ಮಹಾಕುಂಭಮೇಳಕ್ಕೆ ತೆರಳಿದ್ದ ಕನ್ನಡಿಗರಿಗೆ ಶಾಕ್: ಪ್ರಯಾಗ್ರಾಜ್ನಲ್ಲಿ ಊಟ, ನೀರಿಲ್ಲದೇ ಪರದಾಟ

Share with

ದೇವನಹಳ್ಳಿ, ಜನವರಿ 28: ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ (Mahakumbh) ಬರುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಈಗಾಗಲೇ ಸುಮಾರು 16 ಕೋಟಿ ಭಕ್ತರು ಪುಣ್ಯಸ್ನಾ ಮಾಡಿದ್ದು, ನಾಳೆ ಮೌನಿ ಅಮಾವಾಸ್ಯೆ ಹಿನ್ನೆಲೆ ಕುಂಭಮೇಳಕ್ಕೆ ಸುಮಾರು 10 ಕೋಟಿ ಭಕ್ತರು ಬರುವ ನಿರೀಕ್ಷೆ ಇದೆ. ಈ ಮಧ್ಯೆ ತಾಂತ್ರಿಕ ದೋಷದಿಂದ ಸ್ಪೈಸ್ ಜೆಟ್ ವಿಮಾನ ಹಾರಾಟ ವಿಳಂಬವಾಗಿದ್ದು, ಪ್ರಯಾಗ್ರಾಜ್ಗೆ ತೆರಳಿದ್ದ ಕನ್ನಡಿಗರಿಗೆ ಶಾಕ್ ಎದುರಾಗಿದೆ. ಅನ್ನ ನೀರಿಲ್ಲದೆ ಪರದಾಡಿದ್ದಾರೆ.

ತಾಂತ್ರಿಕ ದೋಷದಿಂದ ಮಧ್ಯಾಹ್ನ 2.10ಕ್ಕೆ ಬೆಂಗಳೂರಿಗೆ ಹೊರಡಬೇಕಿದ್ದ ಸ್ಪೈಸ್ಜೆಟ್ ವಿಮಾನ SG664 ಹಾರಾಟ ವಿಳಂಬವಾಗಿದೆ. ಗಂಟೆಗಟ್ಟಲೆ ವಿಮಾನ ಹಾರಾಟ ವಿಳಂಬವಾಗಿದ್ದರಿಂದ ಪ್ರಯಾಗ್ರಾಜ್ನ ವಿಮಾನ ನಿಲ್ದಾಣದಲ್ಲಿ ಕನ್ನಡಿಗರು ಅನ್ನ ನೀರಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ. ರಾತ್ರಿ 11.15ಕ್ಕೆ ವಿಮಾನ ಟೇಕಾಫ್ ಆಗುವುದಾಗಿ ಹೇಳುತ್ತಿದ್ದು, ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಯಾಗ್ರಾಜ್ಗೆ ತೆರಳುವ ಫ್ಲೈಟ್ ಟಿಕೆಟ್ಗಳು ಸೋಲ್ಡೌಟ್
ಇದೆಲ್ಲದರ ನಡುವೆ ಕುಂಭಮೇಳಕ್ಕೆ ರಾಜ್ಯದಿಂದ ತೆರಳುವ ವಿಮಾನಗಳು ಫುಲ್ ಆಗಿದ್ದು, ಫ್ಲೈಟ್ ಟಿಕೆಟ್ ಸೋಲ್ಡ್ಔಟ್ ಆಗಿವೆ. ಪ್ರತಿದಿನ ಮೂರು ವಿಮಾನಗಳು ಏರ್ಪೋಟ್ನಿಂದ ಪ್ರಯಾಗ್ರಾಜ್ಗೆ ಹಾರಾಟ ಮಾಡುತ್ತಿವೆ. ಇಂಡಿಗೋ ಸಂಸ್ಥೆಯ ಒಂದು, ಸ್ಪೈಸ್ ಜೆಟ್ ಸಂಸ್ಥೆಯ ಎರಡು ವಿಮಾನಗಳು ಕೆಐಎಬಿಯಿಂದ ಪ್ರಯಾಗ್ರಾಜ್ಗೆ ಪ್ರಯಾಣ ಮಾಡುತ್ತಿವೆ.


Share with

Leave a Reply

Your email address will not be published. Required fields are marked *