Kasaragod:ನಾಳೆ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ; 1370 ಮತಗಟ್ಟೆಗಳು ಸಜ್ಜು

Share with

ಕಾಸರಗೋಡು: ಜಿಲ್ಲೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಡಿ.11ರಂದು ಚುನಾವಣೆ ನಡೆಯಲಿದ್ದು, ಮತಗಟ್ಟೆಗಳಿರುವ ಮತಯಂತ್ರ ಹಾಗೂ ಸಾಮಗ್ರಿಗಳನ್ನು ಇಂದು ಬೆಳಗ್ಗೆ ವಿತರಿಸಲಾಯಿತು.

ನಾಳೆ ಬೆಳಗ್ಗೆ 7ರಿಂದ ಸಂಜೆ 6 ಗಂಟೆ ತನಕ ಮತದಾನ ನಡೆಯಲಿದೆ. ಡಿ.13ರಂದು ಫಲಿತಾಂಶ ಹೊರಬೀಳಲಿದೆ.

ಜಿಲ್ಲೆಯ 38 ಗ್ರಾಮ ಪಂಚಾಯತ್ ಗಳು, ಮೂರು ನಗರಸಭೆ, ಆರು ಬ್ಲಾಕ್ ಪಂಚಾಯತ್ ಹಾಗೂ ಒಂದು ಜಿಲ್ಲಾ ಪಂಚಾಯತ್ ಸೇರಿದಂತೆ 48 ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ.

ಗ್ರಾಮ ಪಂಚಾಯತ್ ಗಳ 725 ವಾರ್ಡ್ ಗಳಿಗೆ ಒಟ್ಟು 1,242 ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗಿದೆ. ನಗರಸಭೆಗಳ 120 ವಾರ್ಡ್ ಗಳಿಗೆ 128 ಮತಗಟ್ಟೆಗಳು ಸೇರಿದಂತೆ ಒಟ್ಟು 1,370 ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗಿದೆ. ಬ್ಲಾಕ್ ಪಂಚಾಯತ್ ಗಳ 92 ಡಿವಿಜನ್ ಗಳಿಗೆ ಹಾಗೂ ಜಿಲ್ಲಾ ಪಂಚಾಯತ್ ನ 18 ವಾರ್ಡ್ ಗಳು ಸೇರಿದಂತೆ 955 ವಾರ್ಡ್ ಗಳಿಗೆ ಮತದಾನ ನಡೆಯಲಿದೆ.

ಜಿಲ್ಲೆಯಲ್ಲಿ 11,12,190 ಮತದಾರರಿದ್ದಾರೆ. ಈ ಪೈಕಿ 5,24,022 ಪುರುಷರು ಹಾಗೂ 5,88,156 ಮಹಿಳಾ ಮತದಾರರಿದ್ದಾರೆ.12 ಮಂಗಳಮುಖಿಯರು, 129 ಅನಿವಾಸಿ ಭಾರತೀಯ ಮತದಾರರು ಒಳಗೊಂಡಿದ್ದಾರೆ. ಒಟ್ಟು 1370 ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗಿದೆ.

ಮತಯಂತ್ರ ಸೇರಿದಂತೆ ಚುನಾವಣಾ ಸಾಮಗ್ರಿಗಳ ವಿತರಣೆಗೆ ಆರು ಬ್ಲಾಕ್ ಪಂಚಾಯತ್ ಹಾಗೂ ಮೂರು ನಗರಸಭಾ ಮಟ್ಟದಲ್ಲಿ ಮೂರು ಸೇರಿದಂತೆ 9 ಕೇಂದ್ರಗಳನ್ನು ವ್ಯವಸ್ಥೆ ಗೊಳಿಸಲಾಗಿದೆ.

ಡಿ.11ರಂದು ಬೆಳಗ್ಗೆ 7ರಿಂದ ಸಂಜೆ 6 ಗಂಟೆಯ ತನಕ ಮತದಾನ ನಡೆಯಲಿದೆ. 11 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಸೂಕ್ಷ್ಮ ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗುವುದು. ಚುನಾವಣಾ ಕರ್ತವ್ಯಕ್ಕೆ 6,584 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.


Share with

Leave a Reply

Your email address will not be published. Required fields are marked *