ಗೃಹಲಕ್ಷ್ಮೀ ಹಣದಿಂದ ವಿದ್ಯಾರ್ಥಿಗಳಿಗೆ ಗ್ರಂಥಾಲಯ ಕಟ್ಟಿಸಿದ ಮಹಾತಾಯಿ! ಇವರು ಆಧುನಿಕ ಸಾವಿತ್ರಿಬಾಯಿ ಫುಲೆ

Share with

ಗೃಹಲಕ್ಷ್ಮೀ ಹಣದಿಂದ ಕೆಲ ಮಹಿಳೆಯರಯ ಟಿವಿ, ಫ್ರಿಜ್‌ ತೆಗೆದುಕೊಂಡಿದ್ದು ಸುದ್ದಿಯಾಗಿದ್ದರು. ಇತ್ತೀಚೆಗೆ ಉತ್ತರ ಕರ್ನಾಟಕದ ಮಹಿಳೆಯೊಬ್ಬಳು ಇಡೀ ಊರಿಗೆ ಹೋಳಿಗೆ ಊಟವನ್ನೂ ಹಾಕಿಸಿದ್ದರು. ಕೆಲ ದಿನಗಳ ಹಿಂದೆ ಮಗನಿಗೆ ಬೈಕ್‌ಅನ್ನು ಗೃಹಲಕ್ಷ್ಮೀ ಹಣದಲ್ಲಿ ಖರೀದಿ ಮಾಡಿದ್ದರು. ಆದರೆ ಇಲ್ಲೊಬ್ಬ ಗ್ರಾ.ಪಂ ಸದಸ್ಯೆ ತನ್ನ ಗ್ರಾಮದ ಮಕ್ಕಳ ಭವಿಷ್ಯಕ್ಕಾಗಿ ತನ್ನ ಗ್ರಾಮದಲ್ಲಿ ಗೃಹಲಕ್ಷ್ಮೀ ಹಾಗೂ ಗ್ರಾ.ಪಂ ಸದಸ್ಯೆಗೆ ನೀಡುವ ಧನ ಸಹಾಯ ಕೂಡಿಸಿ ಗ್ರಂಥಾಲಯ ನಿರ್ಮಾಣ ‌ಮಾಡಿ ಇತರ ಮಹಿಳೆಯರಿಗೆ ಮಾದರಿಯಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮಂಟೂರ ಗ್ರಾಮ ಪಂಚಾಯತಿಯ ಮಹಿಳೆ ಮಲ್ಲವ್ವ ಭೀಮಪ್ಪ ಮೇಟಿ, ಗೃಹಲಕ್ಷ್ಮೀಯಿಂದ ಬಂದ ಹಣದಿಂದ ಗ್ರಾಮದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗ್ರಂಥಾಲಯ ನಿರ್ಮಾಣ ಮಾಡಿದ್ದಾರೆ. ಗ್ರಂಥಾಲಯಕ್ಕೆ ಒಟ್ಟು ಒಂದೂವರೆ ಲಕ್ಷ ಖರ್ಚು ಮಾಡಲಾಗಿದೆ‌‌. ತಮ್ಮ ಊರಿನ ಮಕ್ಕಳು ಓದುವುದಕ್ಕಾಗಿಯೇ ಬೆಂಗಳೂರು, ಧಾರವಾಡ, ಬಿಜಾಪುರಕ್ಕೆ ಹೋಗುತ್ತಾರೆ.ಅಲ್ಲಿ ಅವರ ತರಬೇತಿಗೆ ತಿಂಗಳು ತಿಂಗಳು ಹಣದ ಸಮಸ್ಯೆ ಆಗ್ತಿತ್ತು.ಊಟ, ಆರೋಗ್ಯದ ಸಮಸ್ಯೆ ಕೂಡ ಕಾಡ್ತಿದ್ದವು. ಅಲ್ಲಿ ಲೈಬ್ರರಿಯಲ್ಲಿ ಕುಳಿತು ಅವರು ಓದುತ್ತಾರೆ. ಇಂಥವರಿಗಾಗಿ ನಮ್ಮಲ್ಲಿಯೇ ಒಂದು ಲೈಬ್ರೆರಿ ಕಟ್ಟಬೇಕು ಅನ್ನೋದು ನನ್ನ ಕನಸಾಗಿತ್ತು. ನನಗೆ ಹದಿಮೂರು ತಿಂಗಳಿನಿಂದ ಗೃಹಲಕ್ಷ್ಮೀ ಹಣ 26 ಸಾವಿರ ರೂಪಾಯಿ ಬಂದಿತ್ತು. ಅದರೊಂದಿಗೆ ಗ್ರಾಮ ಪಂಚಾಯಿತಿ ಮೆಂಬರ್‌ ಆಗಿರುವ ಕಾರಣಕ್ಕೆ ಗೌರವ ಧನ ಕೂಡ ಸಿಗುತ್ತದೆ.ಈ ಎಲ್ಲಾ ಹಣವನ್ನು ಒಟ್ಟು ಮಾಡಿ ನಾನು ಒಂದು ಸಣ್ಣ ಪ್ರಮಾಣದ ಗ್ರಂಥಾಲಯ ಕಟ್ಟಿದ್ದೇನೆ. ಸಣ್ಣ ಗ್ರಂಥಾಲಯಕ್ಕೆ ಒಂದೂವರೆ ಲಕ್ಷ ರೂಪಾಯಿ ಖರ್ಚಾಗಿದೆ ಎಂದು ಮಲ್ಲವ್ವ ಭೀಮಪ್ಪ ಮೇಟಿ ಹೇಳಿದ್ದಾರೆ.

