ಬೈಕ್‌ಗಳನ್ನು ಕಳವುಗೈದ ಆರೋಪಿ ಬಂಧನ

Share with

ಮಂಗಳೂರು: ಬಂದರ್ ಹಾಗೂ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಬೈಕ್‌ಗಳನ್ನು ಕಳವುಗೈದು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂದರ್ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕೃಷ್ಣಾಪುರ 7ನೆ ಬ್ಲಾಕ್‌ನ ಅಬ್ದುಲ್ ಖಾದರ್ ಫಹಾದ್ ಯಾನೆ ಫಹಾದ್ (25) ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಯನ್ನು ಕೃಷ್ಣಾಪುರ 7ನೆ ಬ್ಲಾಕ್‌ನ ಅಬ್ದುಲ್ ಖಾದರ್ ಫಹಾದ್ ಯಾನೆ ಫಹಾದ್ (25) ಎಂದು ಗುರುತಿಸಲಾಗಿದೆ.

ಬೈಕ್ ಕಳವು ಪ್ರಕರಣ ಬೆಳಕಿಗೆ ಬಂದಿದೆ.

ನ.6ರಂದು ಆರೋಪಿಯನ್ನು ನಗರದ ಕುದ್ರೋಳಿ ಸಮೀಪದ ಕಂಡತ್‌ಪಳ್ಳಿ ಎಂಬಲ್ಲಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಬೈಕ್ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಅ.20ರಂದು ಕೊಣಾಜೆ ಠಾಣಾ ವ್ಯಾಪ್ತಿಯ ಬೋಳಿಯಾರು ಮತ್ತು ಅ.31ರಂದು ನಗರದ ಜ್ಯೋತಿ ಸಮೀಪದ ಕೆ.ಎಂ.ಸಿ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಬೈಕ್‌ಗಳು ಕಳ್ಳತನವಾಗಿದ್ದು ಈ ಬಗ್ಗೆ ಪ್ರಕರಣವು ದಾಖಲಾಗಿತ್ತು. ಆರೋಪಿಯಿಂದ ಎರಡು ಬೈಕ್‌ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂದರ್ ಠಾಣೆಯ ಇನ್ಸ್ಪೆಕ್ಟರ್ ಅಜ್ಮತ್ ಅಲಿ ಜಿ., ಎಸ್.ಐ ವನಜಾಕ್ಷಿ, ಎ.ಎಸ್.ಐ ದಾಮೋದರ, ಎಚ್‌ಸಿಗಳಾದ ಮದನ್, ವಿನೋದ್, ಯಶವಂತ ರೈ, ಸಿಬ್ಬಂದಿಗಳಾದ ಆನಂದ, ಸಂಪತ್, ಸುನಿಲ್, ಗುರು ಅವರ ತಂಡವು ಆರೋಪಿಯ ಬಂಧನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.


Share with

Leave a Reply

Your email address will not be published. Required fields are marked *