ಆಮೆ ಗತಿಯಲ್ಲಿ ಸಾಗುತ್ತಿರುವ ಮಲ್ಪೆ- ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ

Share with

ಸಂಸದರು, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿರುವ ವಾಹನ ಸವಾರರು

ಶೀಘ್ರವೇ ಹೆದ್ದಾರಿ ಅಗಲೀಕರಣ ಕಾಮಗಾರಿ ಮುಗಿಸುವಂತೆ ಸಾರ್ವಜನಿಕರ ಒತ್ತಾಯ

ಉಡುಪಿ: ಮಲ್ಪೆಯಿಂದ ತೀರ್ಥಹಳ್ಳಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169(ಎ) ಅಗಲೀಕರಣ ಕಾಮಗಾರಿ ಚುನಾವಣೆ ಸಂದರ್ಭದಲ್ಲಿ ವೇಗ ಪಡೆದಿದ್ದು, ಇದೀಗ ಚುನಾವಣೆ ಮುಗಿದ ಬಳಿಕ ಆಮೆ ಗತಿಯಿಂದ ಸಾಗುತ್ತಿದೆ. ಉಡುಪಿಯ ಆದಿ ಉಡುಪಿ ಪರಿಸರದಲ್ಲಿ ರಸ್ತೆ ಅಗಲೀಕರಣದ ಕಾಮಗಾರಿ ನಿಂತಿದ್ದು ಈ ಭಾಗದಿಂದ ಓಡಾಟ ಮಾಡುವ ಸಾವಿರಾರು ವಾಹನಗಳು ತೊಂದರೆ ಉಂಟು ಮಾಡುತ್ತಿದೆ. ಧೂಳು ಹಾಗೂ ಕೆಸರಿನಿಂದ ಬೈಕ್ ಸವಾರರು ಓಡಾಡಲು ತೊಂದರೆಯಾಗುತ್ತಿದೆ. ಹೊರ ಜಿಲ್ಲೆಯಿಂದ ಮಲ್ಪೆ ಬಂದರಿಗೆ ಆಗಮಿಸುವ ಮೀನಿನ ವಾಹನಗಳು ಜೊತೆಗೆ ಈ ಭಾಗದಲ್ಲಿ ಓಡಾಟ ಮಾಡುವ ಬಸ್ ಮತ್ತು ದಿನನಿತ್ಯ ಈ ಭಾಗಕ್ಕೆ ಆಗಮಿಸುವ ಪ್ರವಾಸಿಗರ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದ್ದು, ವಾಹನ ಸವಾರರು ಹಿಡಿಶಾಪ ಆಗುತ್ತಿದ್ದಾರೆ.
ಕೂಡಲೇ ಈ ರಸ್ತೆಯ ಅಗಲೀಕರಣ ಕಾಮಗಾರಿ ಮುಗಿಸಬೇಕಿದ್ದು ಸಂಬಂಧಪಟ್ಟ ಸಂಸದರು ಶಾಸಕರು ಜನಪ್ರತಿನಿಧಿಗಳು ಇತ್ತ ಗಮನ ಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.


Share with

Leave a Reply

Your email address will not be published. Required fields are marked *