ಕಾರ್ಕಳ: ವಿದ್ಯುತ್ ತಗುಲಿ ಲೈನ್ ಮ್ಯಾನ್ ಶ್ರೀನಿವಾಸ ಮೃತ್ಯು

Share with

ಕಾರ್ಕಳ: ವಿದ್ಯುತ್ ದುರಸ್ತಿ ಮಾಡುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ಲೈನ್ ಮ್ಯಾನ್ ಓರ್ವರು ದಾರುಣವಾಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಈದು ಗ್ರಾಮದ ನೂರಾಲ್ ಬೆಟ್ಟು ಎಂಬಲ್ಲಿ ಜ.28ರಂದು ರಾತ್ರಿ ನಡೆದಿದೆ. 

ಲೈನ್ ಮ್ಯಾನ್ ಶ್ರೀನಿವಾಸ

ಮೃತರನ್ನು ಬಾಗಲಕೋಟೆಯ ಶ್ರೀನಿವಾಸ (26) ಎಂದು ಗುರುತಿಸಲಾಗಿದೆ. ನೂರಾಲ್ ಬೆಟ್ಟುವಿನಲ್ಲಿ ತಾಂತ್ರಿಕ ಸಮಸ್ಯೆಯಿಂದ ವಿದ್ಯುತ್ ಸರಬರಾಜಿನಲ್ಲಿ ಸಮಸ್ಯೆ ಉಂಟಾಗಿತ್ತು. ಇದನ್ನು ಸರಿಪಡಿಸಲು ಶ್ರೀನಿವಾಸ ಅವರು ತೆರಳಿದ್ದರು. ಈ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಶ್ರೀನಿವಾಸ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಶ್ರೀನಿವಾಸ ಅವರು ಎರಡು ವರ್ಷಗಳ ಹಿಂದೆಯಷ್ಟೇ ಲೈನ್ ಮ್ಯಾನ್ ಕೆಲಸಕ್ಕೆ ಸೇರಿಕೊಂಡಿದ್ದರು.


Share with

Leave a Reply

Your email address will not be published. Required fields are marked *