# ವೀಕ್ಷಕವಾಣಿ ## Posts - [‘ಟಾಕ್ಸಿಕ್’ ಟೀಸರ್ ಅಸಭ್ಯ ದೃಶ್ಯಕ್ಕೆ ಆಕ್ಷೇಪ..; ವಕೀಲರಿಂದ ಸೆನ್ಸಾರ್ ಮಂಡಳಿಗೆ ದೂರು](https://veekshakavani.com/objection-to-obscene-scene-in-toxic-teaser-lawyer-files-complaint-with-censor-board/): ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ‘ಟಾಕ್ಸಿಕ್’ (Toxic) ಚಿತ್ರದ ಟೀಸರ್ ರಿಲೀಸ್ ಆಗಿ ಸದ್ದು ಮಾಡುತ್ತಿದೆ. ಈ ನಡುವೆಯೇ ವಕೀಲರೊಬ್ಬರು ಚಿತ್ರತಂಡದ ವಿರುದ್ಧ ದೂರು ನೀಡಿದ್ದಾರೆ. ಬಹುನಿರೀಕ್ಷಿತ ‘ಟಾಕ್ಸಿಕ್’ ಟೀಸರ್ ಧೂಳೆಬ್ಬಿಸಿದೆ. ಎಲ್ಲೆಡೆ ‘ಟಾಕ್ಸಿಕ್’ ಟಾಕ್ ಜೋರಾಗಿದೆ. ಯಶ್ ಹಿಂದೆಂದೂ ಕಾಣಿಸಿಕೊಳ್ಳದ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಬೋಲ್ಡ್ ದೃಶ್ಯಗಳಲ್ಲೂ ಕಾಣಿಸಿಕೊಂಡಿದ್ದಾರೆ. ಆದರೆ ಇದೇ ವಿಚಾರವನ್ನಿಟ್ಟುಕೊಂಡು ವಕೀಲರೊಬ್ಬರು ಕೇಂದ್ರ ಸೆನ್ಸಾರ್ ಮಂಡಳಿಗೆ ದೂರು ಸಲ್ಲಿಸಿದ್ದಾರೆ. ವಕೀಲ ಲೋಹಿತ್ ಕುಮಾರ್ ಎನ್ನುವವರು ‘ಟಾಕ್ಸಿಕ್’ ಟೀಸರ್‌ನಲ್ಲಿ ಹಸಿಬಿಸಿ ದೃಶ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕೇಂದ್ರ ಸೆನ್ಸಾರ್ ಮಂಡಳಿಗೆ ದೂರು ಸಲ್ಲಿಸಿದ್ದಾರೆ. ವಕೀಲ ಹೇಳಿದ್ದೇನು?: ಟೀಸರ್‌ನಲ್ಲಿ ಕಂಡುಬಂದ ದೃಶ್ಯಗಳನ್ನು ಗಮನಿಸಿದರೆ ಈ ಚಿತ್ರವು ಕುಟುಂಬ ಸದಸ್ಯರೊಂದಿಗೆ ನೋಡಲು ಸೂಕ್ತವಲ್ಲ. ಚಿತ್ರಮಂದಿರಗಳಲ್ಲಿ’ಎ’ ಸರ್ಟಿಫಿಕೇಟ್ ಇದ್ದರೆ ಮಕ್ಕಳನ್ನು ಪ್ರವೇಶಿಸದಂತೆ ತಡೆಯಲಾಗುತ್ತದೆ. ಆದರೆ ಯೂಟ್ಯೂಬ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಟೀಸರ್‌ಗಳಿಗೆ ಯಾವುದೇ ಮಾರ್ಗಸೂಚಿಗಳಿಲ್ಲದಿರುವುದು ಸಮಸ್ಯೆಯಾಗಿದೆ ಎಂದು ಮಾಧ್ಯಮವೊಂದಕ್ಕೆ ವಕೀಲ ಲೋಹಿತ್ ತಿಳಿಸಿದ್ದಾರೆ. - [ಅಯೋಧ್ಯೆಯ ರಾಮ ಮಂದಿರದಲ್ಲಿ ನಮಾಜ್ ಮಾಡಲು ಯತ್ನ..! ಕಾಶ್ಮೀರಿ ವ್ಯಕ್ತಿಯ ಬಂಧನ](https://veekshakavani.com/kashmiri-man-arrested-for-attempting-to-offer-prayers-at-ram-temple-in-ayodhya/): ಅಯೋಧ್ಯೆ: ಅಯೋಧ್ಯೆಯ ಭವ್ಯ ರಾಮ ಮಂದಿರದಲ್ಲಿ ನಮಾಜ್ ಮಾಡಲು ಯತ್ನಿಸಿದ ಕಾಶ್ಮೀರಿ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ಬಂಧಿಸಿರುವ ಘಟನೆ ಇಂದು (ಜ.10) ನಡೆದಿದೆ. ಘಟನೆಯಿಂದ ಮಂದಿರದ ಆವರಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು. ಬಂಧಿತ ವ್ಯಕ್ತಿಯನ್ನು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಅಹ್ಮದ್ ಶೇಖ್ (55) ಎಂದು ಗುರುತಿಸಲಾಗಿದೆ. ಶುಕ್ರವಾರ (ಜ.10) ಮಂದಿರಕ್ಕೆ ಭೇಟಿ ನೀಡಿದ್ದ ಈತ, ಬಳಿಕ ಅಲ್ಲಿನ ‘ಸೀತಾ ರಸೋಯಿ’ ಪ್ರದೇಶದ ಬಳಿ ಕುಳಿತು ನಮಾಜ್ ಮಾಡಲು ಸಿದ್ಧತೆ ನಡೆಸಿದ್ದ ಎಂದು ಮೂಲಗಳು ತಿಳಿಸಿವೆ. ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ತಕ್ಷಣವೇ ಆತನನ್ನು ತಡೆದಿದ್ದಾರೆ ಇದರಿಂದ ಸಿಟ್ಟಿಗೆದ್ದ ಆತ ಘೋಷಣೆಗಳನ್ನು ಕೂಗಿದ್ದಾನೆ ಎಂದು ಅಲ್ಲಿದ್ದ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ . ವಶಕ್ಕೆ ಪಡೆದ ಪೊಲೀಸರು ಮತ್ತು ಗುಪ್ತಚರ ಸಂಸ್ಥೆ ಕಾಶ್ಮೀರಿ ವ್ಯಕ್ತಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು. ಆತ ಅಯೋಧ್ಯೆಗೆ ಬಂದ ಉದ್ದೇಶವೇನು? ಈ ಕೃತ್ಯದ ಹಿಂದೆ ಬೇರೆ ಯಾರಾದರೂ ಇದ್ದಾರೆಯೇ? ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಇನ್ನು ವಿಚಾರಣೆ ವೇಳೆ ಆತ […] - [ಕಲ್ಲಡ್ಕ ಮಾದರಿ ಶಾಲೆ ಇಕೋ ಕ್ಲಬ್ ಮಕ್ಜಳಿಂದ ಪ್ರಗತಿಪರ ಕೃಷಿಕ ರಾಮಣ್ಣ ಗೌಡರ ಮಾರ್ಗದರ್ಶನದಲ್ಲಿ ಮಾಡಿದ  ತರಕಾರಿ ಕೃಷಿ ಚಟುವಟಿಕೆಯ ಮೊದಲ ಕೊಯ್ಲು](https://veekshakavani.com/the-first-harvest-of-vegetable-cultivation-activities/): ಕಲ್ಲಡ್ಕ :  ಶಿಕ್ಷಣವು ಕೇವಲ ಪಠ್ಯ ಸಂಬಂಧಿತವಾಗಿರದೆ ಚಟುವಟಿಕೆಗಳ ಮೂಲಕವೂ ನಡೆದಾಗ ಕಲಿಕೆಯು ಹೆಚ್ಚು ಕ್ರಿಯಾಶೀಲತೆಯಿಂದ  ನಡೆಯುತ್ತದೆ. ಕೃಷಿ ಪಾಠದ ಮೂಲಕ ವಿದ್ಯಾರ್ಥಿಗಳಿಗೆ ತರಕಾರಿಗಳನ್ನು ಬೆಳೆಸುವ ವಿಧಾನಗಳು, ರೋಗ ಬರದಂತೆ ನಿಯಂತ್ರಣ ಕ್ರಮಗಳು, ವಾತಾವರಣಕ್ಕೆ ಅನುಗುಣವಾಗಿ ಬೆಳೆಸುವ ರೀತಿ ಮುಂತಾದ ಕುರಿತು ಮಾಹಿತಿ ನೀಡಿದರೆ ತಮ್ಮ ಮನೆಯ ಪರಿಸರದಲ್ಲಿ ಇದ್ದ ಜಾಗದಲ್ಲಿ ತರಕಾರಿ ಕೃಷಿ  ಮಾಡುವ ಬಗ್ಗೆ ಪ್ರಗತಿಪರ ಕೃಷಿಕ ರಾಮಣ್ಣ ಸಪಲ್ಯ ನಾವುೂರ ಕಾರಿಂಜ ರವರು ಶಾಲಾ ಇಕೋ ಕ್ಲಬ್ ನ  ವಿದ್ಯಾರ್ಥಿಗಳಿಗೆ ಕೃಷಿ ಪಾಠವನ್ನು  ಪ್ರಾಯೋಗಿಕವಾಗಿ ಮಾರ್ಗದರ್ಶನ ಮಾಡುವ  ಮೂಲಕ ತಿಳಿಸಿಕೊಟ್ಟರು. ಅವರು  ಜನವರಿ 9 ನೇ ಶುಕ್ರವಾರ ಬಂಟ್ವಾಳ ತಾಲೂಕಿನ ಕಲ್ಲಡ್ಕ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಇಕೋ ಕ್ಲಬ್ಬಿನ ವತಿಯಿಂದ  ಶಾಲಾ ಶಿಕ್ಷಕಿ ತೇಜಾಕ್ಷಿ ನೇತೃತ್ವದಲ್ಲಿ ಮಕ್ಕಳು ನಡೆಸಿದ ತರಕಾರಿ ಕೃಷಿ ಚಟುವಟಿಕೆಗಳ  ಪ್ರಥಮ ಕೊಯ್ಲು ಮಾಡಿ ಮಕ್ಕಳಿಗೆ ಕೃಷಿಯ ಪ್ರಾರಂಭಿಕ ಹಂತದಿಂದಲೇ ಮಾರ್ಗದರ್ಶನ ನೀಡುತ್ತಾ ಬಂದು ಮಕ್ಕಳ ಜೊತೆ  ಕೃಷಿ ಚಟುವಟಿಕೆಗಳ ಮೂಲಕ […] - [ಕರಾವಳಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ..: ಡಿಕೆಶಿ](https://veekshakavani.com/separate-tourism-policy-for-the-coast-dk-shivakumar/): ಮಂಗಳೂರು: ಪ್ರವಾಸೋದ್ಯಮ ಇಲಾಖೆ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾದ ‘ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶ 2026’ನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶನಿವಾರ (ಜ.10) ನಗರದ ಖಾಸಗಿ ಹೊಟೇಲ್ ನಲ್ಲಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕರಾವಳಿ ಜ್ಞಾನ ಸಂಪತ್ತಿನ ಪರ್ವತ, ದೈವ ದೇವರ ಶಕ್ತಿಕೇಂದ್ರ, ವ್ಯಾಪಾರಿಗಳ ನಿಧಿ, ಪ್ರವಾಸಿಗರ ಸ್ವರ್ಗ, ವಿಶೇಷ್ಟ ಕಲೆ-ಸಂಸ್ಕೃತಿಗಳ ತವರೂರು ಆದರೂ ಪ್ರವಾಸೋದ್ಯಮದಲ್ಲಿ ಹಿಂದೆ ಉಳಿದಿದೆ. ಹಾಗಾಗಿ ಕರಾವಳಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿಯ ಅಗತ್ಯವಿದೆ. ಈಗಾಗಲೇ ರಾಜ್ಯ ಪ್ರವಾಸೋದ್ಯಮ ನೀತಿಯನ್ನು ಸಿದ್ಧಪಡಿಸಲಾಗಿದ್ದು, ಕರಾವಳಿಯ ಕುರಿತ ಚರ್ಚಸಿದ ಬಳಿಕ ಅದನ್ನು ಅಂತಿಮ ಪಡಿಸಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಕರಾವಳಿಯಲ್ಲಿ ಮೊದಲ ಹಂತದ ಸಭೆ ಆಯೋಜಿಸಲಾಗಿದೆ ಎಂದರು. ವಿಧಾನಸಭೆ ಸ್ಪೀಕರ್ ಯು ಟಿ ಖಾದರ್, ಸಚಿವರಾದ ದಿನೇಶ್ ಗುಂಡೂರಾವ್, ಲಕ್ಷ್ಮಿ ಹೆಬ್ಬಾಳ್ಳರ್‌, ಮಂಕಾಳ ವೈದ್ಯ, ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ವೇದವ್ಯಾಸ ಕಾಮತ್, ಸುನೀಲ್ […] - [ಆರೋಗ್ಯಯುತವಾಗಿ ಹೆಚ್ಚು ಕಾಲ ಬದುಕಲು ಬಯಸಿದರೆ ಈ ಅಭ್ಯಾಸಗಳನ್ನು ತಪ್ಪದೇ ಪಾಲಿಸಿ](https://veekshakavani.com/if-you-want-to-live-a-healthy-life-for-a-long-time-follow-these-habits/): ದೀರ್ಘಾಯುಷ್ಯವನ್ನು (longevity) ಹೊಂದಲು, ಯಂಗ್‌ ಮತ್ತು ಆರೋಗ್ಯವಂತರಾಗಿರಲು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಪ್ರತಿಯೊಬ್ಬರೂ ಸಹ ಯಾವುದೇ ಆರೋಗ್ಯ ಸಮಸ್ಯೆಯಿಲ್ಲದೆ ನೂರ್ಕಾಲ ಬದುಕಬೇಕು ಎಂದು ಬಯಸುತ್ತಾರೆ. ಆದರೆ ಇಂದಿನ ಈ ಕಾಲದಲ್ಲಿ ಅನಾರೋಗ್ಯಕರ ಆಹಾರ ಪದ್ಧತಿ, ಕಳಪೆ ಜೀವನಶೈಲಿ ಇವೆಲ್ಲದರ ಕಾರಣದಿಂದಾಗಿ 30-40 ವರ್ಷಕ್ಕೆ ಆರೋಗ್ಯ ಕೈಕೊಡುತ್ತಿದೆ ಜೊತೆಗೆ ಆದರ್ಶ ಜೀವಿತಾವಧಿಯೂ ಕಡಿಮೆಯಾಗುತ್ತಿದೆ.  ಹಾಗಾದರೆ, ದೀರ್ಘಾಯುಷ್ಯವನ್ನು ಪಡೆಯಲು, ಆರೋಗ್ಯವಂತರಾಗಿ ನೂರ್ಕಾಲ ಬಾಳಲು  ಏನು ಮಾಡಬೇಕು? ಈ ಕೆಲವೊಂದು ಅಭ್ಯಾಸಗಳನ್ನು ಪ್ರತಿನಿತ್ಯ ಪಾಲಿಸುವ ಮೂಲಕ ಆರೋಗ್ಯ ಸಮಸ್ಯೆಗಳು ನಿಮ್ಮ ಬಳಿ ಸುಳಿಯದಂತೆ ನೋಡಿಕೊಳ್ಳಬಹುದು, ಆರೋಗ್ಯವಂತರಾಗಿ ದೀರ್ಘಕಾಲ ಜೀವನ ನಡೆಸಬಹುದು. ದೀರ್ಘಾಯುಷ್ಯಕ್ಕೆ ಸಹಕಾರಿಯಾದ ಆ ಅಭ್ಯಾಸಗಳು ಯಾವುದೆಂದು ನೋಡೋಣ ಬನ್ನಿ. ದೀರ್ಘಕಾಲ ಬದುಕಲು ಏನು ಮಾಡಬೇಕು?ಆರೋಗ್ಯಕರ ಆಹಾರ ಕ್ರಮ ಅನುಸರಿಸಿ: ಆರೋಗ್ಯಕರ ಜೀವನಕ್ಕೆ ಸಮತೋಲಿತ ಆಹಾರ ಸೇವನೆ ಅತ್ಯಗತ್ಯ. ನಿಮ್ಮ ಆಹಾರದಲ್ಲಿ ಹಸಿರು ತರಕಾರಿಗಳು, ಹಣ್ಣುಗಳು, ಧಾನ್ಯಗಳು, ಪ್ರೋಟೀನ್ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳು ಸಮೃದ್ಧವಾಗಿರುವ ಆಹಾರಗಳು ಇರಬೇಕು. ಜಂಕ್ ಫುಡ್ ಮತ್ತು ಎಣ್ಣೆ ಮತ್ತು […] - [ಮನೆಯಲ್ಲಿ ಶಂಖವಿದ್ದರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? ಆಧ್ಯಾತ್ಮಿಕ ಮಹತ್ವ ತಿಳಿಯಿರಿ](https://veekshakavani.com/do-you-know-the-benefits-of-having-a-conch-shell-at-home/): ಸನಾತನ ಧರ್ಮದಲ್ಲಿ ಶಂಖವನ್ನು ಅತ್ಯಂತ ಪವಿತ್ರ ಪೂಜಾ ವಸ್ತುಗಳಲ್ಲಿ ಒಂದೆಂದು ಗೌರವದಿಂದ ಪರಿಗಣಿಸಲಾಗುತ್ತದೆ. ಪೂಜಾ ವಿಧಿಗಳಲ್ಲಿ ಶಂಖವನ್ನು ಬಳಸುವುದು ಕೇವಲ ಆಧ್ಯಾತ್ಮಿಕ ಆಚರಣೆಯಷ್ಟೇ ಅಲ್ಲ, ಮನೆ ಮತ್ತು ಮನಸ್ಸಿನಲ್ಲಿ ಶುಭ ಶಕ್ತಿಗಳ ಹರಿವನ್ನು ಹೆಚ್ಚಿಸುವುದಕ್ಕೂ ಸಹಾಯಕವಾಗಿದೆ. ಪುರಾಣಗಳ ಪ್ರಕಾರ ಸಮುದ್ರ ಮಂಥನದ ಸಂದರ್ಭದಲ್ಲಿ ಶಂಖವು ಉದ್ಭವಿಸಿದ್ದು, ಇದು ಶ್ರೀ ವಿಷ್ಣುವಿಗೆ ಅತ್ಯಂತ ಪ್ರಿಯವಾದ ದಿವ್ಯ ವಸ್ತುವೆಂದು ಹೇಳಲಾಗುತ್ತದೆ. ಆದ್ದರಿಂದ ಶಂಖವು ವೈಷ್ಣವ ಪರಂಪರೆಯಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ. ಪೂಜೆಯ ಸಮಯದಲ್ಲಿ ಶಂಖವನ್ನು ಊದುವುದನ್ನು ಶುಭೋದಯದ ಸಂಕೇತವಾಗಿ ಹಾಗೂ ಸಕಾರಾತ್ಮಕ ಶಕ್ತಿಗಳಿಗೆ ಆಹ್ವಾನವೆಂದು ಪರಿಗಣಿಸಲಾಗುತ್ತದೆ. ಶಂಖದಿಂದ ಹೊರಹೊಮ್ಮುವ ದಿವ್ಯ ಶಬ್ದವು ಮನೆಯಿಂದ ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡಿ, ಶಾಂತಿ, ನೆಮ್ಮದಿ ಮತ್ತು ಶುದ್ಧೀಕರಣದ ಸಾತ್ವಿಕ ವಾತಾವರಣವನ್ನು ನಿರ್ಮಿಸುತ್ತದೆ ಎಂಬ ನಂಬಿಕೆ ಜನಮಾನಸದಲ್ಲಿದೆ. ದೇವಾರಾಧನೆ ಆರಂಭಿಸುವಾಗ ಅಥವಾ ಆರತಿಯ ಸಮಯದಲ್ಲಿ ಶಂಖನಾದ ಕೇಳಿಸುವುದು ಪೂಜೆಯ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಶಾಸ್ತ್ರಗಳು ವಿವರಿಸುತ್ತವೆ. ಪೂಜೆಗೆ ಮುನ್ನ ಶಂಖವನ್ನು ಶುದ್ಧ ನೀರಿನಿಂದ ಸ್ವಚ್ಛಗೊಳಿಸಿ ಪವಿತ್ರವಾಗಿ ಇಡುವುದು ಶ್ರೇಷ್ಠವೆಂದು […] - [ಜನ ನಾಯಗನ್ ಬಜೆಟ್ ಎಷ್ಟು? ವಿಜಯ್ ಸಂಭಾವನೆಯೇ ಸಿಂಹಪಾಲು](https://veekshakavani.com/what-is-jana-nayagans-budget-vijays-remuneration-is-the-lions-share/): ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ (Jana Nayagan) ಸಿನಿಮಾ ಗಮನ ಸೆಳೆಯುವ ನಿರೀಕ್ಷೆ ಇದೆ. ಈ ಚಿತ್ರವು ತೆಲುಗಿನ ಬಾಲಯ್ಯ ನಟನೆಯ ‘ಭಗವಂತ ಕೇಸರಿ’ ಚಿತ್ರದ ತಮಿಳು ರಿಮೇಕ್ ಆಗಿದೆ. ಈಗ ಸಿನಿಮಾ ರಿಲೀಸ್ ಹಂತದಲ್ಲಿ ತೊಂದರೆ ಅನುಭವಿಸಿದ್ದು ಗೊತ್ತೇ ಇದೆ. ಹೀಗಿರುವಾಗಲೇ ಚಿತ್ರದ ಬಜೆಟ್ ಬಗ್ಗೆ ಹಾಗೂ ಕಲಾವಿದರ ಸಂಭಾವನೆಯ ಬಗ್ಗೆ ಚರ್ಚೆಗಳು ನಡೆದಿವೆ. ಆ ಬಗ್ಗೆ ಇಲ್ಲಿದೆ ಮಾಹಿತಿ. ‘ಜನ ನಾಯಗನ್’ ಚಿತ್ರವು ದಳಪತಿ ವಿಜಯ್ ವೃತ್ತಿ ಜೀವನದ ಕೊನೆಯ ಸಿನಿಮಾ ಆಗಲಿದೆ ಎಂದು ಹೇಳಲಾಗುತ್ತಾ ಇದೆ. ಆ ಬಳಿಕ ಅವರು ರಾಜಕೀಯದಲ್ಲಿ ತೊಡಗಿಕೊಳ್ಳಲಿದ್ದಾರೆ. ಈಗಾಗಲೇ ಟಿವಿಕೆ ಪಕ್ಷ ಕಟ್ಟಿ ಅವರು 2026ರ ಚುನಾವಣೆಯಲ್ಲಿ ಸ್ಪರ್ಧಿಸಲು ರೆಡಿ ಆಗಿದ್ದಾರೆ. ಹೀಗಾಗಿ ‘ಜನ ನಾಯಗನ್’ ಚಿತ್ರಕ್ಕೆ ದೊಡ್ಡ ಸಂಭಾವನೆ ಪಡೆಯುತ್ತಿದ್ದಾರೆ. ‘ಜನ ನಾಯಗನ್’ ಚಿತ್ರವನ್ನು ಕನ್ನಡದ ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿರುವುದು ಗೊತ್ತೇ ಇದೆ. ಈ ಸಿನಿಮಾದ ಬಜೆಟ್ 380 ಕೋಟಿ ರೂಪಾಯಿ ಎಂದು ಹೇಳಲಾಗುತ್ತಾ ಇದೆ. ಈ […] - [ಈ ಬೆರಳಿಗೆ ಚಿನ್ನದ ಉಂಗುರ ಧರಿಸುವುದು ಶನಿದೋಷಕ್ಕೆ ಕಾರಣವಾಗಬಹುದು!](https://veekshakavani.com/wearing-a-gold-ring-on-this-finger-can-lead-to-shani-dosha/): ಚಿನ್ನವು ಸೂರ್ಯ ಮತ್ತು ಗುರುವಿನ ಸಂಕೇತ. ಅದಕ್ಕಾಗಿಯೇ ಹಿರಿಯರು ಅದನ್ನು ಧರಿಸುವಾಗ ಕೆಲವು ನಿಯಮಗಳನ್ನು ಪಾಲಿಸಬೇಕು ಎಂದು ಹೇಳುತ್ತಾರೆ. ತೋರು ಬೆರಳಿನಲ್ಲಿ ಧರಿಸುವುದರಿಂದ ಏಕಾಗ್ರತೆ ಹೆಚ್ಚಾಗುತ್ತದೆ, ಆದರೆ ಮಧ್ಯದ ಬೆರಳಿಗೆ ಧರಿಸುವುದು ಅಶುಭ ಎಂದು ಜ್ಯೋತಿಷಿಗಳು ಎಚ್ಚರಿಸುತ್ತಾರೆ. ನಿಮ್ಮ ರಾಶಿಚಕ್ರದ ಪ್ರಕಾರ ಯಾವ ಬೆರಳು ನಿಮಗೆ ಅದೃಷ್ಟವನ್ನು ತರುತ್ತದೆ? ಚಿನ್ನವನ್ನು ಧರಿಸಲು ಸರಿಯಾದ ಮಾರ್ಗ ಯಾವುದು ಎಂದು ಇಲ್ಲಿ ತಿಳಿದುಕೊಳ್ಳಿ. ಜ್ಯೋತಿಷ್ಯದ ಪ್ರಕಾರ, ಚಿನ್ನವನ್ನು ಧರಿಸುವುದರಿಂದ ನಮ್ಮ ಮೇಲೆ ಸಕಾರಾತ್ಮಕ ಗ್ರಹಗಳ ಪ್ರಭಾವ ಉಂಟಾಗುತ್ತದೆ. ಪ್ರತಿ ಬೆರಳಿಗೆ ಚಿನ್ನವನ್ನು ಧರಿಸುವುದರಿಂದಾಗುವ ಫಲಿತಾಂಶಗಳನ್ನು ಇಲ್ಲಿ ತಿಳಿಯಿರಿ. ತೋರುಬೆರಳು:ಈ ಬೆರಳು ‘ಗುರು’ ಗ್ರಹದ ಚಿಹ್ನೆ. ನೀವು ಶಿಕ್ಷಣ, ವೃತ್ತಿ ಅಥವಾ ಆತ್ಮವಿಶ್ವಾಸದಲ್ಲಿ ಶ್ರೇಷ್ಠರಾಗಲು ಬಯಸಿದರೆ, ಈ ಬೆರಳಿಗೆ ಚಿನ್ನದ ಉಂಗುರವನ್ನು ಧರಿಸುವುದು ಉತ್ತಮ. ಇದು ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಉಂಗುರ ಬೆರಳು:ಇದು ಸೂರ್ಯ ಮತ್ತು ಶುಕ್ರನ ಸ್ಥಾನ. ಈ ಬೆರಳಿಗೆ ಚಿನ್ನ ಧರಿಸುವುದರಿಂದ ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ವಿವಾಹಿತ ಮಹಿಳೆಯರಿಗೆ, ಇದು ಕುಟುಂಬದಲ್ಲಿ ಸಂತೋಷ ಮತ್ತು […] - [ವಿಚ್ಛೇದಿತ ಮಹಿಳೆಗೆ ಬಾಳು ಕೊಡುವುದಾಗಿ ಮಗು ಮಾಡಿ, 36 ಲಕ್ಷ ರೂ. ತೆಗೆದುಕೊಂಡು ವ್ಯಕ್ತಿ ಪರಾರಿ!](https://veekshakavani.com/the-child-promised-to-give-life-to-a-divorced-woman-he-paid-rs-36-lakh-take-the-guy-and-run-away/): ಬೆಂಗಳೂರು, ಜನವರಿ 10: ಬೆಂಗಳೂರು (Bangalore) ಬನಶಂಕರಿಯಲ್ಲಿ ವ್ಯಕ್ತಿಯೊಬ್ಬ ವಿಚ್ಛೇದಿತ ಮಹಿಳೆಗೆ ಬಾಳು ಕೊಡುವುದಾಗಿ ಆಕೆ ಜತೆ ಸಂಸಾರ ನಡೆಸಿ ಮಗು ಜನಿಸಿದ ಬಳಿಕ, ಚಿನ್ನಾಭರಣ ಸೇರಿ ಸುಮಾರು 36 ಲಕ್ಷ ರೂಪಾಯಿ ಪಡೆದು ಬಳಿಕ ಪರಾರಿಯಾದ ಆರೋಪ ಕೇಳಿಬಂದಿದೆ. ಬನಶಂಕರಿಯ ಮೋಹನ್ ರಾಜ್ ಎಂಬಾತನ ವಿರುದ್ಧ ಮಹಿಳೆ ಗಂಭೀರ ಆರೋಪ ಮಾಡಿದ್ದು, ಈ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸಂತ್ರಸ್ತೆ ಹೇಳುವಂತೆ, ಕಳೆದ 10 ವರ್ಷಗಳಿಂದ ಮೋಹನ್ ರಾಜ್ ಪರಿಚಯವಿದ್ದು, 2022ರಲ್ಲಿ ಇಬ್ಬರ ನಡುವೆ ಮದುವೆ ನಡೆದಿತ್ತು. 2023ರ ಫೆಬ್ರವರಿಯಲ್ಲಿ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ಆದರೆ 2025ರಲ್ಲಿ ಏಕಾಏಕಿ ಮನೆ ಬಿಟ್ಟು ಹೋದ ಮೋಹನ್ ರಾಜ್ ಇಂದಿಗೂ ಪತ್ತೆಯಾಗಿಲ್ಲ. ಹೊಸ ಮನೆ ಕಟ್ಟೋಣ ಎಂದು ಹಣ, ಚಿನ್ನ ಪಡೆದಿದ್ದ ಆರೋಪಿಮದುವೆಯಾದ ಬಳಿಕ ಹೊಸ ಮನೆ ಕಟ್ಟೋಣ, ಹೊಸ ಜೀವನ ಶುರು ಮಾಡೋಣ ಎಂದು ನಂಬಿಸಿ ಮಹಿಳೆಯಿಂದ ಹಣ ಪಡೆದಿದ್ದಾನೆ ಎಂಬ ಆರೋಪವಿದೆ. ಚಿನ್ನಾಭರಣ ಅಡವಿಟ್ಟು, ಸಾಲ […] - [ಯಶವಂತಪುರ – ಮಡಗಾಂವ್ ನಡುವೆ ವಿಶೇಷ ರೈಲು](https://veekshakavani.com/special-train-between-yeshwantpur-madgaon/): ಸುಬ್ರಹ್ಮಣ್ಯ: ಪೊಂಗಲ್/ಸಂಕ್ರಾಂತಿ ಮತ್ತು ಗಣರಾಜ್ಯೋತ್ಸವ/ರಜಾ ದಿನಗಳ ಸಮಯದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೇ ಯಶವಂತಪುರ ಮತ್ತು ಮಡಗಾಂವ್ ನಡುವೆ ಪ್ರತಿ ದಿಕ್ಕಿನಲ್ಲಿ ತಲಾ ಎರಡು ಟ್ರಿಪ್ ವಿಶೇಷ ರೈಲುಗಳನ್ನು ಓಡಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈಲು ಸಂಖ್ಯೆ 06287 ಯಶವಂತಪುರ-ಮಡಗಾಂವ್ ವಿಶೇಷ ಎಕ್ಸ್‌ಪ್ರೆಸ್ ರೈಲು ಜ. 13 ಮತ್ತು 23ರಂದು ಬೆಳಗ್ಗೆ 11.50ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಬೆಳಗ್ಗೆ 6.45ಕ್ಕೆ ಮಡಗಾಂವ್ ತಲುಪಲಿದೆ. ಮರು ಪ್ರಯಾಣದಲ್ಲಿ ರೈಲು ಸಂಖ್ಯೆ 06288 ಮಡ ಗಾಂವ್- ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ಜ. 18 ಮತ್ತು 26ರಂದು ಬೆಳಗ್ಗೆ 11ಕ್ಕೆ ಮಡಗಾಂವ್‌ನಿಂದ ಹೊರಟು ಮರುದಿನ ಬೆಳಿಗ್ಗೆ 4.45ಕ್ಕೆ ಯಶವಂತಪುರ ತಲಪಲಿದೆ. - [ಒಂದೇ ದಿನ ಸಿಎ, ಬಿಕಾಂ ಪರೀಕ್ಷೆ..! ವಿದ್ಯಾರ್ಥಿಗಳಿಗೆ ಸಂಕಷ್ಟ..!!](https://veekshakavani.com/ca-b-com-exams-on-the-same-day-students-face-hardship/): ಮಂಗಳೂರು: ರಾಷ್ಟ್ರೀಯ ಮಟ್ಟದ ಸಿಎ ಪರೀಕ್ಷೆ ಹಾಗೂ ಮಂಗಳೂರು ವಿವಿಯ ಬಿಕಾಂ ಪರೀಕ್ಷೆ ಒಂದೇ ದಿನ ನಿಗದಿಯಾಗಿರುವ ಕಾರಣ ಕರಾವಳಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಗೊಂದಲಕ್ಕೆ ಸಿಲುಕಿದ್ದಾರೆ. ಜ.19ರಂದು ಮಧ್ಯಾಹ್ನ 2ರಿಂದ 4ರ ವರೆಗೆ ವಿ.ವಿ.ಯ ಅಂತಿಮ ವರ್ಷದ ಬಿಕಾಂನ “ಫೈನಾನ್ಶಿಯಲ್ ಇನ್ ಸ್ಟಿಟ್ಯೂಷನ್ ಮಾರ್ಕೆಟ್’ ಎಂಬ ವಿಷಯದಲ್ಲಿ ಪರೀಕ್ಷೆ ನಿಗದಿಯಾಗಿದೆ. ಇದೇ ದಿನಾಂಕದ ಇದೇ ಸಮಯ (ಮಧ್ಯಾಹ್ನ 2ರಿಂದ) ಸಿಎ ಅವರಿಗೆ ಸಂಬಂಧಿಸಿದ “ಆಡಿಟಿಂಗ್ ಆ್ಯಂಡ್ ಎಥಿಕ್ಸ್’ ಎಂಬ ಪರೀಕ್ಷೆಯೂ ನಿಗದಿಯಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಒಂದೋ ಬಿಕಾಂ ಅಥವಾ ಸಿಎ ಪರೀಕ್ಷೆ ಬರೆಯಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಕಾಂ ಪರೀಕ್ಷೆ ಬರೆಯದಿದ್ದರೆ ವಿದ್ಯಾರ್ಥಿಗಳ 1 ವರ್ಷದ ಭವಿಷ್ಯಕ್ಕೆ ಸಮಸ್ಯೆ ಆಗಲಿದೆ. ವಿದ್ಯಾರ್ಥಿಗಳ ಪೋಷಕರು ಉದಯವಾಣಿಗೆ ಪ್ರತಿಕ್ರಿಯಿಸಿ ಸಿಎ ಪರೀಕ್ಷೆಯನ್ನು ಎಲ್ಲರೂ ಸುಲಭವಾಗಿ ಉತ್ತೀರ್ಣರಾಗಲು ಸಾಧ್ಯವಾಗುವುದಿಲ್ಲ. ಅದಕ್ಕೆ ಅಷ್ಟು ಶ್ರಮ ಬೇಕು. ಈಗ ಒಂದೇ ದಿನ 2 ಪರೀಕ್ಷೆ ಎದುರಾದರೆ ಸಿಎ ಪರೀಕ್ಷೆಗೆ ಸಿದ್ಧತೆ ಮಾಡಬೇಕಾ? ಬಿಕಾಂ ಬರೆಯುವುದಾ? ಎಂಬ ತಲೆಬಿಸಿ ಮಕ್ಕಳಿಗೆ […] - [ಚಾರ್ಮಾಡಿ ಘಾಟಿಯಲ್ಲಿ ಬೆಂಕಿ ಹತ್ತಿ ಸುಟ್ಟು ಕರಕಲಾದ ಲಾರಿ..!](https://veekshakavani.com/a-lorry-caught-fire-and-was-burnt-to-ashes-at-charmadi-ghat/): ಬೆಳ್ತಂಗಡಿ: ಚಾರ್ಮಾಡಿ ಘಾಟಿಯಲ್ಲಿ ಬೆಂಕಿ ಹೊತ್ತಿಕೊಂಡು ಲಾರಿಯೊಂದು ಸುಟ್ಟು ಕರಕಲಾದ ಘಟನೆ ಶನಿವಾರ ನಸುಕಿನ 3 ಗಂಟೆ ಸುಮಾರಿಗೆ ನಡೆದಿದೆ. ಅದೃಷ್ಟವಶಾತ್ ಚಾಲಕ ಸಹಿತ ಲಾರಿಯಲ್ಲಿದ್ದ ಮೂರು ಮಂದಿ ಅಪಾಯದಿಂದ ಪಾರಾಗಿದ್ದಾರೆ. ಜಾವಗಲ್ ನಿಂದ ಕುಂದಾಪುರದ ಕಡೆಗೆ ಲಾರಿಯಲ್ಲಿ ಮೆಕ್ಕೆಜೋಳದ ಲೋಡ್ ಕೊಂಡೊಯ್ಯಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಬೆಂಕಿ ರಸ್ತೆ ಬದಿಯ ಅರಣ್ಯಕ್ಕೂ ವ್ಯಾಪಿಸಿದ್ದು, ಅಗ್ನಿಶಾಮಕ ದಳ, ಅರಣ್ಯ ಇಲಾಖೆ, ಸ್ಥಳೀಯರ ಸಕಾಲಿಕ ಕ್ರಮದಿಂದ ಹತೋಟಿಗೆ ತರಲಾಗಿದೆ. - [ಇಂದಿನ ರಾಶಿ ಭವಿಷ್ಯ ಹೀಗಿದೆ..](https://veekshakavani.com/daily-horoscope-2/): (10- ಜನವರಿ– 2026) ಮೇಷ ರಾಶಿ ಯೋಗ ಮತ್ತು ಧ್ಯಾನ ನೀವು ಒಳ್ಳೆಯ ದೇಹರಚನೆ ಕಾಯ್ದುಕೊಳ್ಳಲು ಮತ್ತು ಮಾನಸಿಕವಾಗಿ ಸಧೃಢವಾಗಿರಲು ಸಹಾಯ ಮಾಡುತ್ತದೆ. ಇಂದು ನೀವು ನಿಮ್ಮ ಮಕ್ಕಳ ಕಾರಣದಿಂದ ಆರ್ಥಿಕ ಲಬಹವನ್ನು ಪಡೆಯುವ ಸಾಧ್ಯತೆ ಕಂಡುಬರುತ್ತಿದೆ. ಇದರಿಂದ ನೀವು ತುಂಬಾ ಸಂತೋಷಪಡುತ್ತೀರಿ. ಕುಟುಂಬದ ಸದಸ್ಯರೊಂದಿಗಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳುವ ಮೂಲಕ .