ಬೆಂಗಳೂರು, ನವೆಂಬರ್ 25: ಮೈಸೂರು, ಬೆಂಗಳೂರು ಸೇರಿ ರಾಜ್ಯದ ಹತ್ತು ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರು ಇಂದು ದಾಳಿ ನಡೆಸಿದ್ದಾರೆ. ವಿವಿಧ ಇಲಾಖೆಯ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಲಾಗಿದ್ದು, ಆ ಪೈಕಿ ಹಲವರ ಮನೆಯಲ್ಲಿ ರೇಡ್ ವೇಳೆ ಅಪಾರ ಪ್ರಮಾಣದ ಚಿನ್ನ-ಬೆಳ್ಳಿ, ನಗದು ಮತ್ತು ದಾಖಲೆ ಪತ್ರಗಳು ಲಭ್ಯವಾಗಿರುವ ಮಾಹಿತಿ ಸಿಕ್ಕಿದೆ.
ಯಾರ್ಯಾರಿಗೆ ಲೋಕಾಯುಕ್ತ ಶಾಕ್?
ಬೆಂಗಳೂರು- ಎಲೆಕ್ಟ್ರಾನಿಕ್ ಸಿಟಿ ಆರ್ಟಿಒ ಕಚೇರಿ ಶಾಖಾಧೀಕ್ಷಕ ಕೃಷ್ಣಮೂರ್ತಿ ಪಿ.
ಮಂಡ್ಯ- ನಗರ ಪಾಲಿಕೆ CAO ಪುಟ್ಟಸ್ವಾಮಿ
ಬೀದರ್- ಕೃಷ್ಣಾ ಮೇಲ್ದಂಡೆ ಯೋಜನೆ ಮುಖ್ಯ ಇಂಜಿನಿಯರ್ ಪ್ರೇಮ್ ಸಿಂಗ್
ಮೈಸೂರು- ಹೂಟಗಳ್ಳಿ ನಗರ ಪಾಲಿಕೆ ರೆವಿನ್ಯೂ ಇನ್ಸ್ಪೆಕ್ಟರ್ ರಾಮಸ್ವಾಮಿ ಸಿ.
ಧಾರವಾಡ- ಕರ್ನಾಟಕ ವಿಶ್ವ ವಿದ್ಯಾಲಯದ ಸಹ ಪ್ರಾಧ್ಯಾಪಕ ಸುಭಾಶ್ ಚಂದ್ರ
ಧಾರವಾಡ- ಪಶು ಕ್ಲಿನಿಕ್ ಹುಲಿಗೋಲ್ ಹಿರಿಯ ಪರೀಕ್ಷಕ ಸತೀಶ್
ಶಿವಮೊಗ್ಗ- SIMS ಮೆಡಿಕಲ್ ಕಾಲೇಜಿನ FDA ಲಕ್ಷ್ಮೀಪತಿ ಸಿ.ಎನ್.
ದಾವಣಗೆರೆ- APMC ಸ. ನಿರ್ದೇಶಕ ಪ್ರಭು ಜೆ.
ಮೈಸೂರು- ಮಡಿಕೇರಿ PWD, ಸ.ಅ.ಇಂಜಿನಿಯರ್ ಗಿರೀಶ್ ಡಿ.ಎಂ.
ದಾಳಿ ವೇಳೆ ಏನೆಲ್ಲ ಪತ್ತೆ?
ಎಲೆಕ್ಟ್ರಾನಿಕ್ ಸಿಟಿ ಆರ್ಟಿಒ ಕಚೇರಿ ಶಾಖಾಧೀಕ್ಷಕ ಕೃಷ್ಣಮೂರ್ತಿ ಪಿ. ಅವರ ಮನೆಯಲ್ಲಿ ದಾಳಿ ವೇಳೆ 4 ಕೋಟಿ 26 ಲಕ್ಷ ಮೌಲ್ಯದ ಆಸ್ತಿಪಾಸ್ತಿ ಪತ್ತೆಯಾಗಿದೆ.3 ಕೋಟಿ 3 ಲಕ್ಷ ಮೌಲ್ಯದ ಸ್ಥಿರಾಸ್ತಿ, 92 ಲಕ್ಷ ಮೌಲ್ಯದ ಚರಾಸ್ತಿ, 7 ನಿವೇಶನ, 4 ವಾಸದ ಮನೆ, 5 ಎಕರೆ 30 ಗುಂಟೆ ಕೃಷಿ ಜಮೀನು ಸೇರಿ ಕೃಷ್ಣಮೂರ್ತಿ ಪಿ. ಬಳಿ 3 ಕೋಟಿ 3 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ. 22 ಲಕ್ಷ ನಗದು, 32 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, 16 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತು, 22 ಲಕ್ಷ ಮೌಲ್ಯದ ವಾಹನಗಳ ಬಗ್ಗೆಯೂ ಮಾಹಿತಿ ಸಿಕ್ಕಿದೆ.





