ಮಂಜೇಶ್ವರ : ಓಣಂ ಮಾರುಕಟ್ಟೆಯಲ್ಲಿ ಸ್ಥಳೀಯ ಕೃಷಿ ಉತ್ಪನ್ನಗಳು ಲಭ್ಯವಾಗುವಂತೆ ಮಾಡಲು ನವ ಕೇರಳ ಕ್ರಿಯಾ ಯೋಜನೆಯ ಮಂಜೇಶ್ವರ ಬ್ಲೋಕ್ ಮಿಷನ್ ಸಮಾಲೋಚನಾ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಬ್ಲೋಕ್ ಪಂಚಾಯತ್ ಹಾಲ್ ನಲ್ಲಿ ನಡೆದ ಸಭೆಯಲ್ಲಿ ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಸಮೀನ ಟೀಚರ್ ಅಧ್ಯಕ್ಷತೆ ವಹಿಸಿದ್ದರು. ನವ ಕೇರಳ ಕ್ರಿಯಾ ಯೋಜನೆ ಜಿಲ್ಲಾ ಕಾರ್ಡಿನೆಟರ್ ಕೆ. ಬಾಲಕೃಷ್ಣನ್ ಪ್ರಾಸ್ತಾವಿಕ ಭಾಷಣ ಮಾಡಿದರು. ಬ್ಲೋಕ್ ನ ವಿವಿಧ ಪಂಚಾಯತಿಗಳಲ್ಲಿ 30,000 ದಷ್ಟು ತರಕಾರಿ ಬೀಜಗಳು ಹಾಗೂ ಗಿಡಗಳನ್ನು ಕೃಷಿ ಭವನದ ಮೂಲಕ ವಿತರಣೆ ಮಾಡಲಾಗಿದೆ. ಕೈಗಾರಿಕಾ ಕೇಂದ್ರಗಳಲ್ಲಿ ಕೃಷಿ, ಪರಿಸರ ಸಂರಕ್ಷಣೆ, ಹಸಿರುವನ, ಜಲ ಸಂರಕ್ಷಣೆ, ಲೈಫ್ ಮಿಷನ್, ಹರಿತ ಕೇರಳ ಮಿಷನ್, ವಿದ್ಯಾಕಿರಣ, ಆರ್ದ್ರ ಮಿಷನ್ ಯೋಜನೆಗಳ ಕುರಿತು ಸಮಗ್ರವಾದ ಪರಿಶೀಲನೆ ಮಾಡಲಾಯಿತು.ಪಂಚಾಯತ್ ಅಧ್ಯಕ್ಷೆರಾದ ಸುಂದರಿ ಆರ್.ಶೆಟ್ಟಿ, ಭಾರತಿ.ಎಸ್,ಕೃಷಿ ಅಸಿಸ್ಟೆಂಟ್ ನಿರ್ದೇಶಕ ಅರ್ಜಿತ, ಪಿ.ಕೆ ತಿರುಮಲೇಶ, ಅಮೃತ. ಜಿ.ಎ, ಗೋಕುಲನ್ ಟಿ, ಕೆ.ಬೀನ , ರಾಮಚಂದ್ರನ್ ಪಿ.ಕೆ, ವಿನಯ್ ಕುಮಾರ್ ಬಾಯಾರು ಎಂಬಿವರು ಮಾತನಾಡಿದರು. ಮನೋಜ್ ಎಸ್ ಸ್ವಾಗತಿಸಿದರು..