ವೈದ್ಯೆಗೆ ಸೈಕೋ ರೀತಿ ಕಿರುಕುಳ ನೀಡುತ್ತಿದ್ದ ಭೂಪ..! ವ್ಯಕ್ತಿಯ ಬಂಧನ

Share with

ಬೆಂಗಳೂರು: ವೈದ್ಯೆಯೊಬ್ಬರಿಗೆ ಸೈಕೋ ರೀತಿ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಿಹಾರ ಮೂಲದ ಮುಬಾರಕ್ (30) ಬಂಧಿತ ಆರೋಪಿ. ಈತ ನವೆಂಬರ್ 27ರಂದು ಕೋರಮಂಗಲದ ವೈದ್ಯೆಯೊಬ್ಬರಿಗೆ ಕಿರುಕುಳ ನೀಡಿದ್ದ. ಈ ಸಂಬಂಧ ಆಕೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ದೂರುದಾರೆ ಮನೆ ಬಳಿ ಬಂದು ಆರೋಪಿ ಸೈಕೋ ರೀತಿ ವರ್ತಿಸುತ್ತಿದ್ದ. ಮಲಗಿರುವಾಗ ಕಿಟಕಿ ಬಳಿ ಬಂದು ಇಣುಕಿ ನೋಡುವುದು, ಗೇಟ್ ಮುಂದೆ ನಿಲ್ಲುವುದು. ಅಲ್ಲದೆ ರಾತ್ರಿಯಾದರೆ ಸಾಕು ಬೆಡ್ ರೂಂ ಬಳಿ ಪ್ರತ್ಯಕ್ಷನಾಗುತ್ತಿದ್ದ. ಪ್ರಶ್ನಿಸಿದರೆ ಮಾತನಾಡುವುದಿಲ್ಲ. ಹೀಗೆ ಕೆಲ ದಿನಗಳಿಂದ ತೊಂದರೆ ಕೊಡುತ್ತಿದ್ದ. ಆರಂಭದಲ್ಲಿ ವೈದ್ಯೆ ಸುಮ್ಮನಾಗಿದ್ದರು. ಆದರೆ, ಆತನ ವರ್ತನೆ ವಿಚಿತ್ರವಾಗಿದ್ದರಿಂದ ನ.27ರಂದು ಪೊಲೀಸ್‌ ಸಹಾಯವಾಣಿ 112ಗೆ ದೂರು ನೀಡಿದ್ದರು. ಈ ಸಂಬಂಧ ಕ್ಷೇಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಈ ಸಂಬಂಧ ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share with

Leave a Reply

Your email address will not be published. Required fields are marked *