ಉಪ್ಪಳ :ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ 21 ನೇ ಚಾತುರ್ಮಾಸ್ಯ ಮಂಗಲೋತ್ಸವ- ತದಂಗವಾಗಿ ನಡೆದ 48 ಗಂಟೆಗಳ ಅಖಂಡ ಭಜನೋತ್ಸವದ ಮಂಗಲ .17.09.2024 ರಂದು ಸೂರ್ಯಾಸ್ತಕ್ಕೆ ನಡೆಯಿತು. ಈ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪೂಜ್ಯಶ್ರೀಗಳು ಆಶೀರ್ವಚನ ನೀಡುತ್ತ ” ಭಗವಂತನ ಸ್ಮರಣೆ ವ್ರತನಿಯಮಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಲಿ ಎಲ್ಲರ ಸತ್‌ಚಿಂತನೆಯಿoದ ಸಾನ್ನಿಧ್ಯ ವೃದ್ಧಿಯಾದ ಕೊಂಡೆವೂರು ಮಠದ ಬೆಳವಣಿಗೆ ಮೂಲಕ ಸನಾತನ ಸಂಸ್ಕೃತಿ ರಕ್ಷಣೆಗೆ ಕೈ ಜೋಡಿಸೋಣ” ಎಂದು ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಭದ್ರಾವತಿ ಬನಶಂಕರಿ ದೇವಸ್ಥಾನದ ಅಧ್ಯಕ್ಷರು, ಎಮ್. ಪ್ರಭಾಕರ, ಮುಳಿಂಜ ಮಹಾಲಿಂಗೇಶ್ವರ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷರು ಹರಿನಾಥ ಭಂಡಾರಿ, ಧಾರ್ಮಿಕ ಮುಂದಾಳುಗಳಾದ . ಪಿ ಆರ್ ಶೆಟ್ಟಿ ಪೊಯ್ಯೇಲು, ಶ್ರೀಧರ ಶೆಟ್ಟಿ ಮುಟ್ಟಂ, ಶಶಿಧರ ಶೆಟ್ಟಿ ಗ್ರಾಮಚಾವಡಿ ಯವರು ಸದಾಶಯದ ನುಡಿಗಳನ್ನಾಡಿದರು. ಅಧ್ಯಕ್ಷತೆ ವಹಿಸಿದ್ದ ಕರ್ನಾಟಕದ ಮಾಜಿ ಎಂ ಎಲ್ ಸಿ ಮೋನಪ್ಪ ಭಂಡಾರಿಯವರು ಅಧ್ಯಕ್ಷೀಯ ಭಾಷಣದಲ್ಲಿ “ಸಂಸ್ಕಾರ ಸಂಸ್ಕೃತಿಗಾಗಿ ಜಗತ್ತೇ ನೋಡುತ್ತಿರುವ ಪವಿತ್ರ ಭರತಭೂಮಿಯ ಸನಾತನ ಧರ್ಮವನ್ನು ಉಳಿಸಿ ಬೆಳೆಸಲು ಒಗ್ಗಟ್ಟಾಗೋಣ” ಎಂದು ನುಡಿದರು. ಕು. ಶ್ರಾವಣ್ಯ ಕೊಂಡೆವೂರು ಪ್ರಾರ್ಥನೆಗೈದ ಕರ‍್ಯಕ್ರಮದ ಸ್ವಾಗತವನ್ನು ಗಂಗಾಧರ ಕೊಂಡೆವೂರು , ವಂದಣಾರ್ಪನೆಯನ್ನು ಸರ್ವೇಶ್ ಕೊಂಡೆವೂರು ನಿರ್ವಹಿಸಿದರು. ದಿನಕರ ಹೊಸಂಗಡಿ ನಿರೂಪಿಸಿದರು.
18.09.2024 ಪ್ರಾತಃ ಪೂಜೆಯ ನಂತರ ನಕ್ಷತ್ರವನದ ಆನಂದತೀರ್ಥ ಪುಷ್ಕರಿಣಿಯಲ್ಲಿ ಶ್ರೀಗಳವರಿಂದ ಮೃತ್ತಿಕಾ ವಿಸರ್ಜನೆ ನಡೆದು ಭಕ್ತಾದಿಗಳು ಪವಿತ್ರ ತೀರ್ಥ ಸ್ನಾನ ಮಾಡಿ ಪೂಜ್ಯರಿಂದ ಮಂಗಲಮoತ್ರಾಕ್ಷತೆ ಸ್ವೀಕರಿಸಿ ಪುನೀತರಾದರು.