ಉಪ್ಪುಂದ: ಸಂಜೆ ವೇಳೆಗೆ ಮನೆಯಲ್ಲಿ ಮಲಗಿದ್ದ ವ್ಯಕ್ತಿ ಮೃತಪಟ್ಟಿರುವ ಘಟನೆ ಬೈಂದೂರು ತಾಲೂಕಿನ ಕೆರ್ಗಾಲು ಗ್ರಾಮದಲ್ಲಿ ಸಂಭವಿಸಿದೆ.
ಕೆರ್ಗಾಲು ಗ್ರಾಮದ ನಿವಾಸಿ ಚಂದ್ರಶೇಖರ (55) ಮೃತಪಟ್ಟವರು. ಸಂಜೆ ಸಮಯದಲ್ಲಿ ಮಲಗಿದ್ದ ಅವರನ್ನು ರಾತ್ರಿ ಊಟ ಮಾಡಲೆಂದು ಪತ್ನಿ ಎಬ್ಬಿಸಲು ಹೋದಾಗ ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಬೈಂದೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ವೈದ್ಯರು ಪರೀಕ್ಷಿಸಿ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.