ನೀವು ನಿಮ್ಮ ಗುರಿಗಳನ್ನು ಸುಲಭವಾಗಿ ಸಾಧಿಸುತ್ತೀರಿ. ನಿಮ್ಮ ಪ್ರೇಮಿಯನ್ನು ಭೇಟಿ ಮಾಡುತ್ತಿದ್ದ ಹಾಗೆ ನಿಮ್ಮ ಮನಸ್ಸನ್ನು ಪ್ರಣಯ ಆವರಿಸಿಕೊಳ್ಳುತ್ತದೆ. ಇಂದು ಖಾಲಿ ಸಮಯವೂ ಕೆಲವು ಅನುಪಯುಕ್ತ ಕೆಲಸಗಳಲ್ಲಿ ಹಾಳಾಗಬಹುದು. ಇಂದು, ನೀವು ನಿಮ್ಮ ಸಂಗಾತಿಯ ಜೊತೆಗೆ ನಿಮ್ಮ ಜೀವನದ ಅತ್ಯುತ್ತಮ ಸಂಜೆಯನ್ನು ಕಳೆಯುತ್ತೀರಿ. ಆಧ್ಯಾತ್ಮಿಕತೆಯ ಬಗ್ಗೆ ಬಲವಾದ ಭಾವನೆ ಇರುವ ಸಾಧ್ಯತೆಯಿದೆ. ಅಲ್ಲದೆ, ಯೋಗ ಶಿಬಿರಕ್ಕೆ ಹೋಗಲು, ಧಾರ್ಮಿಕ ಶಿಕ್ಷಕರ ಧರ್ಮೋಪದೇಶವನ್ನು ಕೇಳಲು ಅಥವಾ ಆಧ್ಯಾತ್ಮಿಕ ಪುಸ್ತಕವನ್ನು ಓದಲು ಸಾಧ್ಯವಾಗುತ್ತದೆ. ವೃಷಭ ರಾಶಿ ಸ್ನೇಹಿತರಿಂದ ಒಂದು ವಿಶೇಷ ಅಭಿನಂದನೆ ಸಂತೋಷದ ಮೂಲವಾಗುತ್ತದೆ. ಇದೇಕೆಂದರೆ ನೀವು ನಿಮ್ಮ ಜೀವನವನ್ನು ಮರಗಳಂತೆ ಮಾಡಿಕೊಳ್ಳುತ್ತೀರಿ-ಅವುಗಳು […] - [ಮಗನಿಗೆ ಚಳಿಯಾಗುತ್ತೆ! ಹುತಾತ್ಮನಾದ ಸೈನಿಕನ ಪ್ರತಿಮೆಗೆ ಕಂಬಳಿ ಹೊದಿಸಿದ ತಾಯಿ](https://veekshakavani.com/my-son-is-cold-mother-drains-blanket-over-statue-of-martyred-soldier/): ಜಮ್ಮು, ಜನವರಿ 9: ಜಮ್ಮುವಿನಲ್ಲಿ ಸೇನಾ ಕಾರ್ಯಾಚರಣೆಯ ವೇಳೆ ಹುತಾತ್ಮನಾಗಿದ್ದ ಸೈನಿಕ ಗುರ್ನಮ್ ಸಿಂಗ್ ಎಂಬುವವರ ಪ್ರತಿಮೆಯನ್ನು ಊರಿನಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಅಲ್ಲಿ ಈಗ ವಿಪರೀತ ಚಳಿ ಇರುವುದರಿಂದ ತನ್ನ ಮಗನ ಪುತ್ಥಳಿಗೂ ಚಳಿಯಾಗುತ್ತಿರಬಹುದು ಎಂದು ಆ ಸೈನಿಕನ ತಾಯಿ ಆ ಪ್ರತಿಮೆಗೆ ದಪ್ಪನೆಯ ಕಂಬಳಿ ಹೊದೆಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. - [ಹಾಸಿಗೆಯಲ್ಲಿ ಮೂತ್ರ ಮಾಡಿದ್ದಕ್ಕೆ ಮಗುವಿನ ಗುಪ್ತಾಂಗವನ್ನೇ ಸುಟ್ಟ ತಾಯಿ!](https://veekshakavani.com/mother-burns-babys-genitals-for-urinating-in-bed/): ಪಾಲಕ್ಕಾಡ್, ಜನವರಿ 9: 5 ವರ್ಷದ ಪುಟ್ಟ ಬಾಲಕಿ ಮಲಗಿದ್ದಾಗ ಹಾಸಿಗೆಯಲ್ಲಿ ಮೂತ್ರ ಮಾಡಿದ್ದಾಳೆಂಬ ಕಾರಣಕ್ಕೆ ಆಕೆಯ ಮಲತಾಯಿ ಆ ಮಗುವಿನ ಗುಪ್ತಾಂಗವನ್ನೇ (Private Part) ಸುಟ್ಟಿದ್ದಾಳೆ. ಕಳೆದ ವಾರ ಉತ್ತರ ಕೇರಳ ಜಿಲ್ಲೆಯ ಕಾಂಜಿಕೋಡ್ ಬಳಿ ಈ ಘಟನೆ ನಡೆದಿದೆ. ಆ ಮಗು ಅಂಗನವಾಡಿಯಲ್ಲಿ ಕುಳಿತುಕೊಳ್ಳಲು ಕಷ್ಟಪಡುತ್ತಿರುವುದನ್ನು ಗಮನಿಸಿ ಶಿಕ್ಷಕಿ ಏನಾಯಿತು ಎಂದು ವಿಚಾರಿಸಿದಾಗ ಆ ಮಗು ಈ ವಿಷಯವನ್ನು ಹೇಳಿದೆ. ಬಳಿಕ ಆ ಮಗುವಿನ ಗುಪ್ತಾಂಗವನ್ನು ಪರೀಕ್ಷಿಸಿದ ಅಂಗನವಾಡಿ ಶಿಕ್ಷಕಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಬಿಹಾರ ಮೂಲದ ಮಲತಾಯಿಯನ್ನು ಬಂಧಿಸಲಾಗಿದೆ. ಆಕೆಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆ ಮಹಿಳೆಯ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಮತ್ತು ಬಾಲ ನ್ಯಾಯ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯಕ್ಕೆ ಆ ಮಗು ಮಕ್ಕಳ ಕಲ್ಯಾಣ ಸಮಿತಿಯ (ಸಿಡಬ್ಲ್ಯೂಸಿ) ಆರೈಕೆಯಲ್ಲಿದೆ. ಆ ಮಹಿಳೆ ಇದಕ್ಕೂ ಮುಂಚೆ ಕೂಡ ಮಗುವಿನ ಮೇಲೆ ಇದೇ […] - [ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿರುದ್ಧದ ದೂರು ಹೈಕೋರ್ಟಿನಲ್ಲಿ ವಜಾ](https://veekshakavani.com/high-court-dismisses-petition-against-srikshetra-dharmasthala-rural-development-project/): ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿರುದ್ಧ ಬೆಳ್ತಂಗಡಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ರಂಜನ್ ರಾವ್ ಯರ್ಡೂರು ದಾಖಲಿಸಿದ್ದ ಕ್ರಿಮಿನಲ್ ಕೇಸನ್ನು ಹೈಕೋರ್ಟ್ ವಜಾಗೊಳಿಸಿ ತೀರ್ಪು ನೀಡಿದೆ. ತೀರ್ಪಿನ ವಿವರ: 2016ನೇ ಇಸವಿಯಲ್ಲಿ ರಂಜನ್ ರಾವ್ ಯರ್ಡೂರು ಅವರು ಬೆಳ್ತಂಗಡಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿದ್ದರು. ಗ್ರಾಮಾಭಿವೃದ್ಧಿ ಯೋಜನೆಗೆ ಹಣಕಾಸು ವ್ಯವಹಾರ ನಡೆಸಲು ಅನುಮತಿ ಇಲ್ಲ. ಅಕ್ರಮವಾಗಿ ಬಡ್ಡಿಗೆ ಹಣ ನೀಡಲಾಗುತ್ತಿದೆ. ನಿಯಮ ಉಲ್ಲಂಘಿಸಿ ಜಾಸ್ತಿ ಬಡ್ಡಿ ವಿಧಿಸಲಾಗುತ್ತಿದೆ. ಆದ್ದರಿಂದ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತನ್ನ ದೂರಿನಲ್ಲಿ ಮನವಿ ಮಾಡಿದ್ದ ರಂಜನ್ ರಾವ್ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯಸ್ಥರೂ ಆಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಮತ್ತಿತರರನ್ನು ಪ್ರತಿವಾದಿಯನ್ನಾಗಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಬೆಳ್ತಂಗಡಿ ನ್ಯಾಯಾಲಯ ಪೊಲೀಸ್ ತನಿಖೆಗೆ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ […] - [ಜನವರಿ 28ರಿಂದ ಸಂಸತ್ ಅಧಿವೇಶನ ಆರಂಭ; ಫೆಬ್ರವರಿ 1ಕ್ಕೆ ಕೇಂದ್ರ ಬಜೆಟ್ ಮಂಡನೆ](https://veekshakavani.com/parliament-session-to-begin-on-january-28-union-budget-to-be-presented-on-february-1/): ನವದೆಹಲಿ, ಜನವರಿ 9: ಸಂಸತ್ತಿನ ಬಜೆಟ್ ಅಧಿವೇಶನ ಜನವರಿ 28ರಂದು ಆರಂಭವಾಗಲಿದ್ದು, ಫೆಬ್ರವರಿ 1ರಂದು ಕೇಂದ್ರ ಬಜೆಟ್ 2026 (Union Budget 2026) ಮಂಡನೆಯಾಗಲಿದೆ. ಈ ಕುರಿತು ಮಾಹಿತಿಯನ್ನು ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿಯು ಇಂದು ಬಿಡುಗಡೆ ಮಾಡಿದೆ. ಬಜೆಟ್ ಅಧಿವೇಶನವು ಜನವರಿ 28ರಂದು ಪ್ರಾರಂಭವಾಗಿ ಏಪ್ರಿಲ್ 2ರವರೆಗೆ ಮುಂದುವರಿಯಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಅಧಿವೇಶನಕ್ಕೆ ತಮ್ಮ ಒಪ್ಪಿಗೆಯನ್ನು ನೀಡಿದ್ದಾರೆ. ಅವರು ಅಧಿವೇಶನದ ಮೊದಲ ದಿನದಂದು ಸಂಸತ್ತಿನ ಎರಡೂ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಜೆಟ್ ಅಧಿವೇಶನದ ಮೊದಲ ಹಂತವು ಫೆಬ್ರವರಿ 13ರಂದು ಮುಕ್ತಾಯಗೊಳ್ಳಲಿದ್ದು, ಎರಡನೇ ಹಂತಕ್ಕೆ ಮಾರ್ಚ್ 9ರಂದು ಸಂಸತ್ ಸಭೆ ಸೇರಲಿದೆ. ಕೇಂದ್ರ ಸರ್ಕಾರವು 2025-26 ರ ಆರ್ಥಿಕ ಸಮೀಕ್ಷೆಯನ್ನು ಜನವರಿ 29ರಂದು ಮಂಡಿಸಲಿದೆ. ಕೇಂದ್ರ ಬಜೆಟ್ 2026-27 ಅನ್ನು ಫೆಬ್ರವರಿ 1ರಂದು ಮಂಡಿಸಲಾಗುವುದು. ಈ ಬಜೆಟ್ ಅಧಿವೇಶನದಲ್ಲಿ ಬಜೆಟ್ ಚರ್ಚೆಗಳು, ಸಬ್ಸಿಡಿ ಬೇಡಿಕೆಗಳು ಮತ್ತು ಪ್ರಮುಖ ಆರ್ಥಿಕ ನೀತಿಗಳ ಕುರಿತು ವಿವರವಾದ ಚರ್ಚೆಗಳು ನಡೆಯಲಿವೆ. ಸಾರ್ವಜನಿಕರು, […] - [ಇರಾನ್ ಹಿಂದೆ ಸರಿಯುವುದಿಲ್ಲ, ಟ್ರಂಪ್ ಪದಚ್ಯುತಿ ಖಚಿತ; ಸುಪ್ರೀಂ ನಾಯಕ ಖಮೇನಿ ಪ್ರತಿಜ್ಞೆ](https://veekshakavani.com/iran-wont-back-down-trump-is-sure-to-be-ousted-supreme-leader-khamenei-sworn-in/): ಟೆಹ್ರಾನ್, ಜನವರಿ 9: ಇಂದು ಇರಾನ್ ದೇಶವನ್ನುದ್ದೇಶಿಸಿ ಮಾತನಾಡಿದ ಇರಾನ್ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Khamenei), ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಎಚ್ಚರಿಕೆ ನೀಡಿದ್ದಾರೆ. ದುರಹಂಕಾರ ಮತ್ತು ಹೆಮ್ಮೆಯಿಂದ ಕುಳಿತು ಇಡೀ ಪ್ರಪಂಚದ ಮೇಲೆ ತೀರ್ಪು ನೀಡುವ ಟ್ರಂಪ್ ಬಗ್ಗೆ ಹೇಳುವುದಾದರೆ, ಸಾಮಾನ್ಯವಾಗಿ ವಿಶ್ವದ ನಿರಂಕುಶಾಧಿಕಾರಿಗಳು ಮತ್ತು ದುರಹಂಕಾರಿ ಶಕ್ತಿಗಳಾದ ಫರೋ, ನಿಮ್ರೋಡ್, ರೆಜಾ ಖಾನ್, ಮೊಹಮ್ಮದ್ ರೆಜಾ ಮತ್ತು ಅವರಂಥವರು ದುರಹಂಕಾರದ ಉತ್ತುಂಗದಲ್ಲಿದ್ದಾಗಲೇ ಅವರ ಪತನವಾಯಿತು ಎಂಬುದನ್ನು ಟ್ರಂಪ್ ತಿಳಿಯುವುದು ಒಳ್ಳೆಯದು. ಅದೇ ರೀತಿ ಟ್ರಂಪ್ ಅವರನ್ನೂ ಅಧಿಕಾರದಿಂದ ಉರುಳಿಸಲಾಗುತ್ತದೆ ಎಂದು ಹೇಳಿದ್ದಾರೆ. “ಇಸ್ಲಾಮಿಕ್ ಗಣರಾಜ್ಯವು ಲಕ್ಷಾಂತರ ಜನರ ರಕ್ತದಿಂದ ಅಧಿಕಾರಕ್ಕೆ ಬಂದಿತು. ನಮ್ಮ ದೇಶ ಟ್ರಂಪ್ ರೀತಿಯ ವಿಧ್ವಂಸಕರ ಮುಂದೆ ಎಂದಿಗೂ ಹಿಂದೆ ಸರಿಯುವುದಿಲ್ಲ” ಎಂದು ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ ಹೇಳಿದ್ದಾರೆ. ಪ್ರತಿಭಟನಾಕಾರರು ಟ್ರಂಪ್ ಅವರನ್ನು ಮೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಖಮೇನಿ, “ಪ್ರತಿಭಟನಾಕಾರರು ಟ್ರಂಪ್ ಅವರನ್ನು ಸಂತೋಷಪಡಿಸಲು ಬಯಸುತ್ತಾರೆ. ಟ್ರಂಪ್ಗೆ ದೇಶವನ್ನು […] - [ಹಿಮಾಚಲ ಪ್ರದೇಶದ ಸಿರ್ಮೌರ್‌ನಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ](https://veekshakavani.com/bus-accident-in-himachal-pradeshs-sirmaur-nine-dead-40-injured/): ಶಿಮ್ಲಾ, ಜನವರಿ 9: ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯಲ್ಲಿ ಇಂದು ಮಧ್ಯಾಹ್ನ ಖಾಸಗಿ ಬಸ್ ಸುಮಾರು 500 ಅಡಿ ಆಳದ ಕಂದಕಕ್ಕೆ ಉರುಳಿದೆ. ಇದರ ಪರಿಣಾಮವಾಗಿ 9 ಜನರು ಸಾವನ್ನಪ್ಪಿದ್ದು, ಸುಮಾರು 40 ಮಂದಿ ಗಾಯಗೊಂಡಿದ್ದಾರೆ. ಶಿಮ್ಲಾದಿಂದ ರಾಜ್‌ಗಢ ಮೂಲಕ ಕುಪ್ವಿಗೆ ತೆರಳುತ್ತಿದ್ದ ಬಸ್ ಹರಿಪುರ್ಧರ್ ಗ್ರಾಮದ ಬಳಿ ರಸ್ತೆಯಿಂದ ಜಾರಿ ಕಣಿವೆಗೆ ಉರುಳಿ ಬಿದ್ದಾಗ ಈ ಅಪಘಾತ (Accident) ಸಂಭವಿಸಿದೆ. ಅಪಘಾತದಲ್ಲಿ ಸಾವನ್ನಪ್ಪಿದವರ ಬಗ್ಗೆ ದುಃಖ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅಪಘಾತದಲ್ಲಿ ಸಾವನ್ನಪ್ಪಿದವರ ಹತ್ತಿರದ ಸಂಬಂಧಿಕರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುವಂತೆ ಮತ್ತು ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಆರೈಕೆಯನ್ನು ಖಚಿತಪಡಿಸಿಕೊಳ್ಳುವಂತೆ ಜಿಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಅಪಘಾತಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ, ರಸ್ತೆಯ ಮೇಲಿನ ಹಿಮದಿಂದಾಗಿ ಚಾಲಕ ನಿಯಂತ್ರಣ ಕಳೆದುಕೊಂಡಿರಬಹುದು ಎನ್ನಲಾಗಿದೆ. - [ಪ್ರಧಾನಿ ಮೋದಿಯ ದೃಷ್ಟಿ ಮತ್ತು ನಿಲುವು ಕಂಡು ಅಚ್ಚರಿಗೊಂಡ ಎಐ ಸ್ಟಾರ್ಟಪ್ಗಳ ಮುಖ್ಯಸ್ಥರು](https://veekshakavani.com/heads-of-ai-startups-surprised-by-pm-modis-vision-and-approach/): ನವದೆಹಲಿ, ಜನವರಿ 9: ಪ್ರಧಾನಿ ನರೇಂದ್ರ ಮೋದಿ (Narendra Modi) ನಿವಾಸದಲ್ಲಿ ನಡೆದ ಎಐ ಸ್ಟಾರ್ಟಪ್ಗಳ ಸಭೆ, ಅದರಲ್ಲಿ ಭಾಗವಹಿಸಿದವರೆಲ್ಲರ ಹೃದಯ ಹಗುರಾಗಿಸಿದೆ. ಎಐ ವಿಚಾರದಲ್ಲಿ ಪ್ರಧಾನಿ ಹೊಂದಿರುವ ದೃಷ್ಟಿಕೋನ, ನಿಲುವು ಏನು ಎಂಬುದು ಭಾರತೀಯ ಸ್ಟಾರ್ಟಪ್ಗಳ ಮುಖ್ಯಸ್ಥರ ಅರಿವಿಗೆ ಬಂದಿತ್ತು. ಫೆಬ್ರುವರಿಯಲ್ಲಿ ಇಂಡಿಯಾ ಎಐ ಇಂಪ್ಯಾಕ್ಟ್ ಸಮಿಟ್ ಕಾರ್ಯಕ್ರಮ ನಡೆಯಲಿರುವ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ಪ್ರಧಾನಿಗಳು 12 ಸ್ಟಾರ್ಟಪ್ಗಳ ಮುಖಂಡರನ್ನು ತಮ್ಮ ನಿವಾಸಕ್ಕೆ ಕರೆಸಿ ವಿಚಾರ ವಿನಿಮಯ ಮಾಡಿದ್ದಾರೆ. ಪ್ರಧಾನಿಯನ್ನು ಭೇಟಿ ಮಾಡಿರುವ ಎಐ ಸ್ಟಾರ್ಟಪ್ಗಳು ಇಂಡಿಯಾ ಎಐ ಮಿಷನ್ ಅಡಿಯಲ್ಲಿ ಫೌಂಡೇಶನ್ ಮಾಡಲ್ಗಳನ್ನು ಅಭಿವೃದ್ಧಿಪಡಿಸಲು ಆಯ್ಕೆಯಾಗಿರುವಂಥವಾಗಿವೆ. ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಸಚಿವ ಡಾ. ಅಶ್ವಿನಿ ವೈಷ್ಣವ್, ರಾಜ್ಯ ಸಚಿವರಾದ ಜಿತಿನ್ ಪ್ರಸಾದ, ಕಾರ್ಯದರ್ಶಿ ಎಸ್ ಕೃಷ್ಣನ್ ಹಾಗೂ ಈ 12 ಸ್ಟಾರ್ಟಪ್ಗಳ ಮುಖಂಡರು ಪ್ರಧಾನಿಗಳೊಂದಿಗೆ ಮಾತನಾಡಿದ್ದಾರೆ. ಈ ಮಾತುಕತೆ ಸಕಾರಾತ್ಮಕವಾಗಿತ್ತು ಎಂದು ಎಲ್ಲರೂ ಅಭಿಪ್ರಾಯಪಟ್ಟಿದ್ದಾರೆ. ಪ್ರಧಾನಮಂತ್ರಿಗಳು ತಮ್ಮ ನಿಜಜೀವನದ ಅನುಭವಗಳೊಂದಿಗೆ ಮಾತನಾಡಿದ್ದು ನಮಗೆ ತಾಂತ್ರಿಕ ವಿಷಯಗಳ ಬಗ್ಗೆ ಪ್ರೇರಣೆ ಕೊಟ್ಟಿತು […] - [ಈ ಹೋಟೆಲ್ಗೆ ಗೋಡೆ ಇಲ್ಲ, ಛಾವಣಿಯೂ ಇಲ್ಲ, ಎಲ್ಲ ಓಪನ್; ಆದ್ರೂ ಕೂಡ ಪ್ರೇಮಿಗಳ ನೆಚ್ಚಿನ ತಾಣವಿದು](https://veekshakavani.com/this-hotel-has-no-walls-no-roof-everything-is-open-still-its-a-favorite-destination-for-lovers/): ಗೋಡೆಗಳೂ ಇಲ್ಲ, ಛಾವಣಿಯೂ ಇಲ್ಲದ ಹೋಟೆಲ್ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ ಎಂಬ ಪ್ರಶ್ನೆಯೇ ಅಚ್ಚರಿ ಮೂಡಿಸುವಂತದ್ದು. ಹೆಸರಿಗಷ್ಟೇ ಇದೊಂದು ಹೋಟೆಲ್ ರೂಮ್ ಆಗಿದ್ದರೂ, ಇಲ್ಲಿ ಸಾಮಾನ್ಯ ಹೋಟೆಲ್‌ಗಳಲ್ಲಿ ಕಾಣುವ ಗೋಡೆಗಳು, ಬಾಗಿಲುಗಳು ಅಥವಾ ಛಾವಣಿಯೇ ಇಲ್ಲ. ವಿಶಾಲವಾದ ಬೆಟ್ಟದ ತಪ್ಪಲಿನಲ್ಲಿ ಪ್ರಕೃತಿಯ ಮಧ್ಯೆ ಒಂದೇ ಒಂದು ಹಾಸಿಗೆಯನ್ನು ಇಟ್ಟು ನಿರ್ಮಿಸಲಾದ ಈ ತಾಣವು ಜಗತ್ತಿನ ಅತ್ಯಂತ ರೋಮ್ಯಾಂಟಿಕ್ ಸ್ಥಳಗಳಲ್ಲೊಂದು ಎಂಬ ಖ್ಯಾತಿ ಗಳಿಸಿದೆ. ಪ್ರತೀ ವರ್ಷ ಅನೇಕ ಪ್ರವಾಸಿಗರು ತಮ್ಮ ಸಂಗಾತಿಯೊಂದಿಗೆ ಏಕಾಂತವನ್ನು ಅನುಭವಿಸಲು ಈ ವಿಶಿಷ್ಟ ಹೋಟೆಲ್‌ಗೆ ಭೇಟಿ ನೀಡುತ್ತಾರೆ. ಈ ರೀತಿಯ ಅಸಾಮಾನ್ಯ ಹೋಟೆಲ್ ವಿಶ್ವದ ಅತ್ಯಂತ ಸುಂದರ ದೇಶಗಳಲ್ಲಿ ಒಂದಾದ ಸ್ವಿಟ್ಜರ್ಲೆಂಡ್‌ನಲ್ಲಿದೆ. ಇದಕ್ಕೆ ‘ನಲ್ ಸ್ಟರ್ನ್’ ಎಂಬ ಹೆಸರಿದ್ದು, ಈ ಪದ ಜರ್ಮನ್ ಭಾಷೆಯಿಂದ ಬಂದಿದ್ದು “ಶೂನ್ಯ ನಕ್ಷತ್ರ” ಎಂಬ ಅರ್ಥವನ್ನು ಹೊಂದಿದೆ. ಸ್ವಿಟ್ಜರ್‌ಲ್ಯಾಂಡ್‌ನ ಗೋಬ್ಸಿ ಎಂಬ ಪರ್ವತ ಶಿಖರದ ಮೇಲೆ ಹಸಿರು ಬೆಟ್ಟಗಳ ಮಧ್ಯೆ ಈ ಹೋಟೆಲ್ ಅನ್ನು ನಿರ್ಮಿಸಲಾಗಿದ್ದು, ಇಲ್ಲಿ ಒಂದು ಹಾಸಿಗೆಯ […] - [ಶಾಲಾ ಪಠ್ಯಪುಸ್ತಕದಲ್ಲಿ ಇರಲಿದೆ ಪುನೀತ್ ರಾಜ್ಕುಮಾರ್ ಜೀವನದ ಪಾಠ](https://veekshakavani.com/puneeth-rajkumars-life-lesson-to-be-included-in-school-textbooks/): ನಟ ಪುನೀತ್ ರಾಜ್ಕುಮಾರ್ (Puneeth Rajkumar) ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲ. ಆದರೆ ಅವರು ಮಾಡಿದ ಸಾಧನೆ ಎಲ್ಲರಿಗೂ ಸ್ಫೂರ್ತಿ ಆಗಿದೆ. ಬಾಲನಟನಾಗಿ ಚಿತ್ರರಂಗದಲ್ಲಿ ಮಿಂಚಿ, ಹೀರೋ ಆಗಿಯೂ ಜನಮನ ಗೆದ್ದ ಪುನೀತ್ ಅವರು ಸಾಮಾಜಿಕ ಕಾರ್ಯಗಳ ಮೂಲಕವೂ ಗುರುತಿಸಿಕೊಂಡಿದ್ದರು. ಅವರ ಸಾಧನೆಯ ಕಥೆ ಅನೇಕರಿಗೆ ಸ್ಫೂರ್ತಿ ಆಗುತ್ತದೆ. ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ಪಡೆದ ಪುನೀತ್ ರಾಜ್ಕುಮಾರ್ ಅವರ ಜೀವನದ ಕಥೆ ಈಗ ಶಾಲಾ ಪಠ್ಯಪುಸ್ತಕದಲ್ಲಿ (Karnataka School Textbooks) ಸೇರ್ಪಡೆ ಆಗಲಿದೆ. ಆ ಬಗ್ಗೆ ತಯಾರಿ ನಡೆದಿದೆ. ಇದು ಪುನೀತ್ ರಾಜ್ಕುಮಾರ್ ಅವರ ಅಭಿಮಾನಿಗಳಿಗೆ ಸಖತ್ ಸಂತಸ ತಂದಿದೆ. ಪಠ್ಯ ಪುಸ್ತಕ ಪರಿಷ್ಕರಣೆ ಸಂದರ್ಭದಲ್ಲಿ ಈ ವಿಷಯವನ್ನು ಪರಿಗಣಿಸಲು ‘ಪಠ್ಯ ಪುಸ್ತಕ ಸಂಘ’ ತೀರ್ಮಾನಿಸಿದೆ. ಅಂದರೆ, ಮುಂದಿನ ದಿನಗಳಲ್ಲಿ ಕರ್ನಾಟಕದ ಶಾಲೆಗಳ ಪಠ್ಯಪುಸ್ತಕದಲ್ಲಿ ಪುನೀತ್ ರಾಜ್ಕುಮಾರ್ ಅವರ ಸಾಧನೆಗಳನ್ನು ಸೇರಿಸಲಾಗುವುದು. ಆ ಮೂಲಕ ಮುಂದಿನ ಪೀಳಿಗೆಗೆ ಪುನೀತ್ ರಾಜ್ಕುಮಾರ್ ಬಗ್ಗೆ ತಿಳಿಸಿಕೊಡಲಾಗುವುದು. ಪುನೀತ್ ರಾಜ್ಕುಮಾರ್ ಅವರು ಜನಿಸಿದ್ದು 1975ರ […] - [ಬೆಂಗಳೂರಿನಲ್ಲಿ ಸಲಿಂಗಿ ಜೋಡಿಯಲ್ಲಿ ಒಬ್ಬಳು ಗರ್ಭಿಣಿ? ಎಚ್ಚರಿಕೆ ನೀಡಿದ ತಜ್ಞರು](https://veekshakavani.com/is-one-of-the-same-sex-couples-pregnant-in-bengaluru-experts-warn/): ಬೆಂಗಳೂರು, ಜ.9: ಪ್ರತಿಯೊಂದು ಹೆಣ್ಣಿಗೂ ತಾಯಿಯಾಗುವ ಹಕ್ಕಿದೆ. ಆದರೆ ಆ ಮಗುವನ್ನು ಪಡೆಯುವ ರೀತಿಯೂ ಮುಖ್ಯವಾಗಿರುತ್ತದೆ. ಈ ಪ್ರಕೃತಿಯ ಪ್ರಕಾರ ಒಂದು ಹೆಣ್ಣು ಗಂಡಿನಿಂದಲ್ಲೇ ಪಡೆಯಬೇಕು ಎಂಬ ನಿಯಮವಿದೆ. ಗಂಡು-ಹೆಣ್ಣು ಸೇರಿದಾಗ ಮಾತ್ರ ಸಂಬಂಧಗಳಿಗೆ ಅರ್ಥ ಇರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಇದಕ್ಕೆ ವಿರುದ್ಧವಾಗಿ ಕೆಲವರು ನಡೆದುಕೊಳ್ಳುತ್ತಿದ್ದಾರೆ. ಈಗಿನ ಟ್ರೆಂಡ್ ಪ್ರಕಾರ ಸಮಲಿಂಗಿ ಸಂಬಂಧಗಳು ಅಂದರೆ ಸಲಿಂಗ ಪ್ರೇಮ, ಇದು ಸಾಮಾಜಿಕ ವ್ಯವಸ್ಥೆಯಲ್ಲಿ ಹಾಗೂ ಭಾರತದ ಪದ್ಧತಿಗೂ ವಿರುದ್ಧವಾಗಿದೆ. ಇಂದಿಗೂ ಕೂಡ ಸಲಿಂಗ ಸಂಬಂಧಕ್ಕೆ ಕಾನೂನತ್ಮಕ ಸ್ಥಾನಮಾನ ಬೇಕು ಎಂದು ಹೋರಾಟ ಮಾಡುತ್ತಿದ್ದಾರೆ. ಇದರ ಮಧ್ಯೆ ಬೆಂಗಳೂರಿನಲ್ಲಿ ಒಂದು ವಿಚಿತ್ರ ಘಟನೆ ನಡೆದಿರುವ ಪೋಸ್ಟ್ವೊಂದು ವೈರಲ್ ಆಗಿದೆ. ಬೆಂಗಳೂರಿನ ಸಲಿಂಗಕಾಮಿ ದಂಪತಿಯಲ್ಲಿ (lesbian couple) ಒಬ್ಬಾಕೆ ಗರ್ಭಿಣಿಯಾಗಿದ್ದಾಳೆ ಎಂಬ ಪೋಸ್ಟ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದು ವ್ಯಾಪಕ ಚರ್ಚೆಗೂ ಕಾರಣವಾಗಿದೆ. ಇದೀಗ ಈ ಬಗ್ಗೆ ಫೋಟೋವೊಂದು ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗಿದೆ. ಕೆಲವರು ಈ ಸುದ್ದಿ ನಿಜವಲ್ಲ ಎಂದು ಹೇಳಿದ್ದಾರೆ. ಆದರೆ ಈ ಬಗ್ಗೆ […] - [ತಡರಾತ್ರಿ ಇಲಿ ಪಾಷಾಣ ಆರ್ಡರ್ ಮಾಡಿದ ಮಹಿಳೆಯ ಜೀವ ಉಳಿಸಿದ ಡೆಲಿವರಿ ಬಾಯ್!](https://veekshakavani.com/delivery-boy-saves-womans-life-after-ordering-rat-meat-late-at-night/): ಚೆನ್ನೈ, ಜನವರಿ 9: ಕೆಲವೊಮ್ಮೆ ನಮ್ಮ ಬದುಕಿನಲ್ಲಿ ಒಬ್ಬೊಬ್ಬರು ನಾನಾ ರೀತಿಯಲ್ಲಿ ಹೀರೋಗಳಾಗಿ ಪ್ರವೇಶ ಮಾಡುತ್ತಾರೆ. ಹೀರೋ ಎಂದರೆ ಹೀಗೇ ಇರಬೇಕು ಎಂಬುದು ಸಿನಿಮಾಗೆ ಮಾತ್ರ ಸೀಮಿತ. ನಿಜ ಜೀವನದ ಹೀರೋಗಳು ಯಾವ ರೂಪದಲ್ಲಿ ಬೇಕಾದರೂ ಇರಬಹುದು. ತಮಿಳುನಾಡಿನ ಮಹಿಳೆಯೊಬ್ಬರ ಪಾಲಿಗೆ ಬ್ಲಿಂಕಿಟ್ ಡೆಲಿವರಿ ಬಾಯ್ ಹೀರೋ ರೂಪದಲ್ಲಿ ಬಂದು ಕಾಪಾಡಿದ್ದಾರೆ. ಆಕೆ ತಡರಾತ್ರಿ ಬ್ಲಿಂಕಿಟ್ನಲ್ಲಿ 3 ಇಲಿ ಪಾಷಾಣದ ಪ್ಯಾಕೆಟ್ ಆರ್ಡರ್ ಮಾಡಿದ್ದರು. ಇದನ್ನು ನೋಡಿದಾಗ ಆ ಡೆಲಿವರಿ ಬಾಯ್ಗೆ ವಿಚಿತ್ರವೆನಿಸಿತ್ತು. ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಈ ಪಾಷಾಣ ಆರ್ಡರ್ ಮಾಡಿರಬಹುದಾ? ಎಂಬ ಅನುಮಾನ ಅವರನ್ನು ಕಾಡಿತ್ತು. ಹೀಗಾಗಿ, ಅವರು ಆ ಪಾಷಾಣವನ್ನು ಆಕೆಗೆ ಡೆಲಿವರಿ ನೀಡಲಿಲ್ಲ. ಅವರು ತೆಗೆದುಕೊಂಡ ಆ ಒಂದು ನಿರ್ಧಾರದಿಂದಾಗಿ ಆ ಮಹಿಳೆಯ ಪ್ರಾಣ ಉಳಿಯಿತು! ಆ ಡೆಲಿವರಿ ಬಾಯ್ ತನಗೇ ಅರಿವಿಲ್ಲದಂತೆ ಒಂದು ದುರಂತವನ್ನು ತಪ್ಪಿಸಿದ್ದಾರೆ. ತಡರಾತ್ರಿಯಲ್ಲಿ ಯಾರೂ 3 ಪ್ಯಾಕೆಟ್ ಇಲಿ ಪಾಷಾಣ ಆರ್ಡರ್ ಮಾಡುತ್ತಾರೆ ಎಂಬ ಅನುಮಾನ ಬಂದಿದ್ದರಿಂದಾಗಿಯೇ ಆಕೆಯ ಪ್ರಾಣ […] - [ರಸ್ತೆ ಅಪಘಾತ ತಡೆಯಲು ಹೊಸ ತಂತ್ರಜ್ಞಾನ ಪರಿಚಯಿಸಿದ ಕೇಂದ್ರ: 2026ಕ್ಕೆ ಎಲ್ಲ ವಾಹನಗಳಿಗೆ ಅಳವಡಿಕೆ](https://veekshakavani.com/new-technology-to-prevent-road-accidents-all-vehicles-to-be-installed-by-2026/): ಭಾರತದಾದ್ಯಂತ ಅಪಘಾತಗಳನ್ನು ತಪ್ಪಿಸಲು ಹೊಸ ತಂತ್ರಜ್ಞಾನವನ್ನು ಕೇಂದ್ರ ಸರ್ಕಾರ ಪರಿಚಯಿಸಿದೆ. ವಾಹನದಿಂದ ವಾಹನಕ್ಕೆ (V2V) ಸಂವಹನ ವ್ಯವಸ್ಥೆಗಳನ್ನು (V2V Tech Revolution) ಪರಿಚಯಿಸುವ ನಿಟ್ಟಿನಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನೂತನ ಕ್ರಮವನ್ನು ತಂದಿದೆ. ಈ ಯೋಜನೆ 2026 ರ ವೇಳೆಗೆ ಇದನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ. ಈ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. V2V ತಂತ್ರಜ್ಞಾನವು ರಸ್ತೆಗಳಲ್ಲಿ ವಾಹನಗಳ ಸುರಕ್ಷತೆಗೆ ಸಂಬಂಧಿಸಿದ ಮಾಹಿತಿಯನ್ನು ನೇರವಾಗಿ ಪರಸ್ಪರ ವಿನಿಮಯ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಈ ಸಂವಹನವು ಮೊಬೈಲ್ ನೆಟ್‌ವರ್ಕ್‌ಗಳು ಅಥವಾ ಇಂಟರ್ನೆಟ್ ಸಂಪರ್ಕವಿಲ್ಲದೆ, ಬದಲಾಗಿ, ವಾಹನಗಳು ಸ್ಥಳೀಯವಾಗಿ ಅಲ್ಪ-ಶ್ರೇಣಿಯ ವೈರ್‌ಲೆಸ್ ಸಿಗ್ನಲ್‌ಗಳನ್ನು ಬಳಸಿಕೊಂಡು ಸಂವಹನ ನಡೆಸುತ್ತವೆ. ನೆಟ್‌ವರ್ಕ್ ಇಲ್ಲದ ಪ್ರದೇಶಗಳಲ್ಲಿಯೂ ಸಹ ಈ ವ್ಯವಸ್ಥೆಯು ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅಭಿವೃದ್ಧಿಪಡಿಸುತ್ತಿರುವ ಚೌಕಟ್ಟಿನ ಅಡಿಯಲ್ಲಿ, ವಾಹನಗಳಿಗೆ ಮೀಸಲಾದ ಹಾರ್ಡ್‌ವೇರ್ ಮಾಡ್ಯೂಲ್ ಅಳವಡಿಸಲಾಗುವುದು. ಇದು […] - [ಪ್ರಭಾಸ್ ಫ್ಯಾನ್ಸ್ ಹುಚ್ಚಾಟ; ‘ದಿ ರಾಜಾ ಸಾಬ್’ ನೋಡಲು ಚಿತ್ರಮಂದಿರಕ್ಕೆ ಮೊಸಳೆ ತಂದ ಅಭಿಮಾನಿ](https://veekshakavani.com/prabhas-fans-are-crazy-fan-brings-crocodile-to-theatre-to-watch-the-raja-saab/): ಬಹುನಿರೀಕ್ಷಿತ ‘ದಿ ರಾಜಾ ಸಾಬ್’ (The Raja Saab) ಸಿನಿಮಾ ಬಿಡುಗಡೆ ಆಗಿದೆ. ಪ್ರಭಾಸ್ ಅಭಿಮಾನಿಗಳು ಈ ಸಿನಿಮಾವನ್ನು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಇದು ಹಾರರ್ ಸಿನಿಮಾ. ಪ್ರಭಾಸ್ (Prabhas) ಅವರು ಇದೇ ಮೊದಲ ಬಾರಿಗೆ ಹಾರರ್ ಸಿನಿಮಾ ಮಾಡಿರುವುದರಿಂದ ಹೈಪ್ ಹೆಚ್ಚಿದೆ. ಫಸ್ಟ್ ಡೇ ಫಸ್ಟ್ ಶೋ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಕೆಲವರು ಅತಿರೇಕವಾಗಿ ವರ್ತಿಸಿದ್ದಾರೆ. ಕೆಲವು ಅಭಿಮಾನಿಗಳು ಚಿತ್ರಮಂದಿರಕ್ಕೆ ಮೊಸಳೆ ತಂದಿದ್ದಾರೆ! ಮೊಸಳೆ (Crocodile) ಎಂದರೆ ನಿಜವಾದ ಮೊಸಳೆ ಅಲ್ಲ. ಬದಲಿಗೆ ಮೊಸಳೆಯ ಪ್ರತಿಕೃತಿಯನ್ನು ತರಲಾಗಿದೆ. ‘ದಿ ರಾಜಾ ಸಾಬ್’ ಸಿನಿಮಾದಲ್ಲಿ ಪ್ರಭಾಸ್ ಅವರು ಮೊಸಳೆಯ ಜೊತೆ ಫೈಟ್ ಮಾಡುವ ದೃಶ್ಯ ಇದೆ. ಅದನ್ನು ಚಿತ್ರಮಂದಿರದಲ್ಲಿ ಜನರು ಎಂಜಾಯ್ ಮಾಡುತ್ತಿದ್ದಾರೆ. ಈ ಮೊದಲು ಬಿಡುಗಡೆ ಆಗಿದ್ದ ಟ್ರೇಲರ್ನಲ್ಲಿ ಕೂಡ ಮೊಸಳೆ ಫೈಟ್ ಹೈಲೈಟ್ ಆಗಿತ್ತು. ಆ ದೃಶ್ಯವನ್ನು ಚಿತ್ರಮಂದಿರದಲ್ಲಿ ಮರುಸೃಷ್ಟಿ ಮಾಡಲು ಅಭಿಮಾನಿಗಳು ನಕಲಿ ಮೊಸಳೆಯನ್ನು ಹೊತ್ತುಕೊಂಡು ಚಿತ್ರಮಂದಿರಕ್ಕೆ ಬಂದಿದ್ದಾರೆ. ಚಿತ್ರಮಂದಿರದಲ್ಲಿ ಪ್ರಭಾಸ್ ಅಭಿಮಾನಿಗಳು ಎಂಜಾಯ್ ಮಾಡುತ್ತಿದ್ದಾರೆ. ಮೊಸಳೆಯನ್ನು ಹೊತ್ತುಕೊಂಡು […] - [ಕೇರಳದಲ್ಲಿ ಶಾಲಾ ಬ್ಯಾಗ್ ಗಳ ತೂಕ ಇಳಿಕೆ..! ಇನ್ಮುಂದೆ ಇರಲ್ಲ ’ಲಾಸ್ಟ್ ಬೆಂಚ್’..!!](https://veekshakavani.com/weight-of-school-bags-reduced-in-kerala-no-more-last-bench/): ತಿರುವನಂತಪುರಂ: ಶಾಲಾ ಮಕ್ಕಳ ಬೆನ್ನ ಮೇಲಿನ ಭಾರ ಇಳಿಸಲು ಮತ್ತು ತರಗತಿಯಲ್ಲಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಲು ಕೇರಳ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಶಾಲಾ ಬ್ಯಾಗ್‌ಗಳ ತೂಕ ಇಳಿಕೆ ಹಾಗೂ ತರಗತಿಗಳಲ್ಲಿ ಲಾಸ್ಟ್ ಬೆಂಚ್ ಪರಿಕಲ್ಪನೆಯನ್ನು ಹೋಗಲಾಡಿಸುವ ನೂತನ ಶಿಕ್ಷಣ ಸುಧಾರಣಾ ವರದಿಗೆ ರಾಜ್ಯ ಪಠ್ಯಕ್ರಮ ಸುಧಾರಣಾ ಸಮಿತಿಯು ಅನುಮೋದನೆ ನೀಡಿದೆ. ಏನಿದು ಹೊಸ ಯೋಜನೆ? ಸಾಮಾನ್ಯವಾಗಿ ತರಗತಿಯಲ್ಲಿ ಹಿಂಬದಿಯ ಸಾಲಿನಲ್ಲಿ ಕೂರುವ ಮಕ್ಕಳನ್ನು ‘ಕಲಿಕೆಯಲ್ಲಿ ಹಿಂದುಳಿದವರು’ ಎಂದು ಗುರುತಿಸುವ ಪದ್ಧತಿ ಇದೆ. ಇದನ್ನು ತಪ್ಪಿಸಲು ತರಗತಿಯ ಆಸನ ವ್ಯವಸ್ಥೆಯನ್ನು ಬದಲಾಯಿಸಲಾಗುತ್ತದೆ. ಇನ್ನು ಮುಂದೆ ತರಗತಿಗಳಲ್ಲಿ ಎಲ್ಲ ಮಕ್ಕಳೂ ಶಿಕ್ಷಕರಿಗೆ ಸಮಾನವಾಗಿ ಕಾಣುವಂತೆ ‘ಯು’ ಆಕಾರದ ಅಥವಾ ವೃತ್ತಾಕಾರದ ಆಸನ ವ್ಯವಸ್ಥೆಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ. ಈ ಕರಡು ವರದಿಯನ್ನು SCERT ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದ್ದು, ಸಾರ್ವಜನಿಕರು ಜನವರಿ 20ರೊಳಗೆ ತಮ್ಮ ಸಲಹೆಗಳನ್ನು ನೀಡಬಹುದಾಗಿದೆ. ಸಾರ್ವಜನಿಕರ ಅಭಿಪ್ರಾಯಗಳನ್ನು ಕ್ರೋಢೀಕರಿಸಿದ ನಂತರ, ಮುಂಬರುವ 2026-27ನೇ ಶೈಕ್ಷಣಿಕ ಸಾಲಿನಿಂದಲೇ ಈ ಬದಲಾವಣೆಗಳನ್ನು ಜಾರಿಗೆ ತರಲು […] - [2 ಕೋಟಿ ರೂ. ವಿಮಾ ಹಣಕ್ಕಾಗಿ ಪ್ರಿಯಕರನೊಂದಿಗೆ ಸೇರಿ ಪತಿಯ ಹತ್ಯೆಗೈದ ಖತರ್ನಾಕ್ ಪತ್ನಿ..!!](https://veekshakavani.com/dangerous-wife-kills-husband-with-lover-for-rs-2-crore-insurance-money/): ನಿಜಾಮಾಬಾದ್‌(ತೆಲಂಗಾಣ): 2 ಕೋಟಿ ರೂ.