ಚಿಪ್ಪಾರು ಕಂಡಿಗದಲ್ಲಿ ಲಾರಿ-ಬಸ್ ಅಪಘಾತ ಪ್ರಯಾಣಿಕರು ಅಪಾಯದಿಂದ ಪಾರು

Share with

ಪೈವಳಿಕೆ: ಖಾಸಾಗಿ ಬಸ್ ಹಾಗೂ ಲಾರಿ ಮಧ್ಯೆ ಉಂಟಾದ ಅಪಘಾತದಲ್ಲಿ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಉಪ್ಪಳದಿಂದ ಕುರುಡಪದವುಗೆ ಸಂಚರಿಸುತ್ತಿರುವ ಖಾಸಾಗಿ ಬಸ್ ಹಾಗೂ ಎದುರು ಭಾಗದಿಂದ ಆಗಮಿಸಿದ ಲಾರಿ ಮಧ್ಯೆ ಅಪಘಾತ ಸಂಭವಿಸಿದೆ. ಶನಿವಾರ ಮಧ್ಯಾಹ್ನ ಚಿಪ್ಪಾರು ಬಳಿಯ ಖಂಡಿಗ ಎಂಬಲ್ಲಿ ಅಪಘಾತ ಉಂಟಾಗಿದೆ. ಇಳಿಜಾರ್‌ನಲ್ಲಿ ಲಾರಿಯ ಬ್ರೇಕ್ ಸಿಗದ ಹಿನ್ನೆಲೆಯಲ್ಲಿ ನಿಯಂತ್ರಣ ತಪ್ಪಿ ಲಾರಿ ಬಸ್‌ಗೆ ಡಿಕ್ಕಿಹೊಡೆದಿನೆನ್ನಲಾಗಿದೆ. ಬಸ್-ಲಾರಿ ಹಾನಿಗೊಂಡಿದೆ. ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ರಸ್ತೆಯಲ್ಲಿ ಅಲ್ಪ ಹೊತ್ತು ಸಂಚಾರ ಸ್ಥಗಿತಗೊಂಡಿದೆ. ಈ ಪ್ರದೇಶದಲ್ಲಿ ವಾಹನವನ್ನು ಬದಿಗೆ ಸರಿಸಲು ಸ್ಥಳವಕಾಶದ ಕೊರತೆ ಹಾಗೂ ರಸ್ತೆ ಹದಗೆಟ್ಟು ಶೋಚನೀಯವಸ್ಥೆಯಿಂದಲೇ ಅಪಘಾತ ಉಂಟಾಗಲು ಕಾರಣವೆಂದು ನಾಗರಿಕರು ದೂರಿದ್ದಾರೆ. ಈ ರಸ್ತೆ ದುರಸ್ಥಿಗೆ ಹಲವು ವರ್ಷಗಳಿಂದ ಒತ್ತಾಯಿಸಿಸುತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷ÷್ಯ ವಹಿಸುತ್ತಿರುವುದಾಗಿ ಸಾರ್ವಜನಿಕರು ಆರೋಪಿಸಿದ್ದಾರೆ.


Share with

Leave a Reply

Your email address will not be published. Required fields are marked *