Madikeri: ಫೇಸ್‌ಬುಕ್ ಫ್ರೆಂಡ್‌ಶಿಪ್.. ಪೇಚಿಗೆ ಸಿಲುಕಿದ ವ್ಯಕ್ತಿ ಪ್ರಕರಣ; ಇಬ್ಬರ ಬಂಧನ

Share with

ಮಡಿಕೇರಿ: ಫೇಸ್ ಬುಕ್ ಗೆಳತಿಯ ಮನೆಗೆ ಬಂದ ವ್ಯಕ್ತಿಯನ್ನು ಬೆತ್ತಲೆಗೊಳಿಸಿ, ಹಲ್ಲೆ ನಡೆಸಿ ಹಣಕ್ಕಾಗಿ ಪೀಡಿಸಿದ ಆರೋಪದಡಿ ತಲೆಮರೆಸಿಕೊಂಡಿದ್ದ ನಾಲ್ವರಲ್ಲಿ ಇಬ್ಬರು ಆರೋಪಿಗಳನ್ನು ಮಡಿಕೇರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಗರದ ದೇಚೂರು ಹೌಸಿಂಗ್ ಬೋರ್ಡ್ ಕಾಲೋನಿ ನಿವಾಸಿ, ಪೇಯಿಂಟ್ ಮಳಿಗೆಯಲ್ಲಿ ಕೆಲಸ ಮಾಡುವ ಬಿ.ಎ.ದರ್ಶನ್ ರೈ (25) ಹಾಗೂ ಆಟೋ ಚಾಲಕ ಎಸ್.ರವಿ (31) ಬಂಧಿತ ಆರೋಪಿಗಳು.

ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರೆದಿದೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ವ್ಯಾಪಾರಿ ಮಹದೇವ ಹೆಚ್.ಪಿ (39) ಎಂಬವರು ಇಬ್ಬರು ಮಹಿಳೆಯರು ಸೇರಿ 6 ಮಂದಿಯ ವಿರುದ್ಧ ಮಡಿಕೇರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಈಗಾಗಲೇ ಪೊಲೀಸರು ರಚನಾ ಹಾಗೂ ಆಕೆಯ ತಾಯಿ ಮಾಲತಿಯನ್ನು ವಶಕ್ಕೆ ಪಡೆದಿದ್ದರು.


Share with

Leave a Reply

Your email address will not be published. Required fields are marked *