ಮಂಜೇಶ್ವರ : ವಿದ್ಯಾರ್ಥಿಗಳು ಶಾಲೆಗೆ ತಲುಪಬೇಕಾದರೆ ಎರಡು ಅಡ್ಡಗೋಡೆಗಳನ್ನು ಜಿಗಿದು ದಾಟಿ ಸಾಗಬೇಕಾಗಿದೆ. ಉಪ್ಪಳ ಶಾಲೆಯ ವಿದ್ಯಾರ್ಥಿಗಳು ಈ ಸಂಕಷ್ಟವನ್ನು ಎದುರಿಸುತಿದ್ದಾರೆ.
ಉಪ್ಪಳ ಭಾಗದಿಂದ ಆಗಮಿಸುವ ವಿದ್ಯಾರ್ಥಿಗಳು ಶಾಲೆಯ ಸಮೀಪವಿರುವ ಸರ್ವೀಸ್ ರಸ್ತೆಯಲ್ಲಿ ಬಸ್ಸಿನಿಂದ ಇಳಿದು ಮೊದಲಿನ ತಡೆಗೋಡೆಯಿಂದ ಜಿಗಿದ ಬಳಿಕ ರಾ. ಹೆದ್ದಾರಿಯನ್ನು ದಾಟಿದ ಬಳಿಕ ಇನ್ನೊಂದು ತಡೆಗೋಡೆಯನ್ನು ಜಿಗಿದ ಬಳಿಕ ಶಾಲೆಗೆ ತಲುಪುತಿದ್ದಾರೆ.
ಇದಲ್ಲದಿದ್ದರೆ ಉಪ್ಪಳ ಗೇಟ್ ಬಳಿ ಬಸ್ಸಿನಿಂದ ಇಳಿದು ಕಿಲೋ ಮೀಟರ್ ತನಕ ನಡೆದು ಕೊಂಡೇ ಶಾಲೆಗೆ ತಲುಪಬೇಕಾಗಿದೆ. ರಸ್ತೆ ಕಾಮಗಾರಿ ಆರಂಭಕ್ಕೆ ಮೊದಲೇ ಊರವರು ಹಾಗೂ ವಿವಿಧ ಸಂಘಟನೆಗಳು ಶಾಲಾ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದ ರೀತಿಯಲ್ಲಿ ಶಾಲೆಗೆ ತಲುಪಲು ಸಣ್ಣ ಮಟ್ಟದ ಒಂದು ಅಂಡರ್ ಪಾಸ್ ನಿರ್ಮಿಸುವಂತೆ ಬೇಡಿಕೆ ಇಟ್ಟಿದ್ದರೂ ಯು ಎಲ್ ಸಿ ಸಿ ಅಧಿಕಾರಿಗಳು ಇದನ್ನು ಪರಿಗಣನೆಗೆ ತೆಗೆದಿಲ್ಲವೆನ್ನಲಾಗಿದೆ.
ವಿದ್ಯಾರ್ಥಿಗಳ ಸಹಿತ ದಿನನಿತ್ಯ ನೂರಾರು ಮಂದಿ ನಡೆದು ಕೊಂಡು ಹೋಗುತ್ತಿರುವ ಷಟ್ಪಥ ರಸ್ತೆಯಲ್ಲಿ ಅಮಿತ ವೇಗದಲ್ಲಿ ಆಗಮಿಸುತ್ತಿರುವ ವಾಹನಗಳನ್ನು ಯೋಚಿಸಿ ಪೋಷಕರು ಆತಂಕದಲ್ಲಿದ್ದಾರೆ.