ತಿರುವನಂತಪುರ: ಸ್ಥಳೀಯಾಡಳಿತ ಚುನಾವಣೆಯ ದ್ವಿತೀಯ ಹಂತದ ಮತದಾನ ಇಂದು ಬೆಳಗ್ಗೆ 7 ಗಂಟೆಗೆ ಆರಂಭವಾಗಿದ್ದು,ಸಂಜೆ 6ರವರೆಗೆ ಮತದಾನ ನಡೆಯಲಿದೆ. ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್, ವಯನಾಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಇಂದು ಮತದಾನ ನಡೆಯುತ್ತಿದೆ.

ಏಳು ಜಿಲ್ಲೆಗಳಲ್ಲಿ ಒಟ್ಟು 15337176 ಮತದಾರರಿದ್ದಾರೆ. 7246269 ಪುರುಷರು, 8090746 ಮಹಿಳಾ ಮತದಾರರು ಮಾತ್ರವಲ್ಲದೆ 161 ತೃತೀಯ ಲಿಂಗಿ ಮತದಾರರು ವಿವಿದೆಡೆಯ ಮತಗಟ್ಟೆಗಳಲ್ಲಿ ಮತ ಚಲಾಯಿಸಲು ಅರ್ಹತೆ ಪಡೆದಿದ್ದಾರೆ. 3293 ಅನಿವಾಸಿ ಮತದಾರರು ಕೂಡ ಪಟ್ಟಿಯಲ್ಲಿದ್ದಾರೆ. 38994 ಅಭ್ಯರ್ಥಿಗಳು ಚುನಾವಣೆ ಕಣದಲ್ಲಿದ್ದಾರೆ.
ಮತದಾನದ ಎಲ್ಲೆಡೆ ಶಾಂತಯುತ ವಾತವರಣ ಕಂಡು ಬರುತ್ತಿದೆ. ಸೂಕ್ಷ್ಮ ಸಂವೇದಿ ಪ್ರದೇಶಗಳಲ್ಲಿ ಚುನಾವಣಾ ಆಯೋಗವು ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ.