ಗೂ ಹೆಚ್ಚು ಮೌಲ್ಯದ ವಿಮಾ ಹಣವನ್ನು ಪಡೆಯುವ ದುರಾಸೆಯಲ್ಲಿ ತನ್ನ ಪತಿಯ ಕೊಲೆ ಮಾಡಿರುವುದಾಗಿ ಮಹಿಳೆಯೊಬ್ಬಳು ತಪ್ರೊಪ್ಪಿಕೊಂಡಿದ್ದಾಳೆ. ಆರೋಪಿ ಸೌಮ್ಯಾ ತನ್ನ ಪ್ರಿಯಕರನೊಂದಿಗೆ ಕೊಲೆಗೆ ಯೋಜನೆ ರೂಪಿಸಿ, ಗುತ್ತಿಗೆ ಕೊಲೆಗಾರರನ್ನು ನೇಮಿಸಿಕೊಂಡಿದ್ದಳು, ಹತ್ಯೆಯ ನಂತರ ಅದನ್ನು ಹೃದಯಾಘಾತ ಎಂದು ಬಿಂಬಿಸಲು ಪ್ರಯತ್ನಿಸಿದಳು ಎಂದು ಪೊಲೀಸರು ತಿಳಿಸಿದ್ದಾರೆ. ಮತ್ತೂರು ಮಂಡಲದ ಬೋರ್ಗಮ್ (ಕೆ) ಗ್ರಾಮದ ನಿವಾಸಿಯಾ ಪಲ್ನಾಟಿ ರಮೇಶ್ ಎನ್ನುವವರು ಸೌಮ್ಯ ಅವರನ್ನು ಸುಮಾರು 13 ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದರು. ನಂತರ ದಂಪತಿಗಳು ನಿಜಾಮಾಬಾದ್‌ ಜಿಲ್ಲೆಯಲ್ಲಿ ವಾಸಿಸುತ್ತಿದ್ದರು. ರಮೇಶ್ ಖಾಸಗಿ ಹಣಕಾಸು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು, ಸೌಮ್ಯ ನಿಜಾಮಾಬಾದ್‌ನ ಖಾಸಗಿ ಶಾಲೆಯಲ್ಲಿ ಉದ್ಯೋಗದಲ್ಲಿದ್ದಳು. ತನಿಖಾಧಿಕಾರಿಗಳ ಪ್ರಕಾರ, ಸೌಮ್ಯಾ ಅದೇ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ದೈಹಿಕ ಶಿಕ್ಷಣ ಶಿಕ್ಷಕ ದಿಲೀಪ್ ಜತೆ ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದಳು.ಈ ಸಂಬಂಧದ ಬಗ್ಗೆ ರಮೇಶ್ ಮತ್ತು ಸೌಮ್ಯಾ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು, ಬಳಿಕ ಪತಿಯನ್ನು ನನ್ನು ಕೊಲ್ಲಲು ಸಂಚು ರೂಪಿಸಿದ್ದಳು ಎನ್ನಲಾಗಿದೆ. […] - [ರಾಜ್ಯ ರಾಜಕಾರಣದ ಮೇಲೆ ಕಣ್ಣು: ಹೇಗಿದೆ ಗೊತ್ತಾ ನಿಖಿಲ್, ಪ್ರತಾಪ್, ಸುಮಲತಾ ಪ್ಲ್ಯಾನ್?](https://veekshakavani.com/eyes-on-state-politics-do-you-know-how-nikhil-pratap-and-sumalathas-plan-is/): ಬೆಂಗಳೂರು, ಜನವರಿ 09: 2028ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಹಲವು ನಾಯಕರು ಈಗಿನಿಂದಲೇ ತಯಾರಿ ಆರಂಭಿಸಿದ್ದಾರೆ . ಯಾವ ಕ್ಷೇತ್ರದಲ್ಲಿ ತಾವು ಚುನಾವಣೆಗೆ ಸ್ಪರ್ಧಿಸಿದ್ರೆ ಒಳಿತು, ರಣತಂತ್ರ ಹೇಗಿರಬೇಕು ಎಂಬ ಬಗ್ಗೆ ಲೆಕ್ಕಾಚಾರ ನಡೆಸುತ್ತಿದ್ದಾರೆ. ಈ ಸಾಲಿನಲ್ಲಿ ಈಗಾಗಲೇ ಬಿಜೆಪಿಯ ಪ್ರತಾಪ್ ಸಿಂಹ ಮತ್ತು ಸುಮಲತಾ ಹೆಸರು ಕೇಳಿಬಂದಿತ್ತು. ಇದಕ್ಕೀಗ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಹೆಸರೂ ಸೇರ್ಪಡೆಯಾಗಿದೆ. ಹ್ಯಾಟ್ರಿಕ್ ಸೋಲಿನ ಬಳಿಕ ಪುಟಿದೇಳಲು ಜೆಡಿಎಸ್ ಯುವ ನಾಯಕ ತೆರೆಮರೆಯ ತಯಾರಿ ನಡೆಸಿದ್ದಾರೆ. ಮಂಡ್ಯ ಅಥವಾ ಮದ್ದೂರಿನಿಂದ ನಿಖಿಲ್ ಸ್ಪರ್ಧೆ?2028ರ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ನಿಖಿಲ್, ಮಂಡ್ಯಕ್ಕೆ ಮತ್ತೆ ಎಂಟ್ರಿ ಕೊಡಲು ಪ್ಲ್ಯಾನ್ ಮಾಡಿದ್ದಾರೆ. 2019ರ ಲೋಕಸಭಾ ಚುನಾವಣೆಗೆ ಮಂಡ್ಯದಿಂದ ಸ್ಪರ್ಧಿಸಿದ್ದ ನಿಖಿಲ್ ಪರಾಭವಗೊಂಡಿದ್ದರು. ಈ ನಡುವೆ ಇಲ್ಲಿಂದಲೇ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಬೇಕು ಎಂಬ ಇರಾದೆ ಇವರದ್ದು ಎನ್ನಲಾಗಿದೆ. ಹೀಗಾಗಿ ಮಂಡ್ಯದಲ್ಲೇ ಮನೆ ಮಾಡಲು ನಿಖಿಲ್ ಕುಮಾರಸ್ವಾಮಿ ಮುಂದಾಗಿದ್ದು, ಮಂಡ್ಯ ಅಥವಾ ಮದ್ದೂರು ವಿಧಾನಸಭಾ ಕ್ಷೇತ್ರದ ಮೇಲೆ […] - [ಭೀಕರ ಅಪಘಾತ, ಶಬರಿಮಲೆಗೆ ಹೋಗಿ ಬರುತ್ತಿದ್ದ ಯಲಬುರ್ಗಾ ಮೂಲದ ನಾಲ್ವರು ಸ್ಥಳದಲ್ಲೇ ಸಾವು](https://veekshakavani.com/four-people-from-yelaburga-who-were-on-their-way-to-sabarimala-died-on-the-spot/): ತುಮಕೂರು, ಜನವರಿ 9: ತುಮಕೂರು (Tumkur) ಜಿಲ್ಲೆಯ ಕೋರಾ ಸಮೀಪದ ವಸಂತನರಸಾಪುರ ಕೈಗಾರಿಕಾ ಪ್ರದೇಶದ ಬಳಿ ಭೀಕರ ಅಪಘಾತ (Accident) ಸಂಭವಿಸಿ ನಾಲ್ವರು ಅಯ್ಯಪ್ಪ ಭಕ್ತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಿಂತಿದ್ದ ಲಾರಿಗೆ ಕ್ರೂಸರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ಕ್ರೂಸರ್‌ನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಅಯ್ಯಪ್ಪ ಭಕ್ತರು ಮೃತಪಟ್ಟಿದ್ದು, ಇವರಲ್ಲಿ ಒಬ್ಬ ಬಾಲಕಿ ಕೂಡ ಸೇರಿದ್ದಾಳೆ. ಅಪಘಾತದಲ್ಲಿ ಇನ್ನೂ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ಕೊಪ್ಪಳ ಜಿಲ್ಲೆ ಯಲಬುರ್ಗಾ ಮೂಲದ ನಿವಾಸಿಗಳು ಎಂದು ಗುರುತಿಸಲಾಗಿದೆ. ಸಾಕ್ಷಿ (7), ವೆಂಕಟೇಶಪ್ಪ (30), ಮಾರತಪ್ಪ (35) ಹಾಗೂ ಗವಿಸಿದ್ದಪ್ಪ (40) ಇವರೇ ಮೃತ ದುರ್ದೈವಿಗಳು. ಗಾಯಾಳುಗಳು ಪ್ರಶಾಂತ್ (32), ಪ್ರವೀಣ್ ಕುಮಾರ್ (28), ರಾಜಪ್ಪ (45), ಉಲಗಪ್ಪ (32), ರಾಕೇಶ್ (24) ತಿರುಪತಿ (33), ಶ್ರೀನಿವಾಸ್ (32) ಎಂದು ತಿಳಿದುಬಂದಿದೆ. ಶಬರಿಮಲೆ ಅಯ್ಯಪ್ಪ ದರ್ಶನ ಮುಗಿಸಿಕೊಂಡು ವಾಪಸ್ ಆಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ […] - [ಮಲಯಾಳ ಭಾಷಾ ವಿಧೇಯಕ; ಕಾಂಗ್ರೆಸ್ ನಾಯಕರು ಕನ್ನಡಿಗರ ಪರ ಧ್ವನಿ ಎತ್ತುತ್ತಾರಾ?: ಆರ್.ಅಶೋಕ್](https://veekshakavani.com/malayalam-language-bill-will-congress-leaders-raise-their-voice-in-favor-of-kannadigas-r-ashok/): ಬೆಂಗಳೂರು: ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳ ಕಲಿಕೆ ಕಡ್ಡಾಯಗೊಳಿಸುವ ಅಲ್ಲಿನ ಸರ್ಕಾರದ ಪ್ರಸ್ತಾಪಿತ ‘ಮಲಯಾಳ ಭಾಷಾ ವಿಧೇಯಕ-2025′ ಜಾರಿಗೊಳಿಸುವುದರ ವಿರುದ್ಧ ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ನಾಯಕರು ಧ್ವನಿ ಎತ್ತುತ್ತಾರಾ? ಕನ್ನಡಿಗರ ಪರ ನಿಲ್ಲುತ್ತಾರಾ?’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಪ್ರಶ್ನಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅಶೋಕ್‌, ‘ಕೇರಳದಲ್ಲಿ ಆನೆ ತುಳಿತಕ್ಕೆ ಒಳಗಾಗಿ ಸತ್ತರೂ, ವಯನಾಡಿನಲ್ಲಿ ಪ್ರಕೃತಿ ವಿಕೋಪ ಉಂಟಾದರೂ, ಮಲಯಾಳಿಗಳ ಪರವಾಗಿ ಕರ್ನಾಟಕ ಸರ್ಕಾರದ ಮೇಲೆ ಸವಾರಿ ಮಾಡುವ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ 1ರಿಂದ 10ನೇ ತರಗತಿಯವರೆಗೆ ಮಲಯಾಳ ಪ್ರಥಮ ಭಾಷೆಯಾಗಿ ಕಡ್ಡಾಯಗೊಳಿಸುವ ಕೇರಳ ಸರ್ಕಾರದ ಮಲಯಾಳಿ ಭಾಷಾ ಮಸೂದೆ-2025ರ ವಿರುದ್ಧ ಧ್ವನಿ ಎತ್ತುವ ಮೂಲಕ ಈಗ ಕನ್ನಡಿಗರ ಪರ ನಿಲ್ಲುತ್ತಾರಾ? ಎಂದು ಕೇಳಿದ್ದಾರೆ. ಕೆ.ಸಿ. ವೇಣುಗೋಪಾಲ್ ಹೃದಯ ಗಡಿನಾಡ ಕನ್ನಡಿಗರ ಪರ ಮಿಡಿಯುತ್ತಾ? ಬಂಡೀಪುರದಲ್ಲಿ ರಾತ್ರಿ […] - [KSTDCನಿಂದ ವಿಶೇಷ ಪ್ಯಾಕೇಜ್: 20% ರಿಯಾಯಿತಿ, ಎಲ್ಲಿಗೆಲ್ಲ ಟೂರ್](https://veekshakavani.com/special-package-from-kstdc-20-discount-tour-everywhere/): ದಕ್ಷಿಣ ಭಾರತ ಪ್ರವಾಸಗಳ ತವರು, ( KSTDC South India Tour) ಇಲ್ಲಿರುವಷ್ಟು ಪ್ರಕೃತಿ ಸೌಂದರ್ಯದ ಸೋಬಗು ಎಲ್ಲಿಯೂ ಇರಲು ಸಾಧ್ಯವಿಲ್ಲ. ಅದರಲ್ಲೂ ಕರ್ನಾಟಕ, ಕೇರಳ, ತಮಿಳುನಾಡು ತನ್ನದೇ ಆಗಿರುವ ಅದ್ಭುತ ಪ್ರಕೃತಿ ಸೌಂದರ್ಯ ಹೊಂದಿದೆ. ಆದರೆ ಇಲ್ಲಿ ಹೋಗುವುದಕ್ಕೆ ತುಂಬಾ ಖರ್ಚು ಆಗುತ್ತದೆ ಎಂಬುದು ಅನೇಕರ ಚಿಂತೆ. ಅದಕ್ಕೆ kstdc (ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ) ಆಗ್ಗಾಗೆ ವಿಶೇಷ ಪ್ಯಾಕೇಜ್ಗಳನ್ನು ನೀಡುತ್ತದೆ. ಇದೀಗ ಹೊಸ ವರ್ಷದ ಎರಡನೇ ವಾರ ವಿಶೇಷ ಪ್ಯಾಕೇಜ್ ಒಂದನ್ನು ಬಿಡುಗಡೆ ಮಾಡಿದೆ. ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಪ್ರವಾಸೋದ್ಯಮ ತಾಣಗಳಾದ ಮೈಸೂರು, ಊಟಿ ಮತ್ತು ಕೊಡೈಕೆನಾಲ್ ಪ್ರವಾಸ ಹೋಗಲು ಬಯಸುವವರಿಗೆ ಇದೊಂದು ಉತ್ತಮ ಅವಕಾಶ. ಈ ಪ್ಯಾಕೇಜ್ ಮೂಲಕ ವಿಶೇಷ ಸ್ಥಳಗಳನ್ನು ನೋಡಬಹುದು. ಒಂದು ವೇಳೆ ಈ ಪ್ಯಾಕೇಜ್ ಆಯ್ಕೆ ಮಾಡಿಕೊಂಡರೆ 20% ರಿಯಾಯಿತಿ ಇರುತ್ತದೆ. ಪ್ರವಾಸದ ಮಾರ್ಗ, ಸ್ಥಳ, ಟಿಕೆಟ್ ದರ, ಸಂಚಾರ ಸಮಯ, ಪ್ಯಾಕೇಜ್ ಬುಕ್ಕಿಂಗ್ ಹೇಗೆ ಎಂಬ ಮಾಹಿತಿ ಇಲ್ಲಿದೆ […] - [ರೈಲಿನ ಸಿಂಕ್ನಲ್ಲಿ ಸಿಲುಕಿದ್ದ ಕಸವನ್ನು ಕೈಯಿಂದ ತೆಗೆದ ಪ್ರಯಾಣಿಕನಿಗೆ ಭಾರಿ ಮೆಚ್ಚುಗೆ](https://veekshakavani.com/passenger-gets-a-lot-of-praise-for-removing-garbage-from-the-sink-of-a-train/): ನವದೆಹಲಿ, ಜನವರಿ 09: ಭಾರತೀಯ ರೈಲ್ವೆ(Indian Railways) ನಿಮ್ಮ ಆಸ್ತಿ, ಅದನ್ನು ಹಾನಿ ಮಾಡಬೇಡಿ, ಸ್ವಚ್ಛವಾಗಿಡಲು ಸಹಾಯ ಮಾಡಿ ಎನ್ನುವ ಸಾಲುಗಳನ್ನು ನೀವು ರೈಲಿನಲ್ಲಿ ಪ್ರಯಾಣಿಸಿದ್ದರೆ ನೋಡಿಯೇ ಇರುತ್ತೀರಿ. ಆದರೆ ಹೆಚ್ಚಿನ ಮಂದಿ ರೈಲಿನ ಸ್ವಚ್ಛತೆ ಬಗ್ಗೆ ಗಮನಕೊಡುವುದಿಲ್ಲ. ಇವತ್ತು ಹತ್ತಿ ನಾಳೆ ಬೆಳಗ್ಗೆ ಇಳಿದು ಹೋಗ್ತೀವಿ ನಾವ್ಯಾಕೆ ರೈಲನ್ನು ಸ್ವಚ್ಛವಾಗಿಡಬೇಕು ಎನ್ನುವ ಮನಸ್ಥಿತಿ ಹಲವು ಮಂದಿಗಿರುತ್ತದೆ. ಆದರೆ ಈ ಯುವಕನ ಕೆಲಸಕ್ಕೆ ಮೆಚ್ಚುಗೆಯ ಸುರಿಮಳೆ ಸಿಕ್ಕಿದೆ. ಹಲವು ಬಾರಿ ರೈಲಿನ ವಾಶ್ರೂಂನಲ್ಲಿ ನಲ್ಲಿ ಸರಿ ಇರುವುದಿಲ್ಲ, ಕೆಲವೊಮ್ಮೆ ನೀರೇ ಬರುವುದಿಲ್ಲ, ಕೆಲವೊಮ್ಮೆ ಸಿಂಕ್ನಲ್ಲಿ ನೀರು ತುಂಬಿ ಹೋಗಿರುತ್ತದೆ. ಆದರೆ ಪ್ರಯಾಣಿಕರು ಅದರ ಬಗ್ಗೆ ಎಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ, ರೈಲ್ವೆಗೆ ದೂರು ಕೊಡುವುದೂ ಇಲ್ಲ, ಆಗ ವ್ಯವಸ್ಥೆ ಸರಿಯಾಗುವುದಾದರೂ ಹೇಗೆ?. ರೈಲಿನ ಸಿಂಕ್ನಲ್ಲಿ ಪ್ಲಾಸ್ಟಿಕ್ ಸಿಲುಕಿ ಅದರಲ್ಲಿ ನೀರು ನಿಂತುಕೊಂಡಿತ್ತು, ಆಗ ಈ ಯುವಕ ನೀರಿನಲ್ಲಿರುವ ಪ್ಲಾಸ್ಟಿಕ್ ಅನ್ನು ಕೈಯಲ್ಲೇ ತೆಗೆದು, ನೀರು ಸರಾಗವಾಗಿ ಕೆಳಗೆ ಇಳಿಯಲು ಅವಕಾಶ ಮಾಡಿಕೊಟ್ಟಿದ್ದಾನೆ. ಈ […] - [ಆಸ್ಕರ್ ರೇಸ್ನಲ್ಲಿ ಸ್ಥಾನ ಪಡೆದ ‘ಕಾಂತಾರ: ಚಾಪ್ಟರ್ 1’ ಸಿನಿಮಾ](https://veekshakavani.com/kantara-chapter-1-enters-oscar-race/): ರಿಷಬ್ ಶೆಟ್ಟಿ ನಟನೆಯ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಈಗ ಆಸ್ಕರ್ ರೇಸ್ನಲ್ಲಿ ಸ್ಥಾನ ಪಡೆದಿದೆ. ಇದು ಭಾರತದಿಂದ ಅಧಿಕೃತವಾಗಿ ಆಯ್ಕೆ ಆದ ಸಿನಿಮಾ ಅಲ್ಲ. ಪ್ರತ್ಯೇಕವಾಗಿ ಅರ್ಜಿ ಸಲ್ಲಿಕೆ ಮಾಡಿ ಸಿನಿಮಾ ರೇಸ್ಗೆ ಪ್ರವೇಶ ಪಡೆದುಕೊಂಡಿದೆ. ‘ಅತ್ಯುತ್ತಮ ಚಿತ್ರ’ ರೇಸ್ನಲ್ಲಿ ರಿಷಬ್ ನಿರ್ದೇಶನದ ಚಿತ್ರ ಇದೆ ಎಂಬುದು ಕನ್ನಡಿಗರ ಪಾಲಿಗೆ ಹೆಮ್ಮೆಯ ಸಂಗತಿ. ಹಾಲಿವುಡ್ ಸಿನಿಮಾಗಳ ಜೊತೆ ರಿಷಬ್ ಸಿನಿಮಾ ಸ್ಪರ್ಧೆ ಮಾಡಬೇಕಿದೆ. ರಿಷಬ್ ಶೆಟ್ಟಿ ಅವರು ‘ಕಾಂತಾರ’ ಸಿನಿಮಾ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು. ಆ ಬಳಿಕ ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾ ನಿರ್ದೇಶನ ಮಾಡಿದರು. ಈ ಚಿತ್ರವನ್ನು ಜನರು ಇಷ್ಟಪಟ್ಟಿದ್ದು, ಬಾಕ್ಸ್ ಆಫೀಸ್ನಲ್ಲಿ 850 ಕೋಟಿ ರೂಪಾಯಿಗೂ ಹೆಚ್ಚಿನ ಬಿಸ್ನೆಸ್ ಮಾಡಿದೆ.ಈ ಸಿನಿಮಾ ಒಟಿಟಿಯಲ್ಲೂ ಪ್ರಸಾರ ಕಂಡಿದೆ. ಹೀಗಿರುವಾಗಲೇ ಸಿನಿಮಾ ಆಸ್ಕರ್ ರೇಸ್ನಲ್ಲಿ ಸ್ಥಾನ ಪಡೆದುಕೊಂಡಿದೆ. ‘ಕಾಂತಾರ: ಚಾಪ್ಟರ್ 1’ ಚಿತ್ರವನ್ನು ನಿರ್ಮಾಣ ಮಾಡಿದ್ದು ವಿಜಯ್ ಕಿರಗಂದೂರು ಅವರು ‘ಹೊಂಬಾಳೆ ಫಿಲ್ಮ್ಸ್’. ಈ ಸಂಸ್ಥೆ ಪ್ರಸ್ತುತಪಡಿಸಿದ […] - [Year of Reforms: 2025ರಲ್ಲಿ ಸರ್ಕಾರ ತೆಗೆದುಕೊಂಡ ಪ್ರಮುಖ ಸುಧಾರಣೆಗಳಿವು…](https://veekshakavani.com/year-of-reforms-these-are-the-major-reforms-taken-by-the-government-in-2025/): 2025ರ ವರ್ಷ ಬಹಳ ಗುರುತರ ಎನಿಸುವ ಅವಧಿ. ಇದನ್ನು ಸುಧಾರಣೆಗಳ ವರ್ಷ ಎಂದೂ ಪರಿಗಣಿಸಬಹುದು. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ದೂರದೃಷ್ಟಿಯಲ್ಲಿ ವಿವಿಧ ರೀತಿಯ ರಚನಾತ್ಮಕ ಬದಲಾವಣೆಗಳನ್ನು 2025ರಲ್ಲಿ ಮಾಡಲಾಗಿದೆ. ಭಾರತದ ಆರ್ಥಿಕತೆ, ಆಡಳಿತ ಮತ್ತು ಸಾಮಾಜಿಕ ಭದ್ರತೆಯ ಚೌಕಟನ್ನು ಬಲಪಡಿಸುವ ಕೆಲಸ ಮಾಡಲಾಗಿದೆ. ಕಳೆದ ವರ್ಷ ಸರ್ಕಾರ ಕೈಗೊಂಡ ಕೆಲ ಪ್ರಮುಖ ಸುಧಾರಣೆಗಳು ಯಾವುವು ಎಂದು ನೋಡುವುದಾದರೆ, ಇಲ್ಲಿದೆ ಮಾಹಿತಿ: 2025-26ರ ಬಜೆಟ್ನಲ್ಲಿ ಸರ್ಕಾರ ಆದಾಯ ತೆರಿಗೆ ರಿಲೀಫ್ ಕೊಟ್ಟಿತು. ಮಧ್ಯಮ ವರ್ಗದವರು ನಿರಾಳಗೊಳ್ಳುವಂತೆ ಮಾಡಿತು. 12 ಲಕ್ಷ ರೂವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ಘೋಷಿಸಿತು. 75,000 ರೂಗಳ ಸ್ಟ್ಯಾಂಡರ್ಡ್ ಡಿಡಕ್ಷನ್ ಒಳಗೊಂಡರೆ 12.75 ಲಕ್ಷ ರೂವರೆಗಿನ ಆದಾಯ ಹೊಂದಿದವರು ಒಂದೂ ಪೈಸೆ ಟ್ಯಾಕ್ಸ್ ಕಟ್ಟಬೇಕಿಲ್ಲ. ಅಂಥ ಮಹತ್ವದ ಕ್ರಮ ತೆಗೆದುಕೊಳ್ಳಲಾಗಿದೆ. ಹಳೆಯ 1961ರ ಆದಾಯ ತೆರಿಗೆ ಕಾನೂನು ಹೋಗಿ, 2025ರಿಂದ ಹೊಸದು ಬಂದಿದೆ. ಇದರಿಂದ ತೆರಿಗೆ ಪಾವತಿ ಸುಲಭ, ಪಾರದರ್ಶಕತೆ ಹೆಚ್ಚು, ತಂತ್ರಜ್ಞಾನ ಬೆಂಬಲದ ಆಡಳಿತಕ್ಕೆ […] - [ಶಕ್ತಿ ಯೋಜನೆಯಲ್ಲಿ ತಪ್ಪದ ಆಧಾರ್ ಕಾರ್ಡ್ ದುರ್ಬಳಕೆ: ನಿರ್ವಾಹಕರಿಗೆ ತಲೆನೋವಾದ ಫೇಕ್ ಆಧಾರ್ ಕಾರ್ಡ್](https://veekshakavani.com/fake-aadhaar-card-misused-in-shakti-scheme/): ಬೆಂಗಳೂರು, ಜನವರಿ 08: ಶಕ್ತಿ ಯೋಜನೆ (Shakti Yojana) ದುರ್ಬಳಕೆ ಇನ್ನೂ ತಪ್ಪಿಲ್ಲ. ಆಧಾರ್ ಕಾರ್ಡ್ಗಳನ್ನ ಫೇಕ್ (Fake Aadhaar cards) ಮಾಡಿ ಕೆಲ ಮಹಿಳೆಯರು ಸಂಚರಿಸುತ್ತಿದ್ದು, ಇದರಿಂದ ನಿರ್ವಾಹಕರಿಗೆ ತಲೆ ನೋವು ತಪ್ಪಿಲ್ಲ. ಬೇರೆ ರಾಜ್ಯದ ಮಹಿಳೆಯರಿಗೆ ಕನ್ನಡದಲ್ಲಿ ಯಾರು ಆಧಾರ್ ಕಾರ್ಡ್ ಮಾಡಿಕೊಡುತ್ತಿದ್ದಾರೋ ಗೊತ್ತಿಲ್ಲ, ಆದರೆ ಇದರಿಂದ ಇತ್ತ ಸರ್ಕಾರಕ್ಕೂ ತಲೆ ನೋವಾಗಿದೆ. ಶಕ್ತಿ ಯೋಜನೆಯಿಂದ ಸರ್ಕಾರಕ್ಕೆ ಒಳ್ಳೆಯ ಹೆಸರು ಬಂದಿದೆ. ನೌಕರರು ಕೂಡ ಅಷ್ಟೇ ಕಷ್ಟ ಪಟ್ಟು ಕೆಲಸ ಮಾಡ್ತಿದ್ದಾರೆ. ಅದರ ಭಾಗವಾಗಿ ಪ್ರಯಾಣಿಕರು ನೌಕರರ ಮೇಲೆ ಹಲ್ಲೆ ಮಾಡಿರುವ ಘಟನೆಗಳು ನಡೆದಿವೆ. ಇನ್ನು ಹೊರ ರಾಜ್ಯದಿಂದ ಬಂದ ಮಹಿಳೆಯರಿಂದ ಶಕ್ತಿ ಯೋಜನೆ ದುರ್ಬಳಕೆಯಾಗುತ್ತಿರುವ ಆರೋಪ ಕೇಳಿ ಬಂದಿದೆ. ಆಧಾರ್ ಕಾರ್ಡ್ನ ಒಂದು ಬದಿ ಒಂದು ನಂಬರ್ ಇದ್ದರೆ, ಇನ್ನೊಂದು‌ ಕಡೆ ಬೇರೆ ನಂಬರ್ ಇದೆ. ರಾಜ್ಯದ ಮಹಿಳೆಯರು ಕನ್ನಡದಲ್ಲಿ ಆಧಾರ್ ಪ್ರಿಂಟ್ ಮಾಡಿಸಿಕೊಂಡು ಫೇಕ್ ಆಧಾರ್ ಕಾರ್ಡ್ ಬಳಸಿ ಮೋಸದಿಂದ ಸಂಚರಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ […] - [ಪ್ರೇಯಸಿಯನ್ನು ಮದುವೆಯಾಗಲು ಅಪಘಾತದ ನಾಟಕವಾಡಿದ ಯುವಕನ ಪ್ಲಾನ್ ಉಲ್ಟಾ ಆಗಿದ್ದು ಹೇಗೆ?](https://veekshakavani.com/how-did-a-young-mans-plan-to-marry-his-girlfriend-backfire/): ತಿರುವನಂತಪುರಂ, ಜನವರಿ 8: ಕೇರಳದಲ್ಲಿ ಕೆಲವು ದಿನಗಳ ಹಿಂದೆ ಅಪಘಾತವೊಂದು ನಡೆದಿತ್ತು. ಆರಂಭದಲ್ಲಿ ಇದೊಂದು ಗಂಭೀರ ರಸ್ತೆ ಅಪಘಾತ (Accident) ಎಂದು ಪೊಲೀಸರು ಕೂಡ ನಂಬಿದ್ದರು. ಆದರೆ, ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಈ ಘಟನೆಯನ್ನು ಉದ್ದೇಶಪೂರ್ವಕವಾಗಿ ಪ್ಲಾನ್ ಮಾಡಲಾಗಿದೆ ಎಂಬುದನ್ನು ಪತ್ತೆಹಚ್ಚಿದ್ದಾರೆ. ಆರೋಪಿಗಳಾದ ಕೋನ್ನಿ ಬಳಿಯ ಮಮ್ಮೂಡು ಮೂಲದ ರಂಜಿತ್ ರಾಜನ್ (24) ಮತ್ತು ಎರಡನೇ ಆರೋಪಿ ಅಜಾಸ್ (19) ಅವರನ್ನು ವಶಕ್ಕೆ ಪಡೆಯಲಾಯಿತು. ತನ್ನ ಗೆಳತಿಯನ್ನು ಮೆಚ್ಚಿಸಿ ಅವಳನ್ನು ಮದುವೆಯಾಗಬೇಕೆಂದು ಕನಸು ಕಂಡಿದ್ದ ಪ್ರೇಮಿ ಅದಕ್ಕಾಗಿ ಆಕೆಯ ಮನೆಯವರನ್ನು ಮೆಚ್ಚಿಸಲು ಅಪಘಾತದ ನಾಟಕವನ್ನು ಆಡಿದನು. ಆ ಯುವತಿ ಹೋಗುತ್ತಿದ್ದ ಸ್ಕೂಟಿಗೆ ತಾನೇ ಅಪಘಾತ ಮಾಡಿಸಿದನು. ಬಳಿಕ ತಾನೇ ಆಕೆಯನ್ನು ರಕ್ಷಿಸಿ ಹೀರೋ ಆಗಲು ಪ್ಲಾನ್ ಮಾಡಿದ್ದನು. ಈ ವಿಚಿತ್ರ ಘಟನೆ ಕೇರಳದ ಪಥನಂತಿಟ್ಟದಲ್ಲಿ ನಡೆದಿದೆ. ಕೇರಳದ ಪಥನಂತಿಟ್ಟದ ರಂಜಿತ್ ರಾಜನ್ ಎಂಬ ಯುವಕ ಒಬ್ಬಳು ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ ಆಕೆಯ ಮನೆಯವರಿಗೆ ತನ್ನ ಬಗ್ಗೆ ಒಳ್ಳೆಯ ಅಭಿಪ್ರಾಯ […] - [ಕುಂದಾಪುರದಲ್ಲಿ 5 ಕೋತಿಗಳ ಸಾವು: ಮಲೆನಾಡಲ್ಲಿ ಮಂಗನ ಕಾಯಿಲೆ ಆತಂಕ](https://veekshakavani.com/5-monkeys-die-in-kundapur/): ಉಡುಪಿ, ಜನವರಿ 08: ಮಲೆನಾಡು ಜಿಲ್ಲೆಗಳಲ್ಲಿ ಮಂಗನ ಕಾಯಿಲೆ (Monkeypox virus) ಆತಂಕ ಹೆಚ್ಚುತ್ತಿರುವ ನಡುವೆ ಕುಂದಾಪುರ ತಾಲ್ಲೂಕಿನ ಹೊಸಂಗಡಿ ಭಾಗದಲ್ಲಿ ಮಂಗಗಳ ಮೃತ ದೇಹ ಪತ್ತೆಯಾಗಿದೆ. ಇದರಿಂದ ಕಳೆದ ಒಂದು ವಾರದಲ್ಲಿ ಆ ಪ್ರದೇಶದಲ್ಲಿ ಸಾವನ್ನಪ್ಪಿದ ಮಂಗಗಳ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಆರೋಗ್ಯ ಇಲಾಖೆ ಹಾಗೂ ಅರಣ್ಯ ಇಲಾಖೆ ತೀವ್ರ ನಿಗಾ ವಹಿಸಿ ಸ್ಯಾಂಪಲ್‌ ಕಲೆ ಹಾಕಿದೆ. ಆದರೆ ಇದುವರೆಗೂ ಮಂಗಗಳ ಸಾವಿಗೆ ನಿಖರ ಕಾರಣ ಪತ್ತೆಯಾಗದ ಹಿನ್ನಲೆ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ರಾಜ್ಯದಲ್ಲಿ ಮತ್ತೊಮ್ಮೆ ಮಂಗನ ಕಾಯಿಲೆ ಸದ್ದು ಮಾಡುತ್ತಿದೆ. ಮಲೆನಾಡು ಜಿಲ್ಲೆಯಲ್ಲಿ ಮಂಗನ ಕಾಯಿಲೆಯ ತೀವ್ರತೆ ಹೆಚ್ಚಿದ ಹಿನ್ನೆಲೆಯಲ್ಲಿ ಈ ಕಾಯಿಲೆ ನೆರೆ ಜಿಲ್ಲೆ ಉಡುಪಿಯಲ್ಲೂ ಭೀತಿ ಹುಟ್ಟಿಸಿದೆ. ಮುಖ್ಯವಾಗಿ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಇತ್ತೀಚೆಗೆ ಮಂಗಗಲು ಸಾವನ್ನಪ್ಪಿರುವ ಪ್ರಕರಣಗಳು ಸಹಜವಾಗಿಯೇ ಈ ಭಾಗದ ಜನರಲ್ಲಿ ಆತಂಕವನ್ನು ಹೆಚ್ಚುವಂತೆ ಮಾಡಿದೆ. ಕಳೆದ ದಿನಗಳ ಅಂತರದಲ್ಲಿ ಜಿಲ್ಲೆಯ ಕುಂದಾಪುರ ತಾಲೂಕು ಹೊಸಂಗಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕಾರೂರುರಲ್ಲಿ […] - [ರಾಜ್ಯ ಸರ್ಕಾರದಿಂದ ಮಹತ್ವದ ಘೋಷಣೆ](https://veekshakavani.com/important-announcement-from-the-state-government/): ರಾಜ್ಯದಲ್ಲಿ ಭಾಗ್ಯಗಳ ಸಾಲಿಗೆ ಮತ್ತೊಂದು ಭಾಗ್ಯ ಸೇರಿದೆ. ರಾಜ್ಯದಲ್ಲಿ ಜೀವಾವಧಿ ಕೈದಿಗಳಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 33 ಕೈದಿಗಳಿಗೆ ಈ ಸಿಹಿ ಸುದ್ದಿ ಅನ್ವಯವಾಗಲಿದೆ. Pಸನ್ನಡತೆ ಆಧಾರದಲ್ಲಿ 33 ಕೈದಿಗಳನ್ನು ಬಿಡುಗಡೆ ಮಾಡಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಸಚಿವ ಸಂಪುಟ ಸಭೆ ಬಳಿಕ ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಈ ಮಾಹಿತಿ ನೀಡಿದ್ದಾರೆ. ಸರ್ಕಾರದ ಈ ನಿರ್ಧಾರದಿಂದ ಕೈದಿಗಳ ಕುಟುಂಬದಲ್ಲಿ ಸಂತಸ ಮನೆಮಾಡಿದೆ. - [BJP ಜೊತೆ JDS ವಿಲೀನವಾಗಲಿದೆ: ಡಿಕೆಶಿ](https://veekshakavani.com/jds-will-merge-with-bjp-dk/): ನಾನು CM ಆಗದೇ ಇರಬಹುದು. ಆದರೆ ರಾಜಕೀಯದಲ್ಲಿ HD ಕುಮಾರಸ್ವಾಮಿಗಿಂತ ಹೆಚ್ಚಿನ ಅನುಭವ ಇದೆ. ಅವರಿಂದ ಕಲಿಯುವ ಅಗತ್ಯ ನನಗಿಲ್ಲ ಎಂದು DCM DK ಶಿವಕುಮಾರ್ ಹೇಳಿದ್ದಾರೆ. KPCC ಕಚೇರಿಯಲ್ಲಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ JDS ಮುಖಂಡ ಗೋವಿಂದರಾಜ್ ಅವರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರ ಧೋರಣೆ ನೋಡುತ್ತಿದ್ದರೆ, ಸದ್ಯದಲ್ಲೇ JDS ಪಕ್ಷ BJP ಜೊತೆ ವಿಲೀನವಾಗುವ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದಿದ್ದಾರೆ. - [ನಾಳೆ, ನಾಡಿದ್ದು ತೀವ್ರ ಚಳಿಯ ಎಚ್ಚರಿಕೆ](https://veekshakavani.com/severe-cold-warning-issued-for-tomorrow/): ರಾಜ್ಯದಲ್ಲಿ ಈ ಬಾರಿ ತೀವ್ರ ಚಳಿ ದಾಖಲಾಗಿದ್ದು, ಜನಜೀವನದ ಮೇಲೆ ಪರಿಣಾಮ ಬೀರುತ್ತಿದೆ. ದಾವಣಗೆರೆ, ಚಿತ್ರದುರ್ಗ ಭಾಗಗಳಲ್ಲಿ ಕನಿಷ್ಠ ತಾಪಮಾನ 10-11 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಒಳನಾಡಿನ ಬೀದ‌ರ್, ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ 1-3 ಡಿಗ್ರಿವರೆಗೆ ಕಡಿಮೆಯಾಗಿದೆ. ಬೆಳಗ್ಗೆ & ರಾತ್ರಿ ಸಮಯದಲ್ಲಿ ಚಳಿ ಹೆಚ್ಚಾಗುತ್ತಿದ್ದು, ಮಂಜಿನ ವಾತಾವರಣವೂ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದೆ. - [ಕೇರಳ ವಿಧಾನಸಭೆಗೆ ಎಪ್ರಿಲ್‌ನಲ್ಲಿ ಚುನಾವಣೆ ಸಾಧ್ಯತೆ: ಅವಲೋಕನಕ್ಕಾಗಿ ಕೇಂದ್ರ ಚುನಾವಣಾ ಆಯೋಗ ಮುಂದಿನ ತಿಂಗಳು ರಾಜ್ಯಕ್ಕೆ](https://veekshakavani.com/kerala-assembly-elections-likely-in-april-central-election-commission-to-visit-state-next-month-for-review/): ತಿರುವನಂತಪುರ: ವಿಧಾನಸಭಾ ಚುನಾವಣೆಗೆ ಕೇರಳ ತಯಾರಾಗಿದ್ದು ಇದರ ಪೂರ್ವಭಾವಿ ಸಿದ್ಧತೆಗಳ ಬಗ್ಗೆ ಅವಲೋಕನ ನಡೆಸಲು ಕೇಂದ್ರ ಚುನಾ ವಣಾ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ನೇತೃತ್ವದ ತಂಡ ಮುಂದಿನ ತಿಂಗಳು ಕೇರಳಕ್ಕೆ ಆಗಮಿಸಲಿದೆ. ಕೇರಳ ವಿಧಾನಸಭೆಗೆ ಚುನಾವಣೆ ನಡೆಯಲಿರುವ ಬಗ್ಗೆ ಕೇಂದ್ರ ಚುನಾವಣಾ ಆಯೋಗ ನಿನ್ನೆ ಸಭೆ ಸೇರಿ ಚರ್ಚೆ ನಡೆಸಿದೆ. 