ಮಂಗಳೂರು: ಮೊಬೈಲ್ ಟವರ್ ಏರಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ ಘಟನೆ ಮೂಲ್ಕಿ ಸಮೀಪದ ಕೋಲ್ನಾಡು ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ಟವರ್ ಏರಿದವನನ್ನು ಸತೀಶ್ ಎಂದು ಗುರುತಿಸಲಾಗಿದೆ. ಸತೀಶ್ ಸುಮಾರು 100 ಮೀಟರ್ ಎತ್ತರದ ಮೊಬೈಲ್ ಟವರ್ ಏರಿ ಟವರ್ ನ ತುತ್ತ ತುದಿಗೆ ಹೋಗಿ ಕುಳಿತ್ತಿದ್ದ. ಕೂಡಲೇ ಸ್ಥಳೀಯರು ಮುಲ್ಕಿ ಪೊಲೀಸರಿಗೆ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಮುಲ್ಕಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮೈಕ್ ಮೂಲಕ ಆತನಿಗೆ ಸಮಾಧಾನ ಮಾಡಿ ಕೆಳಗೆ ಬರಲು ಪ್ರಯತ್ನಿಸಿದರು. ಬಳಿಕ ಈತನನ್ನು ಸುರಕ್ಷಿತವಾಗಿ ಕೆಳಗಿಳಿಸಿ ಎಚ್ಚರಿಕೆ ನೀಡಲಾಗಿದೆ.