ಲಯನ್ಸ್ ಕ್ಲಬ್ ಮಂಜೇಶ್ವರ ಮತ್ತು ಉಪ್ಪಳ ಇದರ ಐವತ್ತನೇ ವರ್ಷದ ಚಾರ್ಟರ್ ಡೇ ಆಚರಣೆ ಮತ್ತು ಫ್ಯಾಮಿಲಿ ಮೀಟ್

Share with

ಉಪ್ಪಳ: ಲಯನ್ಸ್ ಕ್ಲಬ್ ಮಂಜೇಶ್ವರ ಮತ್ತು ಉಪ್ಪಳ ಇದರ ಐವತ್ತನೇ ವರ್ಷದ ಚಾರ್ಟರ್ ಡೇ ಆಚರಣೆ ಮತ್ತು ಫ್ಯಾಮಿಲಿ ಮೀಟ್ ನಯ ಬಜಾರ್ ಸರ್ ಲಯನ್ ಸೇವಾ ಮಂದಿರದಲ್ಲಿ ನಡೆಯಿತು.

ಲಯನ್ಸ್ ಕ್ಲಬ್ ಮಂಜೇಶ್ವರ ಮತ್ತು ಉಪ್ಪಳ ಇದರ ಐವತ್ತನೇ ವರ್ಷದ ಚಾರ್ಟರ್ ಡೇ ಆಚರಣೆ ಮತ್ತು ಫ್ಯಾಮಿಲಿ ಮೀಟ್

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಲಯನ್ಸ್ ಎಮ್ ಅರುಣ್ ಶೆಟ್ಟಿ ಎಂ ಜೆ ಎಫ್ (ಮಾಜಿ ರಾಜ್ಯಪಾಲರು ಲಯನ್ ಲಯನ್ ಕೆ ವೇಣುಗೋಪಾಲನ್, ಲಯನ್ ಭಾರ್ಗವ ವನ್.ಪಿ, ಲಯನ್ ನಾಸರ್ ಕೊಲವಯಲ್ ಭಾಗವಹಿಸಿದ್ದರು. ಲಯನ್ ಲಕ್ಷ್ಮಣ ಕುಂಬ್ಳೆ.ಪಿ ಎಂ ಜೆ ಎಫ್ ಅಧ್ಯಕ್ಷ ಸ್ಥಾನ ವಹಿಸಿದ್ದರು. ಲಯನ್ಸ್ ಕ್ಲಬ್ ಮಂಜೇಶ್ವರ ಉಪ್ಪಳ ಇದರ ಸ್ಥಾಪಕ ಅಧ್ಯಕ್ಷರಾದ ಲಯನ್ ಡಾ.ಕೆ.ಪಿ ಹೊಳ್ಳ ಮತ್ತು ಸ್ಥಾಪಕ ಸದಸ್ಯರಾದ ಲಯನ್ ಡಾ. ಶ್ರೀಧರ್ ಭಟ್ ಉಪಸ್ಥಿತರಿದ್ದರು.

ಕ್ಲಬ್ಬಿನ ಕಾರ್ಯದರ್ಶಿಯಾದ ಅಶೋಕ್ ಕ್ಲಬ್ ಇದುವರೆಗೆ ಮಾಡಿದ ಸೇವಾ ಕಾರ್ಯಗಳ ವರದಿಯನ್ನು ಮಂಡಿಸಿದರು. ಕ್ಲಬ್ಬಿನ ಅಧ್ಯಕ್ಷರಾದ ಲಕ್ಷ್ಮಣ್ ಕುಂಬಳೆ ಪಿ.ಎಂ.ಜೆ.ಎಫ್ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಕ್ಲಬ್ಬಿನ ವತಿಯಿಂದ ಹಲವಾರು ಸೇವಾ ಕಾರ್ಯಕ್ರಮ ಮಾಡಲು ಸಹಕರಿಸಿದ ಎಲ್ಲಾ ಸದಸ್ಯರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು ಹಾಗೂ ಈ ಸಂದರ್ಭದಲ್ಲಿ ಸ್ಥಾಪಕ ಅಧ್ಯಕ್ಷರಾದ ಲಯನ್ ಡಾ.ಕೆ.ಪಿ ಹೊಳ್ಳ ಮತ್ತು ಸ್ಥಾಪಕ ಸದಸ್ಯರಾದ ಲಯನ್ ಡಾ.ಶ್ರೀಧರ್ ಭಟ್ ಮತ್ತು ಕ್ಲಬ್ಬಿನ ಹಿರಿಯ ಸದಸ್ಯರಾದ ಲಯನ್ ಹರಿಶ್ಚಂದ್ರ ಹೊಳ್ಳ ಇವರನ್ನು ಸನ್ಮಾನಿಸಲಾಯಿತು ಮತ್ತು ಸೇವಾ ಕಾರ್ಯಕ್ರಮದ ಅಂಗವಾಗಿ 15 ಮಂದಿ ದೃಷ್ಟಿ ದೋಷ ಇರುವವರಿಗೆ ಉಚಿತವಾಗಿ ಕನ್ನಡಕವನ್ನು ನೀಡಲಾಯಿತು. ಕುಮಾರಿ ಲಿಖಿತಾ ಎಲ್ ಕುಂಬ್ಳೆ ಗಣಪತಿ ಪ್ರಾರ್ಥನೆ ಹಾಗೂ ಫ್ಲಾಗ್ ಸಲ್ಯೂಟೇಶನ್ ಮಾಡಿದರು. ಲಯನ್ ಪ್ರವೀಣ್ ಪಕಳ ಸ್ವಾಗತಿಸಿದರು, ಕೋಶಾಧಿಕಾರಿ ಕಮಲಾಕ್ಷ ಪಂಜ ವಂದಿಸಿದರು.


Share with

Leave a Reply

Your email address will not be published. Required fields are marked *