2021ರಂದು ನಡೆಸಲಾದ ರೀತಿಯಲ್ಲಿ ಈ ಬಾರಿಯೂ ಏಕ ಹಂತ ದಲ್ಲಿ ಚುನಾವಣೆ ನಡೆಸಲು ಆಯೋಗ ಚಿಂತನೆ ನಡೆಸಿದೆ. ಕಳೆದಬಾರಿ ಎಪ್ರಿಲ್ 6ರಂದು ಕೇರಳ ವಿಧಾನಸಭೆಯ ಒಟ್ಟು 140 ಕ್ಷೇತ್ರಗಳಿಗ್ಗೆ ಏಕ ಹಂತದಲ್ಲಿ ಚುನಾವಣೆ ನಡೆದಿತ್ತು. ಮೇ 2ರಂದು ಫಲಿತಾಂಶ ಪ್ರಕಟಗೊಂಡಿತ್ತು. ಅದರಲ್ಲಿ ಎಡರಂಗ 99 ಸ್ಥಾನಗಳಲ್ಲಿ ಗೆದ್ದು ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರಕಾರ ಸತತ ಎರಡನೇ ಬಾರಿ ಅಧಿಕಾರಕ್ಕೇರಿತ್ತು. ಯುಡಿಎಫ್‌ಗೆ ಕೇವಲ 41 ಸ್ಥಾನ ಮಾತ್ರವೇ ಲಭಿಸಿತ್ತು. ಬಿಜೆಪಿ ನೇತೃತ್ವದ ಎನ್‌ಡಿಎ ಶೂನ್ಯ ಸಂಪಾದನೆ ಮಾಡಿತ್ತು. 2021ರ ಹಾಗೆ ಈ ಬಾರಿಯೂ ಎಪ್ರಿಲ್ ತಿಂಗಳಲ್ಲೇ ಏಕ ಹಂತದಲ್ಲಿ […] - [ಕಾಸರಗೋಡು ನ್ಯಾಯಾಲಯ ಸಮುಚ್ಚಯಕ್ಕೆ ಬಾಂಬ್ ಬೆದರಿಕೆ](https://veekshakavani.com/bomb-threat-to-kasaragod-court-complex/): ಕಾಸರಗೋಡು: ವಿದ್ಯಾನಗರದಲ್ಲಿರುವ ಕಾಸರಗೋಡು ನ್ಯಾಯಾಲಯ ಸಮುಚ್ಚಯಕ್ಕೆ ಬಾಂಬ್ ಬೆದರಿಕೆ ಉಂಟಾಗಿದ್ದು, ಆ ಬಗ್ಗೆ ಮಾಹಿತಿ ಲಭಿಸಿದ ವಿದ್ಯಾನಗರ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಶೋಧ ಆರಂಭಿಸಿದ್ದಾರೆ. ಶೋಧ ಕಾರ್ಯಾಚರಣೆಗಾಗಿ ಬಾಂಬ್ ಸ್ಕ್ವಾಡ್ ಮತ್ತು ಶ್ವಾನದಳವನ್ನು ಬಳಸಲಾಗುತ್ತಿದೆ. ನ್ಯಾಯಾಲಯಕ್ಕೆ ಇಂದು ಬೆಳಿಗ್ಗೆ ಇಮೇಲ್ ಸಂದೇಶದ ಮೂಲಕ ಯಾರೋ ಬಾಂಬ್ ಬೆದರಿಕೆ ಒಡ್ಡಿದ್ದಾರೆ. ನ್ಯಾಯಾಲಯದೊಳಗೆ ರಿಮೋಟ್ ಕಂಟ್ರೋಲ್ ಚಾಲಿತ ಐಇಡಿ ಬಾಂಬ್ ಇರಿಸಲಾಗಿದೆ, ಇಂದು ಮಧ್ಯಾಹ್ನ 1ರಿಂದ 2 ಗಂಟೆಯೊಳಗಾಗಿ ಅದು ಸ್ಫೋಟಿಸಲಿದೆ ಎಂದು ಇಮೇಲ್ ಸಂದೇಶದಲ್ಲಿ ತಿಳಿಸಲಾಗಿತ್ತು. ಇದನ್ನು ಗಮನಿಸಿದ ನ್ಯಾಯಾಲಯದ ಅಧಿಕಾರಿಗಳು ತಕ್ಷಣ ಪೊಲೀಸರಿಗೆ ಆ ಬಗ್ಗೆ ಮಾಹಿತಿ ನೀಡಿದ್ದಾರೆ. ಅದರಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ನ್ಯಾಯಾಲಯದ ಒಳಗೆ ಹಾಗೂ ಆವರಣದೊಳಗೆ ವ್ಯಾಪಕ ಶೋಧ ನಡೆಸಿದ್ದಾರೆ. - [ಕಾಸರಗೋಡಿನಲ್ಲಿ ಕನ್ನಡಿಗರಿಗೆ ಸಮಸ್ಯೆ: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನೇತೃತ್ವದಲ್ಲಿ ರಾಜ್ಯಪಾಲರಿಗೆ ಮನವಿ](https://veekshakavani.com/problem-for-kannadigas-in-kasaragod-appeal-to-the-governor-led-by-karnataka-border-area-development-authority/): ಕಾಸರಗೋಡು: ಗಡಿನಾಡು ಕನ್ನಡಿಗರ ಸಮಸ್ಯೆಗಳು ಹಾಗೂ ಕೇರಳ ಸರಕಾರದ ಮಲೆಯಾಳ ಭಾಷಾಬಿಲ್ -2025 ತಡೆ ಹಿಡಿಯಬೇಕೆಂದು ಆಗ್ರಹಿಸಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕಾಸರಗೋಡಿಗೆ ತಲುಪಿದ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ. ಕೇರಳ ಸರಕಾರದ ಪ್ರಸ್ತಾಪಿತ ಬಿಲ್ ಸಂಪೂರ್ಣ ಅಸಂವಿಧಾನಿಕವಾ ಗಿದ್ದು, ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ಕನ್ನಡಿಗರ ಹಿತಾಸಕ್ತಿಗೆ ಮಾರಕವಾಗಿದೆ. ಭಾರತ ಸರಕಾರದ ಅಲ್ಪ ಸಂಖ್ಯಾತ ಸಚಿವಾಲಯ ಕೇರಳ ಸರಕಾರಕ್ಕೆ ಹಲವಾರು ಬಾರಿ ಭಾಷಾ ಅಲ್ಪಸಂಖ್ಯಾತರ ಹಿತ ರಕ್ಷಿಸಬೇಕೆಂದು ಸೂಚನೆ ನೀಡಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಇದಲ್ಲದೆ ಭಾರತ ಸಂವಿಧಾನದ ಪ್ರಕಾರ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಶಿಕ್ಷಕರ ನೇಮಕಾತಿ ಖಡ್ಡಾಯಗೊಳಿಸಬೇಕು, ಕಾಸರಗೋ ಡಿನ ಪೊಲೀಸ್‌ ಠಾಣೆಗಳು, ರೈಲು ನಿಲ್ದಾಣಗಳು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕನ್ನಡ ನಾಮಫಲಕಗಳನ್ನು ಸ್ಥಾಪಿಸಬೇಕು, ಸರಕಾರಿ ಕಚೇರಿಗಳಲ್ಲಿ ಸಾರ್ವಜನಿಕ ವ್ಯವಹಾರ ಕನ್ನಡ ಭಾಷೆಯಲ್ಲಿ ಇರಬೇಕು, ಉದ್ಯೋಗ ಖಾಲಿ ಸ್ಥಾನಗಳ ಕುರಿತಂತೆ ಪಿಎಸ್‌ಸಿ ಅಥವಾ ನೇಮ ಕಾತಿ ಸಂಸ್ಥೆಯಿಂದ ಬರುವ ಅರ್ಜಿಗಳ ಆಧಾರದ ಮೇಲೆ ಭರ್ತಿಗೊಳಿಸದೆ ಸ್ಥಳೀಯ ಭಾಷಾ […] - [ಎಡನೀರು: ತರವಾಡಿನ ಬೀಗ ಮುರಿದು ಲಕ್ಷಾಂತರ ರೂ. ಕಳ್ಳತನ..!](https://veekshakavani.com/edaneeru-lakhs-of-rupees-stolen-by-breaking-the-lock-of-a-house/): ಎಡನೀರು: ಎಡನೀರು ಬಯರಮೂಲೆ ಮಕ್ಕಾಕೋಡನ್ ತರವಾಡ್‌ ಬಾಗಿಲ ಬೀಗ ಒಡೆದು ಒಳ ನುಗ್ಗಿದ ಕಳ್ಳರು ದೈವದ ಲಕ್ಷಾಂತರ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿ ಒಡವೆಗಳು ಹಾಗೂ ಹಣವನ್ನು ದೋಚಿದ್ದಾರೆ. ಇದು ಮಾತ್ರವಲ್ಲದೆ ಮೂರು ಕಾಣಿಕೆ ಹುಂಡಿಯನ್ನು ಒಡೆದು ಅದರಲ್ಲಿದ್ದ ಹಣವನ್ನೂ ಕದ್ದು ಸಾಗಿಸಿದ್ದಾರೆ. ಜನವರಿ 6ರಂದು ಬೆಳಿಗ್ಗೆ 7 ಗಂಟೆ ಮತ್ತು ನಿನ್ನೆ ಬೆಳಿಗ್ಗೆ 7 ಗಂಟೆಯೊಳಗಿನ ಸಮಯದಲ್ಲಿ ಈ ಕಳವು ನಡೆದಿದೆ. 1,70,000 ರೂ. ಮೌಲ್ಯದ ಚಿನ್ನ, 2 ಲಕ್ಷ ರೂ. ಮೌಲ್ಯದ ಬೆಳ್ಳಿ ಒಡವೆಗಳು ಹಾಗೂ ನಾಣ್ಯ, ಕರೆನ್ಸಿ ನೋಟುಗಳು ಸೇರಿದಂತೆ 3,360 ರೂ. ನಗದನ್ನು ಕಳವುಗೈಯ್ಯಲಾಗಿದೆ. ಕಳವುಗೈದ ಚಿನ್ನ ಮತ್ತು ಬೆಳ್ಳಿ ದೈವಕ್ಕೆ ತೊಡಿಸುವ ಆಭರಣಗಳಾಗಿವೆ. ಈ ಬಗ್ಗೆ ಪ್ರಸ್ತುತ ತರವಾಡಿನ ಸದಸ್ಯರಾದ ಬಿ. ಬಾಲಕೃಷ್ಣನ್ ನೀಡಿದ ದೂರಿನಂತೆ ವಿದ್ಯಾನಗರ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ, ಎಸ್‌ಐಗಳಾದ ಅನೂಪ್ ಮತ್ತು ವಿಜಯನ್ ಮೇಲೋತ್ತರ ನೇತೃತ್ವದ ಪೊಲೀಸರು ತರವಾಡಿಗೆ ಸಾಗಿ ತನಿಖೆ ನಡೆಸಿದರು. ಬೆರಳಚ್ಚು ತಜ್ಞರು […] - [ಧಾರವಾಡ ಕವಿವಿಯಲ್ಲಿ ಎಐ ಕ್ರಾಂತಿ: ಸಾಂಪ್ರದಾಯಿಕ ಕೋರ್ಸ್‌ಗಳಿಗೆ ಆಧುನಿಕ ಸ್ಪರ್ಶ](https://veekshakavani.com/ai-revolution-at-dharwad-kavi-modern-touch-to-traditional-courses/): ಧಾರವಾಡ, ಜನವರಿ 08: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ (Karnatak University) ಹೊಸದೊಂದು ಕ್ರಾಂತಿಗೆ ಮುಂದಾಗಿದೆ. ಮುಂಚೆಯಿಂದಲೂ ಉನ್ನತ ಶಿಕ್ಷಣ ನೀಡುವಲ್ಲಿ ಸಾಕಷ್ಟು ಹೆಸರು ಮಾಡಿರುವ ಈ ವಿಶ್ವವಿದ್ಯಾಲಯ ಇದೀಗ ಕೃತಕ ಬುದ್ಧಿಮತ್ತೆಯಲ್ಲಿ (AI) ಕ್ರಾಂತಿಯನ್ನು ಮಾಡಲು ನಿರ್ಧರಿಸಿದೆ. ಇತ್ತೀಚಿನ ದಿನಗಳಲ್ಲಿ ಈ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಾಕಷ್ಟು ಸದ್ದು ಮಾಡುತ್ತಿದೆ. ಇದೇ ಕಾರಣಕ್ಕೆ ಈ ಕೃತಕ ಬುದ್ಧಿಮತ್ತೆಯನ್ನು ಎಲ್ಲ ಕೋರ್ಸ್ಗಳಲ್ಲಿ ಕಲಿಸಲು ನಿರ್ಧರಿಸಲಾಗಿದೆ. ಸಾಂಪ್ರದಾಯಿಕ ಕೋರ್ಸ್‌ಗಳಿಗೆ ಆಧುನಿಕ ಸ್ಪರ್ಶಕಾಲಕ್ಕೆ ತಕ್ಕಂತೆ ಶೈಕ್ಷಣಿಕ ಕೋರ್ಸ್‌ಗಳು ಕೂಡ ಬದಲಾಗಬೇಕು. ಅದರಲ್ಲೂ ಸಾಂಪ್ರದಾಯಿಕ ಕೋರ್ಸ್‌ಗಳಿಗೆ ಆಧುನಿಕ ಸ್ಪರ್ಶ ನೀಡಬೇಕಿದ್ದು, ಈ ನಿಟ್ಟಿನಲ್ಲಿ ವಿದ್ಯಾಕಾಶಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಹೆಜ್ಜೆ ಇಡುತ್ತಿದೆ. ಬಿಎ, ಬಿಎಸ್ಸಿ, ಬಿಕಾಂ ನಂತಹ ಸಾಂಪ್ರದಾಯಿಕ ಕೋರ್ಸ್‌ಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ವಿಷಯದ ಕೌಶಲ್ಯ ಕಲಿಯುವ ಅವಕಾಶ ವಿದ್ಯಾರ್ಥಿಗಳಿಗೆ ನೀಡಲು ವಿವಿ ಮುಂದಾಗುತ್ತಿದೆ. ಇನ್ನು ಬಿಸಿಎ ಎಐ ಅಥವಾ ಬಿಸಿಎ ಸೈಬರ್‌ ಸೆಕ್ಯುರಿಟಿ ಅಥವಾ ಬಿಸಿಎ ಡೇಟಾ ಸೈನ್ಸ್‌, ಮಿಷನ್‌ ಲರ್ನಿಂಗ್‌ ಅಂತಹ ಕೋರ್ಸ್‌ಗಳನ್ನು ಪರಿಚಯಿಸುವ […] - [‘ಜನ ನಾಯಗನ್’ ಬಳಿಕ ಈಗ ‘ಪರಾಶಕ್ತಿ’ಗೂ ಸಿಬಿಎಫ್ಸಿ ಸಂಕಟ](https://veekshakavani.com/after-jana-nayagan-parasakthi-is-in-trouble-for-cbfc/): ದಳಪತಿ ವಿಜಯ್ (Thalapathy Vijay) ನಟನೆಯ ‘ಜನ ನಾಯಗನ್’ ಸಿನಿಮಾ ನಾಳೆ (ಜನವರಿ 09) ಬಿಡುಗಡೆ ಆಗಬೇಕಿತ್ತು. ಆದರೆ ಸಿಬಿಎಫ್ಸಿ ಪ್ರಮಾಣ ಪತ್ರ ಸಿಗದ ಕಾರಣ ಸಿನಿಮಾ ಬಿಡುಗಡೆಯನ್ನು ಮುಂದೂಡಲಾಗಿದೆ. ‘ಜನ ನಾಯಗನ್’ ಎದುರಾಗಿ ಶಿವಕಾರ್ತಿಕೇಯನ್, ಶ್ರೀಲೀಲಾ ನಟನೆಯ ‘ಪರಾಶಕ್ತಿ’ ಸಿನಿಮಾ ಬಿಡುಗಡೆ ಆಗುತ್ತಿತ್ತು. ಆದರೆ ಈಗ ಅದೂ ಸಹ ಸಂಕಷ್ಟದಲ್ಲಿ ಸಿಲುಕಿದೆ. ಸಿನಿಮಾಕ್ಕೆ ಬರೋಬ್ಬರಿ 23 ಕಟ್ಗಳನ್ನು ಸಿಬಿಎಫ್ಸಿ ಸೂಚಿಸಿದ್ದು, ‘ಪರಾಶಕ್ತಿ’ ನಿರ್ಮಾಪಕರು ಸಿಬಿಎಫ್ಸಿ ವಿರುದ್ಧ ನ್ಯಾಯಾಲಯ ಮೊರೆ ಹೋಗುವ ಸಾಧ್ಯತೆ ಇದೆ. ಶಿವಕಾರ್ತಿಕೇಯನ್ ಮತ್ತು ಶ್ರೀಲೀಲಾ ನಟಿಸಿ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕಿ ಸುಧಾ ಕೊಂಗರ ನಿರ್ದೇಶನ ಮಾಡಿರುವ ‘ಪರಾಶಕ್ತಿ’ ಸಿನಿಮಾ ತಮಿಳುನಾಡಿನಲ್ಲಿ ನಡೆದ ಹಿಂದಿ ವಿರೋಧಿ ಚಳವಳಿಯ ಕತೆಯನ್ನು ಹೊಂದಿದ್ದು, ಸಿನಿಮಾ ಜನವರಿ 10 ರಂದು ಬಿಡುಗಡೆ ಆಗಲಿಕ್ಕಿತ್ತು, ಆದರೆ ಸಿನಿಮಾಕ್ಕೆ ಇದೀಗ ಸಿಬಿಎಫ್ಸಿ ಸಮಸ್ಯೆ ಎದುರಾಗಿದೆ. ವಿಶೇಷವೆಂದರೆ ಜನವರಿ 09 ರಂದು ಬಿಡುಗಡೆ ಆಗಲಿದ್ದ ‘ಜನ ನಾಯಗನ್’ ಸಿನಿಮಾಕ್ಕೂ ಸಿಬಿಎಫ್ಸಿ ಸಮಸ್ಯೆ ಎದುರಾಗಿದೆ. ಈಗ ‘ಪರಾಶಕ್ತಿ’ ಸಿನಿಮಾಕ್ಕೂ […] - [ಚಳಿಗಾಲದಲ್ಲಿ ನಿಮ್ಮ ಹೃದಯ ಜೋಪಾನ..ಇಲ್ಲಿದೆ ವೈದ್ಯರ ಸಲಹೆ](https://veekshakavani.com/protect-your-heart-in-winter-here-is-the-doctors-advice/): ಚಳಿಗಾಲದ ಸಮಯದಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚು. ಅದರಲ್ಲೂ ಮಧ್ಯವಯಸ್ಸಿನವರು ಹೃದಯ ಸಂಬಂಧಿ ಕಾಯಿಲೆಗಳಿಗೆ ಹೆಚ್ಚಾಗಿ ಒಳಗಾಗುತ್ತಾರೆ. ಅದಕ್ಕೆ ಕಾರಣ, ಪರಿಹಾರ ಕ್ರಮಗಳ ಬಗ್ಗೆ ವೈದ್ಯರು ನೀಡಿದ ಮಾಹಿತಿ ಇಲ್ಲಿದೆ. ಕಾರಣಗಳು 1.ಚಳಿಗಾಲದಲ್ಲಿ ಶೇ 10 ರಿಂದ15ರಷ್ಟು ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತವೆ. ಈ ವೇಳೆ ರಕ್ತ ಮಂದವಾಗಿದ್ದು, ನರಗಳು ಸಂಕುಚಿತವಾಗಿರುತ್ತವೆ. ರಕ್ತ ಸಂಚಾರ ನಿಧಾನವಾಗುವುದರಿಂದ ಹೃದಯಕ್ಕೆ ಹೆಚ್ಚು ಒತ್ತಡವಾಗಿ ಹೃದಯಘಾತಕ್ಕೆ ಕಾರಣವಾಗುತ್ತದೆ. 2 ಚಳಿಯಿಂದ ದೇಹವನ್ನು ಬೆಚ್ಚಗಿಡಲೆಂದು ಧೂಮಪಾನ, ಮದ್ಯಪಾನ ಮಾಡುವುದು ಹೃದಯಘಾತಕ್ಕೆ ಕಾರಣವಾಗಿದೆ. 3 ಚಳಿಯಲ್ಲಿ ದೇಹದ ಚಲನವಲನ ಕಡಿಮೆ ಇರುವುದರಿಂದ, ನಿರಂತರ ವ್ಯಾಯಾಮ ಮಾಡದೆ ಇರುವುದು. 4 ಮೊದಲೇ ಹೃದಯ ಸಂಬಂಧಿ ಕಾಯಿಲೆಗಳು ಇದ್ದರೆ, ಚಳಿಗಾಲದ ವೇಳೆ ಹೃದಯಘಾತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. 5 ಶ್ವಾಸಕೋಶದಲ್ಲಿ ಸೋಂಕು, ಆಮ್ಲಜನಕದ ಕೊರತೆ, ಅಭ್ಯಾಸವಿಲ್ಲದೇ ಒಂದೇ ಬಾರಿಗೆ ಭಾರ ಎತ್ತುವುದು ಕೂಡ ಹೃದಯಘಾತಕ್ಕೆ ಕಾರಣವಾಗಿದೆ. 6 ಅತಿಯಾದ ಜಂಕ್ ಫುಡ್ ಸೇವನೆ ಲಕ್ಷಣಗಳು ಉಸಿರು ಕಟ್ಟುವಿಕೆ ತಲೆ ಸುತ್ತು ಅಜೀರ್ಣ […] - [ಗೃಹಲಕ್ಷ್ಮೀ; ಶೀಘ್ರದಲ್ಲೇ ಫೆಬ್ರವರಿ-ಮಾರ್ಚ್ ತಿಂಗಳ ಪಾವತಿ, BPL ಕಾರ್ಡ್ ರದ್ದಾಗಿದ್ದರೆ ಹಣ ಕೂಡ ರದ್ದು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್](https://veekshakavani.com/payment-for-february-march-will-be-made-soon-if-bpl-card-is-cancelled-money-will-also-be-cancelled-minister-lakshmi-hebbalkar/): ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಹತ್ವದ ಮಾಹಿತಿ ನೀಡಿದ್ದಾರೆ. ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಬಿಡುಗಡೆ ಕುರಿತು ಮಾಹಿತಿ ನೀಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಬಿಪಿಎಲ್ ಕಾರ್ಡ್ ರದ್ದಾಗಿರುವವರಿಗೆ ಹಣ ವರ್ಗಾವಣೆಯಾಗುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ‘ಹಣಕಾಸು ಇಲಾಖೆಯವರು ಅನುಮತಿ ನೀಡಿದ ತಕ್ಷಣವೇ 2025ರ ಫೆಬ್ರವರಿ ಹಾಗೂ ಮಾರ್ಚ್‌ ತಿಂಗಳ ಗೃಹಲಕ್ಷ್ಮಿ ಯೋಜನೆಯ (Gruha Lakshmi) ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು. ಈ ಎರಡು ತಿಂಗಳ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಕುರಿತಂತೆ ಈಗಾಗಲೇ ಮುಖ್ಯಮಂತ್ರಿಗಳ ಬಳಿ ಮಾತನಾಡಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳು ಕೂಡ ಸದನದಲ್ಲಿ ಉತ್ತರ ಕೊಟ್ಟಿದ್ದಾರೆ ಎಂದರು. BPL ಕಾರ್ಡ್ ರದ್ದಾಗಿದ್ದರೆ ಹಣ ಕೂಡ ರದ್ದು ಇದೇ ವೇಳೆ ರಾಜ್ಯದಲ್ಲಿ ಬಿಪಿಎಲ್ ಕಾರ್ಡುಗಳನ್ನು ಪರಿಶೀಲನೆಗೆ […] - [ಅಪಘಾತದಲ್ಲಿ ಸಾವನಪ್ಪಿದ ಭಿಕ್ಷುಕನ ಬಳಿ ಲಕ್ಷಾಂತರ ರೂ. ಪತ್ತೆ..! ದಿಗ್ಭ್ರಮೆಗೊಂಡ ಅಧಿಕಾರಿಗಳು..!!](https://veekshakavani.com/lakhs-of-rupees-found-with-beggar-who-died-in-accident-officials-are-stunned/): ಕೊಚ್ಚಿನ್‌: ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಭಿಕ್ಷುಕನೊಬ್ಬನ ಬಳಿ 4.5 ಲಕ್ಷ ರೂ.ಗೂ ಹೆಚ್ಚು ನಗದು ಕಂಡುಬಂದ ಘಟನೆ ಕೇರಳದ ಆಲಪ್ಪುಳದಲ್ಲಿ ನಡೆದಿದೆ. ಚಾರುಮ್ಮೂಟ್ ಮತ್ತು ಆಲಪ್ಪುಳ ಸಮೀಪದ ಪ್ರದೇಶಗಳಲ್ಲಿ ಪರಿಚಿತ ಮುಖವಾಗಿದ್ದ ಆ ವ್ಯಕ್ತಿಗೆ ಸೇರಿದ ಕಂಟೇನರ್‌ನಿಂದ ಈ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಸೋಮವಾರ ರಾತ್ರಿ ಭಿಕ್ಷುಕ ಅಪಘಾತಕ್ಕೀಡಾದಾಗ ಗಾಯಗೊಂಡಿದ್ದತು, ಸ್ಥಳೀಯ ನಿವಾಸಿಗಳು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದಾಗ್ಯೂ, ಯಾರಿಗೂ ಏನೂ ಮಾಹಿತಿ ನೀಡದೆ ಆ ವ್ಯಕ್ತಿ ಆಸ್ಪತ್ರೆಯಿಂದ ತಾನಾಗಿಯೇ ಹೊರಟುಹೋದ. ಆಸ್ಪತ್ರೆಯ ದಾಖಲೆಗಳ ಪ್ರಕಾರ, ಆ ವ್ಯಕ್ತಿ ತನ್ನ ಹೆಸರು ಅನಿಲ್‌ ಕಿಶೋ‌ರ್ ಎಂದು ಹೇಳಿದ್ದಾನೆ. ಮಂಗಳವಾರ ಬೆಳಿಗ್ಗೆ, ಅನಿಲ್ ಕಿಶೋರ್ ಅಂಗಡಿಯೊಂದರ ಹೊರಗೆ ಶವವಾಗಿ ಪತ್ತೆಯಾಗಿದ್ದಾನೆ. ಅವರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಶವದ ಬಳಿ ಕಂಡುಬಂದ ಪಾತ್ರೆಯನ್ನು ಪರಿಶೀಲನೆಗಾಗಿ ಪೊಲೀಸ್‌ ಠಾಣೆಗೆ ಕೊಂಡೊಯ್ಯಲಾಯಿತು. ಸ್ಥಳೀಯ ಪಂಚಾಯತ್ ಸದಸ್ಯ ಫಿಲಿಪ್ ಉಮ್ಮನ್ ಅವರ ಸಮ್ಮುಖದಲ್ಲಿ ಕಂಟೇನರ್ ತೆರೆದಾಗ ಅಧಿಕಾರಿಗಳು ಅಚ್ಚರಿಗೊಂಡರು, ಕಂಟೇನರ್ ನಲ್ಲಿ ನಗದು ತುಂಬಿತ್ತು, ಒಟ್ಟು 4.5 […] - [ರಷ್ಯಾ ನಿಷೇಧ ಮಸೂದೆಯ ಅಸ್ತ್ರ ಹಿಡಿದ ಅಮೆರಿಕ ಅಧ್ಯಕ್ಷ; ಭಾರತ ಮತ್ತಿತರ ದೇಶಗಳ ಮೇಲೆ ಶೇ. 500 ಟ್ಯಾರಿಫ್ಗೆ ಟ್ರಂಪ್](https://veekshakavani.com/u-s-president-donald-trump-launches-russia-sanctions-bill/): ವಾಷಿಂಗ್ಟನ್, ಜನವರಿ 8: ಅಮೆರಿಕ ಅಧ್ಯಕ್ಷರು ರಷ್ಯಾವನ್ನು ಹತ್ತಿಕ್ಕಲು ಹೊಸ ಪ್ರಬಲ ಅಸ್ತ್ರಕ್ಕೆ ಸಜ್ಜಾಗಿದ್ದಾರೆ. ಸರ್ವಪಕ್ಷಗಳ ಸಮ್ಮತಿಯ ಗ್ರಹಾಂ ಬ್ಲೂಮೆಂಥಲ್ ಸ್ಯಾಂಕ್ಷನ್ಸ್ ಬಿಲ್ಗೆ (Graham Blumenthal sanctions bill) ಅನುಮೋದನೆ ಪಡೆಯಲು ನಿಂತಿದ್ದಾರೆ. ರಷ್ಯಾವನ್ನು ಪೂರ್ಣವಾಗಿ ನಿಷೇಧಿಸಲು ಅನುವು ಮಾಡಿಕೊಡುವ ಈ ಮಸೂದೆಯು ಕಾಯ್ದೆಯಾಗಿ ಜಾರಿಗೆ ಬಂದಿದ್ದೇ ಆದಲ್ಲಿ ಭಾರತ ಮತ್ತಿತರ ಕೆಲ ದೇಶಗಳು ಅಮೆರಿಕವನ್ನು ಪೂರ್ಣವಾಗಿ ಎದಿರುಹಾಕಿಕೊಳ್ಳಬೇಕಾಗುತ್ತದೆ. ರಿಪಬ್ಲಿಕನ್ ಸಂಸದರಾದ ಲಿಂಡ್ಸೇ ಗ್ರಹಾಂ ರೂಪಿಸಿರುವ ಈ ಮಸೂದೆಯು ಅಮೆರಿಕ ಅಧ್ಯಕ್ಷರಿಗೆ ಕೆಲ ವಿಶೇಷಾಧಿಕಾರ ಒದಗಿಸುತ್ತದೆ. ರಷ್ಯಾದ ತೈಲ ಅಥವಾ ಯುರೇನಿಯಂ ಅನ್ನು ಗೊತ್ತಿದ್ದೂ ಖರೀದಿಸುವ ದೇಶಗಳ ಮೇಲೆ ಶೇ. 500ರಷ್ಟು ಸುಂಕ ಹಾಕಲು ಟ್ರಂಪ್ಗೆ ಅವಕಾಶ ಸಿಗುತ್ತದೆ. ರಷ್ಯಾವನ್ನು ಆರ್ಥಿಕವಾಗಿ ಕುಸಿಯುವಂತೆ ಮಾಡಬಲ್ಲಂತಹ ನಿಷೇಧಗಳನ್ನು ಜಾರಿಗೊಳಿಸುವುದು ಸುಲಭವಾಗಲಿದೆ. ಲಿಂಡ್ಸೆ ಗ್ರಹಾಂ ಅವರು ಈ ಮಸೂದೆ ರೂಪಿಸಲು ತಿಂಗಳು ಕಾಲ ಸಮಯ ವ್ಯಯಿಸಿದ್ದಾರೆ. ನಿನ್ನೆ ಬುಧವಾರ ಗ್ರಹಾಂ ಅವರು ವೈಟ್ಹೌಸ್ನಲ್ಲಿ ಟ್ರಂಪ್ರನ್ನು ಭೇಟಿ ಮಾಡಿದ್ದಾರೆ. ಆ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷರು ಈ […] - [ಬಿಜೆಪಿ ಕಾರ್ಯಕರ್ತೆ ವಿವಸ್ತ್ರಗೊಳಿಸಿದ ಕೇಸ್: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್ ವಶಕ್ಕೆ](https://veekshakavani.com/bjp-workers-stripping-case-missing-member-taken-into-police-custody/): ಹುಬ್ಬಳ್ಳಿ, ಜನವರಿ 08: ನಗರದಲ್ಲಿ ಬಿಜೆಪಿ ಕಾರ್ಯಕರ್ತೆ ಬಟ್ಟೆ ಬಿಚ್ಚಿಸಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಕಾಂಗ್ರೆಸ್ ಪಾಲಿಕೆ ಸದಸ್ಯೆ ಸುವರ್ಣ ಕಲಕುಂಟ್ಲಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ನಿನ್ನೆ ರಾತ್ರಿ ಸುವರ್ಣಾ ಕಲಕುಂಟ್ಲಾ ವಿರುದ್ಧ ದೂರು ದಾಖಲಾಗಿತ್ತು. ದೂರು ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದರು. ಹುಬ್ಬಳ್ಳಿ ಹೊರವಲಯದಲ್ಲಿ ಪೊಲೀಸರು ವಶಕ್ಕೆ ಪಡೆಯಲು ಮುಂದಾದ ವೇಳೆ ಕುಸಿದು ಬಿದಿದ್ದಾರೆ. ಆರೋಗ್ಯದಲ್ಲಿ ಏರುಪೇರು ಹಿನ್ನೆಲೆ ಕಿಮ್ಸ್ಗೆ ಕರೆತಂದು ಚಿಕಿತ್ಸೆ ನೀಡಲಾಗಿದೆ. ಇನ್ನು ಪ್ರಕರಣ ಸದ್ಯ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದು, ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಗೃಹ ಸಚಿವ ಜಿ. ಪರಮೇಶ್ವರ್ ಮಾಹಿತಿ ನೀಡಿದ್ದಾರೆ. - [ಕೋಗಿಲು ಭೂ ಕಬಳಿಕೆ ಕೇಸ್: ಎಲ್ಲ ದಾಖಲೆ ಫೇಕ್, ಆರೋಪಿಗಳ ಕಳ್ಳಾಟ ಬಯಲು](https://veekshakavani.com/kogilu-land-grabbing-case-all-documents-are-fake-theft-of-accused-exposed/): ಬೆಂಗಳೂರು, ಜನವರಿ 08: ಯಲಹಂಕ ಕೋಗಿಲು ಬಳಿ ಸರ್ಕಾರಿ ಜಮೀನು ಕಬಳಿಕೆ ಪ್ರಕರಣ ಸಂಬಂಧ ತನಿಖೆ ವೇಳೆ ಸ್ಫೋಟಕ ಮಾಹಿತಿಗಳು ಬಹಿರಂಗವಾಗಿವೆ. ಬಂಧಿತ ಆರೋಪಿಗಳಾದ ವಿಜಯ್ ಮತ್ತು ವಸೀಮ್ ಉಲ್ಲಾ ಅಲ್ಲಿಯ ಅಕ್ರಮ ನಿವಾಸಿಗಳಿಂದ ಹಣ ಪಡೆದು ನಕಲಿ ದಾಖಲೆ ಸೃಷ್ಟಿಮಾಡಿದ್ದಾರೆ. ಅಲ್ಲದೆ ಹಕ್ಕುಪತ್ರಗಳನ್ನು ಕೂಡ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಈ ಬಗ್ಗೆಯೂ ಯಲಹಂಕ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಇನ್ನು ಈ ಬಗ್ಗೆ ಮಾಹಿತಿ ಇದ್ದರೂ ಸಹ ಯಲಹಂಕ ತಹಶಿಲ್ದಾರ್ ಕ್ರಮ ಕೈಗೊಂಡಿಲ್ಲ. ನಕಲಿ ದಾಖಲೆ ಸೃಷ್ಟಿಸಿ ಒತ್ತುವರಿ ಮಾಡಿಕೊಂಡಿರೋ ಜಮೀನು ವಶಕ್ಕೆ ಪಡೆದಿಲ್ಲ. ನಕಲಿ‌ ದಾಖಲೆಗಳ ಬಗ್ಗೆ ಕ್ರಮ‌ ತೆಗದುಕೊಳ್ಳುವಂತೆ ಸ್ಥಳೀಯ ಯಲಹಂಕ ಪೊಲೀಸ್ ಠಾಣೆ ಗೆ ದೂರನ್ನು ನೀಡಿಲ್ಲ. ಹೀಗಾಗಿ 2022ರಿಂದ 2025ರ ಅವಧಿಯಲ್ಲಿ ಕೆಲಸ ಮಾಡಿರುವ ತಹಶಿಲ್ದಾರರ ವಿಚಾರಣೆ ನಡೆಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ‘ದೂರಿನ ಆಧಾರದಲ್ಲಿ ತನಿಖೆ’ಕೋಗಿಲು ಲೇಔಟ್ನಲ್ಲಿ ಸರ್ಕಾರಿ ಭೂಮಿ ಒತ್ತುವರಿ ಹಿನ್ನೆಲೆಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ಪೂರ್ವ ವಲಯದ […] - [ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆ ಮೇಲೆ ಹಲ್ಲೆ: ಇತ್ತ ಶಾಸಕಿಯ ಶ್ರದ್ಧಾಂಜಲಿ ಪೋಸ್ಟ್ ವೈರಲ್](https://veekshakavani.com/bjp-worker-assaulted-in-hubballi-mlas-tribute-post-goes-viral/): ಮಂಗಳೂರು, ಜನವರಿ 08: ಹುಬ್ಬಳ್ಳಿಯಲ್ಲಿ ಬಿಜೆಪಿ (BJP) ಕಾರ್ಯಕರ್ತೆಯನ್ನ ಅರೆನಗ್ನಗೊಳಿಸಿ ಹಲ್ಲೆ ನಡೆಸಿರುವ ಪ್ರಕರಣ ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಹೀಗಿರುವಾಗ ಇತ್ತ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಕ್ಷೇತ್ರದ ಬಿಜೆಪಿ ಶಾಸಕಿ ಭಾಗೀರಥಿ ಮುರುಳ್ಯ (MLA Bhagirathi Murulya) ಅವರ ನಕಲಿ ಶ್ರದ್ಧಾಂಜಲಿ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಕಲಿ ಪೋಸ್ಟ್ ಹರಿಬಿಟ್ಟಿದ್ದ ಆರೋಪಿ ಸಂದೇಶ್ ಅಲಿಯಾಸ್ ಸೀತಾರಾಮ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ 352, ಬಿಎಸ್ಎಸ್ ಅಡಿ ಪ್ರಕರಣ ದಾಖಲಾಗಿದೆ. ವೈರಲ್ ಪೋಸ್ಟ್ನಲ್ಲಿ ಏನಿದೆ?