ನ.17: ಅನಂತಪುರದಲ್ಲಿ ಮಕರ ಸಂಭ್ರಮ, ಮೊಸಳೆಯ ನಾಮಕರಣ ಹಾಗೂ ನೈವೇದ್ಯ ಕಾರ್ಯಕ್ರಮ

Share with

ಕಾಸರಗೋಡು: ಶ್ರೀ ಕ್ಷೇತ್ರ ಅನಂತಪುರ, ಕುಂಬಳೆ ಸರೋವರದಲ್ಲಿ ಇತ್ತೀಚೆಗೆ ಮೊಸಳೆಯೊಂದು ಪ್ರತ್ಯಕ್ಷವಾಗಿದ್ದು ಕ್ಷೇತ್ರದ ಭಕ್ತ ಜನರಲ್ಲಿ ಸಂತಸ ಸಂಭ್ರಮ ತುಂಬಿಕೊಂಡಿದೆ. ಆ ಪ್ರಯುಕ್ತ ಶ್ರೀ ಕ್ಷೇತ್ರದ ಆಚಾರ್ಯ ದೇಲಂಪಾಡಿ ಶ್ರೀ ಗಣೇಶ ತಂತ್ರಿಗಳ ನಿರ್ದೇಶನದಲ್ಲಿ ನ.17ರಂದು ಬೆಳಗ್ಗೆ 10 ಗಂಟೆಗೆ ಕ್ಷೇತ್ರದ ಸಭಾಂಗಣದಲ್ಲಿ “ಮಕರ ಸಂಭ್ರಮ” ಕಾರ್ಯಕ್ರಮ ಹೊಸ ಮೊಸಳೆಗೆ ನಾಮಕರಣ ಹಾಗೂ ನೈವೇದ್ಯ ಜರಗಲಿದೆ.

ಕುಂಬಳೆ ಸರೋವರದಲ್ಲಿ ಇತ್ತೀಚೆಗೆ ಮೊಸಳೆಯೊಂದು ಪ್ರತ್ಯಕ್ಷ.

ಮಧ್ಯಾಹ್ನ 2.30ಕ್ಕೆ ಸದ್ರಿ ಸಭಾಂಗಣದಲ್ಲಿ ಕ್ಷೇತ್ರದ ಊರ ಭಕ್ತ ಜನರ ಸಮಾಲೋಚನಾ ಸಭೆ ನಡೆಸಲಾಗುವುದು, ಎಲ್ಲಾ ಭಕ್ತ ಜನರ ಸಹಕಾರ ಕೋರಲಾಗಿದೆ ಎಂದು ಕ್ಷೇತ್ರದ ಕಾರ್ಯ ನಿರ್ವಹಣಾಧಿಕಾರಿ ರಮಾನಾಥ ಶೆಟ್ಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *