ಮಂಗಳೂರು: ಜನರಲ್ಲಿ ಭೀತಿ ಮೂಡಿಸಿದ್ದ ಚಿರತೆ ಪಾಲ್ದಾನೆ ಎಂಬಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಗುರುವಾರ(ಮಾ26)ಬೆಳಗಿನ ಜಾವ ಬಿದ್ದಿದೆ.

ಸಾರ್ವಜನಿಕರ ದೂರಿನ ಮೇಲೆ ಅರಣ್ಯ ಇಲಾಖೆ ಸಿಬಂದಿ ಬೋನು ಇಟ್ಟು ರಾತ್ರಿಯಿಡೀ ಕಾವಲು ಕಾಯುತ್ತಿದ್ದರು.
ಸೆರೆಯಾದ ಚಿರತೆಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.