ಬಿಲ್ಲವ ಸಂದೇಶ್ ಎಂದ ಫೇಸ್ ಬುಕ್ ಖಾತೆಯಲ್ಲಿ ಶ್ರದ್ಧಾಂಜಲಿ ಪೋಸ್ಟ್ ಹಾಕಲಾಗಿದೆ. ‘ದಲಿತ ಸಮುದಾಯ ಶಾಸಕಿ ಭಾಗೀರಥಿ ಮುರುಳ್ಳ ಇರುವ ಶೋಷಣೆಗೊಳಗಾದ ದಲಿತ ಸಮುದಾಯದ ಪರ ನಿಲ್ಲದೆ ಇಂದು ಎಲ್ಲರನ್ನೂ ಅಗಲಿ ತೆರಳಿದ್ದಾರೆ. ಇವರ ಅಗಲಿಕೆಯನ್ನು ಭರಿಸುವ ಶಕ್ತಿ ಬ್ಲೂಜೆಪಿ ಪಕ್ಷದ ಕಾರ್ಯಕರ್ತರಿಗೆ ದೇವರು ನೀಡಲಿ ಎಂದು ಹೇಳುತ್ತಾ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇವೆ’ ಎಂದು ಬರೆಯಲಾಗಿದೆ. ಪೋಸ್ಟ್ ವೈರಲ್ ಆಗುತ್ತಿದ್ದಂತೆ […] - [‘ಟಾಕ್ಸಿಕ್’ ಟೀಸರ್ ನೋಡಿ ಅಚ್ಚರಿ ವ್ಯಕ್ತಪಡಿಸಿದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ](https://veekshakavani.com/director-sandeep-reddy-vanga-expresses-surprise-after-watching-the-teaser-of-toxic/): ‘ರಾಕಿಂಗ್ ಸ್ಟಾರ್’ ಯಶ್ (Yash) ಹುಟ್ಟುಹಬ್ಬದ ಪ್ರಯುಕ್ತ ‘ಟಾಕ್ಸಿಕ್’ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಯಾವುದೇ ಸದ್ದು ಗದ್ದಲ ಇಲ್ಲದೇ ಟೀಸರ್ ಬಿಡುಗಡೆ ಮಾಡಲಾಯಿತು. ಬಿಡುಗಡೆ ಆದ ಈ ಟೀಸರ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಯಶ್ ಅಭಿಮಾನಿಗಳು ಮಾತ್ರವಲ್ಲದೇ ಪರಭಾಷೆಯ ಚಿತ್ರರಂಗದ ಸ್ಟಾರ್ ಸೆಲೆಬ್ರಿಟಿಗಳು ಕೂಡ ‘ಟಾಕ್ಸಿಕ್’ ಟೀಸರ್ (Toxic Movie Teaser) ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ. ‘ಅರ್ಜುನ್ ರೆಡ್ಡಿ’, ‘ಕಬೀರ್ ಸಿಂಗ್’, ‘ಅನಿಮಲ್’ ಸಿನಿಮಾಗಳ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ಅವರು ಈ ಟೀಸರ್ ನೋಡಿ ಮೆಚ್ಚಿಕೊಂಡಿದ್ದಾರೆ. ‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಅವರು ರಾಯಾ ಎಂಬ ಪಾತ್ರ ಮಾಡಿದ್ದಾರೆ. ಈ ಪಾತ್ರ ಯಾವ ರೀತಿ ಇರಲಿದೆ ಎಂಬುದನ್ನು ಈ ಟೀಸರ್ ಮೂಲಕ ತೋರಿಸಲಾಗಿದೆ. ಈ ಸಿನಿಮಾ ತುಂಬಾ ಬೋಲ್ಡ್ ಆಗಿರಲಿದೆ ಎಂಬುದು ಖಚಿತವಾಗಿದೆ. ಈಗಾಗಲೇ ಬೋಲ್ಡ್ ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡಿರುವ ಸಂದೀಪ್ ರೆಡ್ಡಿ ವಂಗಾ ಕೂಡ ‘ಟಾಕ್ಸಿಕ್’ ಟೀಸರ್ ನೋಡಿ ಭೇಷ್ ಎಂದಿದ್ದಾರೆ. ಸೋಶಿಯಲ್ […] - [ಶೇಂಗಾ ತಿಂದ್ರೆ ತೂಕ ಕಡಿಮೆಯಾಗುತ್ತಾ ಅಥವಾ ಹೆಚ್ಚಾಗುತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ](https://veekshakavani.com/does-eating-peanuts-lead-to-weight-loss-or-gain-heres-the-interesting-info/): ಚಳಿಗಾಲದಲ್ಲಿ ಕಡಲೆಕಾಯಿ ಅಥವಾ ಶೇಂಗಾ (Peanuts) ಸೇವನೆಯನ್ನು ಯಥೇಚ್ಛವಾಗಿ ಮಾಡುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು ಎನ್ನಲಾಗುತ್ತದೆ. ಈ ವಾತಾವರಣಕ್ಕೆ ಮಾತ್ರವಲ್ಲ, ಎಲ್ಲಾ ಕಾಲಕ್ಕೂ ಇದು ಒಳ್ಳೆಯದು. ಆದರೆ ಕಡಲೆಕಾಯಿ ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ ಎಂಬುದು ಕೆಲವರ ನಂಬಿಕೆ, ಇನ್ನು ಕೆಲವರು ಇದು ತೂಕ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎನ್ನುತ್ತಾರೆ. ಇವೆರಡರಲ್ಲಿ ಯಾವುದು ಸತ್ಯ! ಕಡಲೆಕಾಯಿ ಅಥವಾ ಶೇಂಗಾದಲ್ಲಿರುವ ಕ್ಯಾಲೊರಿಗಳು, ತೂಕ (Weight) ಹೆಚ್ಚಾಗುವುದಕ್ಕೆ ಸಹಾಯ ಮಾಡುತ್ತದೆಯೋ ಅಥವಾ ಕಡಿಮೆ ಮಾಡುತ್ತದೆಯೋ, ಜೊತೆಗೆ ಯಾರು ಇದನ್ನು ಸೇವನೆ ಮಾಡಬಾರದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಇಲ್ಲಿದೆ. ಶೇಂಗಾ ಸೇವನೆಯಿಂದ ತೂಕ ಕಡಿಮೆಯಾಗುತ್ತಾ ಅಥವಾ ಹೆಚ್ಚುತ್ತಾ?ದೆಹಲಿಯ ಜಿಟಿಬಿ ಆಸ್ಪತ್ರೆಯ ಮಾಜಿ ಆಹಾರ ತಜ್ಞೆ ಡಾ. ಅನಾಮಿಕಾ ಗೌರ್ ತಿಳಿಸಿರುವ ಮಾಹಿತಿ ಅನುಸಾರ, ಶೇಂಗಾದಲ್ಲಿ ಪ್ರೋಟೀನ್ ಅಧಿಕವಾಗಿದ್ದು ಸಂಶೋಧನೆಗಳ ಪ್ರಕಾರ, ಪ್ರೋಟೀನ್ ಹೆಚ್ಚಿರುವ ಆಹಾರ ಸೇವನೆಯಿಂದ ತೂಕ ಹೆಚ್ಚಾಗುವುದಿಲ್ಲ. ಅದರಲ್ಲಿಯೂ ಕಡಲೆಕಾಯಿಯಲ್ಲಿರುವ ಸುಮಾರು 25% ಕ್ಯಾಲೊರಿಗಳು ಪ್ರೋಟೀನ್‌ನಿಂದ ಬರುತ್ತವೆ. ಸಸ್ಯ ಆಧಾರಿತ […] - [‘ಕಾಂತಾರ: ಚಾಪ್ಟರ್ 1’ ಕ್ಲೈಮ್ಯಾಕ್ಸ್ ಬಗ್ಗೆ ‘ಕುಲಶೇಖರ’ನಿಗೆ ಅಸಮಾಧಾನ?](https://veekshakavani.com/is-kulasekara-unhappy-with-the-climax-of-kantara-chapter-1/): ರಿಷಬ್ ಶೆಟ್ಟಿ (Rishab Shetty) ನಟಿಸಿ ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭಾರಿ ದೊಡ್ಡ ಹಿಟ್ ಆಗಿದೆ. ಭಾಷೆ, ಗಡಿಯ ಹಂಗಿಲ್ಲದೇ ದೇಶದಾದ್ಯಂತ ಬಹುತೇಕ ಬಿಡುಗಡೆ ಆದ ಎಲ್ಲ ರಾಜ್ಯಗಳಲ್ಲಿಯೂ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಹಿಟ್ ಎನಿಸಿಕೊಂಡಿದೆ. 2022ರ ‘ಕಾಂತಾರ’ಕ್ಕೆ ಹೋಲಿಸಿದರೆ ಭಾರಿ ಬಜೆಟ್, ದೊಡ್ಡ ತಂಡದ ನೆರವಿನೊಂದಿಗೆ ಹಲವು ಜನಪ್ರಿಯ ನಟರನ್ನು ಒಳಗಾಗಿಸಿಕೊಂಡು ಸಿನಿಮಾವನ್ನು ನಿರ್ದೇಶಕ ರಿಷಬ್ ಶೆಟ್ಟಿ ಕಟ್ಟಿದ್ದರು. ಸಿನಿಮಾ ನೋಡಿದ ಬಹುತೇಕರು ಉಘೆ ಎಂದಿದ್ದಾರೆ. ಆದರೆ ಸಿನಿಮಾದ ಮುಖ್ಯ ಪಾತ್ರವೊಂದರಲ್ಲಿ ನಟಿಸಿದ ಕಲಾವಿದರೊಬ್ಬರಿಗೆ ‘ಕಾಂತಾರ: ಚಾಪ್ಟರ್ 1’ ಕ್ಲೈಮ್ಯಾಕ್ಸ್ ಬಗ್ಗೆ ಸಣ್ಣ ಅಸಮಾಧಾನ ಇದೆಯೇ ಎಂಬ ಅನುಮಾನ ಇದೀಗ ಮೂಡಿದೆ. ಸಿನಿಮಾಲ್ಲಿ ರಿಷಬ್ ಶೆಟ್ಟಿ ಪಾತ್ರ ಬಹಳ ಪ್ರಧಾನವಾದುದಾಗಿತ್ತು. ಸಿನಿಮಾದ ವಿಲನ್ ಪಾತ್ರದಲ್ಲಿ ರುಕ್ಮಿಣಿ ವಸಂತ್ ಅದ್ಭುತವಾಗಿ ನಟಿಸಿದ್ದರು. ಆದರೆ ಅವರು ವಿಲನ್ ಆಗಿ ಬದಲಾಗುವುದು ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ಮಾತ್ರ. ಆದರೆ ಸಿನಿಮಾದ ಆರಂಭದಿಂದಲೂ ನಾಯಕನಿಗೆ ಎದುರಾಗಿ ನಿಂತಿರುವ ಪಾತ್ರವೆಂದರೆ […] - [ಕರ್ನಾಟಕದ ಕಾಫಿಗೆ ಯೂರೋಪ್ನಲ್ಲಿ ಬಲು ಬೇಡಿಕೆ; 2025ರಲ್ಲಿ 2 ಬಿಲಿಯನ್ ಡಾಲರ್ ಮುಟ್ಟಿದ ಭಾರತದ ಒಟ್ಟಾರೆ ಕಾಫಿ ರಫ್ತು](https://veekshakavani.com/coffee-from-karnataka-is-in-high-demand-in-europe/): ಬೆಂಗಳೂರು, ಜನವರಿ 8: ಭಾರತದ ಕಾಫಿ ರಫ್ತು (coffee exports) ಕಳೆದ ವರ್ಷ (2025) ಹೊಸ ಮೈಲಿಗಲ್ಲು ಮುಟ್ಟಿದೆ. ವರದಿಗಳ ಪ್ರಕಾರ 2025ರಲ್ಲಿ ಭಾರತದ ಒಟ್ಟೂ ಕಾಫಿ ರಫ್ತು ಎರಡು ಬಿಲಿಯನ್ ಡಾಲರ್ ಆಗಿದೆ. ಭಾರತದ ಕಾಫಿಗೆ ಜಾಗತಿಕವಾಗಿ ಬಹಳ ಬೇಡಿಕೆ ಇದೆ. ಶೇ. 15ರಷ್ಟು ಸಿಎಜಿಆರ್ನಲ್ಲಿ ರಫ್ತು ಬೆಳೆಯುತ್ತಿದೆ. 2024-25ರಲ್ಲಿ ಭಾರತದಲ್ಲಿ ಉತ್ಪಾದನೆಯಾದ ಕಾಫಿ 3.6 ಲಕ್ಷ ಟನ್ಗಳಷ್ಟಿದೆ. 2025-26ರಲ್ಲಿ ಇದು 4 ಲಕ್ಷ ಟನ್ ದಾಟುವ ನಿರೀಕ್ಷೆ ಇದೆ. ಅತಿ ಹೆಚ್ಚು ಕಾಫಿ ಉತ್ಪಾದಿಸುವ ದೇಶಗಳಲ್ಲಿ ಭಾರತ ಏಳನೇ ಸ್ಥಾನದಲ್ಲಿದೆ. ಕಾಫಿಯಲ್ಲಿ ಅರೇಬಿಕಾ ಮತ್ತು ರೋಬಸ್ಟಾ ಎರಡು ವೈವಿಧ್ಯತೆಗಳಿವೆ. ರೋಬಸ್ಟಾ ಕಡಿಮೆ ಮೌಲ್ಯದದ್ದಾದರೂ ಕಹಿ ಮತ್ತು ಘಾಟು ಹೆಚ್ಚು. ಯೂರೋಪ್ನಲ್ಲಿ ಈ ಕಾಫಿಗೆ ಬಹಳ ಬೇಡಿಕೆ ಇದೆ. ಭಾರತದ ಹೆಚ್ಚಿನ ರೋಬಸ್ಟಾ ಕಾಫಿ ಕರ್ನಾಟಕದಲ್ಲೇ ತಯಾರಾಗುವುದು. ಇಟಲಿ, ಜರ್ಮನಿ ಮುಂತಾದ ದೇಶಗಳಿಗೆ ಬಹಳ ರಫ್ತಾಗುತ್ತದೆ. ಕಾಫಿಯಲ್ಲಿ ಕರ್ನಾಟಕವೇ ಕಿಂಗ್ಇನ್ನು, ಅರೇಬಿಕಾ ತಳಿಯ ಕಾಫಿಯಲ್ಲಿ ಫ್ಲೇವರ್ ಕಡಿಮೆ. ಆದರೆ, ಇದಕ್ಕೆ […] - [ಮಂಜೇಶ್ವರ, ಕಾಸರಗೋಡು, ಕಾರಡ್ಕ ಬ್ಲಾಕ್ ಸ್ಥಾಯಿ ಸಮಿತಿ ಸದಸ್ಯರ, ಜಿ.ಪಂ. ಮಹಿಳಾ ಸ್ಥಾಯಿ ಸಮಿತಿ ಸದಸ್ಯೆಯರ ಆಯ್ಕೆ](https://veekshakavani.com/manjeshwar-kasaragod-karadka-block-standing-committee-member-g-p-election-of-women-standing-committee-members/): ಮಂಜೇಶ್ವರ: ಬ್ಲಾಕ್ ಪಂಚಾಯತ್ ಸ್ಥಾಯೀ ಸಮಿತಿ ಸದಸ್ಯರ ಆಯ್ಕೆ ಬ್ಲಾಕ್ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. 13 ನಾಮನಿರ್ದೇಶ ಪತ್ರಿಕೆಗಳು ಲಭಿಸಿದ ಹಿನ್ನೆಲೆಯಲ್ಲಿ ಅವಿರೋಧವಾಗಿ 13 ಮಂದಿಯ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಕುಂಜತ್ತೂರು, ಬಂದ್ಯೋಡು, ಚೇವಾರು, ಪಾತೂರು ಡಿವಿಶನ್‌ಗಳಿಂದಿರುವ ಜನಪ್ರತಿನಿಧಿಗಳಾದ ಮುಹಮ್ಮದ್ ಹನೀಫ, ಅಬ್ದುಲ್‌ ಅಸೀಸ್ ಮರಿಕ್ಕೆ ಚಂದ್ರಾವತಿ, ಎಸ್.ಎ. ಬೀಪಾತು ಎಂಬಿವರು ಸ್ಥಾಯೀ ಸಮಿತಿ ಸದಸ್ಯರಾ ಗಿಯೂ, ಪುತ್ತಿಗೆ, ಮಜೀರ್ಪಳ್ಳ, ಪೆರ್ಲ ಡಿವಿಶನ್‌ನಿಂದಿರುವ ಜನಪ್ರತಿನಿಧಿ ಗಳಾದ ಮೊಹಮ್ಮದ್ ಜುನೈದ್, ಕೆ. ಮೋಹನ್, ನಫೀಸತ್ ಮಿಸ್ತ್ರಿಯ ಎಂಬಿವರು ಆರೋಗ್ಯ ಸ್ಥಾಯೀ ಸಮಿತಿ ಸದಸ್ಯರಾಗಿಯೂ, ಉಪ್ಪಳ, ಎಣ್ಮಕಜೆ, ಮಂಜೇಶ್ವರ ನಯಾಬಜಾರ್ ಎಂಬೀ ಡಿವಿಶನ್‌ಗಳ ಜನಪ್ರತಿನಿಧಿಗಳಾದ ಫಾತಿಮತ್ ಸುಹರಾ, ವಿದ್ಯಾಕುಮಾರಿ, ಎಂ.ನಾಗೇಶ, ಜಮೀಲ ಎಂಬಿವರು ಕ್ಷೇಮಕಾರ್ಯ ಸಮಿತಿ ಸದಸ್ಯ ರಾಗಿಯೂ ಕಡಂಬಾರ್, ಪೆರ್ಮುದೆಯ ಜನಪ್ರತಿನಿಧಿಗಳಾದ ಕೆ. ಮೋಹನ್ ರೈ, ಮೊಹಮ್ಮದ್ ಬಶೀರ್, ನಾಮಪತ್ರಿಕೆ ಸಲ್ಲಿಸದ ಮುಳಿಗದ್ದೆ ಡಿವಿಶನ್‌ನ ಅಬ್ದುಲ್ ರಜಾಕ್ ಚಿಪ್ಪಾರು ಎಂಬಿ ವರನ್ನು ಹಣಕಾಸು ಸಮಿತಿ ಸದಸ್ಯ ರಾಗಿಯೂ ಆಯ್ಕೆ ಮಾಡಲಾಯಿತು. ಶ್ಲೋಕ್ ಪಂಚಾಯತ್ […] - [ಆನ್ಲೈನ್ ಟ್ರೇಡಿಂಗ್ ಹೆಸರಲ್ಲಿ ಇಚ್ಲಂಗೋಡು ವ್ಯಕ್ತಿಗೆ 34 ಲಕ್ಷ ರೂ.ವಂಚನೆ..!](https://veekshakavani.com/a-person-was-cheated-of-rs-34-lakhs-in-the-name-of-online-trading/): ಕುಂಬಳೆ: ಆನ್‌ಲೈನ್ ಟ್ರೇಡಿಂಗ್ ಮೂಲಕ ಭಾರೀ ಲಾಭಗಳಿಸಬಹುದೆಂಬ ಭರವಸೆಯೊಡ್ಡಿ ಇಚ್ಲಂಗೋಡು ನಿವಾಸಿ ಸುರೇಶ್ ಶೆಟ್ಟಿ (54) ಎಂಬವರ 34,47,777 ರೂಪಾಯಿಗಳನ್ನು ಲಪಟಾಯಿಸಿರುವುದಾಗಿ ದೂರಲಾಗಿದೆ. ಹಣ ನಷ್ಟಗೊಂಡ ಬಗ್ಗೆ ಲಭಿಸಿದ ದೂರಿನಂತೆ ಕಾಸರಗೋಡು ಸೈಬರ್ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. 2025 ಸೆಪ್ಟೆಂಬ‌ರ್ 2ರಿಂದ ಡಿಸೆಂಬರ್ 30ರವರೆಗಿನ ದಿನಗಳಲ್ಲಿ ವಂಚನೆ ನಡೆಸಲಾಗಿದೆ. ಫೇಸ್‌ಬುಕ್, ವಾಟ್ಸಪ್, ಟೆಲಿಗ್ರಾಂ ಮೂಲಕ ಸಂದೇಶಗಳನ್ನು ಕಳುಹಿಸಿ ದೂರುದಾತನನ್ನು ವಂಚನೆಯಲ್ಲಿಸಿಲುಕಿಸಿರುವುದಾಗಿ ಸೈಬರ್ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ. ವಿವಿಧ ಖಾತೆಗಳಿಗೆ ಹಲವು ಬಾರಿಯಾಗಿ ಹಣ ಕಳುಹಿಸಿರುವುದಾಗಿ ದೂರುದಾತ ತಿಳಿಸಿದ್ದಾರೆ. ಆದರೆ ಲಾಭದ ಪಾಲು ಅಥವಾ ನೀಡಿದ ಹಣವನ್ನು ಮರಳಿ ನೀಡದ ಹಿನ್ನೆಲೆಯಲ್ಲಿ ವಂಚನೆಗೀಡಾಗಿರುವುದು ತಿಳಿದು ಬಂದಿದೆ. ಇದೇ ವೇಳೆ ಸೈಬರ್ ವಂಚನೆ ವಿರುದ್ಧ ಜಾಗ್ರತೆ ಪಾಲಿಸುವಂತೆ ನಿರ್ದೇಶನ ನೀಡುತ್ತಿದ್ದು ಅಲ್ಲದೆ ತಿಳುವಳಿಕೆ ಮೂಡಿಸುತ್ತಿರುವಾಗಲೇ ಈ ರೀತಿಯ ವಂಚನೆ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕೆಲವು ವಾರಗಳ ಹಿಂದೆಯಷ್ಟೇ ನೀಲೇಶ್ವರದ ಓರ್ವ ವೈದ್ಯರ ಕೋಟ್ಯಂತರ ರೂಪಾಯಿಗಳನ್ನು ಸೈಬರ್ ವಂಚನಾ ತಂಡ ಲಪಟಾಯಿಸಿದ […] - [ಟ್ರ್ಯಾಕ್ನಲ್ಲಿ ಓಡುವ ಬದಲು ಮಾಲ್ ಒಳಗೆ ಜಾಗಿಂಗ್ ಮಾಡಿದ ಯುವಕ](https://veekshakavani.com/instead-of-running-on-the-track-the-young-man-jogged-inside-the-mall/): ಮುಂಬೈ, ಜನವರಿ 07: ಯುವಕನೊಬ್ಬ ಟ್ರ್ಯಾಕ್ನಲ್ಲಿ ಓಡುವ ಬದಲು ಮಾಲ್ ಅನ್ನೇ ಪರ್ಸನಲ್ ಟ್ರ್ಯಾಕ್ ಆಗಿ ಮಾಡಿಕೊಂಡು ಜಾಗಿಂಗ್(Jogging) ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದೆಹಲಿಯಷ್ಟಲ್ಲದಿದ್ದರೂ ಮುಂಬೈನಲ್ಲಿ ವಾಯು ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಾಯು ಗುಣಮಟ್ಟ ಸೂಚ್ಯಂಕ(AQI)200ರ ಗಡಿ ದಾಟಿದೆ. ಹೀಗಾಗಿ ಯುವಕನೊಬ್ಬ ಟ್ರ್ಯಾಕ್ನಲ್ಲಿ ಓಡುವ ಬದಲು ಮಾಲ್ನಲ್ಲಿ ಜಾಗಿಂಗ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಈ ವೈರಲ್ ಕ್ಲಿಪ್ ಅನ್ನು ಭವಿನ್ ಪಾರ್ಮರ್ ಎಂಬುವವರು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.ಅದರಲ್ಲಿ ಟಿ ಶರ್ಟ್ ಹಾಗೂ ಟ್ರ್ಯಾಕ್ ಪ್ಯಾಂಟ್ ಮತ್ತು ಸ್ಪೋರ್ಟ್ಸ್ ಶೂ ಧರಿಸಿರುವ ಯುವಕ ಮಾಲ್ ಅನ್ನು ತನ್ನ ಪರ್ಸನಲ್ ಜಾಗಿಂಗ್ ಟ್ರ್ಯಾಕ್ ಆಗಿ ಪರಿವರ್ತಿಸಿಕೊಂಡಿರುವುದನ್ನು ಕಾಣಬಹುದು. ಮಾಲ್ನಲ್ಲಿ ಜಾಗಿಂಗ್ ಮಾಡಿದರೆ ಒಳಗೆ ಗಾಳಿಯೂ ಶುದ್ಧವಾಗಿರುತ್ತದೆ, ಅಕ್ಕ ಪಕ್ಕದ ಜಾಗ ಕೂಡ ಶುಚಿಯಾಗಿರುತ್ತದೆ. ಎಸಿ ಇರುವ ಕಾರಣ ಯಾವುದೇ ಸಮಸ್ಯೆ ಇರುವುದಿಲ್ಲ. ಈ ವಿಡಿಯೋವನ್ನು ಜನವರಿ 05ರಂದು ಪೋಸ್ಟ್ ಮಾಡಲಾಗಿದೆ. ಆನ್ಲೈನ್ನಲ್ಲಿ ಒಳ್ಳೆಯ ಅಟೆನ್ಷನ್ ಪಡೆದಿದೆ. 2.94 […] - [ಸೂರ್ಯನ ಬೆಳಕಿನಿಂದ ವಿಟಮಿನ್‌ ಡಿ ಪಡೆಯುವ ಸರಿಯಾದ ಮಾರ್ಗ ಯಾವುದು?](https://veekshakavani.com/what-is-the-correct-way-to-get-vitamin-d-from-sunlight/): ವಿಟಮಿನ್ ಡಿ (vitamin D) ನಮ್ಮ ದೇಹಾರೋಗ್ಯವನ್ನು ಕಾಪಾಡಿಕೊಳ್ಳಲು ಬೇಕಾದಂತಹ ಪ್ರಮುಖ ಪೋಷಕಾಂಶವಾಗಿದ್ದು, ಇದು ಮೂಳೆಗಳನ್ನು ಬಲಪಡಿಸಲು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಸ್ನಾಯುಗಳನ್ನು ಆರೋಗ್ಯವನ್ನು ವೃದ್ಧಿಸಲು ಮಾತ್ರವಲ್ಲದೆ ಇದು ಕ್ಯಾಲ್ಸಿಯಂ ಮತ್ತು ರಂಜಕದಂತಹ ಅಂಶಗಳನ್ನು ಹೀರಿಕೊಳ್ಳಲು ನಮ್ಮ ದೇಹಕ್ಕೆ ಸಹಾಯ ಮಾಡುತ್ತದೆ. ಸೂರ್ಯನ ಬೆಳಕು ವಿಟಮಿನ್‌ ಡಿ ಯ ನೈಸರ್ಗಿಕ ಮೂಲವಾಗಿದ್ದು, ಇದರ ಪ್ರಯೋಜನವನ್ನು ಪಡೆಯಲು ಬಹುತೇಕರು ಬೆಳಗ್ಗಿನ ಸಮಯದಲ್ಲಿ ಸೂರ್ಯನ ಬೆಳಕಿಗೆ ಮೈಯನ್ನು ಒಡ್ಡಿಕೊಳ್ಳುತ್ತಾರೆ. ಆದರೆ 90% ಜನರಿಗೆ ಸೂರ್ಯನಿಂದ ವಿಟಮಿನ್‌ ಡಿ ಪಡೆಯುವ ಸರಿಯಾದ ವಿಧಾನ ಯಾವುದೆಂದು ಗೊತ್ತಿಲ್ಲವಂತೆ. ಹಾಗಿದ್ರೆ ವಿಟಮಿನ್‌ ಡಿ ಪಡೆಯುವ ಸರಿಯಾದ ಮಾರ್ಗ ಯಾವುದೆಂದು ನೋಡೋಣ ಬನ್ನಿ. ಸೂರ್ಯನಿಂದ ವಿಟಮಿನ್ ಡಿ ಪಡೆಯುವ ಸರಿಯಾದ ಮಾರ್ಗ ಯಾವುದು?ಸೂರ್ಯನ ಬೆಳಕಿನಿಂದ ವಿಟಮಿನ್ ಡಿ ಪಡೆಯಲು ಪ್ರತಿದಿನ 15 ರಿಂದ 30 ನಿಮಿಷಗಳ ಕಾಲ ಸೂರ್ಯನ ಕಿರಣಗಳಿಗೆ ಮೈಯನ್ನು ಒಡ್ಡಿಕೊಂಡರೆ ಸಾಕು. ಈ ಸಮಯದಲ್ಲಿ ಮುಖ, ಕೈ ಮತ್ತು ಪಾದಗಳು ಬಿಸಿಲಿಗೆ ಒಡ್ಡಿಕೊಳ್ಳಬೇಕು. ಬಟ್ಟೆಯಿಂದ ಸಂಪೂರ್ಣ […] - [ಪಾಕಿಸ್ತಾನದಲ್ಲೂ ‘ಬಾರ್ಡರ್ 2’ ಸಿನಿಮಾ ರಿಲೀಸ್ ಮಾಡುವಂತೆ ಫ್ಯಾನ್ಸ್ ಒತ್ತಾಯ](https://veekshakavani.com/fans-demand-release-of-border-2-in-pakistan/): ಭಾರತ ಮತ್ತು ಪಾಕಿಸ್ತಾನದ ನಡುವೆ ವಾತಾವರಣ ಸರಿಯಿಲ್ಲ. ಪಾಕ್ (Pakistan) ನಡೆಸಿದ ಭಯೋತ್ಪಾದಕ ದಾಳಿಗಳ ಬಳಿಕ ಆ ದೇಶದ ಜೊತೆ ಭಾರತ ಬಹುತೇಕ ವ್ಯವಹಾರಗಳನ್ನು ಕಡಿತಗೊಳಿಸಿಕೊಂಡಿದೆ. ಭಾರತೀಯ ಸಿನಿಮಾಗಳು ಪಾಕಿಸ್ತಾನದಲ್ಲಿ ಬಿಡುಗಡೆ ಆಗುವುದಿಲ್ಲ. ಅದೇ ರೀತಿ, ಅಲ್ಲಿನ ಕಲಾವಿದರು ಮತ್ತು ತಂತ್ರಜ್ಞರಿಗೆ ಭಾರತೀಯ ಚಿತ್ರರಂಗದಲ್ಲಿ ಅವಕಾಶ ನಿರಾಕರಿಸಲಾಗಿದೆ. ಹಾಗಿದ್ದರೂ ಕೂಡ ‘ಬಾರ್ಡರ್ 2’ (Border 2) ಸಿನಿಮಾವನ್ನು ಪಾಕಿಸ್ತಾನದಲ್ಲಿ ರಿಲೀಸ್ ಮಾಡುವಂತೆ ಅಲ್ಲಿನ ಅಭಿಮಾನಿಗಳು ಬೇಡಿಕೆ ಇಟ್ಟಿದ್ದಾರೆ. ಈ ಸಿನಿಮಾದಲ್ಲಿ ಸನ್ನಿ ಡಿಯೋಲ್, ವರುಣ್ ಧವನ್ (Varun Dhawan), ಅಹಾನ್ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಅನುರಾಗ್ ಸಿಂಗ್ ಅವರು ‘ಬಾರ್ಡರ್ 2’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. 1971ರಲ್ಲಿ ನಡೆದ ಭಾರತ ಮತ್ತು ಪಾಕ್ ನಡುವಿನ ಯುದ್ಧದ ಘಟನೆಗಳನ್ನು ಆಧರಿಸಿ ಈ ಸಿನಿಮಾ ಸಿದ್ಧವಾಗಿದೆ. ಆದ್ದರಿಂದ ಸಹಜವಾಗಿಯೇ ಪಾಕ್ ಮಂದಿಗೂ ಈ ಸಿನಿಮಾ ಮೇಲೆ ಕುತೂಹಲ ಇದೆ. ಭಾರತದಲ್ಲಿ ಹಾಗೂ ಇತರೆ ದೇಶಗಳಲ್ಲಿ ಈ ಸಿನಿಮಾ ಜನವರಿ 23ರಂದು ತೆರೆಕಾಣಲಿದೆ. ಪಾಕಿಸ್ತಾನದಲ್ಲಿ ‘ಬಾರ್ಡರ್ […] - [ಪತಂಜಲಿ ದಿವ್ಯ ದಂತಮಂಜನ್ ಟೂತ್ ಪೇಸ್ಟ್; ಹಲ್ಲಿನ ಸಮಸ್ಯೆಗಳನ್ನು ನಿವಾರಿಸುವ ಆಯುರ್ವೇದ ಉತ್ಪನ್ನ](https://veekshakavani.com/patanjali-divya-dantamanjan-toothpaste-ayurvedic-product-that-relieves-dental-problems/): ಇತ್ತೀಚಿನ ದಿನಗಳಲ್ಲಿ ದಂತ ಸಮಸ್ಯೆಗಳು ವೇಗವಾಗಿ ಹೆಚ್ಚುತ್ತಿವೆ. ಕೆಟ್ಟ ಆಹಾರ ಪದ್ಧತಿ, ಅತಿಯಾದ ಸಕ್ಕರೆ ಸೇವನೆ, ತಂಬಾಕು ಸೇವನೆ ಮಾಡುವುದು, ಸರಿಯಾಗಿ ಹಲ್ಲುಜ್ಜದೇ ಇರುವುದು, ಮತ್ತು ಒತ್ತಡ ಇವೆಲ್ಲವೂ ಹಲ್ಲು ಮತ್ತು ಒಸಡುಗಳಿಗೆ ಹಾನಿ ಮಾಡುತ್ತವೆ. ಹಲ್ಲುನೋವು, ಒಸಡುಗಳಲ್ಲಿ ರಕ್ತಸ್ರಾವ, ಪಯೋರಿಯಾ ಮತ್ತು ಬಾಯಿಯ ದುರ್ವಾಸನೆಯಂತಹ ಸಮಸ್ಯೆಗಳು ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಲ್ಲೂ ಸಾಮಾನ್ಯವಾಗುತ್ತಿವೆ. ಈ ಸಂದರ್ಭಗಳಲ್ಲಿ, ಆಯುರ್ವೇದ ಟೂತ್‌ಪೇಸ್ಟ್ ಉತ್ತಮ ಆಯ್ಕೆಯಾಗಿದೆ. ಪತಂಜಲಿಯ ದಿವ್ಯ ದಂತಮಂಜನ್ ಪೇಸ್ಟ್ (Patanjali Divya Dantmanjan toothpaste) ಹಲ್ಲು ಮತ್ತು ಒಸಡುಗಳ ಆರೈಕೆಗೆ ಸಹಾಯ ಮಾಡುವ ನೈಸರ್ಗಿಕ ಆಯುರ್ವೇದ ಉತ್ಪನ್ನವಾಗಿದೆ. ಆಯುರ್ವೇದದಲ್ಲಿ, ದಂತ ಆರೋಗ್ಯವು ಒಟ್ಟಾರೆ ದೇಹದ ಆರೋಗ್ಯಕ್ಕೆ ಸಂಬಂಧಿಸಿದೆ. ದಿವ್ಯ ದಂತಮಂಜನ್ ಅನ್ನು ನೈಸರ್ಗಿಕ ಗಿಡಮೂಲಿಕೆಗಳಿಂದ ತಯಾರಿಸಲಾಗಿದೆ. ಇದು ಹಲ್ಲುಗಳನ್ನು ಸ್ವಚ್ಛಗೊಳಿಸಲು ಮತ್ತು ಒಸಡುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ದಿವ್ಯ ದಂತಮಂಜನ್ ಎಂಥ ಹಲ್ಲಿನ ಸಮಸ್ಯೆಗಳಿಗೆ ಪ್ರಯೋಜನಕಾರಿಯಾಗಿದೆ, ಅದರಲ್ಲಿ ಯಾವ್ಯಾವ ಅಂಶಗಳಿವೆ, ಆ ಪೇಸ್ಟ್ ಅನ್ನು ಹೇಗೆ ಬಳಸಬಹುದು ಎಂಬಿತ್ಯಾದಿ […] - [ರಕ್ಷಿತಾ ವಿಚಾರಕ್ಕೆ ಗಿಲ್ಲಿ – ರಾಶಿಕ ನಡುವೆ ವಾಕ್ ಸಮರ..!](https://veekshakavani.com/a-war-of-words-between-ghilli-and-rasika-over-the-issue-of-rakshita/): ಬೆಂಗಳೂರು: ಬಿಗ್ ಬಾಸ್ ಮನೆಯ ಆಟ ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದೆ. ಫಿನಾಲೆಗೆ ದಿನ ಸಮೀಪವಾಗುತ್ತಿದ್ದಂತೆ ರೋಚಕವಾಗಿ ಟಾಸ್ಕ್ ಕೂಡ ಸಾಗಿದೆ. ಅಂತಿಮ ಹಂತದ ಟಾಸ್ಕ್‌ಗಳಲ್ಲಿ ಸ್ಪಧಿಗಳು ಜಿದ್ದಾಜಿದ್ದಿಯಿಂದ ಹೋರಾಡಿದ್ದಾರೆ. ‘ಟಿಕೆಟ್ ಟು ಫಿನಾಲೆ’ ಟಾಸ್ಕ್‌ಗಾಗಿ ಸ್ಪರ್ಧಿಗಳ ನಡುವೆ ತೀವ್ರ ಪೈಪೋಟಿ ನಡೆದಿದೆ. ಫಿನಾಲೆ ಟಿಕೆಟ್ ಪಡೆಯುವ ಸುತ್ತಿನ ಟಾಸ್ಕೆಗೆ ಆಯ್ಕೆ ಆಗಲು ಧ್ರವಂತ್ – ಗಿಲ್ಲಿಗೆ ಒಂದು ಟಾಸ್ಕ್ ನೀಡಲಾಗಿದೆ. ಇದರಲ್ಲಿ ಗೆದ್ದವರು ‘ಟಿಕೆಟ್ ಟು ಫಿನಾಲೆ’ ಟಾಸ್ಕ್‌ಗೆ ಆಯ್ಕೆ ಆಗಲಿದ್ದಾರೆ. ಕಾಮಿಡಿ ಬಿಟ್ಟರೆ, ಟಾಸ್ಕ್ ಆಗಲಿ, ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಹಾಗೂ ಇತರೆ ವಿಷಯದಲ್ಲಿ ಗಿಲ್ಲಿ ಅವರ ಕೊಡುಗೆಯನ್ನು ನಾನು ಅಷ್ಟಾಗಿ ನೋಡಿಲ್ಲವೆಂದು ಧ್ರುವಂತ್ ಹೇಳಿದ್ದು, ಧ್ರುವಂತ್ – ಗಿಲ್ಲಿ ಮಧ್ಯೆ ಟಾಸ್ಕ್ ನಡೆದಿದೆ. ಇನ್ನೊಂದು ಕಡೆ ರಾಶಿಕಾ – ಗಿಲ್ಲಿ ನಡುವೆ ಮಾತಿನ ಚಕಮಕಿ ನಡೆದಿದೆ. ರಕ್ಷಿತಾ ಅವರ ವಿಚಾರದಲ್ಲಿ ಈ ಜಗಳ ನಡೆದಿದೆ. ಮೂರು ಸದಸ್ಯರುವುಳ್ಳ ಎರಡು ತಂಡಗಳನ್ನು ಮೊದಲು ರಚಿಸಿಕೊಳ್ಳಬೇಕು. ಇದಕ್ಕೆ ರಕ್ಷಿತಾ ನಾನೇ ಆಡುತ್ತೇನೆ ಎಂದಿದ್ದಾರೆ. […] - [ಮದುವೆಗೂ ಮುನ್ನ ವಿದೇಶದಲ್ಲಿ ಕಾಲ ಕಳೆದು ಬಂದ ರಶ್ಮಿಕಾ, ವಿಜಯ್ ದೇವರಕೊಂಡ](https://veekshakavani.com/vijay-deverakonda-spend-time-abroad-before-marriage/): ಖ್ಯಾತ ನಟಿ ರಶ್ಮಿಕಾ ಮಂದಣ್ಣ ಅವರು ನಟ ವಿಜಯ್ ದೇವರಕೊಂಡ (Vijay Deverakonda) ಜೊತೆ ಕ್ಲೋಸ್ ಆಗಿರುವುದು ಗೊತ್ತೇ ಇದೆ. ಶೀಘ್ರದಲ್ಲೇ ಅವರಿಬ್ಬರು ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ಅದಕ್ಕೂ ಮುನ್ನ ಒಟ್ಟಿಗೆ ವಿದೇಶ ಪ್ರವಾಸ ಮಾಡಿ ಬಂದಿದ್ದಾರೆ. ಇದನ್ನು ಅವರು ಜಗಜ್ಜಾಹೀರು ಮಾಡಿಲ್ಲ. ಬದಲಿಗೆ, ಸಾಧ್ಯವಾದಷ್ಟು ಗುಟ್ಟಾಗಿ ಕಾಲ ಕಳೆದು ಬಂದಿದ್ದಾರೆ. ಆದರೂ ಕೂಡ ಭಾರತಕ್ಕೆ ವಾಪಸ್ ಬಂದ ಕೂಡಲೇ ವಿಮಾನ ನಿಲ್ದಾಣದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇದರಿಂದ ಅಭಿಮಾನಿಗಳಿಗೆ ಎಲ್ಲವೂ ಗೊತ್ತಾಗಿದೆ. ಕ್ರಿಸ್ಮಸ್ ಹಾಗೂ ಹೊಸ ವರ್ಷದ ಪ್ರಯುಕ್ತ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಸಿನಿಮಾ ಕೆಲಸಗಳಿಂದ ಬಿಡುವು ಪಡೆದುಕೊಂಡಿದ್ದರು. ರಜೆಯ ಮಜಾ ಸವಿಯಲು ಅವರು ವಿದೇಶಕ್ಕೆ ತೆರಳಿದ್ದರು. ಇಟಲಿಯಲ್ಲಿ ಅವರಿಬ್ಬರು ಜೊತೆಯಾಗಿ ಕಾಲ ಕಳೆದಿದ್ದಾರೆ. ಆದರೆ ತಾವಿಬ್ಬರು ಒಟ್ಟಿಗೆ ಇರುವ ಯಾವುದೇ ಫೋಟೋವನ್ನು ಅವರು ಹಂಚಿಕೊಂಡಿಲ್ಲ. ಜನವರಿ 5ರಂದು ಇಟಲಿಯಿಂದ ಭಾರತಕ್ಕೆ ಮರಳಿದ ವಿಜಯ್ ದೇವರಕೊಂಡ ಮತ್ತು […] - [ಇನ್ಫೋಸಿಸ್ ಜಾಗ ಮಾರಾಟ: ಸರ್ಕಾರದಿಂದ ತನಿಖೆಗೆ ಆದೇಶ; ತಾನ್ಯಾವ ಕಾನೂನು ಉಲ್ಲಂಘಿಸಿಲ್ಲವೆಂದ](https://veekshakavani.com/infosys-land-sold-govt-orders-probe-he-said-he-had-not-broken-any-law/): ಬೆಂಗಳೂರು, ಜನವರಿ 6: ಆನೇಕಲ್ ತಾಲೂಕಿನಲ್ಲಿ ಇನ್ಫೋಸಿಸ್ನಿಂದ (Infosys) 53.5 ಎಕರೆ ಭೂಮಿಯನ್ನು ರಿಯಲ್ ಎಸ್ಟೇಟ್ ಸಂಸ್ಥೆಯಾದ ಪೂರವಂಕರಕ್ಕೆ ಮಾರಾಟ ಮಾಡಿದ ಪ್ರಕರಣ ಈಗ ದೊಡ್ಡ ಸದ್ದು ಮಾಡತೊಡಗಿದೆ. ಬೆಂಗಳೂರು ಜಿಲ್ಲಾಧಿಕಾರಿಗಳು (ಡಿಸಿ) ಈ ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ. ತನಿಖೆಯಲ್ಲಿ ಯಾರೇ ತಪ್ಪಿತಸ್ಥರೆಂದು ಗೊತ್ತಾದರೂ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೈಗೌಡ ಅವರು ತಿಳಿಸಿದ್ದಾರೆ. ಏನಿದು ಇನ್ಫೋಸಿಸ್ ಜಮೀನು ಮಾರಾಟ?