ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಇನ್ಫೋಸಿಸ್ ಆವರಣದಲ್ಲಿ ಚಿರತೆಯೊಂದು ಹೊಂಚು ಹಾಕಿದೆ. ಇನ್ಫೋಸಿಸ್ ಆವರಣದಲ್ಲಿ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ಹತ್ತನೇ ದಿನಕ್ಕೆ ಕಾಲಿಟ್ಟಿದೆ.
ಕಳೆದ ಡಿಸೆಂಬರ್ 31ರಂದು ಮುಂಜಾನೆ ಕ್ಯಾಂಪಸ್‌ನಲ್ಲಿ ಚಿರತೆ ಕಾಣಿಸಿಕೊಂಡ ಬಳಿಕ ಅರಣ್ಯ ಇಲಾಖೆಯು ಸೆರೆಗೆ ಕಾರ್ಯಾಚರಣೆ ನಡೆಸುತ್ತಿದೆ. 12ಕ್ಕೂ ಹೆಚ್ಚು ಕ್ಯಾಮೆರಾ ಟ್ರ್ಯಾಪ್ ಅಳವಡಿಸಲಾಗಿದ್ದು, ಬೋನುಗಳನ್ನೂ ಇಡಲಾಗಿದೆ.
ಚಿರತೆ ಪತ್ತೆಯಾಗದ್ದರಿಂದ ಇಲ್ಲಿನ ಟ್ರೈನಿಗಳಿಗೆ 2 ವಾರ ಅಂದರೆ ಜ. 26ರವರೆಗೆ ರಜೆ ನೀಡಲಾಗಿದೆ. ಇಂದು ಬೆಳಗ್ಗೆಯಿಂದಲೇ ಟ್ರೈನಿಗಳಿಗೆ ಕ್ಯಾಂಪಸ್‌ನಿಂದ ಹೊರ ಹೋಗುವಂತೆ ಸೂಚಿಸಲಾಗಿದ್ದು, ಇಂದು ಮತ್ತು ನಾಳೆ ಬೆಂಗಳೂರಿಗೆ ವಿಶೇಷ ಬಸ್‌ಗಳ ವ್ಯವಸ್ಥೆಯನ್ನೂ ಮಾಡಲಾಗಿದೆ. ಜ. 15ರಿಂದ ಆನ್‌ಲೈನ್ ತರಗತಿ ಮುಂದುವರಿಯಲಿದೆ.