ಉಡುಪಿ: ಅಕ್ರಮ ಮದ್ಯ ಮತ್ತು ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಒಬ್ಬನನ್ನು ಉಡುಪಿ ಸೆನ್ ಪೊಲೀಸರು ಮಣಿಪಾಲ ಸಮೀಪದ ಹಯಗ್ರೀವ ನಗರ ಎಂಬಲ್ಲಿ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಂಧಿತ ಆರೋಪಿಯು ಕಾರವಾರದ ಮೆಹಬೂಬ್ ಖಾಜಾ ಹುಸೇನ್ (21) ಆಗಿದ್ದು, ಈತನ ಹತ್ತಿರ ಇದ್ದ 16 ಲೀಟರ್ 950 ಮಿ.ಲೀಟರ್ ಗೋವಾ ಮದ್ಯ, 302 ಗ್ರಾಮ್ ಗಾಂಜಾ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಮೊಬೈಲ್ ಮತ್ತು ಬುಲೆಟ್‌ನ್ನು ಪೊಲೀಸರು ವಶಪಡಿಸಿದ್ದಾರೆ. ಇವುಗಳ ಒಟ್ಟು ಮೌಲ್ಯವು 1,17,670 ರೂಪಾಯಿಗಳು ಎಂದು ಅಂದಾಜಿಸಿದ್ದು, ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.