿ ಸೆರೆ.

ಮಂಗಳೂರು: ಕೊಣಾಜೆ ಸಮೀಪದ ನಡುಪದವು ಬಳಿ ಚಿರತೆಯೊಂದು ಹಲವರಿಗೆ ಕಾಣಿಸಿದ್ದು ಅದನ್ನು ಸೆರೆ ಹಿಡಿಯಲು ಅರಣ್ಯ ಸಿಬ್ಬಂದಿಯವರು ಬೋನು ಇಟ್ಟು ಆಪರೇಷನ್ ಚೀತಾ ಕಾರ್ಯಾಚರಣೆ ಆರಂಭಿಸಿದ್ದು, ಆದರೆ ಚಿರತೆ ಬದಲು ಬೋನಿನಲ್ಲಿ ಬೀದಿ ನಾಯಿ ಸೆರೆಯಾದ ಘಟನೆ ಬಗ್ಗೆ ವರದಿಯಾಗಿದೆ.

ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯ ಸೆರೆಗಾಗಿ ಇಟ್ಟಿದ್ದ ಬೋನಿನಲ್ಲಿ ಭಾನುವಾರ ಬೆಳಗ್ಗೆ ನಾಯಿಯೊಂದು ಸೆರೆಯಾಗಿದೆ. ಎರಡು ದಿನಗಳ ಹಿಂದೆ ನಡುಪದವಿನ ಜನನಿಬಿಡ ಪ್ರದೇಶದಲ್ಲಿ ಹಲವು ಮಂದಿಗೆ ಚಿರತೆ ಕಾಣಲು ಸಿಕ್ಕಿದ್ದು, ಇದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು. ಶನಿವಾರ ಬೆಳಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಬಂದು ಬೋನು ಅಳವಡಿಸಿ ಅಪರೇಷನ್ ಚೀತಾ ಕಾರ್ಯಾಚರಣೆಯನ್ನು ಆರಂಭಿಸಿದ್ದರು.

ಆದರೆ ಭಾನುವಾರ ಬೆಳಗ್ಗೆ ಬೋನಿನ ಬಳಿಯಿಂದ ನಾಯಿ ಬೊಗಳುವ ಶಬ್ದ ಕೇಳಿದ್ದು ಸ್ಥಳೀಯರು ಬಂದು ನೋಡಿದಾಗ ಬೋನಿನಲ್ಲಿ ನಾಯಿ ಬಿದ್ದಿರುವುದು ಕಂಡು ಸ್ಥಳೀಯರು ನಾಯಿಯನ್ನು ಬೋನಿನಿಂದ ಬಿಡುಗಡೆಗೊಳಿಸಿದ್ದರೆ. ಚಿರತೆಗೆಂದು ಇರಿಸಲಾಗಿದ್ದ ಕೋಳಿ ಮಾಂಸವನ್ನು ತಿನ್ನಲು ಬೋನಿಗೆ ನುಗ್ಗಿದ್ದ ನಾಯಿ ಮಾಂಸವನ್ನು ತಿಂದು ಗೂಡಲ್ಲಿ ಲಾಕ್ ಆಗಿತ್ತು.


Share with

Leave a Reply

Your email address will not be published. Required fields are marked *