ಮಂಗಳೂರು: ಹಳೆಯಂಗಡಿ-ಪಾವಂಜೆ ರಸ್ತೆಯಲ್ಲಿ ಮಹಿಳೆಯ ಕುತ್ತಿಗೆಯಿಂದ ಸರ ಕದಿಯಲು ಯತ್ನಿಸಿದ ಮತ್ತು ಕಟಪಾಡಿ ಎಂಬಲ್ಲಿ ಮಹಿಳೆಯೊಬ್ಬರ ಕುತ್ತಿಗೆಯಿಂದ ಸರ ಕಳ್ಳತನ ಮಾಡಿದ ಆರೋಪಿಯನ್ನು ಮುಲ್ಕಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕೈಕಂಬ ಬಡಗೂಳಿಪಾಡಿ ಗ್ರಾಮದ ಮಳಲಿ ಮಟ್ಟಿರೋಡು ನಿವಾಸಿ ವಿನಯ ಪ್ರಸಾದ್ ಜೋಗಿ (30) ಎಂದು ಪೊಲೀಸರು ಮಾಹಿತಿಯನ್ನು ನೀಡಿದ್ದಾರೆ.
ಬಂಧಿತನಿಂದ ಕಳವುಗೈದಿದ್ದ 43.4 ಗ್ರಾಮ್ ತೂಕದ ಚಿನ್ನದ ಸರ ಮತ್ತು ಕೃತ್ಯಕ್ಕೆ ಬಳಸುತ್ತಿದ್ದ ಬೈಕ್ ಸೇರಿ ಒಟ್ಟು 2.35 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.