ಮಲಯಾಳಂ ನಟ ದಿಲೀಪ್ ಗೆ 6 ವರ್ಷಗಳ ಕಾನೂನು ಹೋರಾಟದಿಂದ ಬಿಗ್ ರಿಲೀಫ್..! ಮಾಜಿ ಪತ್ನಿ ಮಂಜು ವಾರಿಯರ್ ವಿರುದ್ಧ ಆಕ್ರೋಶ..!!

Share with

ತಿರುವನಂತಪುರಂ: 2017ರ ಫೆಬ್ರವರಿ 17ರಂದು ಕೊಚ್ಚಿಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ಮಲಯಾಳಂನ ಪ್ರಮುಖ ನಟಿಯೊಬ್ಬರನ್ನು ಅಪಹರಿಸಿ ಕಾರಿನೊಳಗೆ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಬರೋಬ್ಬರಿ ಎಂಟು ವರ್ಷಗಳ ಕಾನೂನು ಹೋರಾಟದ ಬಳಿಕ ಸೋಮವಾರ (ಡಿ.08) ಕೋರ್ಟ್ ನಿಂದ ಖುಲಾಸೆಗೊಂಡಿರುವ ನಟ ದಿಲೀಪ್ ಮಾಜಿ ಪತ್ನಿ ನಟಿ ಮಂಜು ವಾರಿಯರ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿ”ನನ್ನನ್ನು ಬೆಂಬಲಿಸಿದವರಿಗೆ ಧನ್ಯವಾದಗಳು, 9 ವರ್ಷಗಳ ಕಾಲ ನನ್ನೊಂದಿಗೆ ನಿಂತ ಎಲ್ಲರಿಗೂ ಧನ್ಯವಾದಗಳು” ಎಂದು 58 ರ ಹರೆಯದ ನಟ ದಿಲೀಪ್ ಹೇಳಿದ್ದಾರೆ.

“ಇದು ಮಂಜು(ಮಾಜಿ ಪತ್ನಿ) ಪಿತೂರಿ…ನಂತರ ಕಾನೂನು ಜಾರಿ ಅಧಿಕಾರಿಗಳು ಭಾಗಿಯಾಗಿ ಪ್ರಕರಣವನ್ನು ಮತ್ತಷ್ಟು ಮುನ್ನಡೆಸಿದರು. ಹಿರಿಯ ಪೊಲೀಸ್ ಅಧಿಕಾರಿ ಮತ್ತು ಅವರ ಬೆಂಬಲಿಗರೂ ಕೆಲವು ಕೆಲಸಗಳನ್ನು ಮಾಡಿದರು” ಎಂದು ದಿಲೀಪ್‌ ಪೊಲೀಸ್ ಅಧಿಕಾರಿಗಳ ಮೇಲೂ ನೇರವಾಗಿ ಆರೋಪಿಸಿದ್ದಾರೆ.

ಪೊಲೀಸ್ ತಂಡ ಸೃಷ್ಟಿಸಿದ ಸುಳ್ಳು ಕಥೆ ನ್ಯಾಯಾಲಯದಲ್ಲಿ ವಿಫಲವಾಯಿತು.ನಿಜವಾದ ಪಿತೂರಿ ನನ್ನನ್ನು ಆರೋಪಿಯನ್ನಾಗಿ ಮಾಡುವುದಾಗಿತ್ತು. ನನ್ನ ವ್ಯಕ್ತಿತ್ವ ಮತ್ತು ಜೀವನವನ್ನು ನಾಶಮಾಡಲು ಇದನ್ನು ಮಾಡಲಾಗಿತ್ತು” ಎಂದರು.

2017 ರಲ್ಲಿ ಮಲಯಾಳಂ ನಟಿಯನ್ನು ಅಪಹರಿಸಿ ಚಲಿಸುವ ಕಾರಿನಲ್ಲಿ ಆರು ಮಂದಿ ಪುರುಷರು ಅತ್ಯಾಚಾರ ನಡೆಸಿದ ಘಟನೆಯ ಸುತ್ತ ಕೇಂದ್ರೀಕೃತವಾದ ಪ್ರಕರಣದಲ್ಲಿ ದಿಲೀಪ್‌ ಎಂಟನೇ ಆರೋಪಿಯಾಗಿದ್ದರು. ನ್ಯಾಯಾಧೀಶ ವರ್ಗೀಸ್, ಇತರ ಆರು ಮಂದಿ ಆರೋಪಿಗಳನ್ನು ಕ್ರಿಮಿನಲ್ ಪಿತೂರಿ, ಅಕ್ರಮ ಬಂಧನ, ದೌರ್ಜನ್ಯ, ಅಪಹರಣ, ಸಾಮೂಹಿಕ ಅತ್ಯಾಚಾರದ ಆರೋಪಗಳ ಅಡಿಯಲ್ಲಿ ದೋಷಿಗಳೆಂದು ತೀರ್ಪು ನೀಡಿದ್ದಾರೆ.

1998 ರ ಅಕ್ಟೋಬರ್ 20 ರಂದು ದಿಲೀಪ್ ಅವರು ನಟಿ ಮಂಜು ವಾರಿಯರ್ ಅವರನ್ನು ವಿವಾಹವಾಗಿದ್ದರು. ದಾಂಪತ್ಯದಲ್ಲಿ 2000 ರಲ್ಲಿ ಪುತ್ರಿ ಮೀನಾಕ್ಷಿ ಜನಿಸಿದ್ದಳು. 2014 ರ ಜುಲೈ ನಲ್ಲಿ, ದಂಪತಿಗಳು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು, 2015 ಜನವರಿ 31 ರಂದು ಕೋರ್ಟ್ ವಿಚ್ಚೇದನ ನೀಡಿತ್ತು. ಆ ಬಳಿಕ 2016 ನವೆಂಬರ್ 25 ರಂದು ದಿಲೀಪ್ ನಟಿ ಕಾವ್ಯ ಮಾಧವನ್ ಅವರನ್ನು ಎರಡನೇ ವಿವಾಹವಾಗಿದ್ದರು. ದಂಪತಿಗೆ 2018 ರಲ್ಲಿ ಒಂದು ಹೆಣ್ಣು ಮಗು ಜನಿಸಿದೆ.


Share with

Leave a Reply

Your email address will not be published. Required fields are marked *