ಇನ್ನು ಮಲ್ಲವ್ವ ಭೀಮಪ್ಪ ಮೇಟಿ ಹೆಚ್ಚೇನೂ ಓದಿದವರೂ ಅಲ್ಲ. ಆದರೆ, ತಮ್ಮ ಊರ ಮಕ್ಕಳು ಓದಬೇಕು. ಒಳ್ಳೆಯ ಕೆಲಸ ಪಡೆದುಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಈ ಕೆಲಸ ಮಾಡಿದ್ದಾಗಿ ಹೇಳುದ್ದಾರೆ. ಸದ್ಯ ಮಲ್ಲವ್ವ ಗ್ರಾ.ಪಂ ಮೆಂಬರ ಆಗಿದ್ದು ಚುನಾವಣೆಯಲ್ಲಿ ಸ್ಪರ್ಧಿಸಿದಾಗ ವಿದ್ಯಾರ್ಥಿಗಳು ಮಲ್ಲವ್ವ ಅವರಿಗೆ ಹೇಳಿದ್ದರಂತೆ ನಮ್ಮಗೆ ಮುಂದೆ ಗ್ರಂಥಾಲಯ ಅನಕೂಲ ಮಾಡಬೇಕೆಂದು ಅದರಂತೆ ಕೊಟ್ಟ ಮಾತಿನಂತೆ ಮಲ್ಲವ್ವ ನಡೆದುಕೊಂಡಿದ್ದಾರೆ ಎಂದು ಗ್ರಾಮದ ವಿದ್ಯಾರ್ಥಿಗಳು ಖುಷಿ ವ್ಯಕ್ತಪಡಿಸಿದ್ದಾರೆ.

ಮಲ್ಲವ್ವ ಶಿಕ್ಷಣ ಕಲಿತವರಲ್ಲ ಆದರೆ ಗ್ರಾಮದ ಮಕ್ಕಳು ಕಲಿಯಬೇಕು ಕಲಿತು ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳಬೇಕೆಂಬ ಆಸೆಗಾಗಿ ಸರ್ಕಾರ ನೀಡಿದ ಗ್ರಾ.ಪಂ ಸದಸ್ಯೆಯ ಧನಸಹಾಯ ಹಾಗೂ ಗೃಹ ಲಕ್ಷ್ಮೀ ಹಣದಿಂದ ಮಂಟೂರ ಗ್ರಾಮದಲ್ಲಿ ಗ್ರಂಥಾಲಯ ನಿರ್ಮಾಣ ಮಾಡಿ ಆಧುನಿಕ ಸಾವಿತ್ರಿಬಾಯಿ ಪುಲೆಯಾಗಿದ್ದಾರೆ.


Share with

Leave a Reply

Your email address will not be published. Required fields are marked *