ಇನ್ಫೋಸಿಸ್ ಸಂಸ್ಥೆ ಅನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ತಾನು ಹೊಂದಿರುವ 53.5 ಎಕರೆ ಪ್ರದೇಶದ ಜಾಗವನ್ನು 250 ಕೊಟಿ ರೂಗೆ ಪೂರ್ವಂಕರ ಕಂಪನಿಗೆ ಮಾರಾಟ ಮಾಡಿದೆ. ತನ್ನ ಆಸ್ತಿಪಾಸ್ತಿಗಳ ಮರುವಿಂಗಡಣೆಯ ಭಾಗವಾಗಿ ಈ ಆಸ್ತಿಯನ್ನು ಮಾರಲಾಗಿದೆ ಎಂಬುದು ಇನ್ಫೋಸಿಸ್ ನೀಡಿರುವ ಹೇಳಿಕೆ. ಅಲ್ಲದೇ, ಜಮೀನು ಮಾರಾಟದಲ್ಲಿ ಯಾವುದೇ ಕಾನೂನು ಉಲ್ಲಂಘನೆ ಮಾಡಲಾಗಿಲ್ಲ. ಎಲ್ಲಾ ನಿಯಮಗಳನ್ನು ಪಾಲಿಸಲಾಗಿದೆ. ಜೊತೆಗೆ, ಈ ಭೂಮಿ ಸರ್ಕಾರ ಅಲಾಟ್ ಮಾಡಿದ್ದಲ್ಲ. ಮಾರುಕಟ್ಟೆ ಮೌಲ್ಯಕ್ಕೆ ಖರೀದಿ ಮಾಡಿದ್ದಿದು ಎಂದು ಇನ್ಫೋಸಿಸ್ ಹೇಳಿಕೆ ಕೊಟ್ಟಿದೆ. ಸೇಲ್ ಡೀಡ್ […] - [ಸಚಿವೆ ಹೆಬ್ಬಾಳ್ಕರ್ ಪುತ್ರನ ಕಾರು ಚಾಲಕನಿಗೆ ಚಾಕು ಇರಿತ: ಬಸವಂತನ ಜೀವ ಉಳಿಸಿದ ಐಪಿಎಸ್ ಅಧಿಕಾರಿ](https://veekshakavani.com/ips-officer-saves-basavants-life-after-hebbalkars-son-stabbed-driver/): ಬೆಳಗಾವಿ, ಜನವರಿ 06: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Laxmi Hebbalkar) ಪುತ್ರನ ಕಾರು ಚಾಲಕನಿಗೆ ದುಷ್ಕರ್ಮಿಗಳಿಂದ ಚಾಕು ಇರಿದಿರುವಂತಹ (stabbed) ಘಟನೆ ಬೆಳಗಾವಿ ನಗರದ ಕ್ಲಬ್ ರಸ್ತೆಯಲ್ಲಿ ನಡೆದಿದೆ. ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದ ನಿವಾಸಿ ಬಸವಂತ ಕಡೋಲ್ಕರ್(32)ಗೆ ಬೈಕ್ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಎದೆ, ಭುಜ, ತೊಡೆ ಸೇರಿ 4 ಕಡೆ ಚಾಕುವಿನಿಂದ ಇರಿದು ಪರಾರಿ ಆಗಿದ್ದಾರೆ. ಮೈನಿಂಗ್ ವಿಚಾರಕ್ಕೆ ಹಲ್ಲೆ ಮಾಡಿದ್ದಾರೆ. ಸದ್ಯ ಗಾಯಾಳು ಬಸವಂತರನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಡೆದದ್ದೇನು?ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದ ನಿವಾಸಿ ಬಸವಂತ ಕಡೋಲ್ಕರ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಕಾರು ಚಾಲಕರಾಗಿದ್ದಾರೆ. ಬೆಳಗಾವಿ ನಗರದ ಕ್ಲಬ್ ರಸ್ತೆಯಲ್ಲಿ ಕಾರು ನಿಲ್ಲಿಸಿ ಕೆಳಗೆ ನಿಂತಿದ್ದರು. ಈ ವೇಳೆ ಬೈಕ್ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಪರಾರಿ ಆಗಿದ್ದಾರೆ. ಹಲ್ಲೆ ಮಾಡಿರುವವರು ಬೆಳಗಾವಿ ತಾಲೂಕಿನ ಗೊಜಗಾ ಮೂಲದವರು ಎನ್ನಲಾಗುತ್ತಿದೆ. ಚಾಕು ಇರಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ […] - [ರಿಲೀಸ್ ವೇಳೆ ಕೋರ್ಟ್ ಮೆಟ್ಟಿಲು ಹತ್ತಿದ ‘ಜನ ನಾಯಗನ್’ ಟೀಂ; ಆಗಿದೆ ದೊಡ್ಡ ಸಮಸ್ಯೆ](https://veekshakavani.com/the-jana-nayagan-team-went-to-court-during-the-release-of-the-film/): ಎಲ್ಲವೂ ಅಂದುಕೊಂಡಂತೆ ನಡೆದರೆ ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ (Jana Nayagan) ಸಿನಿಮಾ ಜನವರಿ 9ರಂದು ರಿಲೀಸ್ ಆಗಲಿದೆ. ಈ ವಾಕ್ಯವನ್ನು ಹೇಳಲು ಒಂದು ಕಾರಣವೂ ಇದೆ. ಸದ್ಯ ‘ಜನ ನಾಯಗನ್’ ತಂಡಕ್ಕೆ ಸೆನ್ಸಾರ್ ಸಮಸ್ಯೆ ಆಗಿದೆ. ಡಿಸೆಂಬರ್ 19ರಂದು ಸೆನ್ಸಾರ್ ತಂಡ ಸಿನಿಮಾ ವೀಕ್ಷಿಸಿದೆ. ಸಿನಿಮಾ ರಿಲೀಸ್ ಹತ್ತಿರವಾದರೂ ಇನ್ನೂ ಪ್ರಮಾಣಪತ್ರ ಸಿಕ್ಕಿಲ್ಲ. ಈ ವಿಷಯ ಚರ್ಚೆ ಹುಟ್ಟುಹಾಕಿದೆ. ಇದನ್ನು ಪ್ರಶ್ನಿಸಿ ತಂಡದವರು ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ. ರಾಜಕೀಯ ಕಥಾ ಹಂದರದ ಕಥೆ, ಧರ್ಮದ ವಿಷಯಗಳ ಬಗ್ಗೆ ಸಿನಿಮಾ ಮಾಡುವಾಗ ಹೆಚ್ಚು ಎಚ್ಚರಿಕೆ ಇರಬೇಕು. ಒಂದು ದೃಶ್ಯ, ಡೈಲಾಗ್ ಸಮಾಜದಲ್ಲಿ ಕಾಡ್ಗಿಚ್ಚು ಹೊತ್ತಿಸಬಹುದು. ಹೀಗಾಗಿ, ಈ ರೀತಿಯ ಸಿನಿಮಾಗಳನ್ನು ಸೆನ್ಸಾರ್ ಮಂಡಳಿಯವರು ಹೆಚ್ಚು ಎಚ್ಚರಿಕೆಯಿಂದ ವೀಕ್ಷಿಸುತ್ತಾರೆ. ‘ಜನ ನಾಯಗನ್’ ಸಿನಿಮಾ ವೀಕ್ಷಿಸಿದ ಸೆನ್ಸಾರ್ ಮಂಡಳಿ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಲು ಸೂಚಿಸಿದೆ. ಕೆಲವು ಪದಗಳಿಗೆ ಮ್ಯೂಟ್ ಮಾಡುವಂತೆ ನಿರ್ದೇಶಿಸಿದೆ. ಈ ಬದಲಾವಣೆಗಳನ್ನು ಮಾಡಿ ತಂಡದವರು ಸಿನಿಮಾನ ಸೆನ್ಸಾರ್ ಮಂಡಳಿಗೆ […] - [ಮಕರ ಸಂಕ್ರಾಂತಿ ಯಾವಾಗ? ಸುಗ್ಗಿ ಹಬ್ಬದ ಸಂಪ್ರದಾಯ ಮತ್ತು ಮಹತ್ವ ತಿಳಿಯಿರಿ](https://veekshakavani.com/when-is-makar-sankranti-know-the-traditions-and-significance-of-the-harvest-festival/): ಸೂರ್ಯನು ಉತ್ತರ ದಿಕ್ಕಿಗೆ ಚಲಿಸುತ್ತಿದ್ದಂತೆ ಹಬ್ಬದ ಋತು ಪ್ರಾರಂಭವಾಗುತ್ತದೆ. ಇದು ಜನವರಿ 14 ರಂದು ಆಚರಿಸಲಾಗುವ ಶುಭ ಮಕರ ಸಂಕ್ರಾಂತಿಯೊಂದಿಗೆ ಪ್ರಾರಂಭವಾಗುತ್ತದೆ. ದೇಶಾದ್ಯಂತ ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಆದರೆ, ಹಬ್ಬವನ್ನು ವಿಭಿನ್ನ ಹೆಸರುಗಳು ಮತ್ತು ವಿಧಾನಗಳೊಂದಿಗೆ ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿ ಹಬ್ಬವು ಕತ್ತಲೆಯಿಂದ ಬೆಳಕಿಗೆ, ಶೀತದಿಂದ ಶಕ್ತಿಗೆ ಪರಿವರ್ತನೆಯ ಸಮಯವನ್ನು ಸೂಚಿಸುತ್ತದೆ. ಧನು ರಾಶಿಯಿಂದ ಸೂರ್ಯ ಮಕರ ರಾಶಿಗೆ ಪ್ರವೇಶಿಸುವ ಹಬ್ಬ ಇದು. ಸಂಕ್ರಾಂತಿ ಕೇವಲ ಹಬ್ಬವಲ್ಲ, ಪ್ರಕೃತಿಯಲ್ಲಿನ ಬದಲಾವಣೆಗಳ ಸಂಕೇತವೂ ಆಗಿದೆ. ಭಾರತೀಯ ಸಂಪ್ರದಾಯದಲ್ಲಿ, ಇದು ಬಹಳ ಶುಭ ಸಮಯ. ಕೈಯಲ್ಲಿ ಹೊಸ ಬೆಳೆ ಇದೆ. ಎಲ್ಲಾ ರೈತರು ಸಂತೋಷವಾಗಿದ್ದಾರೆ. ಮನೆ ಧಾನ್ಯಗಳ ರಾಶಿಯಿಂದ ತುಂಬಿರುತ್ತದೆ. ಅದಕ್ಕಾಗಿಯೇ, ಮಕರ ಸಂಕ್ರಾಂತಿಯು ಎಲ್ಲ ರೀತಿಯಲ್ಲೂ ಸಂತೋಷವನ್ನು ತರುತ್ತದೆ, ಹೆಚ್ಚಾಗಿ ಎಳ್ಳು ಮತ್ತು ಬೆಲ್ಲದಿಂದ ಮಾಡಿದ ಸಿಹಿ ತಿನಿಸುಗಳಿಂದ ಹಿಡಿದು, ಮನೆಯ ಮುಂದೆ ರಂಗೋಲಿ, ಸಿಹಿತಿಂಡಿಗಳು, ಆಕಾಶದಲ್ಲಿ ಹಾರುವ ವರ್ಣರಂಜಿತ ಗಾಳಿಪಟಗಳವರೆಗೆ ದೇಶದ ಪ್ರತಿಯೊಂದು ಭಾಗಗಳಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತದೆ. ಸಂಕ್ರಾಂತಿ ಹಬ್ಬವು ಭಾರತದಾದ್ಯಂತ […] - [ಬಿಹಾರದಲ್ಲಿ ಪ್ರತಿಷ್ಠಾಪನೆಗೆ ಸಿದ್ಧವಾದ ವಿಶ್ವದ ಅತಿದೊಡ್ಡ ಏಕಶಿಲಾ ಶಿವಲಿಂಗ; ಇಲ್ಲಿನ ವಿಶೇಷತೆ ತಿಳಿಯಿರಿ](https://veekshakavani.com/worlds-largest-monolithic-shivling-ready/): ಬಿಹಾರದ ಚಂಪಾರಣ್ಯದಲ್ಲಿ ನಿರ್ಮಾಣವಾಗುತ್ತಿರುವ ವಿರಾಟ್ ರಾಮಾಯಣ ದೇವಾಲಯದಲ್ಲಿ ವಿಶ್ವದ ಅತಿದೊಡ್ಡ ಏಕಶಿಲಾ ಶಿವಲಿಂಗವನ್ನು ಪ್ರತಿಷ್ಠಾಪಿಸಲು ಭಾರೀ ಸಿದ್ಧತೆ ನಡೆಯುತ್ತಿದೆ. ತಮಿಳುನಾಡಿನ ಪ್ರಸಿದ್ಧ ಕರಕುಶಲ ಕೇಂದ್ರವಾದ ಮಹಾಬಲಿಪುರಂ ಬಳಿಯ ಪಟ್ಟಿಕಾಡು ಗ್ರಾಮದಲ್ಲಿ 33 ಅಡಿ ಎತ್ತರ, 210 ಟನ್ ತೂಕದ ಈ ಬೃಹತ್ ಏಕಶಿಲಾ ಶಿವಲಿಂಗವನ್ನು ಕೆತ್ತಲಾಗಿದೆ. ಇತ್ತೀಚಿಗಷ್ಟೇ ತಮಿಳುನಾಡಿನಿಂದ ರಸ್ತೆ ಮೂಲಕ ಸುಮಾರು 2,100 ಕಿಲೋಮೀಟರ್ ದೂರದಲ್ಲಿರುವ ಚಂಪಾರಣ್ಯಕ್ಕೆ ತರಲಾಗಿದೆ. ದೇವಾಲಯದ ಟ್ರಸ್ಟ್ ಪ್ರಕಾರ, ಜನವರಿ 17 ರಂದು ಶಿವಲಿಂಗ ಪ್ರತಿಷ್ಠಾಪನೆಗಾಗಿ ಒಂದು ಭವ್ಯ ಸಮಾರಂಭ ನಡೆಯಲಿದ್ದು, ದೇಶಾದ್ಯಂತದ ಸಂತರು, ವಿದ್ವಾಂಸರು ಮತ್ತು ಹೆಚ್ಚಿನ ಸಂಖ್ಯೆಯ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ತೂಕ, ಎತ್ತರ ಮತ್ತು ವಿನ್ಯಾಸ:ಈ ಶಿವಲಿಂಗವು ಸುಮಾರು 210 ಮೆಟ್ರಿಕ್ ಟನ್ ತೂಕವಿದ್ದು, ಇದು ವಿಶ್ವದ ಅತ್ಯಂತ ಭಾರವಾದ ಮತ್ತು ದೊಡ್ಡ ಶಿವಲಿಂಗವಾಗಿದೆ. ಇದರ ಎತ್ತರ 33 ಅಡಿ ಮತ್ತು ಅದರ ವೃತ್ತಾಕಾರದ ವ್ಯಾಸವು 33 ಅಡಿಗಳು. ಧಾರ್ಮಿಕ ನಂಬಿಕೆಗಳ ಪ್ರಕಾರ, 33 ಸಂಖ್ಯೆಯು 330 ಮಿಲಿಯನ್ ದೇವರು ಮತ್ತು […] - [ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು](https://veekshakavani.com/congress-leader-sonia-gandhi-hospitalised/): ನವದೆಹಲಿ, ಜನವರಿ 06: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ(Sonia Gandhi) ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ. ವೈದ್ಯರು ತಪಾಸಣೆ ನಡೆಸುತ್ತಿದ್ದಾರೆ. ಸೋಮವಾರ ಸಂಜೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅವರಿಗೆ ಕೆಲವು ದಿನಗಳಿಂದ ಕೆಮ್ಮು ಕಾಣಿಸಿಕೊಂಡಿತ್ತು. ದೆಹಲಿಯಲ್ಲಿ ಮಾಲಿನ್ಯ ಹೆಚ್ಚಾದ ಹಿನ್ನೆಲೆಯಲ್ಲಿ ಕೆಮ್ಮು ಕಡಿಮೆಯಾಗುತ್ತಿರಲಿಲ್ಲ. ಹೀಗಾಗಿ ಆಸ್ಪತ್ರೆಗೆ ತೆರಳಿದ್ದಾರೆ. ಸೋನಿಯಾ ಗಾಂಧಿಗೆ ಡಿಸೆಂಬರ್ನಲ್ಲಿ 79 ವರ್ಷ ತುಂಬಿತ್ತು. ಕೆಲವು ತಿಂಗಳ ಹಿಂದೆ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯಿಂದಾಗಿ ಅವರನ್ನು ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಫೆಬ್ರವರಿಯಲ್ಲಿ ಅವರ ಆಸ್ಪತ್ರೆಗೆ ಒಂದು ದಿನ ಚಿಕಿತ್ಸೆ ನೀಡಲಾಯಿತು, ಆ ಸಮಯದಲ್ಲಿ ಅವರು ಗ್ಯಾಸ್ಟ್ರೋಎಂಟರಾಲಜಿ ತಜ್ಞರ ಮೇಲ್ವಿಚಾರಣೆಯಲ್ಲಿದ್ದರು. ಜೂನ್ 19 ರಂದು, ಹೊಟ್ಟೆಗೆ ಸಂಬಂಧಿತ ಸಮಸ್ಯೆಗೆ ಚಿಕಿತ್ಸೆ ಪಡೆದ ನಂತರ ಸೋನಿಯಾ ಗಾಂಧಿ ಅವರನ್ನು ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಜೂನ್ 15 ರಂದು ಹೊಟ್ಟೆಯ ಸೋಂಕಿಗೆ ಒಳಗಾಘಿದ್ದರು, ನಂತರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾಲ್ಕು […] - [ರಾಮ್ಜೆಟ್ ಶಕ್ತ ಆರ್ಟಿಲರಿ ಶೆಲ್ ಹೊಂದಿರುವ ವಿಶ್ವದ ಮೊದಲ ಸೇನೆ ಭಾರತದ್ದು; ಏನಿದರ ವಿಶೇಷತೆ?](https://veekshakavani.com/india-is-the-first-army-in-the-world-to-have-an-artillery-shell-capable-of-ramjets/): ನವದೆಹಲಿ, ಜನವರಿ 6: ಭಾರತೀಯ ಸೇನೆಯ (Indian Army) 155 ಎಂಎಂ ಗನ್ಗಳಿಗೆ ರಾಮ್ಜೆಟ್ ಶಕ್ತ ಆರ್ಟಿಲರಿ ಶೆಲ್ಗಳನ್ನು ನಿಯೋಜಿಸಿದೆ. ಈ ಬಲ ಪಡೆದ ವಿಶ್ವದ ಮೊದಲ ಸಶಸ್ತ್ರ ಸೇನೆ ಭಾರತದ್ದಾಗಿದೆ. ಡಿಆರ್ಡಿಒ ಮತ್ತು ಐಐಟಿ ಮದ್ರಾಸ್ ಜಂಟಿಯಾಗಿ ಮತ್ತು ಸ್ವಂತವಾಗಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿವೆ. ಭೂಸೇನೆಯ ಬತ್ತಳಿಕೆಯಲ್ಲಿ ಇರುವ ಪ್ರಮುಖ ಶಸ್ತ್ರಾಸ್ತ್ರಗಳಲ್ಲಿ ಆರ್ಟಿಲರಿ ಶೆಲ್ಗಳು ಇವೆ. ಈ ಶೆಲ್ಗಳಿಗೆ ರಾಮ್ಜೆಟ್ ಎಂಜಿನ್ ಅಳವಡಿಸಿರುವುದು ಗೇಮ್ ಚೇಂಜರ್ ಎನಿಸಿದೆ. ಏನಿದು ರಾಮ್ಜೆಟ್?ರಾಮ್ಜೆಟ್ ಎಂಬುದು ಒಳನುಗ್ಗುವ ಗಾಳಿ ಬಳಸಿಕೊಂಡು ಕೆಲಸ ಮಾಡುವ ಎಂಜಿನ್ ಆಗಿದೆ. ತಿರುಗುವ ಕಂಪ್ರೆಸ್ಸರ್ಗಳು ಮತ್ತು ಟರ್ಬೈನ್ಗಳು ಬೇಕಾಗುವುದಿಲ್ಲ. ಗನ್ನಿಂದ ಹೊರಹಾರುವ ಶೆಲ್ ಒಂದು ನಿರ್ದಿಷ್ಟ ವೇಗ ಪಡೆದಾಗ ರಾಮ್ಜೆಟ್ ಎಂಜಿನ್ ಸಕ್ರಿಯಗೊಳ್ಳುತ್ತದೆ. ರಾಮ್ಜೆಟ್ ಎಂಜಿನ್ಗೆ ಗಾಳಿಯೇ ಪ್ರಮುಖ ಶಕ್ತಿ. ಈ ರಾಮ್ಜೆಟ್ಗಳನ್ನು ಸಾಮಾನ್ಯವಾಗಿ ಮಿಸೈಲ್ಗಳಿಗೆ ಅಳವಡಿಸಲಾಗುತ್ತದೆ. ಆರ್ಟಿಲರಿ ಶೆಲ್ಗಳಿಗೆ ಇತ್ತೀಚೆಗೆ ಇದರ ಅಳವಡಿಕೆ ಆರಂಭವಾಗಿದೆ. ಏನಿದು ಆರ್ಟಿಲರಿ ಶೆಲ್?ಇದು ಒಂದು ರೀತಿಯಲ್ಲಿ ಬುಲೆಟ್ಗಳಂತೆ. ಆದರೆ, ಸ್ಫೋಟಕಗಳು ಆರ್ಟಿಲರಿ ಶೆಲ್ನ […] - [ಆಸ್ಕರ್ಗೆ ಇನ್ನಷ್ಟು ಹತ್ತಿರವಾದ ‘ಹೋಮ್ಬೌಂಡ್’, ಇನ್ನೆಷ್ಟು ಹಂತ ಬಾಕಿ](https://veekshakavani.com/homebound-closer-to-oscars-how-many-more-steps-are-left/): ಸಿನಿಮಾಗಳಿಗಾಗಿ (Cinema) ನೀಡಲಾಗುವ ವಿಶ್ವಶ್ರೇಷ್ಠ ಪ್ರಶಸ್ತಿ ಎಂದು ನಂಬಲಾಗಿರುವ ಆಸ್ಕರ್ಸ್ ಅಥವಾ ಅಕಾಡೆಮಿ ಅವಾರ್ಡ್ಸ್ನಲ್ಲಿ ಭಾರತದ ಸಿನಿಮಾಗಳು ಪ್ರಶಸ್ತಿಯ ರೇಸಿನಲ್ಲಿದ್ದು, ಭಾರತದಿಂದ ಈ ಬಾರಿ ಅಧಿಕೃತವಾಗಿ ಆಸ್ಕರ್ಸ್ಗೆ ಆಯ್ಕೆ ಆಗಿರುವ ‘ಹೋಮ್ಬೌಂಡ್’ ಸಿನಿಮಾ ಈಗಾಗಲೇ ಕೆಲವು ಮೆಟ್ಟಿಲುಗಳನ್ನು ಹತ್ತಿದೆ. ಇದೀಗ ಆಸ್ಕರ್ಗೆ ಇನ್ನಷ್ಟು ಸನಿಹವಾಗಿದೆ ‘ಹೋಮ್ಬೌಂಡ್’ ಈ ಹಿಂದೆ ಪ್ರಾಥಮಿಕ ಹಂತ, ಅದರ ಬಳಿಕದ ಅಂತಿಮ ಹದಿನೈದರ ಪಟ್ಟಿಗೆ ಸಹ ‘ಹೋಮ್ಬೌಂಡ್’ ಆಯ್ಕೆ ಆಗಿತ್ತು. ಈಗ ನಾಮಿನೇಷನ್ಗೆ ಶಾರ್ಟ್ ಲಿಸ್ಟ್ ಆಗುವ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಕರಣ್ ಜೋಹರ್ ನಿರ್ಮಾಣ ಮಾಡಿರುವ ‘ಹೋಮ್ಬೌಂಡ್’ ಸಿನಿಮಾ ಧರ್ಮ ಮತ್ತು ಜಾತಿ ಮತ್ತು ಮಹಿಳಾ ದೌರ್ಜನ್ಯದ ಬಗೆ ವಸ್ತುವನ್ನು ಒಳಗೊಂಡ ಸಿನಿಮಾ ಆಗಿದ್ದು ಸಿನಿಮಾನಲ್ಲಿ ಇಶಾನ್ ಕಟ್ಟರ್, ಜಾನ್ಹವಿ ಕಪೂರ್ ಮತ್ತು ವಿಶಾಲ್ ಜೇಟ್ವಾ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ನೀರಜ್ ಗಯ್ವಾನ್ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಆಸ್ಕರ್ಸ್ನ ಅತ್ಯುತ್ತಮ ವಿದೇಶಿ ಸಿನಿಮಾ ವಿಭಾಗದಲ್ಲಿ ಸ್ಪರ್ಧೆಯಲ್ಲಿರುವ ‘ಹೋಮ್ಬೌಂಡ್’ ಸಿನಿಮಾ ಅಂತಿಮ ಹದಿನೈದು ಸಿನಿಮಾಗಳ […] - [ಟೊಮೊಟೊ ಬಳಸಿ ಪೂರಿ ಲಟ್ಟಿಸಿದ ಯುವಕ, ವೈರಲ್‌ ಆಯ್ತು ದೃಶ್ಯ](https://veekshakavani.com/man-makes-puri-with-tomatoes-video-goes-viral/): ನಮ್ಮಲ್ಲಿ ಪ್ರತಿಭೆಗಳಿಗೆ, ಜುಗಾಡ್ ಐಡಿಯಾಗಳಿಗೇನು ಕೊರತೆ ಇಲ್ಲ ಬಿಡಿ. ತಮ್ಮ ದಿನನಿತ್ಯದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ವಿಭಿನ್ನ ಶೈಲಿಯ ದೇಸಿ ಉಪಾಯಗಳನ್ನು (desi idea) ಬಳಸಿಕೊಳ್ಳುತ್ತಾರೆ. ಇದಕ್ಕೆ ಉದಾಹರಣಯಂತಿದೆ ಈ ವಿಡಿಯೋ. ಸಾಮಾನ್ಯವಾಗಿ ಚಪಾತಿ ಅಥವಾ ಪೂರಿ ಲಟ್ಟಿಸಲು ಲಟ್ಟಣಿಗೆ ಬಳಸುತ್ತೇವೆ. ಆದರೆ ಇಲ್ಲೊಬ್ಬ ಯುವಕನು (young man) ಟೊಮೊಟೊದಿಂದಲೇ ಪೂರಿ ಲಟ್ಟಿಸುತ್ತಿರುವ ವಿಡಿಯೋ ನೆಟ್ಟಿಗರ ಗಮನ ಸೆಳೆಯುತ್ತಿದೆ. Maximum_manthan ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿಯುವಕನೊಬ್ಬ ಲಟ್ಟಣಿಗೆ ಬದಲು ಟೊಮೊಟೊದಿಂದ ಪೂರಿ ಲಟ್ಟಿಸುವುದನ್ನು ಕಾಣಬಹುದು. ಜುಗಾಡ್ ಐಡಿಯಾ ಬಳಸಿ ಲಟ್ಟಿಸಿದ ಪೂರಿ ದುಂಡಗೆ ಇರುವುದನ್ನು ನೀವು ನೋಡಬಹುದು. ವೈರಲ್ ವಿಡಿಯೋ ಇಲ್ಲಿದೆ ಈ ವಿಡಿಯೋ ಎಂಭತ್ತೇಳು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಇದು ತಂತ್ರಜ್ಞಾನದ ಪ್ರಭಾವ ಎಂದರೆ, ಮತ್ತೊಬ್ಬರು, ಒಳ್ಳೆಯ ಪ್ರಯತ್ನ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಅದ್ಭುತ ಉಪಾಯ ಎಂದು ಹೇಳಿದ್ದಾರೆ. - [ನಿವೃತ್ತ ಮುಖ್ಯ ಶಿಕ್ಷಕ ಪಿ. ಬಾಲಕೃಷ್ಣ ಶೆಟ್ಟಿ ವಿಧಿವಶ](https://veekshakavani.com/retired-headmaster-p-balakrishna-shetty-passes-away/): ಉಡುಪಿ : ಉಡುಪಿ ಶಿವಳ್ಳಿ ಗ್ರಾಮದ ಪೆರಂಪಳ್ಳಿ ಅನುವಂಶೀಯ ಮೊಕ್ತೆಸರ ಪ್ರತಿಷ್ಠಿತ ಮನೆತನದ ಕಕ್ಕುಂಜಿ ಮೇಲ್ಮನೆ ನಿವಾಸಿ, ನಿವೃತ್ತ ಮುಖ್ಯ ಶಿಕ್ಷಕರಾದ ಪಿ. ಬಾಲಕೃಷ್ಣ ಶೆಟ್ಟಿ (ಪೆರಂಪಳ್ಳಿ ಕಕ್ಕುಂಜಿ ಮೇಲ್ಮನೆ) ಅವರು ಸ್ವಗೃಹದಲ್ಲಿ ದೈವಾಧೀನರಾಗಿದ್ದಾರೆ.ಶಿಕ್ಷಣ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದ ಅವರು ಶಿಸ್ತು, ಸರಳತೆ ಹಾಗೂ ಮಾನವೀಯ ಮೌಲ್ಯಗಳಿಗೆ ಹೆಸರುವಾಸಿಯಾಗಿದ್ದರು. ಅವರ ನಿಧನಕ್ಕೆ ಪೆರಂಪಳ್ಳಿ ಕಕ್ಕುಂಜೆಯ ಊರಪರ ಊರ ಹಿತೈಷಿಗಳು, ಅಭಿಮಾನಿಗಳು, ಬಂಧುಬಾಂಧವರು ಹಾಗೂ ಮಿತ್ರರು ತೀವ್ರ ಸಂತಾಪ ವ್ಯಕ್ತಪಡಿಸಿ, ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಿದ್ದಾರೆ. - [ಕುಂಕುಮಾರ್ಚನೆಯನ್ನು ಮಹಿಳೆಯರು ಮಾಡಿಸಬಹುದಾ? ಜ್ಯೋತಿಷ್ಯ ಸಲಹೆ ಇಲ್ಲಿದೆ](https://veekshakavani.com/can-women-get-saffron-done-heres-the-astrological-advice/): ಕುಂಕುಮಾರ್ಚನೆಯ ಮಹತ್ವ ಮತ್ತು ಅದನ್ನು ಯಾರು ಆಚರಿಸಬಹುದು ಎಂಬ ಕುರಿತು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ. ದೇವಸ್ಥಾನಗಳಲ್ಲಿ, ಮನೆಯಲ್ಲಿ ದೇವಿಗೆ ಕುಂಕುಮಾರ್ಚನೆ ಮಾಡಿಸುವುದು ಸಾಮಾನ್ಯ. ಆದರೆ ಈ ಪೂಜಾ ವಿಧಿಯನ್ನು ವಯಸ್ಸಾದವರು, ದೇವ ಭಕ್ತಿ ಇರುವವರು ಅಥವಾ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಇರುವವರು ಮಾತ್ರ ಮಾಡಬೇಕೇ ಎಂಬ ಪ್ರಶ್ನೆ ಹಲವರಲ್ಲಿದೆ. ಇದಕ್ಕೆ ಗುರೂಜಿಯವರು ‘ಕುಂಕುಮಾರ್ಚನೆಯನ್ನು ಎಲ್ಲರೂ ಮಾಡಿಸಬಹುದು’ ಎಂದು ಸ್ಪಷ್ಟ ಉತ್ತರವನ್ನು ನೀಡಿದ್ದಾರೆ. ವಿದ್ಯಾರ್ಥಿಗಳು, ವ್ಯಾಪಾರಸ್ಥರು, ರೈತರು, ಮತ್ತು ಉದ್ಯೋಗಿಗಳು ಸೇರಿದಂತೆ ತಮ್ಮ ವೃತ್ತಿಗಳಲ್ಲಿ ಇರುವ ಪ್ರತಿಯೊಬ್ಬರೂ ಈ ಪೂಜೆಯನ್ನು ಆಚರಿಸಬಹುದು. ಇದು ಅವರವರ ಜೀವನದಲ್ಲಿ ಸಕಾರಾತ್ಮಕ ಪರಿಣಾಮಗಳನ್ನು ತರುತ್ತದೆ. ವಿಶೇಷವಾಗಿ, ಮಕ್ಕಳಿಂದ ಕುಂಕುಮಾರ್ಚನೆ ಮಾಡಿಸುವುದಕ್ಕೆ ಹೆಚ್ಚಿನ ಮಹತ್ವವಿದೆ. ಮಕ್ಕಳು, ಪುಟ್ಟ ಮಕ್ಕಳು, ಹತ್ತು ವರ್ಷದ ಗಂಡು ಮಕ್ಕಳು, ಮತ್ತು ಋತುಮತಿ ಆಗುವ ಹಂತದಲ್ಲಿರುವ ಹೆಣ್ಣು ಮಕ್ಕಳಿಂದ (ಅದಕ್ಕೆ ಸೂಕ್ತವಲ್ಲದ ಕಾಲವನ್ನು ಹೊರತುಪಡಿಸಿ) ಕುಂಕುಮಾರ್ಚನೆ ಮಾಡಿಸಿದರೆ, ಅವರಿಗೆ ಸಂಸ್ಕಾರ, ಸಪ್ತ […] - [ಬಾಂಗ್ಲಾದೇಶದಲ್ಲಿ ಮತ್ತೋರ್ವ ಹಿಂದೂ ಹತ್ಯೆ; 3 ವಾರಗಳಲ್ಲಿ ಅಲ್ಪಸಂಖ್ಯಾತರ ಮೇಲೆ 5ನೇ ದಾಳಿ](https://veekshakavani.com/another-hindu-killed-in-bangladesh-5th-attack-on-minorities-in-3-weeks/): ಢಾಕಾ, ಜನವರಿ 5: ಬಾಂಗ್ಲಾದೇಶದಲ್ಲಿ ಇಂದು ಮತ್ತೊಬ್ಬ ಹಿಂದೂ ವ್ಯಕ್ತಿಯ ಗುಂಡಿನ ದಾಳಿ ನಡೆದಿದ್ದು, ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ನಂತರ ಅಲ್ಲಿ ನಡೆದ ಅಶಾಂತಿಯ ಬಳಿಕ ಬಾಂಗ್ಲಾದೇಶದಲ್ಲಿ (Bangladesh) ನಡೆದ 5ನೇ ಘಟನೆ ಇದಾಗಿದೆ. ಮೃತ ವ್ಯಕ್ತಿಯನ್ನು ರಾಣಾ ಪ್ರತಾಪ್ ಬೈರಾಗಿ ಎಂದು ಗುರುತಿಸಲಾಗಿದ್ದು, ಇಂದು ಮಧ್ಯಾಹ್ನ ಜೆಸ್ಸೋರ್ ಜಿಲ್ಲೆಯ ಕೊಪಾಲಿಯಾ ಬಜಾರ್‌ನಲ್ಲಿ ಕೆಲವು ದುಷ್ಕರ್ಮಿಗಳು ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಬೈರಾಗಿ ಅರುವಾ ಗ್ರಾಮದ ನಿವಾಸಿಯಾಗಿದ್ದು ಶಾಲೆಯಲ್ಲಿ ಪಾಠ ಹೇಳಿಕೊಡುತ್ತಿದ್ದರು. ಅವರು ಮಾರುಕಟ್ಟೆಯಲ್ಲಿದ್ದಾಗ ಕೆಲವು ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಈ ಘಟನೆಯ ನಂತರ, ದಾಳಿಕೋರರು ಓಡಿಹೋದರು. ಹಲ್ಲೆಯಿಂದಾಗಿ ಬೈರಾಗಿ ಸ್ಥಳದಲ್ಲೇ ಸಾವನ್ನಪ್ಪಿದರು. ಬೈರಾಗಿಯ ಹತ್ಯೆ ಬಾಂಗ್ಲಾದೇಶದಲ್ಲಿ ನಡೆದ ಐದನೇ ಘಟನೆಯಾಗಿದ್ದು, ಮೊದಲನೆಯದಾಗಿ, ಡಿಸೆಂಬರ್ 18ರಂದು ಮೈಮೆನ್ಸಿಂಗ್‌ನಲ್ಲಿ ಗಾರ್ಮೆಂಟ್ಸ್ ಕಾರ್ಖಾನೆಯ ಕೆಲಸಗಾರ ದೀಪು ಚಂದ್ರ ದಾಸ್ ಅವರನ್ನು ಗುಂಪೊಂದು ಹಲ್ಲೆ ನಡೆಸಿ ಥಳಿಸಿ ಕೊಂದಿತ್ತು. ಈ ಘಟನೆಯ 6 ದಿನಗಳ ನಂತರ ಪಂಗ್ಶಾ ಉಪಜಿಲ್ಲಾದಲ್ಲಿ […] - [ಥಿಯೇಟರ್ ಶೌಚಾಲಯದಲ್ಲಿ ಕ್ಯಾಮರಾ: ಮೊಬೈಲ್ನಲ್ಲಿ ಯುವತಿಯರ ಖಾಸಗಿ ವಿಡಿಯೋಗಳು ಪತ್ತೆ; ಕೇಸ್ ಬುಕ್](https://veekshakavani.com/camera-found-in-theatre-toilet-private-videos-of-young-girls-found-on-mobile-phone-casebook/): ಬೆಂಗಳೂರು, ಜನವರಿ 05: ಸಂಧ್ಯಾ ಥಿಯೇಟರ್‌ನ (Sandhya Theatre) ಬಾತ್‌ ರೂಮ್‌ನಲ್ಲಿ ಕ್ಯಾಮರಾ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಮಡಿವಾಳ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಾಗಿದೆ. ಮಹಿಳಾ ಟೆಕ್ಕಿ ದೂರಿನ ಮೇರೆಗೆ ಥಿಯೇಟರ್ ಹಾಗೂ ಸಿಬ್ಬಂದಿ ರಾಜೇಶ್, ಕಮಲ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸದ್ಯ ಆರೋಪಿಗಳನ್ನ ವಶಕ್ಕೆ ಪಡೆದು ಮಡಿವಾಳ ಪೊಲೀಸರಿಂದ ವಿಚಾರಣೆ ನಡೆದಿದೆ. ನಡೆದದ್ದೇನು?