ಬೆಂಗಳೂರಿನಲ್ಲಿ ಮಹಾರಾಷ್ಟ್ರ ANTF ದಾಳಿ..; 55 ಕೋಟಿ ರೂ. ಮೌಲ್ಯದ ಡ್ರಗ್ ವಶ..!

Share with

ಬೆಂಗಳೂರು: ಮನೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೂರು ಅಕ್ರಮ ಮೆಫೆಡೋನ್ (MD) ತಯಾರಿಕಾ ಘಟಕಗಳನ್ನು ಮಹಾರಾಷ್ಟ್ರ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ (ANTF) ಭೇದಿಸಿ, 55 ಕೋಟಿ ರೂಗೂ ಹೆಚ್ಚು ಮೌಲ್ಯದ 21 ಕೆಜಿಗೂ ಹೆಚ್ಚು ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ANTF ನ ಕೊಂಕಣ ಘಟಕವು ನವಿ ಮುಂಬೈನ ವಾಶಿಯಲ್ಲಿ ಶಂಕಿತ ಮಾದಕವಸ್ತು ಮಾರಾಟಗಾರನನ್ನು ಬಂಧಿಸಿದ ಬಳಿಕ ಭಾರೀ ಕಾರ್ಯಾಚರಣೆ ಆರಂಭಿಸಿದ್ದಾರೆ. ಅಬ್ದುಲ್ ಖಾದಿರ್ ರಶೀದ್ ಶೇಖ್ ಎಂಬ ಆರೋಪಿ ಮುಂಬೈ-ಪುಣೆ ಹೆದ್ದಾರಿಯ ವಾಶಿ ಗ್ರಾಮದ ಹಳೆಯ ಬಸ್ ನಿಲ್ದಾಣದ ಬಳಿ ಅನುಮಾನಾಸ್ಪದವಾಗಿ ಅಡ್ಡಾಡುತ್ತಿರುವುದು ಕಂಡುಬಂದಿದೆ.ಪೊಲೀಸರು ಆತನನ್ನು ಬಂಧಿಸಿ ಸುಮಾರು 1.48 ರೂ. ಕೋಟಿ ಮೌಲ್ಯದ 1.48 ಕೆಜಿ ಮೆಫೆಟ್ರೋನ್ ವಶಪಡಿಸಿಕೊಂಡಿದ್ದರು. ವಾಶಿ ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆಯಡಿ ಪ್ರಕರಣ ದಾಖಲು ಮಾಡಿ ತನಿಖೆ ನಡೆಸುತ್ತಿದೆ.

ಶೇಖ್ ವಿಚಾರಣೆಯ ನಂತರ ಕೊಂಕಣ ANTE ತಂಡವು ಮಾದಕ ದ್ರವ್ಯದ ತಯಾರಕ ಎಂದು ಶಂಕಿಸಲಾಗಿರುವ ಬೆಳಗಾವಿಯ ನಿವಾಸಿ ಪ್ರಶಾಂತ್ ಯಲ್ಲಪ್ಪ ಪಾಟೀಲ್ ನನ್ನು ಪತ್ತೆಹಚ್ಚಿ ಬಂಧಿಸಿದ್ದು ಆತನ ವಿಚಾರಣೆಯ ವೇಳೆ ಬೆಂಗಳೂರಿನ ಮೂರು ತಾತ್ಕಾಲಿಕ ಪ್ರದೇಶಗಳಲ್ಲಿ ಮಾದಕವಸ್ತು ತಯಾರಿಸಲಾಗುತ್ತಿದೆ ಎಂದು ಬಹಿರಂಗಪಡಿಸಿದ್ದಾನೆ.

ಪೊಲೀಸರು ರಾಜಸ್ಥಾನದ ಸುರೇಶ್ ರಮೇಶ್ ಯಾದವ್ ಮತ್ತು ಮಾನ್ ರಾಮಲಾಲ್ ಬಿಷ್ಟೋಯ್ ಎಂಬ ಇಬ್ಬರನ್ನು ಬಂಧಿಸಿದ್ದಾರೆ. ಎನ್.ಜಿ. ಗೋಲಹಳ್ಳಿ ಪ್ರದೇಶದ ಆ‌ರ್.ಜೆ. ಈವೆಂಟ್‌ನಲ್ಲಿ, ಇನ್ನೊಂದು ಸ್ಪಂದನ ಲೇಔಟ್‌ನಲ್ಲಿರುವ ಮನೆ ಮತ್ತು ಮೂರನೆಯದು ಕಣ್ಣೂರಿನ ಯೆರ್ಪನಹಳ್ಳಿಯಲ್ಲಿರುವ ಮನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ದಂಧೆಯಲ್ಲಿ ಇನ್ನೂ ಇಬ್ಬರು ಶಂಕಿತರನ್ನು ಗುರುತಿಸಲಾಗಿದ್ದು, ಅವರನ್ನು ಬಂಧಿಸಲು ತಂಡಗಳನ್ನು ಕಳುಹಿಸಲಾಗಿದೆ ಎಂದು ಎಎನ್‌ಟಿಎಫ್ ಅಧಿಕಾರಿಗಳು ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *