ಮಜೀರ್ಪಳ್ಳ: ಕೋಳ್ಯೂರು ಕ್ಷೇತ್ರದಲ್ಲಿ ಕಳ್ಳತನ ನಡೆಸಿ ಅಪವಿತ್ರಗೊಳಿಸಿದ ಕೃತ್ಯದ ವಿರುದ್ದ ಖಂಡನಾ ಸಭೆ

Share with


ವರ್ಕಾಡಿ: ಕೋಳ್ಯೂರು ಶ್ರೀ ಶಂಕರನಾರಾಯಣ ದೇವಸ್ಥಾನದಿಂದ ಇತ್ತೀಚೆಗೆ ಚಿನ್ನಾಭರಣ ಕಳವುಗೈದು ಕ್ಷೇತ್ರವನ್ನು ಅಪವಿತ್ರಗೊಳಿಸಿದ  ವಿರುದ್ದ  ಖಂಡನಾ ಸಭೆ ಮಜೀರ್ಪಳ್ಳ ಪೇಟೆಯಲ್ಲಿ  ನಡೆಯಿತು.  ದೇವಸ್ಥಾನದಿಂದ ಕಳವುಗೈದ ಚಿನ್ನಾಭರ ಸಹಿತ ಆರೋಪಿಗಳನ್ನು  ಮುಂದಿನ ೧೫ ದಿನಗಳಗೊಳಗಾಗಿ ಪತ್ತೆ ಹಚ್ಚದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಶ್ರೀ ಕ್ಷೇತ್ರದ ಸೇವಾಸಮಿತಿ ಅಧ್ಯಕ್ಷ ಬೋಳಂತಕೋಡಿ ರಾಮ ಭಟ್ ಎಚ್ಚರಿಕೆ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಕ್ಷೇತ್ರದ ಪ್ರಧಾನ ಅರ್ಚಕರಾದ ವೇದ ಮೂರ್ತಿ ರವಿಶಂಕರ ಹೊಳ್ಳ ವಹಿಸಿದ್ದರು. ಸಭೆಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿಜಯ ಕುಮಾರ್ ರೈ, ಕಾಂಗ್ರೇಸ್ ನೇತಾರ ಹರ್ಷಾದ್ ವರ್ಕಾಡಿ, ಸಿಪಿಎಂ ನೇತಾರ ಕೆ.ಆರ್ ಜಯಾನಂದ, ಕ್ಷೇತ್ರದ ಪವಿತ್ರಪಾಣಿ ರಾಜೇಶ್ ತಾಳಿತ್ತಾಯ, ಮೋಕ್ತೇಸರ ಕೃಷ್ಣ ಭಟ್ ಚಕ್ರಕೋಡಿ, ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯೆ ಕಮಲಾಕ್ಷಿ.ಕೆ ಪಾವೂರು, ಮೀಂಜ ಪಂಚಾಯತ್ ಅಧ್ಯಕ್ಷೆ ಸುಂದರಿ ಆರ್.ಶೆಟ್ಟಿ, ವರ್ಕಾಡಿ ಪಂಚಾಯತ್ ಅಧ್ಯಕ್ಷೆ ಭಾರತಿ ಎಸ್., ಬಿಜೆಪಿ ನೇತಾರರಾದ ಆದರ್ಶ್.ಬಿ.ಎಂ, ಮಣಿಕಂಠ ರೈ, ಸಿಪಿಐ ನೇತಾರ ರಾಮಕೃಷ್ಣ ಕಡಂಬಾರ್, ಸಿಪಿಎಂ ನೇತಾರ ಬೂಬ.ಡಿ, ಕಾಂಗ್ರೇಸ್‌ನ ಪಿ.ಸೋಮಪ್ಪ, ಸಂತಡ್ಕ ಶ್ರೀ ಅರಸು ಸಂಕಲ ದೈವಸ್ಥಾನದ ಡಾ.ಶ್ರೀಧರ ಭಟ್, ಕಾವಿ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಮೊಕ್ತೇಸರ ಸುಭಾಸ್ ಅಡಪ, ಕಡಂಬಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಮೊಕ್ತೇಸರ ಸೂರ್ಯನಾರಾಯಣ ಅಯ್ಯ, ಶ್ರೀ ಕ್ಷೇತ್ರ ಕಣಂತೂರುನ ಮೊಕ್ತೇಸರ  ದೇವಿಪ್ರಸಾದ್ ಪೊಯ್ಯತ್ತಾಯ, ಗಡಿನಾಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಆರ್.ಎಸ್.ಎಸ್ ಮುಖಂಡ ಲೊಕೇಶ್ ಜೋಡುಕಲ್ಲು, ಧಾರ್ಮಿಕ ಮುಂದಾಳುಗಳಾದ ಗೋಪಾಲ್ ಶೆಟ್ಟಿ ಅರಿಬೈಲು, ಶ್ರೀಕೃಷ್ಣಶಿವಕೃಪಾ ಕುಂಜತ್ತೂರು, ಕೃಷ್ಣಪ್ಪ, ಸೋಮನಾಥ ಕಾರಂತ ಮೊದಲಾದವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಕ್ಷೇತ್ರದ ಮೊಕ್ತೇಸರರಾದ ಕೃಷ್ಣ ಕುಮಾರ್ ಉತ್ತಾರ ಕೊಡಂಗೆ ಸ್ವಾಗತಿಸಿ, ಚಂದ್ರಕುಮಾರ್ ಬಲಿಪಗುಳಿ ವಂದಿಸಿದರು. ಹಿರಿಯ ಪತ್ರಕರ್ತ ಗಣೇಶ್ ಭಟ್ ನಿರೂಪಿಸಿದರು.


Share with

Leave a Reply

Your email address will not be published. Required fields are marked *