ರವಿವಾರದಂದು ಮಹಿಳಾ ಟೆಕ್ಕಿಯೊಬ್ಬರು ಸ್ನೇಹಿತರ ಜೊತೆ ಸಿನಿಮಾ ನೋಡಲು ಸಂಧ್ಯಾ ಥಿಯೇಟರ್ಗೆ ಹೋಗಿದ್ದರು. ಇಂಟರ್ವೆಲ್ ವೇಳೆ ವಾಶ್ ರೂಂಗೆ ಹೋದಾಗ ಮಹಿಳಾ ಟೆಕ್ಕಿ ಹಾಗೂ ಸ್ನೇಹಿತೆಯರ ಖಾಸಗಿ ವಿಡಿಯೋವನ್ನು ರಾಜೇಶ್ ಎಂಬಾತ ಚಿತ್ರೀಕರಣ ಮಾಡಿದ್ದಾನೆ. ಮಹಿಳಾ ಟೆಕ್ಕಿ ಆರೋಪಿಯನ್ನ ಹಿಡಿದು ಮಾಲೀಕರ ಬಳಿ ಕರೆದೊಯ್ದಿದ್ದಾರೆ. ಈ ವೇಳೆ ಕಮಲ್ ಎಂಬಾತ ವಿಡಿಯೋ ಮಾಡಲು ಹೇಳಿದ್ದಾಗಿ ಹೇಳಿಕೆ ನೀಡಿದ್ದಾನೆ. ಸದ್ಯ ರಾಜೇಶ್, ಕಮಲ್ ಮತ್ತು ಸಂಧ್ಯಾ ಥಿಯೇಟರ್ ವಿರುದ್ಧ ಕೇಸ್ ದಾಖಲಾಗಿದೆ. ಇನ್ನು ಆತನ ಮೊಬೈಲ್‌ನಲ್ಲಿ ಹಲವು ಯುವತಿಯರ ಖಾಸಗಿ ವಿಡಿಯೋಗಳು ಪತ್ತೆಯಾಗಿದ್ದು, ಹಲವು ದಿನಗಳಿಂದ […] - [ಕಾರ್ಕಳದ ವಿವಾದಿತ ಪರಶುರಾಮ ಥೀಮ್ ಪಾರ್ಕ್ನ ತಾಮ್ರದ ತಗಡಿಗೆ ಕನ್ನ](https://veekshakavani.com/copper-plate-of-controversial-parashurama-theme-park-in-karkala-vandalised/): ಉಡುಪಿ, ಜನವರಿ 05: ಭಾರಿ ವಿವಾದಕ್ಕೆ ಕಾರಣವಾಗಿ ಪಾಳುಬಿದ್ದಿರುವ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿನ ಪರಶುರಾಮ ಥೀಂ ಪಾರ್ಕ್ನನಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ. ಕಟ್ಟಡದ ಬಾಗಿಲನ್ನು ಮುರಿದು ಒಳ ನುಗ್ಗಿರುವ ಚಾಲಾಕಿಗಳು, ಮೇಲ್ಚಾವಣಿಗೆ ಹಾಕಿದ್ದ ತಾಮ್ರದ ಹೊದಿಕೆಗಳನ್ನು ಕಿತ್ತು ಹೊತ್ತೊಯ್ದಿದ್ದಾರೆ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಥೀಮ್ ಪಾರ್ಕ್ ನಿರ್ಮಾಣ ಮಾಡಲಾಗಿತ್ತು. ಪರಶುರಾಮ ಪ್ರತಿಮೆ ವಿಚಾರವಾಗಿ ಅವ್ಯವಹಾರ ಆರೋಪ ಕೇಳಿಬಂದಿದ್ದ ಹಿನ್ನೆಲೆ ತನಿಖೆಯೂ ನಡೆದಿತ್ತು. ಅನುದಾನವಿಲ್ಲದೆ ಸದ್ಯ ಥೀಂಪಾರ್ಕ್ ಪಾಳು ಬಿದ್ದಿದ್ದು, ಇಲ್ಲಿನ ವಸ್ತುಗಳು ಕಳ್ಳಕಾಕರ ಪಾಲಾಗತೊಡಗಿವೆ. ಘಟನೆ ಬೆನ್ನಲ್ಲೇ ಕಾರ್ಕಳದ ಬೈಲೂರು ಉಮಿಕಲ್ ಬೆಟ್ಟದಲ್ಲಿರುವ ಥೀಂ ಪಾರ್ಕ್ಗೆ ಶಾಸಕ ಸುನಿಲ್ ಕುಮಾರ್ ಭೇಟಿ ನೀಡಿದ್ದಾರೆ. ಈ ಸ್ಥಳಕ್ಕೆ ಎರಡೂವರೆ ವರ್ಷಗಳ ಬಳಿಕ ಶಾಸಕರು ಭೇಟಿ ನೀಡಿದ್ದು, ಅಲ್ಲಿನ ಸ್ಥಿತಿ ನೋಡಿ ಬೇಸರ ಹೊರಹಾಕಿದ್ದಾರೆ. ಬಳಿಕ ಮಾತನಾಡಿದ ಅವರು, ಕಾರ್ಕಳದ ಇತಿಹಾಸಕ್ಕೆ ಇದು ದುರ್ದೈವ. ಕಳ್ಳತನವಾಗಲು ಕಾಂಗ್ರೆಸ್ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣ. ಪರಶುರಾಮ ಥೀಂ ಪಾರ್ಕ್ ಈಗ ಅನೈತಿಕ ಚಟುವಟಿಕೆಯ […] - [ಪುಟ್ಟ ಹುಡುಗನ ಮಡಿಲಲ್ಲಿ ಹಾಯಾಗಿ ಮಲಗಿದ ನಾಯಿ ಮರಿ](https://veekshakavani.com/puppy-sleeps-comfortably-in-little-boys-lap/): ಪುಟಾಣಿಗಳೇ (Little kids) ಹಾಗೆ, ಮನೆಯಲ್ಲಿ ಶ್ವಾನಗಳಿದ್ದರೆ ಅವುಗಳ ಜತೆಗೆ ಹೆಚ್ಚು ಸಮಯ ಕಳೆಯುತ್ತವೆ. ಈ ಮನೆಯ ಮುದ್ದಿನ ಶ್ವಾನಗಳು (dogs) ಪುಟ್ಟ ಮಕ್ಕಳಿಗೆ ಕಾವಲಾಗಿರುವುದನ್ನು ನೀವು ನೋಡಿರುತ್ತೀರಿ. ಆದರೆ ಪುಟ್ಟ ಹುಡುಗನೊಬ್ಬ ನಾಯಿಮರಿಯನ್ನು ಮಡಿಲಿನಲ್ಲಿ ಮಗುವಿನಂತೆ ಮಲಗಿಸಿ  ಮುದ್ದಿಸಿರುವ ದೃಶ್ಯ ನೆಟ್ಟಿಗರ ಕಣ್ಮನ ಸೆಳೆದಿದೆ. ಈ ಮುದ್ದಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಮಂಜುನಾಥ್ ಲೋಕಪುರ್ (manjunath_lokapur) ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಪುಟ್ಟ ಹುಡುಗನ ಮಡಿಲಿನಲ್ಲಿ ಶ್ವಾನದ ಮರಿಯೊಂದು ಮಲಗಿರುವುದನ್ನು ಕಾಣಬಹುದು. ಹೌದು, ಬೀದಿ ಬದಿಯಲ್ಲಿ ಕುಳಿತಿರುವ ಪುಟ್ಟ ಬಾಲಕನು ಚಳಿಯಾಗದಂತೆ ನಾಯಿಮರಿಗೆ ಟವೆಲ್ ಸುತ್ತಿದ್ದಾನೆ. ಈ ನಾಯಿಮರಿಯೂ ಪುಟ್ಟ ಹುಡುಗನ ಮಡಿಲಿನಲ್ಲಿ ಹಾಯಾಗಿ ಮಲಗಿರುವುದನ್ನು ಕಾಣಬಹುದು. ಈ ವೇಳೆ ದಾರಿಹೋಕರೊಬ್ಬರು ಈ ಪುಟ್ಟ ಹುಡುಗನ ಕೈಗೆ ಒಂದಿಷ್ಟು ಕಾಸು ಕೊಟ್ಟು ಮಾತನಾಡಿಸುತ್ತಿರುವುದನ್ನು ನೀವು ನೋಡಬಹುದು. ವೈರಲ್ ವಿಡಿಯೋ ಇಲ್ಲಿದೆ ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ತುಂಬಾನೇ ಮುದ್ದಾಗಿದೆ ಎಂದಿದ್ದಾರೆ. ಇನ್ನೊಬ್ಬರು, […] - [‘ಜನ ನಾಯಗನ್’ ಎದುರು ‘ಪರಾಶಕ್ತಿ’ ಬಿಡುಗಡೆ ರಾಜಕೀಯ ಪ್ರೇರಿತವೇ? ಸಿಕ್ತು ಸ್ಪಷ್ಟನೆ](https://veekshakavani.com/is-the-release-of-parasakthi-against-jana-nayagan-politically-motivated-clarification/): ದಳಪತಿ ವಿಜಯ್ (Thalapathy Vijay) ಈಗ ಕೇವಲ ಸ್ಟಾರ್ ನಟ ಮಾತ್ರವಲ್ಲ, ತಮಿಳುನಾಡು ರಾಜಕೀಯಕ್ಕೆ ಪದಾರ್ಪಣೆ ಮಾಡಿರುವ ರಾಜಕಾರಣಿ. ‘ಜನ ನಾಯಗನ್’ ವಿಜಯ್ ಕಡೆಯ ಸಿನಿಮಾ ಎನ್ನಲಾಗುತ್ತಿದೆ. ತಮಿಳುನಾಡಿನಲ್ಲಿ ಚುನಾವಣೆಗಳು ಪ್ರಾರಂಭವಾದಾಗಿನಿಂದಲೂ ಸಿನಿಮಾ ಮತ್ತು ರಾಜಕೀಯ ಪರಸ್ಪರವನ್ನು ಅವಲಂಭಿಸಿವೆ. ಈಗ ‘ಜನ ನಾಯಗನ್’ ಸಿನಿಮಾ ಮೂಲಕ ವಿಜಯ್ ಸಹ ತಮ್ಮ ರಾಜಕೀಯ ಅಜೆಂಡಾ ಅನ್ನು ಪ್ರಚಾರ ಮಾಡಲು ಮುಂದಾಗಿದ್ದಾರೆ. ‘ಜನ ನಾಯಗನ್’ ಬಿಡುಗಡೆ ಆಗುತ್ತಿರುವ ದಿನವೇ ತಮಿಳಿನ ‘ಪರಾಶಕ್ತಿ’ ಸಿನಿಮಾ ಸಹ ಬಿಡುಗಡೆ ಆಗುತ್ತಿದ್ದು, ವಿಜಯ್ ಅವರ ರಾಜಕೀಯ ಎದುರಾಳಿಗಳು ವಿಜಯ್ ಅವರ ‘ಸಿನಿಮಾ ರಾಜಕೀಯಕ್ಕೆ’ ಸಿನಿಮಾ ಮೂಲಕವೇ ಅಡ್ಡಗಾಲು ಹಾಕಲೆಂದು ಮುಂದಾಗಿ, ‘ಪರಾಶಕ್ತಿ’ ಸಿನಿಮಾವನ್ನು ಅದೇ ದಿನ ಬಿಡುಗಡೆ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಇದು ನಿಜವೇ? ಈ ಪ್ರಶ್ನೆಗೆ ‘ಪರಾಶಕ್ತಿ’ ಸಿನಿಮಾದ ನಾಯಕ ಶಿವಕಾರ್ತಿಕೇಯನ್ ಉತ್ತರ ನೀಡಿದ್ದಾರೆ. ‘ಪರಾಶಕ್ತಿ’ ಸಿನಿಮಾ ನಿರ್ಮಾಣ ಮಾಡಿರುವ ಆಕಾಶ್ ಭಾಸ್ಕರನ್, ಆಡಳಿತಾರೂಢ ಡಿಎಂಕೆ ನಾಯಕರಿಗೆ ಬಲು ಆಪ್ತರು ಮತ್ತು ಹತ್ತಿರದ ಸಂಬಂಧಿ ಸಹ. ದಳಪತಿ ವಿಜಯ್ […] - [ನನ್ನ ತಂಗಿ ಎಷ್ಟು  ಮುದ್ದಾಗಿದ್ದಾಳೆ; ನವಜಾತ ಶಿಶುವನ್ನು ಕಂಡೊಡನೆ ಮುದ್ದಾಗಿ ರಿಯಾಕ್ಷನ್ ಕೊಟ್ಟ ಪುಟ್ಟ ಹುಡುಗ](https://veekshakavani.com/my-sister-is-so-cute-little-boy-reacts-cute-to-newborn-baby/): ಮನೆಯಲ್ಲಿ ಮಕ್ಕಳಿದ್ದರೆ ತಮ್ಮ ಮನೆಗೆ ಮತ್ತೊಂದು ಪುಟ್ಟ ಮಗು (little boy) ಬರುತ್ತದೆಯೆಂದರೆ ಅವರ ಖುಷಿ ಎಲ್ಲೇ ಮೀರುತ್ತದೆ. ಇನ್ನು ಆಗ ತಾನೇ ಹುಟ್ಟಿದ ಮಗುವನ್ನು ನೋಡಿದ ಬಳಿಕ ಪುಟ್ಟ ಮಕ್ಕಳು ಮುದ್ದಾಗಿ ರಿಯಾಕ್ಷನ್ ನೀಡುವುದನ್ನು  ನೀವು ನೋಡಿರಬಹುದು. ಆದ್ರೆ ಇಲ್ಲೊಬ್ಬ ಪುಟ್ಟ ಹುಡುಗ ಆಗ ತಾನೇ ಹುಟ್ಟಿದ ನವಜಾತ ಸಹೋದರಿಯನ್ನು ನೋಡಲು ಆಸ್ಪತ್ರೆಗೆ ಬಂದಿದ್ದಾನೆ. ಮಗುವನ್ನು ನೋಡುತ್ತಿದ್ದಂತೆ ಕ್ಯೂಟ್ ರಿಯಾಕ್ಷನ್‌ನೊಂದಿಗೆ ತನ್ನ ತಾಯಿಯ ಬಳಿ ಪ್ರಶ್ನೆ ಮೇಲೆ ಪ್ರಶ್ನೆ ಕೇಳಿದ್ದಾನೆ. ರಿಚಾ ಅಗರ್ವಾಲ್ (baniya2bengali) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋಗೆ ಒಬ್ಬ ತಾಯಿಯ ನೋವು ಅಗೋಚರವಾಗಿರುತ್ತದೆ. ಆಕೆಯ ತ್ಯಾಗ ಸಾಮಾನ್ಯವಾದ ಪರಿಗಣನೆ ಆಗಿರುತ್ತದೆ ಎಂಬ ಶೀರ್ಷಿಕೆಯಲ್ಲಿ ಬರೆಯಲಾಗಿದೆ. ವೈರಲ್ ವಿಡಿಯೋ ಇಲ್ಲಿದೆ ಈ ವಿಡಿಯೋದಲ್ಲಿ ಪುಟಾಣಿಯೊಂದು ತನ್ನ ನವಜಾತ ಸಹೋದರಿಯನ್ನು ನೋಡಲು ಆಸ್ಪತ್ರೆಗೆ ಬಂದಿದ್ದಾನೆ. ತನ್ನ ತಾಯಿ ಹಾಗೂ ಪುಟಾಣಿಯನ್ನು ನೋಡುತ್ತಿದ್ದು, ಆ ಬಳಿಕ ತಾಯಿಯ ಬಳಿ ನಾನಾ ಪ್ರಶ್ನೆಗಳನ್ನು ಕೇಳುತ್ತಿದ್ದಾನೆ. ತನ್ನ ತಾಯಿಯನ್ನು ನೈಟ್ ಸೂಟ್ […] - [2025ರಲ್ಲಿ 22,830 ಕೋಟಿ ಯುಪಿಐ ಟ್ರಾನ್ಸಾಕ್ಷನ್; ಡಿಸೆಂಬರ್ನಲ್ಲಿ 2,160 ಕೋಟಿ ವಹಿವಾಟು](https://veekshakavani.com/turnover-of-rs-2160-crore-in-december/): ನವದೆಹಲಿ, ಜನವರಿ 4: ಭಾರತದಲ್ಲಿ ಕಳೆದ ವರ್ಷ (2025) ಯುಪಿಐ ಟ್ರಾನ್ಸಾಕ್ಷನ್ (UPI transaction) ಸಂಖ್ಯೆಯಲ್ಲಿ ಹೊಸ ದಾಖಲೆಯೇ ನಿರ್ಮಾಣವಾಗಿದೆ. ಡಿಸೆಂಬರ್ ತಿಂಗಳಲ್ಲಿ 2,160 ಕೋಟಿ ಸಂಖ್ಯೆಯಷ್ಟು ಯುಪಿಐ ಟ್ರಾನ್ಸಾಕ್ಷನ್ ಆಗಿವೆ. ನವೆಂಬರ್ ತಿಂಗಳಲ್ಲಿ 2,047 ಕೋಟಿ ವಹಿವಾಟುಗಳಾಗಿದ್ದವು. ಇದರೊಂದಿಗೆ, ಯುಪಿಐ ಪೇಮೆಂಟ್ ಬಳಕೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಡಿಸೆಂಬರ್ನಲ್ಲಿ ಯುಪಿಐ ಟ್ರಾನ್ಸಾಕ್ಷನ್ ಸಂಖ್ಯೆ (transaction volume) 2,160 ಕೋಟಿ ಟ್ರಾನ್ಸಾಕ್ಷನ್ ಆಗಿದ್ದರೆ, ಟ್ರಾನ್ಸಾಕ್ಷನ್ ಮೌಲ್ಯ (transaction value) 28 ಲಕ್ಷ ಕೋಟಿ ರೂ ಆಗಿದೆ. ನವೆಂಬರ್ನಲ್ಲಿ 26.3 ಲಕ್ಷ ಕೋಟಿ ರೂ, ಅಕ್ಟೋಬರ್ನಲ್ಲಿ 27.3 ಲಕ್ಷ ಕೋಟಿ ರೂನಷ್ಟು ಯುಪಿಐ ಟ್ರಾನ್ಸಾಕ್ಷನ್ ಆಗಿತ್ತು. ಡಿಸೆಂಬರ್ನಲ್ಲಿ ಒಂದು ದಿನಕ್ಕೆ ಸರಾಸರಿಯಾಗಿ 69.8 ಕೋಟಿ ಸಂಖ್ಯೆಯಷ್ಟು ಯುಪಿಐ ಪೇಮೆಂಟ್ಗಳಾದಂತಾಗಿದೆ. ಒಂದು ಟ್ರಾನ್ಸಾಕ್ಷನ್ನ ಮೌಲ್ಯ 1,293 ರೂನಷ್ಟಿದೆ. ವರ್ಷದ ಹಿಂದಕ್ಕೆ ಹೋಲಿಸಿದರೆ ಡಿಸೆಂಬರ್ನಲ್ಲಿ ಯುಪಿಐ ವಹಿವಾಟು ಸಂಖ್ಯೆ ಶೇ. 29.3ರಷ್ಟು ಏರಿದೆ. ವಹಿವಾಟು ಮೌಲ್ಯ 20.3 ಪ್ರತಿಶತದಷ್ಟು ಹೆಚ್ಚಳ ಆಗಿದೆ. ಆದರೆ, ಇತರ […] - [ಎಟಿಎಂಗಳಲ್ಲಿ ಮಾರ್ಚ್ ನಂತರ 500 ರೂ ನೋಟು ಸಿಗಲ್ವಾ? ಸರ್ಕಾರದ ಸ್ಪಷ್ಟನೆ ಇದು](https://veekshakavani.com/will-you-not-get-rs-500-notes-in-atms-after-march-this-is-the-governments-clarification/): ನವದೆಹಲಿ, ಜನವರಿ 4: ಭಾರತೀಯ ರಿಸರ್ವ್ ಬ್ಯಾಂಕ್ (RBI) 500 ರೂ ನೋಟುಗಳ ಚಲಾವಣೆ ಕಡಿಮೆ ಮಾಡುತ್ತದೆ. ಮುಂಬರುವ ದಿನಗಳಲ್ಲಿ ಎಟಿಎಂಗಳಲ್ಲಿ 500 ರೂ ನೋಟುಗಳು ಸಿಕ್ಕೋದಿಲ್ಲ ಎಂದು ತಿಳಿಸುತ್ತಿರುವ ಕೆಲ ಪೋಸ್ಟ್ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಸರ್ಕಾರ 500 ರೂ ನೋಟುಗಳ ಮುದ್ರಣ ನಿಲ್ಲಿಸಿ, 100 ರೂ ನೋಟುಗಳ ಚಲಾವಣೆ ಮಾತ್ರ ಮುಂದುವರಿಸಬಹುದು ಎನ್ನುವಂತಹ ಸುದ್ದಿಗಳು ಕೆಲ ತಿಂಗಳ ಹಿಂದೆ ಹರಿದಾಡುತ್ತಿದ್ದವು. ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಈ ಸುದ್ದಿಗಳನ್ನು ಸರ್ಕಾರ ಅಲ್ಲಗಳೆದಿದೆ. ಇವು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದೆ. ಸರ್ಕಾರದ ಪಿಐಬಿ ಇಲಾಖೆಯ ಫ್ಯಾಕ್ಟ್ ಚೆಕಿಂಗ್ ಘಟಕವು ಎಕ್ಸ್ನಲ್ಲಿ ಈ ಬಗ್ಗೆ ಟ್ವೀಟ್ ಮಾಡಿದೆ. ಎಟಿಎಂಗಳಲ್ಲಿ 500 ರೂ ನೋಟುಗಳ ವಿತರಣೆ ನಿಲ್ಲಿಸಲಾಗುವುದು ಎನ್ನುವುದೆಲ್ಲಾ ಸುಳ್ಳು. ಆರ್ಬಿಐ ಇಂಥ ಯಾವುದೇ ಪ್ರಕಟಣೆ ಹೊರಡಿಸಿಲ್ಲ ಎಂದು ಸ್ಪಷ್ಟಪಡಿಸಿದೆ. ‘500 ರೂ ನೋಟುಗಳು ಚಲಾವಣೆಯಲ್ಲಿ ಮುಂದುವರಿಯುತ್ತವೆ. ಎಲ್ಲಾ ರೀತಿಯ ವಹಿವಾಟುಗಳಲ್ಲಿ ಅದನ್ನು ಮುಕ್ತವಾಗಿ ಬಳಸಬಹುದು. ಇಂಥ ಸುದ್ದಿಗಳನ್ನು ನಂಬುವ ಮುನ್ನ ಆ […] - [750 ಮೀಟರ್ ಪ್ರಯಾಣಕ್ಕೆ 21 ನಿಮಿಷ ತೆಗೆದುಕೊಂಡೆ; ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಬಿಚ್ಚಿಟ್ಟ ಮಹಿಳೆ](https://veekshakavani.com/the-750-metre-journey-took-21-minutes-bengaluru-woman-opens-up-about-traffic-woes/): ಬೆಂಗಳೂರು, ಜನವರಿ 04: ಟ್ರಾಫಿಕ್ ಎಂದರೆ ಕಣ್ಣ ಮುಂದೆ ಬರುವುದೇ ಮಾಯಾನಗರಿ ಬೆಂಗಳೂರು (Bengaluru).ಇಲ್ಲಿ ಟ್ರಾಫಿಕ್‌ ಜಾಮ್‌ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಸಿಗುವಂತೆ ಕಾಣುತ್ತಿಲ್ಲ. ಪೀಕ್‌ ಟೈಮ್‌ಗಳಲ್ಲಿ ಟ್ರಾಫಿಕ್ ಜಾಮ್ ಹೆಚ್ಚಿರುತ್ತದೆ. ಬೆಂಗಳೂರಿನ ಟ್ರಾಫಿಕ್ ಸಿಲುಕಿದ ಮಹಿಳೆಯೂ 750 ಮೀಟರ್ ಪ್ರಯಾಣಕ್ಕೆ 21 ನಿಮಿಷ ತೆಗೆದುಕೊಂಡೆ ಎಂದು ಟ್ರಾಫಿಕ್ ಸಮಸ್ಯೆಯ ಬಗ್ಗೆ ಮಾತನಾಡಿದ್ದಾರೆ. ಈ ಕುರಿತಾದ ವಿಡಿಯೋ ಸದ್ಯ ವೈರಲ್ ಆಗಿದ್ದು, ನಗರದಲ್ಲಿನ ದೈನಂದಿನ ಸಂಚಾರ ತೊಂದರೆಗಳನ್ನು ಎತ್ತಿ ತೋರಿಸಿದೆ. ಅಂಜಲಿ (anjaleeee_suresh) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಕಾರಿನ ಒಳಗಿನಿಂದ ರೆಕಾರ್ಡ್ ಮಾಡಲಾಗಿದ್ದು, ವಾಹನದ ನ್ಯಾವಿಗೇಷನ್ ಪರದೆಯ ಮೇಲೆ ಕೇಂದ್ರೀಕರಿಸಿರುವುದನ್ನು ನೋಡಬಹುದು. ಕೇವಲ 750 ಮೀಟರ್ ಕ್ರಮಿಸಲು ಅಂದಾಜು 21 ನಿಮಿಷ ತೆಗೆದುಕೊಂಡಿರುವುದನ್ನು ಇಲ್ಲಿ ತೋರಿಸಲಾಗಿದೆ. ರಾಜಧಾನಿಯಲ್ಲಿ ಅನೇಕ ಪ್ರಯಾಣಿಕರು ದೈನಂದಿನ ಹೋರಾಟ ಎಂದು ವಿವರಿಸಲಾಗಿದೆ. ವೈರಲ್ ವಿಡಿಯೋ ಇಲ್ಲಿದೆ ಈ ವಿಡಿಯೋ ಒಂದೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು […] - [ಪ್ರೀತಿಸಿದ ಹುಡುಗನ ವಶೀಕರಣ ಮಾಡುವುದಾಗಿ ನಂಬಿಸಿ ಯುವತಿಗೆ ಲಕ್ಷ ಲಕ್ಷ ವಂಚನೆ!](https://veekshakavani.com/woman-duped-of-lakhs-of-rupees-by-promising-to-seduce-the-boy-she-loved/): ಬೆಂಗಳೂರು, ಜನವರಿ 04: ಆನ್ಲೈನ್ ನಲ್ಲಿ ವಶೀಕರಣ ಆ್ಯಡ್ ನಂಬಿ ಯುವತಿಯೊಬ್ಬಳು ಲಕ್ಷ ಲಕ್ಷ ಹಣ ಕಳೆದುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪ್ರೀತಿಸಿದ ಹುಡುನನ್ನು ವಶೀಕರಣ ಮಾಡಿಸುವಂಯತೆ ಕೇಳಿದಾಕೆಯಿಂದ 2 ಲಕ್ಷಕ್ಕೂ ಹೆಚ್ಚು ಹಣ ಪಡೆದ ಆಸಾಮಿ ಮೋಸಮಾಡಿದ್ದಾನೆ. ಈ ಕುರಿತು ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಏನು ಮಾಡ್ತಿಯೋ ಮಾಡಿಕೋ ಎಂದಿದ್ದ ಗುರೂಜಿಕಷ್ಟಕ್ಕೆ ಪರಿಹಾರ ನೀಡುತ್ತೇವೆ ಎಂದು ಕೃಷ್ಣಮೂರ್ತಿ ಗುರೂಜಿ ಎಂಬ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಜಾಹೀರಾತು ನೀಡಲಾಗಿತ್ತು. ಜಾಹೀರಾತಿನಲ್ಲಿ ನೀಡಿದ್ದ ಸಂಖ್ಯೆಗೆ ಕರೆ ಮಾಡಿದ ಯುವತಿಯೊಂದಿಗೆ ಚಂದ್ರಶೇಖರ್ ಸುಗತ್ ಗುರೂಜಿ ಎಂದು ತನ್ನನ್ನು ಪರಿಚಯಿಸಿಕೊಂಡ ವ್ಯಕ್ತಿ ಮಾತನಾಡಿದ್ದ. ಪ್ರೀತಿಸಿದ ಯುವಕ ಸಿಗುತ್ತಾನೆಯೇ ಎಂದು ಕೇಳಿದ ಹುಡುಗಿಯ ಬಳಿ ಆತನ ಬಗ್ಗೆ ಮಾಹಿತಿ ಪಡೆದು ಮದುವೆ ಆಗುತ್ತದೆ, ಆದರೆ ಖರ್ಚಾಗುತ್ತದೆ ಎಂದು ನಂಬಿಸಿ ಹಂತಹಂತವಾಗಿ ಆನ್‌ಲೈನ್ ಮೂಲಕ 2.05 ಲಕ್ಷ ರೂಪಾಯಿ ಪಡೆದಿದ್ದಾನೆ. ನಂತರ ಮತ್ತೆ 4 ಲಕ್ಷ ಕೇಳಿದಾಗ ಅನುಮಾನಗೊಂಡ ಯುವತಿ ಹಣ ವಾಪಸ್ ಕೇಳಿದರೆ, ಏನು […] - [ಕೋಟಿ ಚೆನ್ನಯ್ಯರ ಕಟಕಟೆ ತಲುಪಿದ ಕೋಳಿ ಅಂಕ ವಿವಾದ: ದೈವ ಕೊಟ್ಟ ಅಭಯವೇನು?](https://veekshakavani.com/koti-chennaiahs-score-controversy-what-is-gods-promise/): ಮಂಗಳೂರು, ಜನವರಿ 04: ಕಾನೂನಿನ ನೆಪವೊಡ್ಡಿ ಪ್ರಸಿದ್ಧ ಕಂಕನಾಡಿ ಗರೋಡಿ ದೈವಸ್ಥಾನದ ಸಾಂಪ್ರಾದಾಯಿಕ ಕೋಳಿ ಅಂಕಕ್ಕೆ ಖಾಕಿ ತಡೆ ವಿಚಾರವೀಗ ಕೋಟಿ ಚೆನ್ನಯ್ಯರ ಕಟಕಟೆ ತಲುಪಿದೆ. ಜೂಜು, ಪ್ರಾಣಿ ಹಿಂಸೆ ಕಾರಣ ನೀಡಿ ಕೋಳಿ ಅಂಕಕ್ಕೆ ಮಂಗಳೂರು ಪೊಲೀಸರು ಅನುಮತಿ ನಿರಾಕರಣೆ ಬೆನ್ನಲ್ಲೇ ಗರೋಡಿ ಆಡಳಿತ ಸಮಿತಿ ದೈವಗಳ ಮೊರೆ ಹೋಗಿದೆ. ಈ ವೇಳೆ ಅಭy ನೀಡಿರುವ ದೈವ, ‘ಹಿಂದೆ ಕೋಳಿ ಅಂಕ ನಿಲ್ಲಲು ಬಿಟ್ಟಿಲ್ಲ, ಮುಂದೆಯೂ ಬಿಡುವುದಿಲ್ಲ’ ಎಂದು ತಿಳಿಸಿದೆ. ವಿಟ್ಲ ಕೇಪು ಉಳ್ಳಾಲ್ತಿ ಬಳಿಕ ಇದೀಗ, 150 ವರ್ಷಗಳ ಇತಿಹಾಸವಿರುವ ಕಂಕನಾಡಿ ಗರೋಡಿ ಜಾತ್ರೆಯ ಸಾಂಪ್ರಾದಾಯಿಕ ಕೋಳಿ ಅಂಕಕ್ಕೆ ಅನುಮತಿ ನಿರಾಕರಿಸಲಾಗಿದೆ. ಹಲವು ಬಾರಿ ಮನವಿ, ಮನವರಿಕೆ ಮಾಡಿದರೂ ಪೊಲೀಸರು ಒಪ್ಪಿಲ್ಲ. ಹೀಗಾಗಿ ಬೇರೆ ದಾರಿ ಕಾಣದೆ ಗರೋಡಿ ಆಡಳಿತ ಸಮಿತಿ ಕೋಟಿ ಚೆನ್ನಯ್ಯ ದೈವಗಳ ಮೊರೆ ಹೋಗಿದೆ. ದೈವವೇ ದಾರಿ ತೋರಿಸಿಕೊಡಬೇಕು ಎಂದು ಪ್ರಾರ್ಥನೆ ಸಲ್ಲಿಸಿದೆ. ಯಾಕೆ ಈ ಬಾರಿ ಕೋಳಿ ಅಂಕ ನಡೆದಿಲ್ಲ ಎಂದು ದರ್ಶನದ […] - [ಈ ವರ್ಷದ ಮೊದಲ ಸೂಪರ್ ಮೂನ್ ಭಾರತದಲ್ಲಿ ಕಂಡಿದ್ದು ಹೀಗೆ; ವಿಡಿಯೋ ವೈರಲ್](https://veekshakavani.com/this-is-how-the-first-supermoon-of-the-year-was-spotted-in-india-video-viral/): ಗುವಾಹಟಿ, ಜನವರಿ 3: ವುಲ್ಫ್ ಮೂನ್ (Wolf Moon) ಎಂದು ಕರೆಯಲ್ಪಡುವ 2026ರ ಮೊದಲ ಸೂಪರ್ ಮೂನ್ ಇಂದು ಭಾರತದ ಕೋಲ್ಕತ್ತಾ ಮತ್ತು ಲಕ್ನೋ, ಗುವಾಹಟಿ ಸೇರಿದಂತೆ ಹಲವಾರು ನಗರಗಳಲ್ಲಿ ಕಂಡುಬಂದಿತು. ಗುವಾಹಟಿಯ (Guwahati) ಆಕಾಶದಲ್ಲಿ ಕಂಡುಬಂದ ಸೂಪರ್ ಮೂನ್ ವಿಡಿಯೋ ಇಲ್ಲಿದೆ. ಈ ವೇಳೆ ಚಂದ್ರನು ಸರಾಸರಿ ಹುಣ್ಣಿಮೆಗಿಂತ ಶೇ. 30ರಷ್ಟು ಹೆಚ್ಚು ಪ್ರಕಾಶಮಾನವಾಗಿ ಕಾಣಿಸಿಕೊಂಡಿದ್ದನು. ಸೂರ್ಯಾಸ್ತದ ನಂತರ ಸ್ವಲ್ಪ ಸಮಯದ ನಂತರ ಈ ದೃಶ್ಯವು ಗೋಚರಿಸಿದೆ. ಇದು ವುಲ್ಫ್ ಮೂನ್. 2026ರ ವರ್ಷದ ಮೊದಲ ಹುಣ್ಣಿಮೆ. ಖಗೋಳಶಾಸ್ತ್ರಜ್ಞರು ಇದನ್ನು ಸೂಪರ್‌ ಮೂನ್ ಎಂದು ಕರೆಯುತ್ತಾರೆ. ಏಕೆಂದರೆ ಚಂದ್ರನು ಸಾಮಾನ್ಯಕ್ಕಿಂತ ಭೂಮಿಗೆ ಹತ್ತಿರದಲ್ಲಿರುತ್ತಾನೆ. ಇದು ಸಂಭವಿಸಿದಾಗ ಚಂದ್ರನು ಸಾಮಾನ್ಯ ಹುಣ್ಣಿಮೆಗಿಂತ ಶೇ. 30ರಷ್ಟು ಪ್ರಕಾಶಮಾನವಾಗಿ ಕಾಣಿಸಿಕೊಳ್ಳುತ್ತಾನೆ. - [ಉತ್ತರಾಖಂಡದ ಆರ್ಮಿ ಕ್ಯಾಂಪ್ ಒಳಗೆ ಭಾರಿ ಅಗ್ನಿ ಅವಘಡ](https://veekshakavani.com/massive-fire-breaks-out-inside-army-camp-in-uttarakhand/): ಜೋಶಿಮಠ, ಜನವರಿ 04: ಉತ್ತರಾಖಂಡದ ಜೋಶಿಮಠದ ಔಲಿ ರಸ್ತೆಯಲ್ಲಿರುವ ಸೇನಾ ಶಿಬಿರದ ಒಳಗಿನ ಅಂಗಡಿಯೊಂದರಲ್ಲಿ ಶುಕ್ರವಾರ ಭಾರಿ ಬೆಂಕಿ ಕಾಣಿಸಿಕೊಂಡಿದೆ. ವಿಡಿಯೋದಲ್ಲಿ ದಟ್ಟವಾದ ಹೊಗೆಯನ್ನು ಕಾಣಬಹುದು. ಅಗ್ನಿಶಾಮಕ ದಳದವರು ತಕ್ಷಣ ಸ್ಥಳಕ್ಕೆ ತಲುಪಿ ಬೆಂಕಿಯನ್ನು ನಂದಿಸುವ ಪ್ರಯತ್ನಗಳನ್ನು ಪ್ರಾರಂಭಿಸಿದ್ದಾರೆ.ಘಟನೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಸೇನಾ ನೆಲೆಯಲ್ಲಿ ಬೆಂಕಿ ಅವಘಡ ಸಂಭವಿಸಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಮೇ ತಿಂಗಳಲ್ಲಿ, ಲೇಹ್‌ನ ಡಿಗ್ರಿ ಕಾಲೇಜು ಬಳಿಯ ಸೇನಾ ಶಿಬಿರದಲ್ಲಿ ದೊಡ್ಡ ಬೆಂಕಿ ಕಾಣಿಸಿಕೊಂಡಿತ್ತು. ಬೆಳಗಿನ ಜಾವದಲ್ಲಿ ಬೆಂಕಿ ಕಟ್ಟಡದಾದ್ಯಂತ ಬೇಗನೆ ಹರಡಿತ್ತು, ಇದರಿಂದಾಗಿ ಸ್ಥಳೀಯ ಪೊಲೀಸರು, ಸೇನಾ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದ ತಂಡಗಳು ತ್ವರಿತ ಪ್ರತಿಕ್ರಿಯೆ ನೀಡಿದ್ದವು. - [ಕಳ್ಳಮಾರ್ಗದಲ್ಲಿ ರಷ್ಯಾಗೆ ಕರೆಸಿಕೊಂಡು ದಿವ್ಯಾಂಗನನ್ನು ಯುದ್ಧ ಭೂಮಿಯಲ್ಲಿ ಬಿಟ್ಟ ಇವರೆಂಥಾ ಜನ](https://veekshakavani.com/what-kind-of-people-did-they-smuggle-to-russia-and-leave-a-disabled-person-on-the-battlefield/): ಮನ್ದೀಪ್ ಹುಟ್ಟಿನಿಂದಲೇ ಅಂಗವಿಕಲ, ಏನಾದರೂ ಸಾಧಿಸಬೇಕೆಂಬ ಛಲವೇನೋ ಇತ್ತು ಆದರೆ ಸಾಮರ್ಥ್ಯವಿರಲಿಲ್ಲ. ಇವರು ಮೂಲತಃ ಪಂಜಾಬಿನವರು. ಯಾವುದೇ ಮಾನದಂಡಗಳನ್ನು ಗಮನಿಸಿದರೂ ಮಿಲಿಟರಿ(Military) ಸೇವೆಗಂತೂ ಅನರ್ಹರಾಗಿದ್ದರು. ಆದರೆ ಅವರ ಜೀವ ಹೋಗಿದ್ದು ಯುದ್ಧಭೂಮಿಯಲ್ಲೇ. ಕನಸಿನಲ್ಲೂ ಊಹಿಸದ ಘಟನೆಯೊಂದು ಅವರ ಜೀವನದಲ್ಲಿ ನಡೆದೇ ಬಿಟ್ಟಿತ್ತು. ಆ ಕುರಿತು ಮಾಹಿತಿ ಇಲ್ಲಿದೆ. ಡಿಸೆಂಬರ್ 2023ರಲ್ಲಿ ಯಾರೋ ಒಬ್ಬರು ನೀನು ದಿವ್ಯಾಂಗನಾದರೆ ಏನಂತೆ ಯುರೋಪ್ನಲ್ಲಿ ಒಳ್ಳೆಯ ಕೆಲಸ ಕೊಡಿಸುತ್ತೇನೆ ಬಾ ಎಂದು ಕರೆದುಕೊಂಡು ಹೋಗಿ ಯುದ್ಧ ಭೂಮಿಯಲ್ಲಿ ಬಿಟ್ಟೇ ಬಿಟ್ಟರು. ಯುದ್ಧ ಹಾಗಿರಲಿ ಸರಿಯಾಗಿ ನಡೆಯಲೂ ಆಗದ ವ್ಯಕ್ತಿ ಶತ್ರುಗಳಿಂದ ತನ್ನನ್ನು ರಕ್ಷಿಸಿಕೊಳ್ಳುವುದಾದರೂ ಹೇಗೆ? ಮನ್ದೀಪ್ ಅವರನ್ನು ಟ್ರಾವೆಲ್ ಏಜೆಂಟರು ವಂಚಿಸಿದ್ದರು, ಅರ್ಮೇನಿಯಾದ ಮೂಲಕ ಕರೆದೊಯ್ಯಲಾಯಿತು. ದಿವ್ಯಾಂಗನಾದರೂ ಷ್ಯಾದ ಸೈನ್ಯಕ್ಕೆ ಬಲವಂತವಾಗಿ ಸೇರಿಸಿಕೊಳ್ಳಲಾಯಿತು ಎಂದು ಆರೋಪಿಸಲಾಗಿದೆ. ವಿದೇಶದಿಂದ ಬಂದ ಅವರು, ಎಂದಿಗೂ ಹೋರಾಡಲು ಯೋಗ್ಯವಲ್ಲದ ಯುದ್ಧದಿಂದ ರಕ್ಷಿಸುವಂತೆ ಮನವಿ ಮಾಡಿ ಹತಾಶ ವೀಡಿಯೊ ಸಂದೇಶಗಳನ್ನು ಕಳುಹಿಸಿದರು. ಸಹಾಯಕ್ಕಾಗಿ ಬೇಡುತ್ತಾ ವೀಡಿಯೊಗಳನ್ನು ಕಳುಹಿಸುತ್ತಲೇ ಇದ್ದರು ಎಂದು ಮಂದೀಪ್ ಸಹೋದರ […] - [ಸತತ 5ನೇ ಜಯ; ಕರ್ನಾಟಕಕ್ಕೆ ಸುಲಭ ತುತ್ತಾದ ತ್ರಿಪುರ](https://veekshakavani.com/tripura-is-an-easy-hit-for-karnataka/): ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ (Vijay Hazare Trophy) ಐದನೇ ಸುತ್ತಿನ ಪಂದ್ಯದಲ್ಲಿ ಕರ್ನಾಟಕ ಹಾಗೂ ತ್ರಿಪುರ ತಂಡಗಳು ಮುಖಾಮುಖಿಯಾಗಿದ್ದವು. ಎಂದಿನಂತೆ ಈ ಪಂದ್ಯದಲ್ಲೂ ತನ್ನ ಸಾಂಘೀಕ ಪ್ರದರ್ಶನ ತೋರಿದ ಕರ್ನಾಟಕ ತಂಡ (Karnataka Cricket Team) ತ್ರಿಪುರ ತಂಡವನ್ನು 80 ರನ್ಗಳಿಂದ ಸೋಲಿಸಿ ಈ ಟೂರ್ನಿಯಲ್ಲಿ ಸತತ ಐದನೇ ಗೆಲುವು ದಾಖಲಿಸಿದೆ. ಅಂದರೆ ಈ ಟೂರ್ನಿಯಲ್ಲಿ ಕರ್ನಾಟಕ ತಂಡ ಆಡಿರುವ ಐದಕ್ಕೆ ಐದು ಪಂದ್ಯಗಳು ಗೆಲುವು ಸಾಧಿಸಿದೆ. ಈ ಮೂಲಕ ಎಲೈಟ್ ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ 332 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ತ್ರಿಪುರ ತಂಡ 252 ರನ್ಗಳಿಗೆ ಆಲೌಟ್ ಆಯಿತು. ಕರ್ನಾಟಕಕ್ಕೆ ಆರಂಭಿಕ ಆಘಾತಈ ಪಂದ್ಯದಲ್ಲಿ ಟಾಸ್ ಸೋತ ಕರ್ನಾಟಕ ಮೊದಲು ಬ್ಯಾಟಿಂಗ್‌ ಮಾಡಬೇಕಾಯಿತು. ಆದರೆ ಈ ಬಾರಿ ತಂಡಕ್ಕೆ ಕಳಪೆ ಆರಂಭ ಸಿಕ್ಕಿತು. ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ನಾಯಕ […] - [ವೆನೆಜುವೆಲಾ ಅಧ್ಯಕ್ಷ ಮಡುರೊ, ಅವರ ಪತ್ನಿಯನ್ನು ಸೆರೆಹಿಡಿದಿದ್ದೇವೆ; ದಾಳಿಯ ಬಳಿಕ ಟ್ರಂಪ್ ಘೋಷಣೆ](https://veekshakavani.com/venezuelan-president-maduro-and-his-wife-have-been-captured-trumps-announcement-after-the-attack/): ನವದೆಹಲಿ, ಜನವರಿ 3: ವೆನೆಜುವೆಲಾ ಮೇಲಿನ ದಾಳಿಯ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್‌ ಮಾಡುವ ಮೂಲಕ ಈ ದಾಳಿಯನ್ನು ದೃಢಪಡಿಸಿದ್ದಾರೆ. ಟ್ರಂಪ್ ಪ್ರಕಾರ, ಅಮೆರಿಕ ಶನಿವಾರ ರಾತ್ರಿ (ಸ್ಥಳೀಯ ಕಾಲಮಾನದ ಪ್ರಕಾರ) ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್ ಸೇರಿದಂತೆ 4 ಪ್ರಮುಖ ನಗರಗಳನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸಿತು. ಈ ದಾಳಿಯ ಬಳಿಕ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಬಂಧಿಸಿ ದೇಶದಿಂದ ಹೊರಗೆ ಕರೆದೊಯ್ಯಲಾಗಿದೆ ಎಂದು ಟ್ರಂಪ್ ಮಾಹಿತಿ ನೀಡಿದ್ದಾರೆ. ಅಮೆರಿಕದ ಸಮಯದ ಪ್ರಕಾರ ಶನಿವಾರ ರಾತ್ರಿ ಅಮೆರಿಕವು ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್ ಸೇರಿದಂತೆ 4 ನಗರಗಳನ್ನು ಗುರಿಯಾಗಿಸಿಕೊಂಡಿತು. ಇವುಗಳಲ್ಲಿ ಕ್ಯಾರಕಾಸ್, ಮಿರಾಂಡಾ, ಅರಾಗುವಾ ಮತ್ತು ಲಾ ಗೈರಾ ಸೇರಿವೆ. ಈ ರಾಜ್ಯಗಳಲ್ಲಿನ ಮಿಲಿಟರಿ ನೆಲೆಗಳ ವಿರುದ್ಧ ಅಮೆರಿಕ 7 ವೈಮಾನಿಕ ದಾಳಿಗಳನ್ನು ನಡೆಸಿತು. ಮೊದಲ ದಾಳಿ ಸ್ಥಳೀಯ ಸಮಯ ಬೆಳಗಿನ ಜಾವ 2 ಗಂಟೆಗೆ […] - [ಯಶ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸಿಗಲಿದೆ ದೊಡ್ಡ ಸರ್ಪ್ರೈಸ್](https://veekshakavani.com/yashs-fans-will-get-a-big-surprise-on-his-birthday/): ಯಶ್ (Yash) ಭಾರತದ ಬಲು ಜನಪ್ರಿಯ ಸ್ಟಾರ್ ನಟ. ‘ಕೆಜಿಎಫ್’ ಸಿನಿಮಾ ಸರಣಿಯಿಂದಾಗಿ ಯಶ್ ಅವರ ಜನಪ್ರಿಯತೆ ಸಾಗರ ದಾಟಿ ಹಬ್ಬಿದೆ. ಇದೀಗ ಯಶ್ ಅವರು ‘ಟಾಕ್ಸಿಕ್’ ಸಿನಿಮಾನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಕಳೆದ ಕೆಲವ ವರ್ಷಗಳಿಂದಲೂ ‘ಟಾಕ್ಸಿಕ್’ನಲ್ಲಿ ಯಶ್ ಬ್ಯುಸಿಯಾಗಿದ್ದಾರೆ. ಸಿನಿಮಾ ಬಿಡುಗಡೆಗೆ ಕೆಲವೇ ತಿಂಗಳು ಬಾಕಿ ಇದೆ. ಇದೀಗ ಸಿನಿಮಾದ ಪಾತ್ರಗಳ ಪೋಸ್ಟರ್ಗಳನ್ನು ಒಂದೊಂದಾಗಿ ಹಂಚಿಕೊಳ್ಳಲಾಗುತ್ತಿದೆ. ಇದೀಗ ಹರಿದಾಡುತ್ತಿರುವ ಸುದ್ದಿಯೆಂದರೆ ಯಶ್ ಅವರ ಹುಟ್ಟುಹಬ್ಬಕ್ಕೆ ‘ಟಾಕ್ಸಿಕ್’ ಸಿನಿಮಾ ತಂಡದಿಂದ ದೊಡ್ಡ ಉಡುಗೊರೆಯೇ ಸಿನಿಮಾ ಪ್ರೇಮಿಗಳಿಗೆ ಸಿಗಲಿದೆ ಎಂಬುದು. ಯಶ್ ಅವರ ಹುಟ್ಟುಹಬ್ಬ ಜನವರಿ 8ಕ್ಕಿದೆ. ಅದೇ ದಿನ ‘ಟಾಕ್ಸಿಕ್’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ. ಈ ವರೆಗೆ ‘ಟಾಕ್ಸಿಕ್’ ಸಿನಿಮಾದ ಪೋಸ್ಟರ್ಗಳು ಮಾತ್ರವೇ ಹೊರಬಿಡಲಾಗಿದೆ. ಆದರೆ ಸಿನಿಮಾದ ಟೀಸರ್ ಅಥವಾ ಟ್ರೈಲರ್ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಯಶ್ ಹುಟ್ಟುಹಬ್ಬ ಹತ್ತಿರದಲ್ಲೇ ಇದ್ದು, ಅದೇ ದಿನ ‘ಟಾಕ್ಸಿಕ್’ ಸಿನಿಮಾದ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ. ‘ಟಾಕ್ಸಿಕ್’ ಸಿನಿಮಾದ ಫಸ್ಟ್ […] - [ಆಲಸ್ಯವನ್ನು ಹೋಗಲಾಡಿಸಿ ದಿನವಿಡೀ ಆಕ್ಟಿವ್‌ ಆಗಿರಲು ಈ ಅಹಾರಗಳನ್ನು ಸೇವನೆ ಮಾಡಿ](https://veekshakavani.com/eat-these-foods-to-beat-lethargy-and-stay-active-throughout-the-day/): ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಾಗ ಆಯಾಸ (fatigue) ಕಾಣಿಸಿಕೊಳ್ಳುವುದು ಸಹಜ.  ಆದರೆ ಕೆಲವರು ಆರೋಗ್ಯವಾಗಿದ್ದರೂ ಸಹ ಲವಲವಿಕೆಯೇ ಇಲ್ಲದೆ ಸುಸ್ತಾಗಿರುತ್ತಾರೆ. ಯಾವುದೇ ತೀರಾ ಸಣ್ಣ ಕೆಲಸ ಮಾಡಿದರೂ ಸಹ ಆಯಾಸವನ್ನು ಅನುಭವಿಸುತ್ತಾರೆ. ಇದಕ್ಕೆಲ್ಲಾ ಅಗತ್ಯ ಪೋಷಕಾಂಶಗಳ ಕೊರತೆಯೇ ಮುಖ್ಯ ಕಾರಣ.  ನಮ್ಮ ಪ್ರಸ್ತುತ ಜೀವನಶೈಲಿ ಮತ್ತು ಜಂಕ್ ಫುಡ್ ಸೇವನೆ ಅಭ್ಯಾಸಗಳು ನಮ್ಮ ದೇಹವನ್ನು ಒಳಗಿನಿಂದ ದುರ್ಬಲಗೊಳಿಸುತ್ತಿವೆ, ಇದರಿಂದಾಗಿ ದೇಹದಲ್ಲಿ ಸುಸ್ತು ಆವರಿಸಿದಂತಾಗುತ್ತದೆ. ಹೀಗಿರುವಾಗ ಆಲಸ್ಯವನ್ನು ಹೋಗಲಾಡಿಸಿ ದೇಹವನ್ನು ಪುನರುಜ್ಜೀವನಗೊಳಿಸಲು ಪ್ರತಿನಿತ್ಯ ಈ ಕೆಲವು ಪೋಷಕಾಂಶಯುಕ್ತ ಆಹಾರಗಳನ್ನು ಸೇವನೆ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಆಯಾಸವನ್ನು ಕಡಿಮೆ ಮಾಡಲು ನೀವು ಸೇವಿಸಬೇಕಾದ ಆಹಾರಗಳಿವು:ಚಿಯಾ ಬೀಜಗಳು: ಚಿಯಾ ಬೀಜಗಳು ಶಕ್ತಿಯ ಶಕ್ತಿಕೇಂದ್ರವಾಗಿದೆ. ಅವು ಒಮೆಗಾ-3 ಕೊಬ್ಬಿನಾಮ್ಲಗಳು, ಪ್ರೋಟೀನ್ ಮತ್ತು ಫೈಬರ್‌ನಲ್ಲಿ ಸಮೃದ್ಧವಾಗಿದ್ದು, ಈ ಪೋಷಕಾಂಶಗಳು ದೇಹಕ್ಕೆ ದೀರ್ಘಕಾಲೀನ ಶಕ್ತಿಯನ್ನು ಒದಗಿಸುತ್ತವೆ ಮತ್ತು ಸ್ನಾಯುಗಳ ಚೇತರಿಕೆಗೆ ಸಹಾಯ ಮಾಡುತ್ತವೆ. ಅಲ್ಲದೆ ಚಿಯಾ ಬೀಜಗಳಲ್ಲಿರುವ ಕಬ್ಬಿಣ, ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂ ದೌರ್ಬಲ್ಯ ಮತ್ತು ಆಲಸ್ಯವನ್ನು ಕಡಿಮೆ ಮಾಡುತ್ತದೆ. ಚಿಯಾ […] - [ಅನಿರೀಕ್ಷಿತ ಅಪಘಾತ, ಅನಾರೋಗ್ಯ ಮುಂತಾದ ಕಷ್ಟಗಳಿಂದ ಪಾರಾಗಲು ಈ ತಂತ್ರ ಅನುಸರಿಸಿ](https://veekshakavani.com/follow-this-technique-to-avoid-unexpected-accidents-illnesses-etc/): ಹೊಸ ವರ್ಷ ಪ್ರಾರಂಭವಾಗಿದೆ, ಭವಿಷ್ಯದ ಅನಿಶ್ಚಿತತೆಗಳು, ಗೋಚಾರ ಗ್ರಹಗಳ ಸ್ಥಾನಪಲ್ಲಟಗಳು, ನಕಾರಾತ್ಮಕ ಶಕ್ತಿಗಳ ಪ್ರಭಾವ, ಪೂರ್ವ ಜನ್ಮದ ಪಾಪಗಳು ಮತ್ತು ಕರ್ಮಫಲಗಳಿಂದ ಉಂಟಾಗಬಹುದಾದ ಕಷ್ಟಗಳ ಕುರಿತು ಕಾಳಜಿ ಮೂಡುವುದು ಸಹಜ. ಅನಿರೀಕ್ಷಿತ ಅಪಘಾತಗಳು, ಆರೋಗ್ಯ ಸಮಸ್ಯೆಗಳು, ಆರ್ಥಿಕ ನಷ್ಟ, ಆಸ್ತಿ ಕಲಹಗಳು, ಕಾನೂನು ತೊಂದರೆಗಳು, ಮತ್ತು ಪ್ರೀತಿಪಾತ್ರರನ್ನು ಕಳೆದುಕೊಳ್ಳುವಂತಹ ದುಃಖಕರ ಸನ್ನಿವೇಶಗಳಿಂದ ದೂರವಿರಲು ಪ್ರಾಚೀನ ಕಾಲದಿಂದಲೂ ಅನುಸರಿಸಲಾಗುತ್ತಿರುವ ಒಂದು ವಿಶಿಷ್ಟ ತಂತ್ರದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ. ಈ ತಂತ್ರವನ್ನು ವರ್ಷದ ಪ್ರಾರಂಭದಲ್ಲಿಯೇ ಅಳವಡಿಸಿಕೊಳ್ಳುವುದರಿಂದ 2026ರ ಉದ್ದಕ್ಕೂ ಶುಭ ಫಲಿತಾಂಶಗಳನ್ನು ನಿರೀಕ್ಷಿಸಬಹುದು. ಸಂಕಟ ನಿವಾರಣಾ ತಂತ್ರದ ವಿವರಣೆ:ಈ ವಿಶೇಷ ತಂತ್ರವು ಸೂರ್ಯ ಭಗವಾನ್‌ನ ಆರಾಧನೆಯನ್ನು ಒಳಗೊಂಡಿದೆ. ಸೂರ್ಯನು ಪ್ರತ್ಯಕ್ಷ ದೇವರೆಂದು, ಆರೋಗ್ಯದಾಯಕನೆಂದು ಮತ್ತು ಕಷ್ಟನಿವಾರಕನೆಂದು ನಂಬಲಾಗಿದೆ. ಆಧ್ಯಾತ್ಮಿಕ ಮಹತ್ವ ಮತ್ತು ಫಲಿತಾಂಶಗಳು:ಈ ತಂತ್ರವು ಆರೋಗ್ಯಂ ಭಾಸ್ಕರಾದಿಚ್ಛೇತ್ (ಆರೋಗ್ಯವನ್ನು ಸೂರ್ಯನಿಂದ ಪಡೆಯಬೇಕು) ಎಂಬ ಪ್ರಾಚೀನ ನಂಬಿಕೆಯನ್ನು ಆಧರಿಸಿದೆ. ಸೂರ್ಯನು […] - [ಸುಸ್ತಾಗುತ್ತೆ ಎಂದು ಮಲ್ಟಿವಿಟಮಿನ್‌ ಸೇವನೆ ಮಾಡುತ್ತೀರಾ? ಹಾಗಿದ್ರೆ ಈ ವಿಷಯಗಳನ್ನು ತಿಳಿದುಕೊಳ್ಳಿ](https://veekshakavani.com/do-you-take-multivitamins-when-you-feel-tired-if-so-know-these-things/): ಆರೋಗ್ಯದ ಹಾಳಾಗದಂತೆ ಕಾಳಜಿ ವಹಿಸುವುದು ಎಂದರೆ ಕೇವಲ ಔಷಧಿಗಳನ್ನು ತೆಗೆದುಕೊಳ್ಳುವುದು ಎಂದಲ್ಲ, ಬದಲಾಗಿ ನಮ್ಮ ದೇಹಕ್ಕೆ ಏನು ಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವುದು. ಅದರಲ್ಲಿಯೂ ವಿಟಮಿನ್ ಮಾತ್ರೆಗಳ ಅತಿಯಾದ ಬಳಕೆ ಪ್ರಯೋಜನಕ್ಕಿಂತ ಹೆಚ್ಚಿನ ಹಾನಿಯನ್ನುಂಟುಮಾಡಬಹುದು ಎಂದು ವೈದ್ಯರು ಹೇಳುತ್ತಾರೆ. ಅಷ್ಟೇ ಅಲ್ಲ, ಆಧುನಿಕ ಜೀವನಶೈಲಿಯಲ್ಲಿ ನಿದ್ರೆ (Sleep) ಮತ್ತು ದಂತದ ಆರೋಗ್ಯದ ಬಗ್ಗೆ ಹೆಚ್ಚಿನವರು ನಿರ್ಲಕ್ಷಿಸುತ್ತಾರೆ. ನಿದ್ರೆ ಸರಿಯಾಗಿ ಆಗದಿದ್ದರೆ ಆಯಾಸವಾಗುವುದು ಸಾಮಾನ್ಯ. ಅದರಲ್ಲಿಯೂ ವಿದ್ಯಾರ್ಥಿಗಳಲ್ಲಿ ಈ ರೀತಿ ಸಮಸ್ಯೆಯನ್ನು ಹೆಚ್ಚಾಗಿ ಕಂಡುಬರುತ್ತದೆ ಇಂತಹ ಸಮಸ್ಯೆಗಳಿಂದ ಮುಕ್ತಿ ಪಡೆಯಲು, ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳಲು ಕೆಲವು ಸಿಂಪಲ್ ಸಲಹೆಗಳನ್ನು ಪಾಲಿಸುವುದು ಬಹಳ ಒಳ್ಳೆಯದು. ಅನೇಕರು ಆಯಾಸವನ್ನು ಕಡಿಮೆ ಮಾಡಲು ಮಲ್ಟಿವಿಟಮಿನ್ ಮಾತ್ರೆಗಳ ಸೇವನೆ ಮಾಡುತ್ತಾರೆ. ಆದರೆ ಆಯಾಸ ರೋಗವಲ್ಲ; ಇದು ಕೇವಲ ಒಂದು ಲಕ್ಷಣ ಅಷ್ಟೇ ಎಂಬುದನ್ನು ನೆನೆಪಿನಲ್ಲಿಡಿ. ನಿದ್ರೆಯ ಕೊರತೆ, ಅಸಮರ್ಪಕ ವ್ಯಾಯಾಮ ಮತ್ತು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯದಿರುವುದು ಆಯಾಸಕ್ಕೆ ಕಾರಣವಾಗಬಹುದು. ದೇಹದಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಎ, ಡಿ, ಇ […] - [ಜನವರಿ 3 ರಿಂದ ಭಾರತ- ಆಫ್ರಿಕಾ ನಡುವೆ ಏಕದಿನ ಸರಣಿ; ವೈಭವ್ಗೆ ನಾಯಕತ್ವ](https://veekshakavani.com/india-vs-africa-odi-series-from-january-3-leadership-for-vaibhav/): ಬಿಸಿಸಿಐನ (BCCI) ಜೂನಿಯರ್ ಪುರುಷರ ಆಯ್ಕೆ ಸಮಿತಿಯು ಡಿಸೆಂಬರ್ 27 ರ ಶನಿವಾರ 2026 ರ ಅಂಡರ್-19 ವಿಶ್ವಕಪ್‌ಗಾಗಿ (U19 World Cup 2026) ಭಾರತ ತಂಡವನ್ನು ಪ್ರಕಟಿಸಿತ್ತು. ಅಂದೇ ದಕ್ಷಿಣ ಆಫ್ರಿಕಾ ವಿರುದ್ಧದ ಯೂತ್ ಏಕದಿನ ಸರಣಿಗೂ ತಂಡವನ್ನು ಪ್ರಕಟಿಸಲಾಗಿತ್ತು. ಕಳೆದ ಕೆಲವು ತಿಂಗಳುಗಳಿಂದ ಭಾರತ ಯುವ ತಂಡದ ನಾಯಕತ್ವ ವಹಿಸಿಕೊಂಡಿರುವ ಆಯುಷ್ ಮ್ಹಾತ್ರೆ ವಿಶ್ವಕಪ್ ತಂಡವನ್ನು ಮುನ್ನಡೆಸುತ್ತಿದ್ದರೆ, ಯುವ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ (Vaibhav Suryavanshi) ಅವರನ್ನು ದಕ್ಷಿಣ ಆಫ್ರಿಕಾ ಸರಣಿಗೆ ನಾಯಕರನ್ನಾಗಿ ನೇಮಿಸಲಾಗಿದೆ. 2024 ರಲ್ಲಿ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ ವೈಭವ್ ಸೂರ್ಯವಂಶಿ ಅವರ ಮೊದಲ ನಾಯಕತ್ವದ ಸರಣಿ ಇದಾಗಿದೆ. ಅವರ ನಾಯಕತ್ವದಲ್ಲಿ, ಭಾರತ ಯುವ ಪಡೆ ಜನವರಿ 3 ರಂದು ಪ್ರಾರಂಭವಾಗುವ ಈ ಸರಣಿಯಲ್ಲಿ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಈ ಸರಣಿಯು ಮುಂಬರುವ ವಿಶ್ವಕಪ್‌ ದೃಷ್ಟಿಯಿಂದ ಟೀಂ ಇಂಡಿಯಾಗೆ ಅತ್ಯಂತ ಮುಖ್ಯವಾಗಿದೆ. ಈ ಸರಣಿ ವೈಭವ್‌ಗೆ ಬಹಳ ವಿಶೇಷವಾಗಿದ್ದು, ಈ […] - [ಬೆಂಗಳೂರಿನ ವಾಹನ ಸವಾರರಿಗೆ ಗುಡ್ ನ್ಯೂಸ್: 6 ವರ್ಷದ ಬಳಿಕ ರಸ್ತೆ ಪುನರಾರಂಭ, ತಗ್ಗಲಿದೆ ಟ್ರಾಫಿಕ್‌](https://veekshakavani.com/good-news-for-motorists-in-bengaluru-traffic-to-resume-after-6-years/): ಬೆಂಗಳೂರು, (ಜನವರಿ 02): ಬೆಂಗಳೂರಿನ (Bengaluru) ಎಂಜಿ ರಸ್ತೆ ಮತ್ತು ಕಬ್ಬನ್ ರಸ್ತೆಯನ್ನು ಸಂಪರ್ಕಿಸುವ ಕಾಮರಾಜ್ ರಸ್ತೆ (Kamaraj Road) ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಿದೆ. ಎಂಜಿ ರೋಡ್ ಮೆಟ್ರೋ ಸ್ಟೇಷನ್ ಅಂಡರ್ ಗ್ರೌಂಡ್ ಕಾಮಗಾರಿಗಾಗಿ 2019 ಜೂನ್ 15ರಿಂದ ಕಬ್ಬನ್ ರೋಡ್ ಮತ್ತು ಎಂ.ಜಿ ರೋಡ್ ನಡುವಿನ ಕಾಮರಾಜ್ ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಇದೀಗ ಕಾಮಗಾರಿ ಮುಕ್ತಾಯದ ಹಿನ್ನೆಲೆ ಬರೋಬ್ಬರಿ ಆರು ವರ್ಷಗಳ ನಂತರ ಸಂಪೂರ್ಣವಾಗಿ ವಾಹನ ಸಂಚಾರಕ್ಕೆ ಓಪನ್ ಮಾಡಲಾಗಿದೆ. ಇದರಿಂದ ಕಮರ್ಷಿಯಲ್ ಸ್ಟ್ರೀಟ್ ಮತ್ತು ಬ್ರಿಗೇಡ್ ರಸ್ತೆ ನಡುವೆ ಟ್ರಾಫಿಕ್ ಸಮಸ್ಯೆಗೆ ಬ್ರೇಕ್ ಬೀಳಲಿದೆ. ಕೆಲ ದಿನಗಳಿಂದ ಏಕ ಬಂದಿ ವಾಹನ ಸಂಚಾರಕ್ಕೆ ಅವಕಾಶ ಇದ್ದರೂ, ಎರಡೂ ಬದಿ ಸಂಚಾರಕ್ಕೆ ವಾಹನ ಸವಾರರು ಎದುರು ನೋಡುತ್ತಿದ್ದರು. ಇದೀಗ ಕಾಮರಾಜ ರಸ್ತೆಯ ಕಬ್ಬನ್ ರಸ್ತೆ ಮತ್ತು ಕಾಮಧೇನು ಎಂಪೋರಿಯಂ ಜಂಕ್ಷನ್ (ಎಂಜಿ ರಸ್ತೆ) ನಡುವಿನ ಸಂಪೂರ್ಣ ಭಾಗವನ್ನು ವಾಹನ ಸಂಚಾರಕ್ಕೆ ತೆರೆಯಲಾಗಿದೆ. ಈ ರಸ್ತೆಯನ್ನು ಪುನರ್‌ ನಿರ್ಮಿಸಲು ಸುಮಾರು 3 […] - [ಅಶ್ಲೀಲ, ಕಾನೂನುಬಾಹಿರ ವಿಷಯಗಳನ್ನು ಡಿಲೀಟ್ ಮಾಡಿ; ಎಕ್ಸ್ನ ಗ್ರೋಕ್ಗೆ ಕೇಂದ್ರ ಸರ್ಕಾರ ಎಚ್ಚರಿಕೆ](https://veekshakavani.com/delete-obscene-illegal-content-govt-warns-of-x-grove/): ನವದೆಹಲಿ, ಜನವರಿ 2: ಎಲಾನ್ ಮಸ್ಕ್ (Elon Musk) ನೇತೃತ್ವದ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ಗೆ ಕೇಂದ್ರ ಸರ್ಕಾರ ಇಂದು ಖಡಕ್ ಎಚ್ಚರಿಕೆ ನೀಡಿದೆ. ಎಕ್ಸ್​ನ AI ಅಪ್ಲಿಕೇಶನ್ ಗ್ರೋಕ್‌ನಿಂದ (Grok AI) ಹಂಚಲ್ಪಡುತ್ತಿರುವ ಎಲ್ಲಾ ಅಶ್ಲೀಲ ಮತ್ತು ಕಾನೂನುಬಾಹಿರ ವಿಷಯವನ್ನು ತಕ್ಷಣ ಡಿಲೀಟ್ ಮಾಡಬೇಕು ಎಂದು ಸರ್ಕಾರ ಸೂಚನೆ ನೀಡಿದೆ. ಒಂದುವೇಳೆ ಆ ವಿಷಯಗಳನ್ನು 72 ಗಂಟೆಯೊಳಗೆ ತೆಗೆದುಹಾಕದಿದ್ದರೆ ಕಾನೂನಿನಡಿಯಲ್ಲಿ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. 2000ರ ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು 2021ರ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳ ಅಡಿಯಲ್ಲಿ ಶಾಸನಬದ್ಧವಾದ ಬಾಧ್ಯತೆಗಳನ್ನು ಪಾಲಿಸಲು ವಿಫಲವಾದ ಕಾರಣದಿಂದ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಎಕ್ಸ್‌ನ ಭಾರತದ ಕಾರ್ಯಾಚರಣೆಗಳ ಮುಖ್ಯ ಅಧಿಕಾರಿಗೆ ನೋಟಿಸ್ ನೀಡಿದೆ. ‘ಗ್ರೋಕ್’ ನಂತಹ AI ಆಧಾರಿತ ಸೇವೆಗಳ ದುರುಪಯೋಗದ ಮೂಲಕ ಅಶ್ಲೀಲ, ನಗ್ನ, ಅಸಭ್ಯ ಮತ್ತು ಲೈಂಗಿಕತೆಯುಳ್ಳ ವಿಷಯವನ್ನು ಹೋಸ್ಟ್ ಮಾಡುವುದು, ಸೃಷ್ಟಿಸುವುದು, ಪ್ರಕಟಿಸುವುದು, […] ## Pages - [ಹಾಸನ ಜಿಲ್ಲೆ](https://veekshakavani.com/hassandistrict/) - [](https://veekshakavani.com/19931-2/) - [pragathi clg](https://veekshakavani.com/pragathi-clg/) - [Suraksha Computers](https://veekshakavani.com/18400-2/) - [Akshaya College](https://veekshakavani.com/akshaya-college/) - [ಉಡುಪಿ ಜಿಲ್ಲೆ](https://veekshakavani.com/%e0%b2%89%e0%b2%a1%e0%b3%81%e0%b2%aa%e0%b2%bf/) - [](https://veekshakavani.com/6067-2/) - [event](https://veekshakavani.com/3261-2/) - [ನಮ್ಮ ವೀಕ್ಷಕರು-ವೀಕ್ಷಕವಾಣಿಯ ಹೆಮ್ಮೆ](https://veekshakavani.com/%e0%b2%a8%e0%b2%ae%e0%b3%8d%e0%b2%ae-%e0%b2%b5%e0%b3%80%e0%b2%95%e0%b3%8d%e0%b2%b7%e0%b2%95%e0%b2%b0%e0%b3%81-%e0%b2%b5%e0%b3%80%e0%b2%95%e0%b3%8d%e0%b2%b7%e0%b2%95%e0%b2%b5%e0%b2%be%e0%b2%a3%e0%b2%bf/): ನಮ್ಮ ಹೆಮ್ಮೆಯ ವೀಕ್ಷಕರಿಗಾಗಿ ಮಾಧ್ಯಮ ಲೋಕದಲ್ಲಿ ವಿಭಿನ್ನವಾಗಿ ತೆರೆದುಕೊಳ್ಳಲಿದೆ ‘ವೀಕ್ಷಕವಾಣಿ’.ನಮ್ಮ ಆಸುಪಾಸಿನಲ್ಲಿ ನಡೆಯುವ ನಿತ್ಯ ನೂತನ ಘಟನೆಗಳ ಸುದ್ದಿಯ ಜೊತೆಗೆ ಜಗತ್ತಿನಲ್ಲಿ ನಡೆಯುವ ಹೊಸ ಅನ್ವೇಷಣೆಗಳ ಪರಿಚಯ, ಮನೆಮದ್ದು, ನಿತ್ಯ ಭವಿಷ್ಯ, ರಾಜಕೀಯ, ಕ್ರೈಂ ಜೊತೆಗೆ ಪ್ರವಾಸಿ ತಾಣಗಳ ಪರಿಚಯ ನೀಡುವ ಕಾಯಕಕ್ಕೆ ನಿಮ್ಮ ‘ವೀಕ್ಷಕವಾಣಿ’ ವೆಬ್‌ಸೈಟ್‌ ಕೈ ಹಾಕಿದೆ. ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳನ್ನು ಪ್ರಪಂಚಕ್ಕೆ ಪರಿಚಯಿಸುವ ಕಾರ್ಯವನ್ನೂ ‘ವೀಕ್ಷಕವಾಣಿ’ ಮಾಡಲಿದೆ. ಹತ್ತಾರು ಪತ್ರಿಕೆಗಳು, ದೃಶ್ಯ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳ ಸವಾಲಿನ ನಡುವೆ ವಿಭಿನ್ನವಾಗಿ ತೆರೆದುಕೊಳ್ಳಲಿರುವ ‘ವೀಕ್ಷಕವಾಣಿ’ ವೆಬ್ ಮಾಧ್ಯಮಕ್ಕೆ ತಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಇರಲಿ. - [Terms And Conditions](https://veekshakavani.com/menu/terms-and-conditions/): Welcome to Veekshakavani! These terms and conditions outline the rules and regulations for the use of Veekshakavani’s Website, located at www.veekshakavani. By accessing this website we assume you accept these terms and conditions. Do not continue to use Veekshakavani if you do not agree to take all of the terms and conditions stated on this page. The following terminology applies to these Terms and Conditions, Privacy Statement and Disclaimer Notice and all Agreements: “Client”, “You” and “Your” refers to you, the person log on this website and compliant to the Company’s terms and conditions. “The Company”, “Ourselves”, “We”, “Our” and […] - [Contact US](https://veekshakavani.com/menu/contact-us/) - [ವಿಶೇಷ ಸುದ್ದಿ](https://veekshakavani.com/%e0%b2%b5%e0%b2%bf%e0%b2%b6%e0%b3%87%e0%b2%b7-%e0%b2%b8%e0%b3%81%e0%b2%a6%e0%b3%8d%e0%b2%a6%e0%b2%bf/): ನಮ್ಮ ಹೆಮ್ಮೆಯ ವೀಕ್ಷಕರಿಗಾಗಿ ಮಾಧ್ಯಮ ಲೋಕದಲ್ಲಿ ವಿಭಿನ್ನವಾಗಿ ತೆರೆದುಕೊಳ್ಳಲಿದೆ ‘ವೀಕ್ಷಕವಾಣಿ’.ನಮ್ಮ ಆಸುಪಾಸಿನಲ್ಲಿ ನಡೆಯುವ ನಿತ್ಯ ನೂತನ ಘಟನೆಗಳ ಸುದ್ದಿಯ ಜೊತೆಗೆ ಜಗತ್ತಿನಲ್ಲಿ ನಡೆಯುವ ಹೊಸ ಅನ್ವೇಷಣೆಗಳ ಪರಿಚಯ, ಮನೆಮದ್ದು, ನಿತ್ಯ ಭವಿಷ್ಯ, ರಾಜಕೀಯ, ಕ್ರೈಂ ಜೊತೆಗೆ ಪ್ರವಾಸಿ ತಾಣಗಳ ಪರಿಚಯ ನೀಡುವ ಕಾಯಕಕ್ಕೆ ನಿಮ್ಮ ‘ವೀಕ್ಷಕವಾಣಿ’ ವೆಬ್‌ಸೈಟ್‌ ಕೈ ಹಾಕಿದೆ. ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳನ್ನು ಪ್ರಪಂಚಕ್ಕೆ ಪರಿಚಯಿಸುವ ಕಾರ್ಯವನ್ನೂ ‘ವೀಕ್ಷಕವಾಣಿ’ ಮಾಡಲಿದೆ. ಹತ್ತಾರು ಪತ್ರಿಕೆಗಳು, ದೃಶ್ಯ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳ ಸವಾಲಿನ ನಡುವೆ ವಿಭಿನ್ನವಾಗಿ ತೆರೆದುಕೊಳ್ಳಲಿರುವ ‘ವೀಕ್ಷಕವಾಣಿ’ ವೆಬ್ ಮಾಧ್ಯಮಕ್ಕೆ ತಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಇರಲಿ. - [ಪ್ರವಾಸಿ ತಾಣ](https://veekshakavani.com/%e0%b2%aa%e0%b3%8d%e0%b2%b0%e0%b2%b5%e0%b2%be%e0%b2%b8%e0%b2%bf-%e0%b2%a4%e0%b2%be%e0%b2%a3/) - [ಮನೆ ಮದ್ದು](https://veekshakavani.com/%e0%b2%ae%e0%b2%a8%e0%b3%86-%e0%b2%ae%e0%b2%a6%e0%b3%8d%e0%b2%a6%e0%b3%81/) - [ಮನರಂಜನೆ](https://veekshakavani.com/%e0%b2%ae%e0%b2%a8%e0%b2%b0%e0%b2%82%e0%b2%9c%e0%b2%a8%e0%b3%86/) - [ಕ್ರೀಡೆ](https://veekshakavani.com/%e0%b2%95%e0%b3%8d%e0%b2%b0%e0%b3%80%e0%b2%a1%e0%b3%86/) - [ರಾಜ್ಯ ಸುದ್ದಿ](https://veekshakavani.com/%e0%b2%b0%e0%b2%be%e0%b2%9c%e0%b3%8d%e0%b2%af-%e0%b2%b8%e0%b3%81%e0%b2%a6%e0%b3%8d%e0%b2%a6%e0%b2%bf/) - [ಕ್ರೈಂ ನ್ಯೂಸ್](https://veekshakavani.com/%e0%b2%95%e0%b3%8d%e0%b2%b0%e0%b3%88%e0%b2%82-%e0%b2%a8%e0%b3%8d%e0%b2%af%e0%b3%82%e0%b2%b8%e0%b3%8d/) - [Menu](https://veekshakavani.com/menu/): This content is password protected. To view it please enter your password below: Password: - [Privacy Policy](https://veekshakavani.com/menu/privacy-policy/): Effective date: 02/07/2023 This Privacy Policy describes how https://veekshakavani.com/ collects, uses, and shares personal information when you visit our website [https://veekshakavani.com/] . GDPR ComplianceWe are committed to complying with the General Data Protection Regulation (GDPR) when handling personal data. our website is designed to protect the privacy of EU citizens and we collect, process, and store personal data in accordance with GDPR requirements. We value your privacy and are committed to protecting your personal information. By using our Website, you consent to the collection and use of your personal information as described in this Privacy Policy. 1.1 Personal Information We […] [comment]: # (Generated by Hostinger Tools Plugin)